ಮಂಗಳೂರು: ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ಮನೆಗೆ ಶಾಸಕ ಅಶೋಕ್ ರೈ ಬೆಂಬಲಿಗರು ನುಗ್ಗಿ ಪುಂಡಾಟ ಮೆರೆದಿರುವ ಘಟನೆ ಜಿಲ್ಲೆಯ ಪುತ್ತೂರು ತಾಲೂಕಿನ (Puttur News) ತಾರಿಗುಡ್ಡೆಯಲ್ಲಿ ನಡೆದಿದೆ. ಅನುದಾನ ಹಂಚಿಕೆ ವಿಚಾರದಲ್ಲಿ ಕಿರಿಕ್ ತೆಗೆದಿರುವ ಶಾಸಕನ ಬೆಂಬಲಿಗರು, ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಜಯಾನಂದ ಕೆ. ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ರೌಡಿಶೀಟರ್ ಪ್ರಜ್ವಲ್ ರೈ ಮತ್ತು ಕಾಂಗ್ರೆಸ್ ಬೆಂಬಲಿಗರು, ಮನೆಗೆ ನುಗ್ಗಿ ಚೆಂಡೆ, ವಾಲಗ ಜತೆಗೆ ಕಾಂಗ್ರೆಸ್‌ನ ಅನುದಾನದ ಕುರಿತ ಬ್ಯಾನರ್ ಹಿಡಿದು ಪುಂಡಾಟ ತೋರಿದ್ದಾರೆ. ಘಟನೆ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Lok Sabha Election 2024: ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿದ ಟಿಎಂಸಿ ಮುಖಂಡ; ವಿವಾದಾತ್ಮಕ ವಿಡಿಯೊ ಇಲ್ಲಿದೆ
ಪುತ್ತೂರು ಶಾಸಕರು ಅತಿ ಹೆಚ್ಚು ಅನುದಾನ ತಂದಿದ್ದಾರೆ ಎಂಬ ಕುರಿತು ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪೋಸ್ಟ್ ಹಾಕಿದ್ದರು. ಇದೇ ವಿಚಾರಕ್ಕೆ ಶಾಸಕ ಅಶೋಕ್ ರೈ ಬೆಂಬಲಿಗರಿಂದ ದಾಂಧಲೆ ನಡೆದಿದೆ. ಘಟನೆ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಅಧಿಕಾರಿಯನ್ನು ನೀನ್ಯಾವನೋ ಬೋ…ಮಗ ಎಂದು ಬೈದ ಗುಬ್ಬಿ ಶಾಸಕ; ವಿಡಿಯೊ ವೈರಲ್
ತುಮಕೂರು: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಸರ್ಕಾರಿ ಅಧಿಕಾರಿಯನ್ನು ಶಾಸಕ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೊ ವೈರಲ್ ಆಗಿದೆ. ಮಾ. 4ರಂದು ಗುಬ್ಬಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗುಬ್ಬಿ ಸಿಡಿಪಿಒ ಮಹೇಶ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಎಸ್.ಆರ್.ಶ್ರೀನಿವಾಸ್, ನೀನ್ಯಾವನೋ ಬೋ…ಮಗ ಎಂದು ಬೈದಿರುವುದು ಕಂಡುಬಂದಿದೆ. ಸಿಡಿಪಿಒ ಮಹೇಶ್ ವಿರುದ್ಧ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಘಟಕದ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ್ದ ಶಾಸಕ, ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದರು.
ತಮ್ಮ ಕೆಲಸ ಕಿತ್ತುಕೊಂಡು ವೇತನ ನೀಡದೆ ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿ ಸಿಡಿಪಿಒ ವಿರುದ್ಧ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ, ಎಲ್ಲರ ಎದುರೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಶಾಸಕ, ಒಂದು ಸಣ್ಣ ಹಲ್ಲುಕಡ್ಡಿ ಅಲ್ಲಾಡಿದರೂ ಪಿಡಿಒಗಳು, ಅಧಿಕಾರಿಗಳು ನನ್ನ ಗಮನಕ್ಕೆ ತರುತ್ತಾರೆ. ನಿನಗೇನಾಗಿತ್ತು ದೊಡ್ಡ ರೋಗ ಎಂದು ಅವಾಚ್ಯ ಶಬ್ದಗಳಿಂದ ಅಧಿಕಾರಿಯನ್ನು ನಿಂದಿಸಿದ್ದರು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ | Lok Sabha Election 2024: ಮನವೊಲಿಕೆ ಯತ್ನ ವಿಫಲ; ಪಕ್ಷೇತರ ಸ್ಪರ್ಧೆ, ಮೋದಿಗೆ ಬೆಂಬಲ ಎಂದ ಈಶ್ವರಪ್ಪ