ಚಿಕ್ಕೋಡಿ: ಚಿನ್ನದ ವ್ಯಾಪಾರಿಗಳಾದ ಇಬ್ಬರು ಸಹೋದರರು ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ದರೋಡೆಕೋರರು (Robbery Case) ಅಡ್ಡಗಟ್ಟಿ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಗೋಕಾಕ ತಾಲೂಕಿನ ಲೊಳಸೂರ ಗ್ರಾಮದ ಹೊಲವಲಯದಲ್ಲಿ ನಡೆದಿದೆ.
ಕಳೆದ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರವೀಂದ್ರ ಪೋತದಾರ, ಸಂಜೀವ ಪೋತದಾರ ಎಂಬ ಇಬ್ಬರು ಸಹೋದರರು ಹಲ್ಲೆಗೊಳಗಾದವರು. ಚಿನ್ನದ ವ್ಯಾಪಾರಿಗಳಾದ ರವೀಂದ್ರ ಹಾಗೂ ಸಂಜೀವ್, ಅಂಗಡಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು.
ಈ ವೇಳೆ ಏಕಾಏಕಿ ಅಡ್ಡಗಟ್ಟಿದ 8 ಮಂದಿ ದುಷ್ಕಮಿಗಳು ಚಿನ್ನದ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ, ಅರ್ಧ ಕೆಜಿ ಚಿನ್ನ ಹಾಗೂ ೨.೮೦ ಲಕ್ಷ ನಗದು ಕಸಿದು ಹೋಗಿದ್ದಾರೆ. ಹಲ್ಲೆಕೋರರಿಂದ ಹಲ್ಲೆಗೊಳಗಾದ ರವೀಂದ್ರ ಹಾಗೂ ಸಂಜೀವ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಕಾಕ್ ನಗರದಲ್ಲಿ ಚಿನ್ನದ ಅಂಗಡಿಯನ್ನು ಹೊಂದಿರುವ ಇಬ್ಬರು ಸಹೋದರರು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ | Robbery Case | ಎಚ್ಚರ.. ʻಮೇಡಂ ಪಾರ್ಸೆಲ್ʼ ಅಂತ ಬರ್ತಾರೆ ದರೋಡೆ ಮಾಡಿ ಹೋಗ್ತಾರೆ