Site icon Vistara News

Road Accidents: ಸಂಕ್ರಮಣದ 24 ಗಂಟೆಯಲ್ಲಿ 9 ಭೀಕರ ಅಪಘಾತ; 15 ಮಂದಿ ಸಾವು

Road Accident in daavagere

ಬೆಂಗಳೂರು: ಮನೆಯಿಂದ ಹೊರಗೆ ಬಂದರೆ ಯಾವಾಗ? ಹೇಗೆ ಪ್ರಾಣಪಕ್ಷಿ ಹಾರಿಹೋಗುತ್ತೋ ಎಂಬುದೇ ತಿಳಿದಿರುವುದಿಲ್ಲ. ಕೆಲವೊಮ್ಮೆ ನಮ್ಮದಲ್ಲದ ತಪ್ಪಿಗೆ ಅಪಘಾತ (Road Accidents) ನಡೆದು ಜನರು ಜೀವ ಬಿಟ್ಟರೆ, ಮತ್ತೊಂದು ಕಡೆ ನಿರ್ಲಕ್ಷ್ಯದ ಚಾಲನೆಗೆ ಅಮಾಯಕರು ಪ್ರಾಣಬಿಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ (Sankranti Fest) ಸಂಭ್ರಮದಲ್ಲಿ ರಾಜ್ಯದ ಹಲವು ಕಡೆ ಅಪಘಾತಗಳು ಸಂಭವಿಸಿದ್ದು, ಸಾಕಷ್ಟು ಸಾವು-ನೋವುಗಳು ವರದಿಯಾಗಿವೆ. ವಾಹನಗಳನ್ನು ರಸ್ತೆಗಿಳಿಸುವ ಮುನ್ನ ಸವಾರರೇ ಎಚ್ಚರವಾಗಿರಿ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ (Within 24 Hours) 9 ಭೀಕರ ಅಪಘಾತಗಳು ಸಂಭವಿಸಿವೆ. ಅಪಘಾತಗಳಲ್ಲಿ 15 ಮಂದಿ ದಾರುಣವಾಗಿ ಮೃತಪಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಘಟನೆ-1 ಸ್ಥಳ: ತುಮಕೂರು
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕುಂಟೇಗೌಡನಹಳ್ಳಿ ಗೇಟ್ ಬಳಿ ಹಿಟ್‌ ಆ್ಯಂಡ್‌ ರನ್‌ (Hit and Run)ಗೆ ಇಬ್ಬರು ದಾರುಣವಾಗಿ ಮೃತಪಟ್ಟಿದ್ದರು. ಕಾರಿನ ಟೈರ್‌ ಬದಲಿಸುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ (Road Accinent) ಬೆಂಗಳೂರಿನ ಆವಲಹಳ್ಳಿ ಮೂಲದ ಮಹೇಶ್ (38) ಹಾಗೂ ಉಮೇಶ್ (40) ಮೃತಪಟ್ಟಿದ್ದರು. ಬೆಂಗಳೂರು ಕಡೆಯಿಂದ ಶಿರಾ‌ ಕಡೆಗೆ ಹೋಗುತ್ತಿದ್ದಾಗ ಕಾರು ಪಂಚರ್ ಆಗಿತ್ತು. ಹೀಗಾಗಿ ರಸ್ತೆ ಬದಿ ನಿಲ್ಲಿಸಿ ಕಾರಿನ ಟೈರ್ ಬದಲಿಸುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದು ಅಪರಿಚಿತ ವಾಹನ, ನಿಲ್ಲಿಸದೆ ಪರಾರಿಯಾಗಿದೆ.

ಘಟನೆ-2 ಸ್ಥಳ: ಹಾವೇರಿ

ನಿಲ್ಲಿಸಿದ್ದ ಲಾರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿ, ಸವಾರ ಸ್ಥಳದಲ್ಲೆ ಸಾವಿಗೀಡಾಗಿದ್ದರು. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಗೆಜ್ಜಿಹಳ್ಳಿ ಗ್ರಾಮದ ಬಳಿ ಘಟನೆ ನಡೆದಿತ್ತು. ಹನುಮಕೊಪ್ಪ ಗ್ರಾಮದ ಮೆಹೆಬೂಬ (40) ಮೃತ ದುರ್ದೈವಿ. ಹಾನಗಲ್‌ನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮೆಹೆಬೂಬ, ಬೆಳಗಿನ ಜಾವ ಹಾನಗಲ್‌ಗೆ ತೆರಳುವ ವೇಳೆ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಜಂಬಿಟ್ಟಿಗೆ ತುಂಬಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಬೈಕ್‌ ಹೊಡೆದಿದೆ. ಮಂಜಿನಿಂದಾಗಿ ರಸ್ತೆ ಕಾಣದ ಪರಿಣಾಮ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ.

Car accident in dharvwada

ಘಟನೆ-3 ಸ್ಥಳ: ಬೆಂಗಳೂರು

ಬೆಂಗಳೂರಲ್ಲಿ ಸರಣಿ ಅಪಘಾತಕ್ಕೆ (Road accident) ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಣಸವಾಡಿ ಸಮೀಪದ ಸಿಎಂಆರ್ ರೋಡ್‌ನಲ್ಲಿ ಮೆಲ್ವಿನ್ ಜೋಸ್ವಾ(25) ಕಾರು ಚಲಾಯಿಸಿಕೊಂಡು ಹೊರಟಿದ್ದಾಗ ನಿಯಂತ್ರಣ ತಪ್ಪಿ ಮೊದಲು ಮರಕ್ಕೆ ಡಿಕ್ಕಿ ಹೊಡೆದಿತ್ತು. ಬಳಿಕ ಮರದ ಕೆಳಗೆ ನಿಂತಿದ್ದ ಕಾರು ಹಾಗೂ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಈ ಹಂತದಲ್ಲಿ ತೀವ್ರ ಗಾಯಗೊಂಡು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ-4 ಸ್ಥಳ: ಚಾಮರಾಜನಗರ, ಕೊಳ್ಳೇಗಾಲ

ಬೈಕ್‌ವೊಂದು ಎದುರು ಬರುತ್ತಿದ್ದ ಭತ್ತ ಕಟಾವು ಮಾಡುವ ಯಂತ್ರದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಜಿನಕನಹಳ್ಳಿ ಬಳಿ ನಡೆದಿದೆ. ಕೊಳ್ಳೇಗಾಲದ ಪಾಳ್ಯ ಗ್ರಾಮದ ಸಂತೋಷ್(32), ಸೌಮ್ಯ (27), ನಿತ್ಯಸಾಕ್ಷಿ (4) ಸ್ಥಳದಲ್ಲೇ ಮೃತಪಟ್ಟರೆ, ಅಭಿ (9) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾನೆ.

Car accident in dharvwada

ಘಟನೆ-5 ಸ್ಥಳ: ದಾವಣಗೆರೆ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ಚಿನ್ನಿಕಟ್ಟಿ ಎಂಬಲ್ಲಿ ಬೊಲೆರೋ ವಾಹನ ಪಲ್ಟಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಆರು ಮಂದಿ ಗಂಭೀರ (Road Accident) ಗಾಯಗೊಂಡಿದ್ದರು. ಭದ್ರಾವತಿಯ ಚಂದನಕೆರೆ ಗ್ರಾಮದ ನಾಗರಾಜ್(38), ಮಂಜುನಾಥ್(45), ಗೌತಮ್(17) ಮೃತ ದುರ್ದೈವಿಗಳು. ಅಡಿಕೆ ಕೊಯ್ಲು ಮುಗಿಸಿ ವಾಪಾಸ್ ಬರುವಾಗ ರಸ್ತೆಗೆ ಹಸು ಅಡ್ಡ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಪಲ್ಟಿಯಾಗಿದೆ. ಬೊಲೆರೋ ವಾಹನದಡಿ ಸಿಲುಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಆರು ಮಂದಿ ಗಾಯಗೊಂಡಿದ್ದಾರೆ.

Car accident in dharvwada

ಘಟನೆ- 6 ಸ್ಥಳ: ಚಿಕ್ಕಬಳ್ಳಾಪುರ

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. (Road Accident) ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಪೆರಮಾಚನಹಳ್ಳಿ ಬಳಿ ನಡೆದಿದೆ. ಬೈಕ್ ಸವಾರ ಶಂಕರ್ (28), ಹಿಂಬದಿ ಸವಾರೆ ಶಂಕರಮ್ಮ ಮೃತರು. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Car accident in dharvwada

ಘಟನೆ-7 ಸ್ಥಳ: ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮಾಡಿಕೆರೆ ಕ್ರಾಸ್ ಬಳಿ ಅತಿವೇಗವಾಗಿ ಬಂದ ಕಾರುವೊಂದು ರಸ್ತೆಬದಿಗೆ ಉರುಳಿದೆ. ಪರಿಣಾಮ ಕಾರಿನಲ್ಲಿದ್ದ ಶ್ರೀನಿವಾಸಪುರ ಮೂಲದ ಚಿರಾಗ್ (26) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಚಲಾಯಿಸುತ್ತಿದ್ದ ಪ್ರವೀಣ್‌ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಇಬ್ಬರು ಕೋಲಾರ ಜಿಲ್ಲೆ ಶ್ರೀನಿವಾಸಪುರ ಮೂಲದವರು ಎಂದು ತಿಳಿದು ಬಂದಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Car accident in dharvwada

ಘಟನೆ-8 ಸ್ಥಳ: ಧಾರವಾಡ

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಅಪಘಾತಕ್ಕೀಡಾದ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಸಂಕ್ರಮಣ ಹಿನ್ನೆಲೆಯಲ್ಲಿ ರಾಮದುರ್ಗದಿಂದ ನಾಲ್ವರು ದಾಂಡೇಲಿಗೆ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಪೈಪ್‌ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಕಾರದಲ್ಲಿದ್ದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉದಪುಡೋ ಗ್ರಾಮದವರಾದ ಸಾಗರ್ ಹಿರೇಮಠ್, ಮಹಾಂತೇಶ್ ಬಡಿಗೇರ್, ಮಂಜುನಾಥ್ ಕರಡಿಗುಡ್ಡ ಗಂಭೀರ ಗಾಯಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version