ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ (Modi In Karnataka) ರೋಡ್ ಶೋ ನಡೆಸಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ರೋಡ್ ಶೋ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ರೋಡ್ ಶೋ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಅಳವಡಿಕೆ, ಭದ್ರತೆ, ಮಾರ್ಗ ಬದಲಾವಣೆ ಸೇರಿ ಹಲವು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರೋಡ್ ಶೋ ವೇಳೆ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಬಿಜೆಪಿ ಯೋಜನೆ ರೂಪಿಸಿದೆ. ಮೋದಿ ರೋಡ್ ಶೋ ವೇಳೆ ಎರಡೂ ದಿನವೂ ಆಂಜನೇಯನ ಭಾವಚಿತ್ರ ಇರುವ ಬಾವುಗಳು ರಾರಾಜಿಸಲಿವೆ. ಇದರಿಂದ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಹೇಳಿದ ಕಾಂಗ್ರೆಸ್‌ಗೆ ತಿರುಗೇಟು ನೀಡಲಾಗುತ್ತಿದೆ.
ನರೇಂದ್ರ ಮೋದಿ ಅವರು ಸಾಗುವ ರಸ್ತೆಗಳ ಉದ್ದಕ್ಕೂ ಭಗವಾನ್ ಹನುಮಂತನ ಭಾವಚಿತ್ರ ಇರುವ ಕೇಸರಿ ಬಾವುಟಗಳನ್ನು ಅಳವಡಿಸಲು ಬಿಜೆಪಿ ತೀರ್ಮಾನಿಸಿದೆ. ಇದರಿಂದ ರಾಜ್ಯ ರಾಜಧಾನಿಯಲ್ಲಿ ಕೇಸರಿ ಅಲೆಯ ಜತೆಗೆ ಬಜರಂಗಬಲಿಯ ಸ್ಮರಣೆಯೂ ನಡೆಯಲಿದೆ. ಅದರಲ್ಲೂ, ಬಜರಂಗದಳವನ್ನು ನಿಷೇಧಿಸಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವುದಕ್ಕೆ ತಕ್ಕ ಉತ್ತರವೂ ಇದಾಗಲಿದೆ ಎಂಬುದು ಬಿಜೆಪಿ ಯೋಜನೆಯಾಗಿದೆ.
ಮೇ 6ರ ರೋಡ್ ಶೋ ರೂಟ್ ಮ್ಯಾಪ್
ಇದನ್ನೂ ಓದಿ: Modi In Karnataka: ಬೆಂಗಳೂರಲ್ಲಿ ಮೋದಿ ಮೇನಿಯಾ; ಇಲ್ಲಿದೆ ಎರಡು ದಿನದ ರೋಡ್ ಶೋ ಡಿಟೇಲ್ಸ್
ಮೇ 6ರ ಬೆಳಗ್ಗೆ ಹತ್ತು ಗಂಟೆಗೆ ಮೊದಲ ರೋಡ್ ಶೋ ಪ್ರಾರಂಭವಾಗಲಿದೆ. ಜೆ.ಪಿ.ನಗರದ ಬ್ರಿಗೇಡ್ ಮಿಲೇನಿಯಂ ಅಪಾರ್ಟ್ಮೆಂಟ್‌ನಿಂದ ನರೇಂದ್ರ ಮೋದಿ ರೋಡ್ ಶೋ ಆರಂಭವಾಗಲಿದೆ. ಶ್ರೀ ಸೋಮೇಶ್ವರ ಸಭಾಭವನ > ಜೆಪಿ ನಗರ 5ನೇ ಫೇಸ್> ಪುಟ್ಟೇನಹಳ್ಳಿ ಮುಖ್ಯ ರಸ್ತೆ> ಪುಟ್ಟೇನಹಳ್ಳಿ ರಿಂಗ್ ರೋಡ್ ಜಂಕ್ಷನ್> ರಾಘವೇಂದ್ರ ಮಠ> ಜಯನಗರ 4th ಬ್ಲಾಕ್> ಸೌತ್ ಎಂಡ್ ಸರ್ಕಲ್> ಮಾಧವನರಾವ್ ಪಾರ್ಕ್> ಕೃಷ್ಣರಾವ್ ಪಾರ್ಕ್> ದೊಡ್ಡ ಗಣಪತಿ ದೇವಸ್ಥಾನ> ಬಸವನಗುಡಿಯ ರಾಮಕೃಷ್ಣ ಮಠ> ಉಮಾ ಥಿಯೇಟರ್> ಟಿಆರ್ ಮಿಲ್> ಮೈಸೂರ್ ಸರ್ಕಲ್ > ಬಿನ್ನಿಮಿಲ್ ರೋಡ್> ಮಾಗಡಿ ರಸ್ತೆ> ಟೋಲ್‌ಗೇಟ್> ವೀರೇಶ್ ಚಿತ್ರಮಂದಿರ ದಾಟಿ ಅಲ್ಲಿಂದ ವಿಜಯನಗರ> ಗೋವಿಂದರಾಜ್ ನಗರ> ಮಾಗಡಿ ರೋಡ್ ಜಂಕ್ಷನ್> ಬಸವೇಶ್ವರ ನಗರ > ಶಂಕರಮಠ> ಮಲ್ಲೇಶ್ವರ> ಸಂಪಿಗೆ ರಸ್ತೆಯ ಕಾಡು ಮಲ್ಲೇಶ್ವರ ದೇವಸ್ಥಾನ ಮಾರ್ಗದಲ್ಲಿ ರೋಡ್ ಶೋ ಅಂತ್ಯವಾಗಲಿದೆ.