ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಚಿಲ್ಡ್ ವಾಟರ್ ಇಂಡೋರ್ ವಿಭಾಗದಲ್ಲಿ ತನ್ನ ಹೊಸ ಉತ್ಪನ್ನವಾದ ವಿಂಡ್‌ಫ್ರೀ ಏರ್ ಕಂಡಿಷನರ್ ಅನ್ನು ಬಿಡುಗಡೆ (Samsung AC) ಮಾಡಿದೆ. ಈ ಹೊಸ ಏಸಿ ಶ್ರೇಣಿಯು ಚಿಲ್ಡ್ ವಾಟರ್ ಬೇಸ್ಡ್ ಕ್ಯಾಸೆಟ್ ಯುನಿಟ್‌ಗಳಲ್ಲಿ ವಿಂಡ್-ಫ್ರೀ ಮತ್ತು 360° ಬ್ಲೇಡ್‌ಲೆಸ್ ತಂತ್ರಜ್ಞಾನವನ್ನು ಹೊಂದಿದ್ದು, ಈ ಶ್ರೇಣಿಯು ಬಳಕೆದಾರರು ಯಾವುದೇ ಕಿರಿಕಿರಿ ಇಲ್ಲದೆ ಉತ್ತಮ ಕೂಲಿಂಗ್ ಅನುಭವ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ.
ಚಿಲ್ಡ್ ವಾಟರ್ ಬೇಸ್ಡ್ ಕ್ಯಾಸೆಟ್ ಯುನಿಟ್‌ಗಳು ಬಳಕೆದಾರರಿಗೆ ಬೇಕಾದ ತಾಪಮಾನವನ್ನು ಸೆಟ್ ಮಾಡಲು ಅನುವು ಮಾಡಿಕೊಡುತ್ತದೆ. ಜತೆಗೆ ವಿಂಡ್‌ಫ್ರೀ™ ಕೂಲಿಂಗ್ ತಂತ್ರಜ್ಞಾನವು 0.15 ಎಂ/ಸೆಕೆಂಡ್ ನಷ್ಟು ಗಾಳಿಯ ವೇಗದಲ್ಲಿ 15,000 ಮೈಕ್ರೋ-ಏರ್ ರಂಧ್ರಗಳಲ್ಲಿ ನಿಧಾನವಾಗಿ ತಂಪಾದ ಗಾಳಿಯನ್ನು ಬಿಡುಗಡೆ ಮಾಡುವಂತೆ ನೋಡಿಕೊಳ್ಳುತ್ತದೆ.
ಇದರ ಜತೆಗೆ ಸುಧಾರಿತ ಏರ್ ಫ್ಲೋ ವ್ಯವಸ್ಥೆಯು ಕೋಣೆಗಳನ್ನು ಶಾಂತವಾಗಿ, ವೇಗವಾಗಿ ತಂಪಾಗಿಸುತ್ತದೆ. ಕಡಿಮೆ ಮಟ್ಟದ ಅಂದರೆ ಕೇವಲ 24 dB(A) ಸೌಂಡ್ ಅನ್ನು ಮಾತ್ರ ಈ ಉತ್ಪನ್ನವು ಹೊರಹಾಕುತ್ತದೆ. ಈ ಸದ್ದನ್ನು ಒಂಥರಾ ಪಿಸುಮಾತುಗಳಿಗೆ ಹೋಲಿಸಬಹುದಾಗಿದೆ. ಹಾಗಾಗಿ ಈ ಉತ್ಪನ್ನವು ಮಲಗುವ ಕೋಣೆಗಳು, ಅಧ್ಯಯನ ಕೊಠಡಿಗಳು ಮತ್ತು ಮಗುವಿನ ಕೋಣೆಗಳಿಗೆ ಬಳಸಲು ಸೂಕ್ತವಾಗಿದೆ.
ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?
ಹೊಸ ಫ್ಯಾನ್ ಕಾಯಿಲ್ ಯೂನಿಟ್ ವಿಂಡ್‌ಫ್ರೀ ಎಸಿಗಳು ನೀರಿನ ಪೈಪ್‌ಗಳು ಮತ್ತು ಸಂಬಂಧಿತ ವಾಲ್ವ್‌ಗಳನ್ನು ಬಳಸಿಕೊಂಡು ಸೆಂಟ್ರಲ್ ಚಿಲ್ಡ್ ವಾಟರ್ ಸಿಸ್ಟಮ್‌ಗೆ ಕನೆಕ್ಟ್ ಆಗಿವೆ. ಈ ಹೈಡ್ರಾನಿಕ್ ಫ್ಯಾನ್ ಕಾಯಿಲ್ ಯುನಿಟ್‌ಗಳು ಬಿಸಿಮಾಡಲು ಅಥವಾ ದೊಡ್ಡ ಜಾಗಗಳನ್ನು ತಂಪಾಗಿಸಲು ಬಿಸಿ ಅಥವಾ ತಣ್ಣನೆಯ ನೀರನ್ನು ಕಾಯಿಲ್‌ಗಳ ಮೂಲಕ ಪ್ರಸರಣ ಮಾಡುತ್ತವೆ. ಈ ಯುನಿಟ್‌ಗಳನ್ನು ಸ್ಯಾಮ್‌ಸಂಗ್ ಏರ್-ಕೂಲ್ಡ್ ಚಿಲ್ಲರ್‌ಗಳು ಅಥವಾ ಯಾವುದೇ ಥರ್ಡ್ ಪಾರ್ಟಿ ಏರ್-ಕೂಲ್ಡ್ ಮತ್ತು ವಾಟರ್-ಕೂಲ್ಡ್ ಚಿಲ್ಲರ್‌ಗಳೊಂದಿಗೂ ಬಳಸಬಹುದು.
ಈ ಕುರಿತು ಸ್ಯಾಮ್‌ಸಂಗ್ ಇಂಡಿಯಾದ ಎಸ್ಎಸಿ ಬಿಸಿನೆಸ್‌ನ ಹಿರಿಯ ನಿರ್ದೇಶಕ ವಿಪಿನ್ ಅಗರವಾಲ್ ಮಾತನಾಡಿ, “ನಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಅನುಕೂಲತೆ ಮತ್ತು ಬಾಳಿಕೆ ಬರುವ ಉತ್ಪನ್ನ ಒದಗಿಸುವುದು ಸ್ಯಾಮ್‌ಸಂಗ್‌ನ ಉದ್ದೇಶವಾಗಿದೆ. ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯುನಿಟ್‌ಗಳು ಶಾಂತವಾಗಿ ಕಾರ್ಯನಿರ್ವಹಿಸುತ್ತಲೇ ವೇಗವಾಗಿ ಉನ್ನತ ಮಟ್ಟದ ಕೂಲಿಂಗ್ ಸೌಲಭ್ಯವನ್ನು ಒದಗಿಸುತ್ತವೆ. ಕೂಲಿಂಗ್ ಯೂನಿಟ್‌ಗಳು ವಿಶಾಲವಾದ ಸ್ಥಳಗಳಿಗೆ ಹೆಚ್ಚು ಸೂಕ್ತವಾಗಿವೆ. ಏರ್ ಫ್ಲೋ ವ್ಯವಸ್ಥೆ ಅಂದರೆ ಗಾಳಿಯ ಹರಿವಿನ ವ್ಯವಸ್ಥೆಯನ್ನು ಹೆಚ್ಚು ಸುಧಾರಿತಗೊಳಿಸುವ, ಹಿತವಾಗಿಸುವ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ” ಎಂದು ತಿಳಿಸಿದ್ದಾರೆ.
ಸ್ಯಾಮ್‌ಸಂಗ್ ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯುನಿಟ್‌ಗಳು 3 ವೇರಿಯಂಟ್‌ಗಳಲ್ಲಿ ಲಭ್ಯ
1ವೇ ಕ್ಯಾಸೆಟ್ (2.6KW~ 4.2KW)
ಅಟೋ ಸ್ವಿಂಗ್ ಫೀಚರ್ ಹೊಂದಿರುವ ಈ ಯುನಿಟ್ ಅನ್ನು ವಿಶಾಲವಾದ ಪ್ರದೇಶಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಂಪಾಗಿಸಲು ವಿನ್ಯಾಸಗೊಳಿಸಲಾಗಿದೆ. ಅದರ ದೊಡ್ಡ ಬ್ಲೇಡ್ ಹೆಚ್ಚು ದೊಡ್ಡದಾದ ಮತ್ತು ವಿಶಾಲವಾದ ಪ್ರದೇಶದಲ್ಲಿ ಗಾಳಿಯನ್ನು ಹರಡುತ್ತದೆ. ಅಟೋ ಸ್ವಿಂಗ್ ಫೀಚರ್ ಪ್ರತೀ ದಿಕ್ಕಿಗೂ ಗಾಳಿಯನ್ನು ವಿತರಿಸುತ್ತದೆ. 1ವೇ ಕ್ಯಾಸೆಟ್‌ಗಳು ಅತ್ಯಂತ ತೆಳ್ಳಗಿನ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕ ಸೌಂದರ್ಯವನ್ನು ಹೊಂದಿದೆ. ಇದು ಕೇವಲ 135 ಮಿಮೀ ಎತ್ತರವನ್ನು ಹೊಂದಿದೆ ಮತ್ತು ಕೇವಲ 155 ಮಿ.ಮೀನಷ್ಟು ಸಣ್ಣದಾದ ಸೀಲಿಂಗ್ ಜಾಗದಲ್ಲಿಯೂ ಹೊಂದಿಕೊಳ್ಳುತ್ತದೆ. ಆದ್ದರಿಂದ, ಸೀಮಿತ ಸ್ಥಳಾವಕಾಶ ಇರುವ, ಆದರೆ ವಿಶಾಲವಾದ ಸ್ಥಳವನ್ನು ತಂಪಾಗಿಸುವ ಮತ್ತು ಬಿಸಿಮಾಡುವ ಅಗತ್ಯ ಇರುವವರಿಗೆ, ಇದು ಸೂಕ್ತವಾದ ಮತ್ತು ಪರಿಣಾಮಕಾರಿ ಉತ್ಪನ್ನವಾಗಿದೆ. ಇದರ ಜತೆಗೆ, ಅದರ ಸೊಗಸಾದ ಮತ್ತು ಕಾಂಪ್ಯಾಕ್ಟ್ ವಿನ್ಯಾಸವು ಎಲ್ಲಾ ರೀತಿಯ ಮತ್ತು ಶೈಲಿಗಳ ಇಂಟೀರಿಯರ್ ಜತೆಗೆ ಸೂಕ್ತ ರೀತಿಯಲ್ಲಿ ಹೊಂದಿಕೊಳ್ಳುತ್ತದೆ.
4ವೇ ಕ್ಯಾಸೆಟ್ (6.0KW~10.0KW)
ದೊಡ್ಡ ಬ್ಲೇಡ್ ವಿನ್ಯಾಸ ಹೊಂದಿರುವ ಈ ಯುನಿಟ್ ಉತ್ತಮ ಕೂಲಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ. ಇದು ನೀವು ಸೂಚಿಸಿದ ಸ್ಥಳಗಳಿಗೆ ಮಾತ್ರ ಗಾಳಿಯನ್ನು ಪ್ರಸಾರ ಮಾಡುತ್ತದೆ. ಅನಗತ್ಯವಾಗಿ ಗಾಳಿಯನ್ನು ಎಲ್ಲಾ ಕಡೆಗೆ ಹರಡುವ ಕೆಲಸ ಮಾಡುವುದಿಲ್ಲ.
360° ಚಿಲ್ಡ್ ಕ್ಯಾಸೆಟ್ (6.0KW~10.0KW)
ವೃತ್ತಾಕಾರದ ಸಂರಚನೆ ಹೊಂದಿದೆ. ಆಧುನಿಕ ಶೈಲಿಯ ಆರ್ಕಿಟೆಕ್ಚರಲ್ ಇಂಟೀರಿಯರ್‌ಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಕೋಲ್ಡ್ ಡ್ರಾಫ್ಟ್‌ಗಳಿಲ್ಲದೆ ಎಲ್ಲಾ ದಿಕ್ಕುಗಳಿಗೂ ಏಕರೂಪವಾಗಿ ಗಾಳಿಯನ್ನು ಪ್ರಸಾರ ಮಾಡುತ್ತದೆ. ಗಾಳಿಯ ಹರಿವನ್ನು ನಿರ್ಬಂಧಿಸಲು ಯಾವುದೇ ಬ್ಲೇಡ್‌ಗಳಿಲ್ಲದಿರುವುದರಿಂದ ಇದು 25 ಪ್ರತಿಶತದಷ್ಟು ಹೆಚ್ಚಿನ ಗಾಳಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಅದನ್ನು ಮತ್ತಷ್ಟು ವೇಗವಾಗಿ ಪ್ರಸರಣ ಮಾಡುತ್ತದೆ.
ಇದನ್ನೂ ಓದಿ: Media Connect: ಚೆಸ್ ಹಬ್ಬದಲ್ಲಿ ಮೀಡಿಯಾ ಕನೆಕ್ಟ್ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ
ಇದರ ದರ ಎಷ್ಟು?
ಸ್ಯಾಮ್‌ಸಂಗ್ ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯೂನಿಟ್‌ಗಳ 3 ವೇರಿಯಂಟ್‌ಗಳು ಭಾರತದಾದ್ಯಂತ ಇರುವ ಸ್ಯಾಮ್‌ಸಂಗ್‌ನ ನೋಂದಾಯಿತ ಆಫ್‌ಲೈನ್ ಪಾಲುದಾರರ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ. ಕಡಿಮೆ ಸಾಮರ್ಥ್ಯ ಹೊಂದಿರುವ ಯುನಿಟ್ ಬೆಲೆ ರೂ. 35000ರಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ.