ಬೆಂಗಳೂರು: ಕರ್ನಾಟಕದ ಜೇನು ಕುರುಬ ಸಮುದಾಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಮೈಸೂರಿನ ಸೋಮಣ್ಣ (Somanna), ಮನೋ ವಿಜ್ಞಾನಿ ಸಿ ಆರ್ ಚಂದ್ರಶೇಖರ್(C R Chandrashekhar), ಕಲಾವಿದೆ ಅನುಪಮಾ ಹೊಸಕೆರೆ(Anupama Hoskere), ಟೆನಿಸ್ ಆಟಗಾರ ರೋಹನ್ ಬೋಪಣ್ಣ (rohan bopanna)ಸೇರಿ ರಾಜ್ಯದ 8 ಸಾಧಕರಿಗೆ 2024ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ(Padamshri). ಕರ್ನಾಟಕದಲ್ಲಿ ಉದ್ಯಮವನ್ನು ಹೊಂದಿರುವ ಸೀತಾರಾಮ್ ಜಿಂದಾಲ್ (Sitaram Jindal) ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹಾಗೆಯೇ ಕಾಸರಗೋಡಿನ ಭತ್ತ ಬೆಳೆಯುವ ರೈತ ಸತ್ಯ ನಾರಾಯಣ ಬೇಳೇರಿ ಅವರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ(Padma Award).
ರಾಜ್ಯದ ಮತ್ಯಾರಿಗೆ ಪದ್ಮಶ್ರೀ ಪ್ರಶಸ್ತಿ?
ಒಟ್ಟು 110 ಜನರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿಲಾಗಿದೆ. ಈ ಪೈಕಿ ಕರ್ನಾಟಕದ ಎಂಟು ಸಾಧಕರಿದ್ದಾರೆ. ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಪ್ರೇಮಾ ಧನರಾಜ್, ಅನುಪಮಾ ಹೊಸಕೆರೆ, ಶ್ರೀಧರ್ ಎಂ ಕೃಷ್ಣಮೂರ್ತಿ, ಸಾಮಾಜಿಕ ಸೇವೆಗಾಗಿ ಕೆ ಎಸ್ ರಾಜಣ್ಣ, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಸಿ ಆರ್ ಚಂದ್ರಶೇಖರ್, ಮೈಸೂರಿನ ಸೋಮಣ್ಣ, ಉದ್ಯಮಿ ಶಶಿ ಸೋನಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ನಟ ಚಿರಂಜೀವಿ, ಕಲಾವಿದೆ ವೈಜಯಂತಿ ಮಾಲಾ ಬಾಲಿ, ಮಾಜಿ ಉಪಾರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ತಮಿಳುನಾಡಿನ ಪದ್ಮಾ ಸುಬ್ರಮಣ್ಯಂ ಹಾಗೂ ಸುಲಭ್ ಶೌಚಾಲಯದ ಪರಿಚಯಿಸಿದ ಬಿಹಾರದ ಬಿಂದೇಶ್ವರ್ ಪಾಠಕ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
ಕೇರಳದ ಎಂ ಫಾತಿಮಾ ಬೀವಿ, ಮಹಾರಾಷ್ಟ್ರದ ಹೋರಮ್ಷಿಜಿ ಎನ್ ಕಾಮಾ, ನಟ ಮಿಥುನ್ ಚಕ್ರವರ್ತಿ, ಕರ್ನಾಟಕದ ಉದ್ಯಮಿ ಸೀತಾರಾಮ್ ಜಿಂದಾಲ್, ತೈವಾನ್ ಉದ್ಯಮಿ ಯಂಗ್ ಲಿಯು, ಮಹಾರಾಷ್ಟ್ರದ ರಾಮ್ ನಾಯ್ಕ್, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಗುಜರಾತ್‌ನ ತೇಜಸ್ ಮಧುಸೂದನ್ ಪಟೇಲ್, ಕೇರಳದ ಒ ರಾಜಗೋಪಾಲ್, ಮಹಾರಾಷ್ಟ್ರದ ದತ್ತಾತ್ರೇಯ ಅಂಬಾದಾಸ್ ಮಾಯಲೋ ಅಲಿಯಾಸ್ ರಾಜದತ್, ಲಡಾಕ್‌ನ ತೋಗ್ಡನ್ ರಿಂಪೋಚೆ, ಮಹಾರಾಷ್ಟ್ರದ ಪ್ಯಾರೇಲಾಲ್ ಶರ್ಮಾ, ಬಿಹಾರದ ಚಂದ್ರೇಶ್ವರ್ ಪ್ರಸಾದ್ ಠಾಕೂರ್, ಗಾಯಕಿ ಉಷಾ ಉತುಪ್, ತಮಿಳುನಾಡಿನ ನಟ ವಿಜಯಕಾಂತ್ ಹಾಗೂ ಸಾಹಿತಿ ಕಂದನ್ ವ್ಯಾಸ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Padma Awards: ನಟ ಚಿರಂಜೀವಿ, ವೆಂಕಯ್ಯ ನಾಯ್ಡುಗೆ ಪದ್ಮವಿಭೂಷಣ, ಉದ್ಯಮಿ ಸೀತಾರಾಮ್ ಜಿಂದಾಲ್‌ಗೆ ಪದ್ಮಭೂಷಣ