Site icon Vistara News

Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Road Accident

ರಾಮನಗರ: ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮತಪಟ್ಟ ಘಟನೆ ರಾಮನಗರ-ಕನಕಪುರ ರಸ್ತೆಯ ಅವೇರಹಳ್ಳಿ ಕೆರೆ ಏರಿ ಬಳಿ ಭಾನುವಾರ ನಡೆದಿದೆ. ಅಪಘಾತದಲ್ಲಿ ಮಾಗಡಿ ತಾಲೂಕಿನ ಹೊನ್ನಾಪುರ ಪಾಳ್ಯದ ನಿವಾಸಿಗಳಾದ ಮಹಿಳೆ ಮತ್ತು ಬೈಕ್ ಸವಾರ ಮೃತಪಟ್ಟಿದ್ದಾರೆ.

ಕನಕಪುರದಿಂದ ರಾಮನಗರ ಕಡೆ ತೆರಳುತ್ತಿದ್ದ ಬೈಕ್‌ ಹಾಗೂ ರಾಮನಗರದಿಂದ ಕನಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Theft case : ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಗೂಡ್ಸ್‌ ವಾಹನ ಚಾಲಕ ಸಾವು

ಬೆಂಗಳೂರು: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಗೂಡ್ಸ್‌ ವಾಹನ ಚಾಲಕ ಮೃತಪಟ್ಟಿರುವ ಘಟನೆ ನಗರ ಹೊರವಲಯದ ಬೆಳ್ಳಂದೂರು ಬಸ್ ನಿಲ್ದಾಣದ ಸಮೀಪ ನಡೆದಿದೆ. ಮುರುಗನ್ (40) ಮೃತ ಚಾಲಕ.

407 ಗೂಡ್ಸ್ ವಾಹನಕ್ಕೆ ಹತ್ತುತ್ತಿದ್ದ ಚಾಲಕನಿಗೆ ವಾಟರ್‌ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಚಾಲಕ ಮೃತಪಟ್ಟಿದ್ದಾನೆ. ವಾಟರ್ ಟ್ಯಾಂಕ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಅಪಘಾತ ನಡೆದಿದೆ. ಅಪಘಾತವೆಸಗಿದ ಬಳಿಕ ವಾಟರ್ ಟ್ಯಾಂಕರ್ ಚಾಲಕ ಎಸ್ಕೇಪ್ ಆಗಿದ್ದಾನೆ.

ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

ಕಾರವಾರ: ಬಸ್‌ಗೆ ಸ್ಕೂಟರ್‌ ಡಿಕ್ಕಿಯಾಗಿದ್ದು, ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಹಳದೀಪುರ ಗ್ರಾಮದ ಬಳಿ ಘಟನೆ (Road Accident) ನಡದಿದೆ. ಸವಾರ ಶಂಕರ ಹೆಗಡೆ (50) ಮೃತ ದುರ್ದೈವಿ.

ಕೆಎಸ್‌ಆರ್‌ಟಿಸಿ ಬಸ್‌ ಭಟ್ಕಳ ಭಾಗದಿಂದ ಕುಮಟಾದತ್ತ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಸ್ಕೂಟರ್‌ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಶಂಕರ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಸಹಾಯದಿಂದ ಯುವತಿಯರಿಗೆ ಬಲೆ; ಮಹಿಳೆಯಂತೆ ಮಾತನಾಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಬಸ್‌ ಮುಂಭಾಗ ಹಾನಿಯಾಗಿದ್ದು, ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Exit mobile version