Site icon Vistara News

Road Accident: ಗೂಡ್ಸ್‌ ಗಾಡಿ ಚಕ್ರಕ್ಕೆ ಸಿಲುಕಿದ ಮಗು ಮೃತ್ಯು; ನಿಯಂತ್ರಣ ತಪ್ಪಿದ ಬೈಕ್‌, ಲಾರಿ ಹರಿದು ಮತ್ತಿಬ್ಬರ ಸಾವು

Road Accident in mandya

ಮಂಡ್ಯ/ಮೈಸೂರು/ಚಿಕ್ಕಬಳ್ಳಾಪುರ: ಪೋಷಕರನ್ನು ಹಿಂಬಾಲಿಸಿಕೊಂಡು ಬಂದ 3 ವರ್ಷದ ಮಗುವೊಂದು ಹಾಲಿನ ಗೂಡ್ಸ್‌ ವಾಹನದ (Road Accident) ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ. ಮಂಡ್ಯದ ಮದ್ದೂರು ತಾಲೂಕಿನ ಡಿ. ಹೊಸೂರು ಬಳಿ ಮಂಗಳವಾರ (ಜೂ.20) ಈ ದುರ್ಘಟನೆ ನಡೆದಿದೆ. ಗ್ರಾಮದ ಸರ್ವರ್ಖಾನ್ ಎಂಬುವವರ ಪುತ್ರಿ ರಿಫಾ (3) ಮೃತ ದುರ್ದೈವಿ.

ರಿಫಾ ಪೋಷಕರು ಬೆಳಗ್ಗೆ ಹಾಲು ಖರೀದಿಸಲು ಹೊರಗೆ ಬಂದಿದ್ದಾರೆ. ಮೂವರು ವರ್ಷದ ರಿಫಾ ಆಟವಾಡುತ್ತಾ ಪೋಷಕರ ಜತೆಗೆ ಹೆಜ್ಜೆ ಹಾಕಿದೆ. ಹಾಲು ತೆಗೆದುಕೊಂಡು ವಾಪಸ್‌ ಹೋಗಬೇಕು ಎನ್ನುವಾಗ, ಚಾಲಕ ವಾಹನ ಹಿಂದೆ ತೆಗೆಯಲು ಮುಂದಾಗಿದ್ದು, ಪಕ್ಕದಲ್ಲೆ ನಿಂತಿದ್ದ ರಿಫಾ ಮೈಮೇಲೆ ಹರಿದಿದೆ. ಗೂಡ್ಸ್‌ ವಾಹನ ಗುದ್ದಿದ ರಭಸಕ್ಕೆ ಮಗುವಿನ ಮೆದುಳಿನ ಭಾಗವೇ ಹೊರ ಬಂದಿದೆ. ತೀವ್ರ ರಕ್ತಸ್ರಾವವಾಗಿ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾನೈಟ್ ಲಾರಿ ಹರಿದು ವ್ಯಕ್ತಿ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಗ್ರಾನೈಟ್‌ ಸಾಗಿಸುವ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಡ್ಡಗಲ್ ಗ್ರಾಮದ ರಾಘವೇಂದ್ರ (34) ಮೃತ ದುರ್ದೈವಿ. ಜಮೀನು ಕಡೆ ಹೋಗುತ್ತಿದ್ದ ರಾಘವೇಂದ್ರ ಮೇಲೆ ಹಿಂಬದಿ ಇದ್ದ ಬಂದ ಗ್ರಾನೈಟ್ ಸಾಗಿಸುವ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ರಾಘವೇಂದ್ರರನ್ನು ಕೂಡಲೇ ಬೆಂಗಳೂರಿನ ಕಿಮ್ಸ್‌ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಪೊಲೀಸರು ಗ್ರಾನೈಟ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Rain news: ಬೆಂಗಳೂರಲ್ಲಿ ಆವರಿಸಿದ ಕಗ್ಗತ್ತಲು; ಭಾರಿ ಮಳೆಗೆ ಹೈರಾಣಾದ ಸಾರ್ವಜನಿಕರು

ಮೃತ ಉಮೇಶ್‌

ನಿಯಂತ್ರಣ ತಪ್ಪಿದ ಬೈಕ್‌, ಹಳ್ಳಕ್ಕೆ ಬಿದ್ದ ಸವಾರ ಸಾವು

ಮೈಸೂರಿನ ಹುಣಸೂರು ತಾಲೂಕಿನ ಕಾಳಬೂಚನಹಳ್ಳಿ ಬಳಿ ನಿಯಂತ್ರಣ ತಪ್ಪಿ ಬೈಕ್‌ವೊಂದು ಹಳ್ಳಕ್ಕೆ ಬಿದ್ದಿದೆ. ಪರಿಣಾಮ ಬಿ.ಆರ್.ಕಾವಲ್ ನಿವಾಸಿ ಉಮೇಶ್ (26) ಮೃತಪಟ್ಟಿದ್ದಾರೆ. ಜಮೀನಿನ ಶುಂಠಿ ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಬರಲು ಹೇಳಿ ವಾಪಸ್ಸು ಬರುವಾಗ ಈ ಅಪಘಾತ ಸಂಭವಿಸಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version