Site icon Vistara News

Road Accident | ಲಾರಿ ಬೈಕ್‌ ನಡುವೆ ಡಿಕ್ಕಿ; ಇಬ್ಬರ ದಾರುಣ ಸಾವು, ಮಕ್ಕಳಿಗೆ ಗಂಭೀರ ಗಾಯ

accident davanagere jagaluru Prof Vasudevan passes away

ಉಳ್ಳಾಲ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕಲ್ಲಾಪು ಬಳಿ ಲಾರಿಯೊಂದು ಬೈಕ್‌ಗೆ ಡಿಕ್ಕಿ (Road Accident) ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮಕ್ಕಳಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಹೊರಬರುತ್ತಿದ್ದ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಜೆಪ್ಪು ತಂದೊಳಿಗೆ ನಿವಾಸಿ ಗಂಗಾಧರ್ (45) ಕೊಣಾಜೆ ಪಜೀರು ನಿವಾಸಿ ನೇತ್ರಾವತಿ (48) ಎಂಬುವವರು ಮೃತಪಟ್ಟಿದ್ದಾರೆ. ಸ್ಕೂಟರಿನಲ್ಲಿದ್ದ ಮೃತ ನೇತ್ರಾವತಿ ಅವರ ಮಗಳು ಮೋಕ್ಷಾ (4) ಹಾಗೂ ಅಕ್ಕನ ಮಗ ಜ್ಞಾನೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಂಗಾಧರ್ ಅವರು ಪರಿಚಯದ ನೇತ್ರಾವತಿ ಹಾಗೂ ಇಬ್ಬರು ಮಕ್ಕಳನ್ನು ಕೊಣಾಜೆ ಕಡೆಗೆ ಕರೆತರುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ತರಕಾರಿ ಅನ್ಲೋಡ್ ಮಾಡಿ ಮಾರುಕಟ್ಟೆಯಿಂದ ಹೊರಬರುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Vistara news launch | ವಿಸ್ತಾರ ಕನ್ನಡ ಸಂಭ್ರಮದಲ್ಲಿ ಪಂಡಿತ್‌ ವೆಂಕಟೇಶ್‌ ಕುಮಾರ್‌ ನಾದ ಸುಧೆ

Exit mobile version