ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡು ಆರ್ಟಿಇಒ ಏಜೆಂಟ್ ಒಬ್ಬರು ಆತ್ಮಹತ್ಯೆ (RTO Agent Suicide) ಮಾಡಿಕೊಂಡಿದ್ದಾರೆ. ಉಡುಪಿಯ ಕೊಡಂಕೂರು ನಿವಾಸಿ ಅಶೋಕ್ ಸುವರ್ಣ(46) ಎಂಬುವವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ನಾಪತ್ತೆಯಾಗಿದ್ದ ಅಶೋಕ್ ಅವರ ಹುಡುಕಾಟದಲ್ಲಿದ್ದ ಕುಟುಂಬದವರು ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಹುಡುಕಾಟದಲ್ಲಿದ್ದ ಪೊಲೀಸರಿಗೆ ಅಶೋಕ್ ಅವರ ಬೈಕ್ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಾಬುಕಳ ಬ್ರಿಡ್ಜ್ ಬಳಿ ಪತ್ತೆಯಾಗಿತ್ತು.
ಇದೇ ವೇಳೆ ಅಶೋಕ್ ಸುವರ್ಣ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶರಣಾಗುತ್ತಿರುವುದಾಗಿ ಬರೆದಿಟ್ಟ ಡೆತ್ ನೋಟ್ ಮನೆಯವರಿಗೆ ಸಿಕ್ಕಿದೆ. ಮಾಬುಕಳದ ಸೀತಾನದಿಯಲ್ಲಿ ಈಶ್ವರ್ ಮಲ್ಪೆ ಎಂಬುವರು ಹುಡುಕಾಟ ನಡೆಸಿದಾಗ, ಅಶೋಕ್ ಸುವರ್ಣರ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.