Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು? - Vistara News

ವಾಣಿಜ್ಯ

Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

Samsung Galaxy: ಸ್ಯಾಮ್‌ಸಂಗ್ ತನ್ನ 6ನೇ ಜನರೇಷನ್‌ನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ. ಹಳೆಯ ಜನರೇಷನ್‌ನ ಫೋಲ್ಡೆಬಲ್ ಫೋನ್‌ಗಳಿಗೆ ಹೋಲಿಸಿದರೆ ಗ್ಯಾಲಕ್ಸಿ ಝಡ್ ಫೋಲ್ಡ್6, ಝಡ್ ಫ್ಲಿಪ್6 ಫೋನ್ ಗಳ ಪ್ರೀ ಬುಕಿಂಗ್‌ನಲ್ಲಿ 40% ಹೆಚ್ಚಳ ಉಂಟಾಗಿದ್ದು, ಈ ಪೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಝಡ್ ಸರಣಿಯ ಫೋನ್‌ಗಳು ಎಂಬ ಹೆಗ್ಗಳಿಕೆ ಗಳಿಸಿವೆ.

VISTARANEWS.COM


on

Samsung Galaxy Z Fold6 Z Flip6 Smartphones Good Customer Response
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung Galaxy) ತನ್ನ 6ನೇ ಜನರೇಷನ್‌ನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಳೆಯ ಜನರೇಷನ್‌ನ ಫೋಲ್ಡೆಬಲ್ ಫೋನ್‌ಗಳಿಗೆ ಹೋಲಿಸಿದರೆ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್ 6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ 40% ಹೆಚ್ಚಳ ಉಂಟಾಗಿದ್ದು, ಈ ಪೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಝಡ್ ಸರಣಿಯ ಫೋನ್‌ಗಳು ಎಂಬ ಹೆಗ್ಗಳಿಕೆ ಗಳಿಸಿವೆ.

ಭಾರತದಲ್ಲಿ ಮತ್ತು ವಿಶ್ವಾದ್ಯಂತ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6ನ ಪ್ರೀ ಬುಕಿಂಗ್ ಅನ್ನು ಜುಲೈ 10ರಂದು ಪ್ರಾರಂಭಿಸಲಾಗಿತ್ತು. ಈ ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ಬಡ್ಸ್3 ಪ್ರೊ ಮತ್ತು ಗ್ಯಾಲಕ್ಸಿ ಬಡ್ಸ್3 ಭಾರತದಲ್ಲಿ ಇದೇ ಜು.24ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಈ ಕುರಿತು ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಮಾತನಾಡಿ, “ನಮ್ಮ ಹೊಸ ಫೋಲ್ಡೆಬಲ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6ಗೆ ಭಾರತದ ಗ್ರಾಹಕರಿಂದ ದೊರೆತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಾವು ಸಂತೋಷಗೊಂಡಿದ್ದೇವೆ. ಹೊಸ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ಪ್ರೀ ಬುಕಿಂಗ್ ನಲ್ಲಿ 1.4x ಹೆಚ್ಚಳ ಉಂಟಾಗಿದ್ದು, ಇದು ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವವರಲ್ಲಿ ಭಾರತೀಯ ಗ್ರಾಹಕರು ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.

ಇದನ್ನೂ ಓದಿ: Pralhad joshi: ನವೀಕರಿಸಬಹುದಾದ ಇಂಧನ ಉತ್ಪಾದನೆ; ವಿಶ್ವದಲ್ಲೇ 4ನೇ ಸ್ಥಾನದಲ್ಲಿ ಭಾರತ

ಆರನೇ ಜನರೇಷನ್‌ನ ನಮ್ಮ ಹೊಸ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳು ಗ್ಯಾಲಕ್ಸಿ ಎಐನ ಹೊಸ ಅಧ್ಯಾಯವನ್ನು ಆರಂಭಿಸಿವೆ. ಈ ಗ್ಯಾಲಕ್ಸಿ ಎಐ ಸೌಲಭ್ಯವು ಬಳಕೆದಾರರ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಸಂವಹನ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಿ, ಅನನ್ಯ ಮೊಬೈಲ್ ಅನುಭವಕ್ಕೆ ಪಾತ್ರರಾಗುವ ಸೌಕರ್ಯ ಒದಗಿಸುತ್ತದೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6ನ ಯಶಸ್ಸು ಭಾರತದಲ್ಲಿನ ಪ್ರೀಮಿಯಂ ವಿಭಾಗದ ನಾಯಕತ್ವವನ್ನು ಮುಂದುವರಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದರು.

ಭಾರತೀಯ ಗ್ರಾಹಕರಿಗೆ ತಲುಪಿಸಲು ಸ್ಯಾಮ್‌ಸಂಗ್‌ನ ನೋಯ್ಡಾ ಕಾರ್ಖಾನೆಯಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6 ಅನ್ನು ತಯಾರಿಸಲಾಗುತ್ತಿದೆ. ಹೊಸ ಫೋಲ್ಡೆಬಲ್‌ಗಳು ಇದುವರೆಗಿನ ಫೋಲ್ಡೆಬಲ್‌ಗಳಿಗಿಂತ ಹೆಚ್ಚು ತೆಳ್ಳಗಿರುವ ಮತ್ತು ಹಗುರವಾಗಿರುವ ಗ್ಯಾಲಕ್ಸಿ ಝಡ್ ಸರಣಿಯ ಸಾಧನಗಳಾಗಿವೆ. ಸಿಮ್ಮೆಟ್ರಿಕಲ್ ವಿನ್ಯಾಸ ಅಂದ್ರೆ ಎರಡೂ ಬದಿಯಲ್ಲಿ ಒಂದೇ ಥರ ಕಾಣುವ ವಿನ್ಯಾಸ ಮತ್ತು ನೇರವಾದ ಎಡ್ಜ್ ಅನ್ನು ಹೊಂದಿವೆ.

ಗ್ಯಾಲಕ್ಸಿ ಝಡ್ ಸರಣಿಯು ಅತ್ಯುತ್ತಮ ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದ್ದು, ಇದು ಇನ್ನೂ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯ ಫೋನ್‌ಗಳಾಗಿವೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್6 ಗಳು ಗ್ಯಾಲಕ್ಸಿಯ ಸ್ನ್ಯಾಪ್ ಡ್ರಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್‌ ಹೊಂದಿದ್ದು, ಇದು ಅತ್ಯಾಧುನಿಕ ಸ್ನಾಪ್‌ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದೆ. ಅತ್ಯುತ್ತಮ ದರ್ಜೆಯ ಸಿಪಿಯು, ಜಿಪಿಯು ಮತ್ತು ಎನ್‌ಪಿಯು ಹೊಂದಿದ್ದು, ಅತ್ಯಪೂರ್ವ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ವಿಶೇಷವಾಗಿ ಪ್ರೊಸೆಸರ್ ಅನ್ನು ಎಐಗೆ ಸೂಕ್ತವಾಗಿ ಹೊಂದುವಂತೆ ವಿನ್ಯಾಸ ಮಾಡಲಾಗಿದೆ ಮತ್ತು ಒಟ್ಟಾರೆಯಾಗಿ ಸುಧಾರಿತ ಕಾರ್ಯಕ್ಷಮತೆ ಜತೆಗೆ ಉತ್ತಮ ಗ್ರಾಫಿಕ್ಸ್ ಸೌಕರ್ಯವನ್ನೂ ನೀಡುತ್ತದೆ.

ಇದನ್ನೂ ಓದಿ: Kannada New Movie: ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್; ‘ಕುಬುಸ’ ಚಿತ್ರದ ಟ್ರೈಲರ್ ಬಿಡುಗಡೆ

ಗ್ಯಾಲಕ್ಸಿ ಝಡ್ ಫೋಲ್ಡ್6 ಎಐ- ಆಧರಿತ ಫೀಚರ್‌ಗಳು ಮತ್ತು ಟೂಲ್ ಗಳನ್ನು ಒದಗಿಸುತ್ತವೆ. ಆ ಫೀಚರ್‌ಗಳಲ್ಲಿ ನೋಟ್ ಅಸಿಸ್ಟ್, ಸ್ಕೆಚ್ ಟು ಇಮೇಜ್, ಇಂಟರ್‌ಪ್ರಿಟರ್, ಫೋಟೋ ಅಸಿಸ್ಟ್ ಮತ್ತು ಇನ್‌ಸ್ಟಾಂಟ್ ಸ್ಲೋ-ಮೋ ಒಳಗೊಂಡಿವೆ.

ಗ್ಯಾಲಕ್ಸಿ ಝಡ್ ಫೋಲ್ಡ್6 ಈಗ ದೀರ್ಘಾವಧಿಯ ಗೇಮಿಂಗ್ ಸೆಷನ್‌ನಲ್ಲಿ ತೊಡಗಿಕೊಳ್ಳಲು ಅನುಕೂಲತೆ ಒದಗಿಸುವ 1.6x ಲಾರ್ಜರ್ ವೇಪರ್ ಚೇಂಬರ್ ಅನ್ನು ಹೊಂದಿದೆ ಮತ್ತು ರೇ ಟ್ರೇಸಿಂಗ್ ವ್ಯವಸ್ಥೆಯು 7.6-ಇಂಚಿನ ಪರದೆಯ ಮೇಲೆ ಅತ್ಯುತ್ತಮ ಗುಣಮಟ್ಟದ ಗ್ರಾಫಿಕ್ಸ್ ಸೌಕರ್ಯ ಒದಗಿಸುತ್ತದೆ. ಇವೆಲ್ಲಾ ಸೌಕರ್ಯಗಳು ಹಾಗೂ 2,600 ಎನ್ಐಟಿ ವರೆಗಿನ ಬ್ರೈಟ್ ಆದ ಡಿಸ್ ಪ್ಲೇ ಸೇರಿಕೊಂಡು ಗೇಮಿಂಗ್ ಅನುಭವವನ್ನು ತೀವ್ರಗೊಳಿಸುತ್ತದೆ.

ಗ್ಯಾಲಕ್ಸಿ ಝಡ್ ಫ್ಲಿಪ್6 ಈಗ ಹೊಸತಾಗಿ ಕಸ್ಟಮೈಸೇಶನ್ ಸೌಲಭ್ಯ ನೀಡುತ್ತದೆ ಮತ್ತು ಸೃಜನಶೀಲ ಫೀಚರ್‌ಗಳ ಶ್ರೇಣಿಯನ್ನು ಒದಗಿಸುತ್ತದೆ. ಆದ್ದರಿಂದ ನೀವು ಪ್ರತಿ ಕ್ಷಣದಲ್ಲಿಯೂ ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. 3.4-ಇಂಚಿನ ಸೂಪರ್ ಅಮೋಲ್ಡ್ ಫ್ಲೆಕ್ಸ್‌ ವಿಂಡೋ ಮೂಲಕ ನೀವು ಫೋನ್ ಅನ್ನು ತೆರೆಯದೆಯೇ ಎಐ ಆಧರಿತ ಕಾರ್ಯ ನಿರ್ವಹಣೆಗಳನ್ನು ಮಾಡಬಹುದಾಗಿದೆ. ಯಾವುದಾದರೂ ಟೆಕ್ಸ್ಟ್ ಮೆಸೇಜ್‌ಗೆ ಸಾಧನೆ ಸೂಚಿಸಿದ ಮೆಸೇಜ್ ರಿಪ್ಲೈ ಮಾಡಬಹುದಾಗಿದೆ. ನಿಮ್ಮ ಇತ್ತೀಚಿನ ಮೆಸೇಜ್‌ಗಳನ್ನು ವಿಶ್ಲೇಷಿಸುವ ಮೂಲಕ ಈಗಾಗಲೇ ಸಿದ್ಧವಿರುವ ಸೂಕ್ತವಾದ ಮೆಸೇಜ್‌ಗಳನ್ನು ಕಳುಹಿಸಲು ಎಐ ಸೂಚಿಸುತ್ತದೆ.

ಫ್ಲೆಕ್ಸ್‌ ಕ್ಯಾಮ್ ಈಗ ಹೊಸ ಅಟೋ ಜೂಮ್‌ ಜತೆಗೆ ಬರುತ್ತದೆ. ಈ ಅಟೋ ಜೂಮ್ ನೀವು ತೆಗೆಯಲು ಉದ್ದೇಶಿಸಿರುವ ಶಾಟ್‌ಗೆ, ನೀವು ಯಾವುದೇ ಅಗತ್ಯ ಹೊಂದಾಣಿಕೆಗಳನ್ನು ಮಾಡುವ ಮೊದಲೇ ಫೋಟೋ ವಸ್ತುವನ್ನು ವಿಶ್ಲೇಷಿಸಿ ಝೂಮ್ ಇನ್ ಔಟ್ ಮಾಡುವ ಮೂಲಕ ಅತ್ಯುತ್ತಮವಾದ ಫ್ರೇಮ್ ಅನ್ನು ಸೆಟ್ ಮಾಡುತ್ತದೆ. ಹೊಸ 50 ಎಂಪಿ ವೈಡ್ ಮತ್ತು 12 ಎಂಪಿ ಅಲ್ಟ್ರಾ-ವೈಡ್ ಸೆನ್ಸರ್‌ಗಳು ಫೋಟೋಗಳಲ್ಲಿ ಸ್ಪಷ್ಟತೆ ಮತ್ತು ಸೂಕ್ಷ್ಮ ವಿವರಗಳು ಇರುವಂತೆ ನೋಡಿಕೊಳ್ಳುತ್ತದೆ. ಆ ಮೂಲಕ ವಿಶಿಷ್ಟ ಕ್ಯಾಮರಾ ಅನುಭವವನ್ನು ಒದಗಿಸುತ್ತವೆ. ಹೊಸ 50 ಎಂಪಿ ಸೆನ್ಸರ್ ಶಬ್ದ- ಮುಕ್ತ ಫೋಟೋ ತೆಗೆಯಲು 2x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. 10x ಜೂಮ್‌ ಜತೆಗೆ ಸುಧಾರಿತ ಶೂಟಿಂಗ್ ಅನುಭವಕ್ಕಾಗಿ ಎಐ ಜೂಮ್ ಕೂಡ ಲಭ್ಯವಿದೆ. ಗ್ಯಾಲಕ್ಸಿ ಝಡ್ ಫ್ಲಿಪ್6 ಈಗ ಹೆಚ್ಚು ಬ್ಯಾಟರಿ ಬಾಳಿಕೆಯೊಂದಿಗೆ ಬರುತ್ತದೆ ಮತ್ತು ಮೊದಲ ಬಾರಿಗೆ ವೇಪರ್ ಚೇಂಬರ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ ಝಡ್ ಫೋಲ್ಡ್6 ಬೆಲೆ ರೂ. 164999 (12ಜಿಬಿ+256 ಜಿಬಿ)ರಿಂದ ಪ್ರಾರಂಭವಾಗುತ್ತದೆ. ಗ್ಯಾಲಕ್ಸಿ ಝಡ್ ಫ್ಲಿಪ್6 ಬೆಲೆ ರೂ. 109999 (12 ಜಿಬಿ+256 ಜಿಬಿ)ಗೆ ಲಭ್ಯವಿದೆ.

ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಜತೆಗೆ ಸ್ಯಾಮ್‌ಸಂಗ್, ಎಐ-ಆಧರಿತ ಉತ್ಪನ್ನಗಳಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ಬಡ್ಸ್3 ಸರಣಿಗಳನ್ನು ಪರಿಚಯಿಸಿದ್ದು, ಇವುಗಳಿಗೂ ಜುಲೈ 10 ರಂದು ಭಾರತದಲ್ಲಿ ಪ್ರೀ ಬುಕಿಂಗ್ ಆರಂಭ ಆಗಿದೆ.

ಇದನ್ನೂ ಓದಿ: Back Benchers Movie: ಬ್ಯಾಕ್ ಬೆಂಚರ್ಸ್‌ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕ ಖುಷಿ!

ಗ್ಯಾಲಕ್ಸಿ ವಾಚ್7 ಬೆಲೆ ರೂ. 29999ರಿಂದ ಪ್ರಾರಂಭವಾಗುತ್ತದೆ ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಬೆಲೆ ರೂ. 59999 ಆಗಿದೆ. ಸ್ಯಾಮ್‌ಸಂಗ್ ನ ಹೊಸ ಗ್ಯಾಲಕ್ಸಿ ಬಡ್ಸ್3 ಬೆಲೆ ರೂ. 14999 ಆಗಿದೆ. ಗ್ಯಾಲಕ್ಸಿ ಬಡ್ಸ್3 ಪ್ರೊ ಬೆಲೆ ರೂ. 19999 ಆಗಿದೆ ಎಂದು ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Tax Saving Tips: 10 ಲಕ್ಷ ರೂ. ಆದಾಯ ಇದ್ದರೂ ತೆರಿಗೆಯಿಂದ ಪಾರಾಗಲು ಸಾಧ್ಯ! ಇಲ್ಲಿದೆ ಸರಳ ಲೆಕ್ಕಾಚಾರ!

Tax Saving Tips: ಕೇಂದ್ರ ಬಜೆಟ್‌ನಲ್ಲಿ ಈ ಬಾರಿ 7.75 ಲಕ್ಷ ರೂ.ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಆದರೆ ವಾರ್ಷಿಕ ಆದಾಯ 10 ಲಕ್ಷ ರೂ.ಗಳಿದ್ದರೂ ಆದಾಯ ತೆರಿಗೆಯಿಂದ (Money Guide) ಮುಕ್ತರಾಗಿ ಇರಬಹುದು. ಇದು ಹೇಗೆ ಎನ್ನುವ ಲೆಕ್ಕಾಚಾರ ಇಲ್ಲಿದೆ.

VISTARANEWS.COM


on

By

Tax Saving Tips
Koo

ಕೇಂದ್ರ ಬಜೆಟ್‌ನಲ್ಲಿ (Union Budget 2024) ಈ ಬಾರಿ (Tax Saving Tips) ಹಣಕಾಸು (Money Guide) ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಹೊಸ ತೆರಿಗೆ ಪದ್ಧತಿಯಡಿ (New Tax Regime) ಬಹುದೊಡ್ಡ ತೆರಿಗೆ ವಿನಾಯಿತಿಯನ್ನು ನೀಡಿದ್ದಾರೆ. ಪ್ರಮಾಣಿತ ತೆರಿಗೆ ಕಡಿತವನ್ನು (standard tax deduction) 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಿದ್ದಾರೆ. ಹೀಗಾಗಿ ಸಾಮಾನ್ಯ ಭಾರತೀಯ ನಾಗರಿಕರು 7.75 ಲಕ್ಷ ರೂ.ವರೆಗಿನ ಆದಾಯವನ್ನು (Money Guide) ತೆರಿಗೆ (tax free) ಮುಕ್ತಗೊಳಿಸಬಹುದು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯ 3.0ರ ಮೊದಲ ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಜನರಿಗೆ ಬಹುದೊಡ್ಡ ಪ್ರಯೋಜನವನ್ನು ನೀಡಲಾಗಿದೆ. ಇದರಲ್ಲಿ ಹೊಸ ತೆರಿಗೆ ಪದ್ಧತಿಯಡಿ ದೊಡ್ಡ ರಿಯಾಯಿತಿ ನೀಡಿದ್ದು, ಪ್ರಮಾಣಿತ ಆದಾಯ ತೆರಿಗೆ ಕಡಿತವನ್ನು 50,000 ರೂ. ನಿಂದ 75,000 ರೂ.ಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ ತೆರಿಗೆ ಸ್ಲ್ಯಾಬ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. 7.75 ಲಕ್ಷ ರೂ. ಆದಾಯವು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಈಗ ಸಂಪೂರ್ಣ ತೆರಿಗೆ ಮುಕ್ತವಾಗಿದೆ. ಆದರೆ ಯಾರೊಬ್ಬರ ವಾರ್ಷಿಕ ಆದಾಯ 10 ಲಕ್ಷ ರೂ.ಗಳಿದ್ದರೆ ಅವರೂ ಆದಾಯ ತೆರಿಗೆಯಿಂದ ಮುಕ್ತರಾಗಿ ಇರಬಹುದು. ಇದಕ್ಕಾಗಿ ಕೆಲವು ಲೆಕ್ಕಾಚಾರಗಳನ್ನು ಇಲ್ಲಿ ನೀಡಲಾಗಿದೆ.

Money Guide
Money Guide


ತೆರಿಗೆ ಉಳಿಸುವುದು ಹೇಗೆ?

1. 10 ಲಕ್ಷ ರೂ.ವರೆಗಿನ ಆದಾಯದ ಮೇಲೆ ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಲು ತೆರಿಗೆ ರಿಟರ್ನ್ ಸಲ್ಲಿಕೆ ಮಾದರಿಯನ್ನು ಹಳೆಯ ತೆರಿಗೆ ಪದ್ಧತಿಗೆ ಬದಲಾಯಿಸಬೇಕಾಗುತ್ತದೆ. ಇದರಲ್ಲಿ ಅನೇಕ ರೀತಿಯ ಕಡಿತಗಳನ್ನು ಕ್ಲೈಮ್ ಮಾಡಬಹುದು ಮತ್ತು ಅನೇಕ ರೀತಿಯ ಆದಾಯದ ಮೇಲೆ ತೆರಿಗೆಯನ್ನು ಉಳಿಸಬಹುದು.

2. ಹಳೆಯ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ 50,000 ರೂ. ವರೆಗೆ ಪ್ರಮಾಣಿತ ಕಡಿತವನ್ನು ಪಡೆಯಬಹುದು. ಅಂದರೆ 50,000 ರೂ. ವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಇದು ಒಟ್ಟು ಆದಾಯದಿಂದ ಮುಂಚಿತವಾಗಿ ಕಡಿತಗೊಳಿಸಲಾಗುವ ಮೊತ್ತವಾಗಿದೆ. ಅಂದರೆ 10 ಲಕ್ಷ ರೂಪಾಯಿ ಗಳಿಸುವ ವ್ಯಕ್ತಿಯ ತೆರಿಗೆಯ ಆದಾಯವು 9.50 ಲಕ್ಷ ರೂಪಾಯಿ ಆಗುತ್ತದೆ.

3. ಇನ್ನು 80ಸಿಯ ಲಾಭವನ್ನು ನೀಡುವ ಪಿಪಿಎಫ್, ಇಪಿಎಫ್ ಮತ್ತು ಎನ್ ಎಸ್ ಸಿಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ 1.5 ಲಕ್ಷ ರೂ.ವರೆಗೆ ತೆರಿಗೆ ಉಳಿಸಬಹುದು. ಇದರಿಂದ 9.50 ಲಕ್ಷದಿಂದ 1.50 ಲಕ್ಷ ರೂ. ಕಡಿತಗೊಳಿಸಿದರೆ ತೆರಿಗೆಯ ಆದಾಯವು 8 ಲಕ್ಷ ರೂ.ಗಳಾಗುತ್ತದೆ.

4. ಅಲ್ಲದೇ ಎನ್ ಪಿ ಎಸ್ ನಲ್ಲಿ ವಾರ್ಷಿಕವಾಗಿ 50,000 ರೂ.ವರೆಗೆ ಹೂಡಿಕೆ ಮಾಡಿದರೆ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ 50,000 ರೂ. ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ 8 ಲಕ್ಷದಿಂದ 50 ಸಾವಿರವನ್ನು ಕಳೆದರೆ ತೆರಿಗೆಯ ಆದಾಯವು 7.50 ಲಕ್ಷ ರೂಪಾಯಿಗಳಾಗುತ್ತದೆ.

5. ಗೃಹ ಸಾಲ ಪಡೆದವರು ಆದಾಯ ತೆರಿಗೆಯ ಸೆಕ್ಷನ್ 24ಬಿ ಅಡಿಯಲ್ಲಿ 2 ಲಕ್ಷ ರೂಪಾಯಿಗಳವರೆಗೆ ಬಡ್ಡಿಯನ್ನು ಉಳಿಸಬಹುದು. ಈಗ 7.50 ಲಕ್ಷದಿಂದ 2 ಲಕ್ಷ ರೂಪಾಯಿ ಕಳೆದರೆ 5.50 ಲಕ್ಷ ರೂಪಾಯಿ ಉಳಿಯುತ್ತದೆ.

6. ವೈದ್ಯಕೀಯ ವಿಮೆಗಳನ್ನು ತೆಗೆದುಕೊಂಡಿದ್ದರೆ ಆದಾಯ ತೆರಿಗೆಯ ಸೆಕ್ಷನ್ 80ಡಿ ಅಡಿಯಲ್ಲಿ 25 ಸಾವಿರ ರೂಪಾಯಿಗಳವರೆಗೆ ತೆರಿಗೆ ಉಳಿಸಬಹುದು. ಜೊತೆಗೆ ಹೆಂಡತಿ, ಮಕ್ಕಳ ಹೆಸರಿನಲ್ಲಿ ಆರೋಗ್ಯ ವಿಮೆಯಲ್ಲಿದ್ದರೆ 50,000 ರೂಪಾಯಿಗಳವರೆಗೆ ಹೆಚ್ಚುವರಿ ವಿನಾಯಿತಿ ಪಡೆಯಬಹುದು. ಇದರಿಂದ 5.50 ಲಕ್ಷ ರೂಪಾಯಿಗಳಿಂದ 75,000 ರೂಪಾಯಿಗಳನ್ನು ಹೆಚ್ಚು ಕಳೆದರೆ ಆದಾಯವು 4.75 ಲಕ್ಷ ರೂಪಾಯಿಗಳಾಗಿರುತ್ತದೆ.

ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

ಹಳೆಯ ತೆರಿಗೆ ಪದ್ಧತಿಯಲ್ಲಿ 5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲದಿರುವುದರಿಂದ ಈ ಸಂದರ್ಭದಲ್ಲಿ 10 ಲಕ್ಷ ರೂ. ಆದಾಯವಿದ್ದವರಿಗೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಈ ರೀತಿಯಾಗಿ 10 ಲಕ್ಷ ರೂ. ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಬಹುದು.

Continue Reading

ದೇಶ

Income Tax Return: ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ? CBDT ಅಧ್ಯಕ್ಷ ಹೇಳೋದೇನು?

Income Tax Return: ಐಟಿ ರಿಟರ್ನ್‌ ವಿಧಾನ ಸರಳೀಕರಣಗೊಳಿಸಿದಂತೆ ಜನರು ಭಾಗಿಯಾಗುವ ಪ್ರಮಾಣವೂ ಹೆಚ್ಚುತ್ತದೆ ಎಂಬುದು ಸರ್ಕಾರ ತತ್ವವಾಗಿದೆ. ಕಳೆದ ವರ್ಷಕ್ಕೆ ಈ ಹೊತ್ತಿಗೆ ಹೋಲಿಸಿದರೆ ಈ ವರ್ಷ ಐಟಿ ರಿಟರ್ನ್‌ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ನಾಲ್ಕ ಕೋಟಿಗೂ ಅಧಿಕ ತೆರಿಗೆದಾರರು ಐಟಿ ರಿಟರ್ನ್‌ ಫೈಲ್‌ ಮಾಡಿದ್ದಾರೆ. ಈ ಬಾರಿ ಆ ಸಂಖ್ಯೆ ಈಗಾಗಲೇ ದಾಟಿದೆ ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

Income Tax Return
Koo

ಹೊಸದಿಲ್ಲಿ: ಒಟ್ಟು 4ಕೋಟಿ ತೆರಿಗೆದಾರರಲ್ಲಿ ಶೇ.66 ರಷ್ಟು ಜನ ಪ್ರಸಕ್ತ ಸಾಲಿನಲ್ಲಿ ಹೊಸ ಐಟಿ ರಿಟರ್ನ್‌ (Income Tax Return) ಆಯ್ಕೆ ಮಾಡಿಕೊಂಡಿದ್ದಾರೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(CBDT) ಮುಖ್ಯಸ್ಥ ರವಿ ಅಗರ್ವಾಲ್‌ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆಯೊಂದಿಗೆ ಐಟಿಆರ್‌ಗಳನ್ನು ಸಲ್ಲಿಸುವುದು ಮತ್ತು ಇತರ ವ್ಯವಹಾರಗಳನ್ನು ನಡೆಸುವುದು ಸೇರಿದಂತೆ ತೆರಿಗೆ ಪ್ರಕ್ರಿಯೆಗಳ ಸರಳೀಕರಣ ಕೇಂದ್ರ ಸರ್ಕಾರ ಮತ್ತು ನೇರ ತೆರಿಗೆ ಆಡಳಿತದ ಪ್ರಮುಖ ಗುರಿ ಎಂದಿದ್ದಾರೆ.

ಐಟಿ ರಿಟರ್ನ್‌ ವಿಧಾನ ಸರಳೀಕರಣಗೊಳಿಸಿದಂತೆ ಜನರು ಭಾಗಿಯಾಗುವ ಪ್ರಮಾಣವೂ ಹೆಚ್ಚುತ್ತದೆ ಎಂಬುದು ಸರ್ಕಾರ ತತ್ವವಾಗಿದೆ. ಕಳೆದ ವರ್ಷಕ್ಕೆ ಈ ಹೊತ್ತಿಗೆ ಹೋಲಿಸಿದರೆ ಈ ವರ್ಷ ಐಟಿ ರಿಟರ್ನ್‌ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ನಾಲ್ಕ ಕೋಟಿಗೂ ಅಧಿಕ ತೆರಿಗೆದಾರರು ಐಟಿ ರಿಟರ್ನ್‌ ಫೈಲ್‌ ಮಾಡಿದ್ದಾರೆ. ಈ ಬಾರಿ ಆ ಸಂಖ್ಯೆ ಈಗಾಗಲೇ ದಾಟಿದೆ ಎಂದು ಅವರು ತಿಳಿಸಿದ್ದಾರೆ.

ಹೊಸ ತೆರಿಗೆ ಪದ್ಧತಿ ಬಗ್ಗೆ ಸಾಕಷ್ಟು ತೆರಿಗೆದಾರರಿಗೆ ಆಸಕ್ತಿ ಇದೆ ಮತ್ತು ಇಂದಿನಂತೆ ಸುಮಾರು 66 ಪ್ರತಿಶತದಷ್ಟು ಐಟಿಆರ್ ಫೈಲಿಂಗ್‌ಗಳನ್ನು ಹೊಸ ಆಡಳಿತದ ಅಡಿಯಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಳವಾಗು ನಿರೀಕ್ಷೆ ಇದೆ. ಕಳೆದ ಬಾರಿ ಜುಲೈ 31 ರ ಗಡುವಿನ ಅಂತ್ಯದ ವೇಳೆಗೆ ಕೊನೆಯ ಬಾರಿಗೆ ಸುಮಾರು 7.5 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಸಿಬಿಡಿಟಿ ಮುಖ್ಯಸ್ಥರು ತಿಳಿಸಿದ್ದಾರೆ.

ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ?

ಹೊಸ ತೆರಿಗೆ ಪದ್ದತಿ ಜಾರಿಗೆ ಬಂದ ನಂತರ ಹಳೆಯ ತೆರಿಗೆ ಪದ್ದತಿ ಇನ್ನು ಮುಂದೆ ಕೊನೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಗರ್ವಾಲ್‌, ಜನರ ಪ್ರತಿಕ್ರಿಯೆ ಆಧಾರದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಐಟಿ ರಿಟರ್ನ್‌ ಫೈಲಿಂಗ್‌ ಕೊನೆ ದಿನ ಯಾವುದು?

ಇನ್ನು ಈ ವರ್ಷದ ಐಟಿ ರಿಟರ್ನ್‌ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಯಾವುದು ಎಂದು ನೋಡುವುದಾರೆ ಜು.31 ಆಗಿದೆ. ಜು.31 ರಂದೇ ಕೊನೆಯ ದಿನಾಂಕವಾಗಿದೆ.

ಏನಿದು ಐಟಿ ರಿಟರ್ನ್‌?

ಆದಾಯ ತೆರಿಗೆ ರಿಟರ್ನ್ (ITR) ಒಬ್ಬ ವ್ಯಕ್ತಿಯು ತನ್ನ ಆದಾಯ ಮತ್ತು ಆ ವರ್ಷದಲ್ಲಿ ಪಾವತಿಸಬೇಕಾದ ತೆರಿಗೆಗಳ ಬಗ್ಗೆ ಮಾಹಿತಿಯನ್ನು ಸಲ್ಲಿಸಲು ಭಾರತದ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವ ಒಂದು ರೂಪವಾಗಿದೆ. ಐಟಿಆರ್‌ನಲ್ಲಿ ಸಲ್ಲಿಸಿದ ಮಾಹಿತಿಯು ಮುಂದಿನ ವರ್ಷದ ಏಪ್ರಿಲ್ 1 ರಿಂದ ಮಾರ್ಚ್ 31 ರ ನಡುವಿನ ನಿರ್ದಿಷ್ಟ ಹಣಕಾಸು ವರ್ಷಕ್ಕೆ ಅನ್ವಯಿಸಬೇಕು.

ನೀವು ಗಳಿಸುವ ಆದಾಯವು ಸಂಬಳ, ವ್ಯವಹಾರದಲ್ಲಿ ಲಾಭ, ಮನೆ ಅಥವಾ ಆಸ್ತಿಯ ಮಾರಾಟ, ಲಾಭಾಂಶ ಅಥವಾ ಬಂಡವಾಳ ಲಾಭಗಳು ಮತ್ತು ಇತರರಲ್ಲಿ ಪಡೆದ ಬಡ್ಡಿಯಂತಹ ಮೂಲಗಳಿಂದ ಆಗಿರಬಹುದು. ಒಂದು ವರ್ಷದಲ್ಲಿ ನೀವು ಹೆಚ್ಚುವರಿಯಾಗಿ ತೆರಿಗೆಯನ್ನು ಪಾವತಿಸಿದ್ದರೆ, ಅದನ್ನು ನೀವು ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

Continue Reading

ಚಿನ್ನದ ದರ

Gold Rate Today: ಬಜೆಟ್‌ ಎಫೆಕ್ಟ್‌; ಮತ್ತೆ ಇಳಿಮುಖವಾದ ಚಿನ್ನದ ದರ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು ಮತ್ತೆ ಇಳಿಕೆಯಾಗಿದೆ. ಬಜೆಟ್‌ ಮಂಡನೆಯ ಬಳಿಕ ಇಳಿದಿದ್ದ ದರ ಮತ್ತೊಮ್ಮೆ ಕಡಿಮೆಯಾಗಿದ್ದು, ಗ್ರಾಹಕರು ಮೊಗದಲ್ಲಿ ನಗು ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 95 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 104 ಕಡಿಮೆಯಾಗಿದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಜುಲೈ 25) ಮತ್ತೆ ಇಳಿಕೆಯಾಗಿದೆ (Gold Rate Today). ಬಜೆಟ್‌ ಮಂಡನೆಯ ಬಳಿಕ ಇಳಿದಿದ್ದ ದರ ಮತ್ತೊಮ್ಮೆ ಕಡಿಮೆಯಾಗಿದ್ದು, ಗ್ರಾಹಕರು ಮೊಗದಲ್ಲಿ ನಗು ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 95 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 104 ಕಡಿಮೆಯಾಗಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,400 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,982 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 51,200 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 64,000 ಮತ್ತು ₹ 6,40,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 55,856 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 69,820 ಮತ್ತು ₹ 6,98,200 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,415 ₹ 6,995
ಮುಂಬೈ₹ 6,400 ₹ 6,982
ಬೆಂಗಳೂರು₹ 6,400 ₹ 6,982
ಚೆನ್ನೈ₹ 6,430₹ 7,015

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆಯಲ್ಲಿಯೂ ಭಾರಿ ಇಳಿಕೆಯಾಗಿದೆ. ಒಂದು ಗ್ರಾಂಗೆ ₹ 84.50 ಹಾಗೂ 8 ಗ್ರಾಂಗೆ ₹ 676 ಇದೆ. 10 ಗ್ರಾಂ ₹ 845 ಹಾಗೂ 1 ಕಿಲೋಗ್ರಾಂ ₹ 84,500 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್‌ಮಾರ್ಕ್‌ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್‌ಮಾರ್ಕ್‌ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಕಸ್ಟಮ್ಸ್‌ ಸುಂಕ ಇಳಿಕೆ; ಚಿನ್ನದ ಮೇಲಿನ ಹೂಡಿಕೆಗೆ ಇದು ಸಕಾಲವೇ? ತಜ್ಞರು ಹೇಳೋದಿಷ್ಟು

Continue Reading

ದೇಶ

Union Budget 2024: ಬಜೆಟ್‌ನಲ್ಲಿ ಕಸ್ಟಮ್ಸ್‌ ಸುಂಕ ಇಳಿಕೆ; ಚಿನ್ನದ ಮೇಲಿನ ಹೂಡಿಕೆಗೆ ಇದು ಸಕಾಲವೇ? ತಜ್ಞರು ಹೇಳೋದಿಷ್ಟು

Union Budget 2024: ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಕಸ್ಟಮ್ಸ್‌ ಸುಂಕವನ್ನು ಇಳಿಕೆ ಮಾಡಿದ್ದು, ಗ್ರಾಹಕರು ಚಿನ್ನ ಖರೀದಿಸಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಮತ್ತೊಂದೆಡೆ, ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಮಯವೇ ಎಂಬ ಪ್ರಶ್ನೆಯು ಹೂಡಿಕೆದಾರರಿಗೆ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

VISTARANEWS.COM


on

Union Budget 2024
Koo

ನವದೆಹಲಿ: ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗುವುದು ಎಂಬುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ನಲ್ಲಿ (Union Budget 2024) ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಇಳಿಕೆಯಾಗಲಿದೆ. ಇದು ಗ್ರಾಹಕರಿಗೆ ಶುಭ ಸುದ್ದಿಯಾಗಿದೆ. ಇನ್ನು, ಚಿನ್ನದ ಮೇಲಿನ ಕಸ್ಟಮ್ಸ್‌ ಸುಂಕವನ್ನು ಇಳಿಸಿರುವುದು ಚಿನ್ನದ ಮೇಲೆ ಹೂಡಿಕೆ ಮಾಡಲು ಸಕಾರಾತ್ಮಕ ಪರಿಣಾಮವೇ? ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ಸಕಾಲವೇ ಎಂಬ ಪ್ರಶ್ನೆಗಳು ಉದಯಿಸಿವೆ. ಇಂತಹ ಪ್ರಶ್ನೆಗಳಿಗೆ ತಜ್ಞರು ಉತ್ತರ ನೀಡಿದ್ದಾರೆ.

ಕಸ್ಟಮ್ಸ್‌ ಸುಂಕ ಇಳಿಸಿದ್ದು ಹೂಡಿಕೆಗೆ ಸಕಾರಾತ್ಮಕವೇ?

ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ.6ರಷ್ಟು ಇಳಿಸಿರುವುದು ಗ್ರಾಹಕರು ಖರೀದಿಸಲು ಉತ್ತಮ ಸಮಯವಾಗಿರುವುದರ ಜತೆಗೆ ಹೂಡಿಕೆಗೂ ಸಕಾಲವಾಗಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಚಿನ್ನದ ಬೆಲೆಯು ಏಕಾಏಕಿ ಇಳಿಕೆಯಾಗಲಿದ್ದು, ಮದುವೆ ಸೇರಿ ಹಲವು ಸಮಾರಂಭಗಳಿಗೆ ಗ್ರಾಹಕರು ಚಿನ್ನ ಖರೀದಿಸಲು ಅನುಕೂಲವಾಗಲಿದೆ. ಇನ್ನು, ಚಿನ್ನದ ಬೆಲೆಯು ಇಳಿಕೆಯಾಗುವ ಕಾರಣ ಹೂಡಿಕೆ ಮಾಡುವವರೂ ಹೆಚ್ಚಿನ ಪ್ರಮಾಣದ ಚಿನ್ನವನ್ನು ಖರೀದಿಸಬಹುದಾಗಿದೆ.

ಚಿನ್ನದ ಬೆಲೆಯನ್ನು ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಜಾಗತಿಕ ರಾಜಕೀಯ ಬೆಳವಣಿಗೆಗಳು, ಹೂಡಿಕೆದಾರರ ಮನಸ್ಥಿತಿ ಸೇರಿ ಹಲವು ಅಂಶಗಳ ಮೇಲೆ ನಿರ್ಧರಿಸಲಾಗುತ್ತದೆ. ಇದರಿಂದಾಗಿ, ಬಹುತೇಕ ಸಂದರ್ಭದಲ್ಲಿ ಚಿನ್ನದ ಬೆಲೆಯು ಏರಿಕೆಯೇ ಆಗುತ್ತದೆ. ಹಾಗಾಗಿ, ಚಿನ್ನದ ಬೆಲೆಯು ಕಡಿಮೆಯಾದಾಗಲೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರೆ, ಅದು ಹೂಡಿಕೆಯ ದೃಷ್ಟಿಯಿಂದ ಉತ್ತಮ ನಿರ್ಧಾರವಾಗುತ್ತದೆ. ಆದರೆ, ಇರುವ ಹಣವನ್ನೆಲ್ಲ ಚಿನ್ನದ ಮೇಲೆಯೇ ಹೂಡಿಕೆ ಮಾಡುವುದು ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

“ಚಿನ್ನದ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಇಳಿಕೆ ಮಾಡಿರುವುದು ಖರೀದಿ ಜತೆಗೆ ದೇಶೀಯ ಚಿನ್ನದ ಉದ್ಯಮದಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಲಿದೆ. ಇದರಿಂದಾಗಿ ಚಿನ್ನದ ಮೇಲಿನ ಒಟ್ಟು ಶೇ.18.5ರಷ್ಟು ತೆರಿಗೆಯು ಶೇ.9ಕ್ಕೆ (ಜಿಎಸ್‌ಟಿ ಸೇರಿ) ಇಳಿಯಲಿದೆ. ಇದರಿಂದ ಖರೀದಿ ಹಾಗೂ ಹೂಡಿಕೆ ಮಾಡಲು ಉತ್ತಮ ಸಮಯವಾಗಿದೆ” ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ರೀಜನಲ್‌ ಸಿಇಒ ಸಚಿನ್‌ ಜೈನ್‌ ಅವರು ನ್ಯೂಸ್‌ 18 ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಹೂಡಿಕೆ ಮಾಡುವವರಿಗೆ ತೆರಿಗೆ ಬಗ್ಗೆಯೂ ಗಮನ ಇರಲಿ

ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ಹೆಚ್ಚಾಗಿ ಚಿನ್ನವನ್ನು ಖರೀದಿಸುವ ಮುನ್ನ ಕ್ಯಾಪಿಟಲ್‌ ಗೇನ್‌ (Capital Gain) ಬಗ್ಗೆಯೂ ಗಮನ ಹರಿಸಬೇಕು. ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಕ್ಯಾಪಿಟಲ್‌ ಗೇನ್‌ ಅಂದರೆ, ಹೂಡಿಕೆ ಮೇಲಿನ ತೆರಿಗೆಯನ್ನು ಏರಿಕೆ ಮಾಡಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿ, ಬಳಿಕ ಚಿನ್ನವನ್ನು ಮಾರಾಟ ಮಾಡಲು ಮುಂದಾದರೆ, ತೆರಿಗೆ ಹೊಡೆತ ಬೀಳುತ್ತದೆ ಎಂಬುದು ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ಸಂಗತಿಯಾಗಿದೆ.

ನೀವು ಚಿನ್ನವನ್ನು ಖರೀದಿಸಿ, ಅದನ್ನು 2 ವರ್ಷದ ಬಳಿಕ ಮಾರಾಟ ಮಾಡಿದರೆ, ನಿಮಗೆ ನಿಗದಿಯಂತೆ ಆದಾಯ ತೆರಿಗೆ ಸ್ಲ್ಯಾಬ್‌ ರೇಟ್‌ ಪ್ರಕಾರ ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ, ನೀವು ಖರೀದಿಸಿದ ಚಿನ್ನವನ್ನು 24 ತಿಂಗಳ ಬಳಿಕ ಮಾರಾಟ ಮಾಡಿದರೆ, ನೀವು ದೀರ್ಘಾವಧಿ ಹೂಡಿಕೆ ಕ್ಯಾಪಿಟಲ್‌ ಗೇನ್ಸ್‌ ವ್ಯಾಪ್ತಿಗೆ ಬಂದು, ಮಾರಾಟ ಮಾಡಿದ ಬಳಿಕ ಆಗುವ ಕ್ಯಾಪಿಟಲ್‌ ಗೇನ್‌ನಲ್ಲಿ ಶೇ.12.5ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Union Budget 2024: ಹಳೇ ತೆರಿಗೆ Vs ಹೊಸ ತೆರಿಗೆ; ಯಾರಿಗೆ ಯಾವುದು ಅನುಕೂಲ? ಇಲ್ಲಿದೆ ಕಂಪ್ಲೀಟ್ ಮಾಹಿತಿ

Continue Reading
Advertisement
Monsoon Fashion
ಫ್ಯಾಷನ್11 mins ago

Monsoon Fashion: ಮಾನ್ಸೂನ್‌ ಸೀಸನ್‌ಗೆ ಇಶಾನಿ ಶೆಟ್ಟಿಯ ಫ್ಯಾಷನ್‌ ಟಿಪ್ಸ್‌ ಹೀಗಿದೆ!

Paris Olympics 2024
ಕ್ರೀಡೆ20 mins ago

Paris Olympics 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಆರ್ಚರಿ ತಂಡ; 4ನೇ ಸ್ಥಾನ ಪಡೆದ ಧೀರಜ್​ ಬೊಮ್ಮದೇವರ

Viral Video
Latest26 mins ago

Viral Video: ಜಾರಿ ಬಿದ್ದ ವಧುವನ್ನು ಎತ್ತದ ವರ; ಸಹೋದರನಿಂದ ಮದುವೆ ಮಂಟಪದಲ್ಲೇ ಬಿತ್ತು ಗೂಸಾ!

Lokayukta
ರಾಜಕೀಯ29 mins ago

Lokayukta: ಲೋಕಾಯುಕ್ತ ಎಡಿಜಿಪಿಯಾಗಿ ಮನೀಶ್‌ ಕರ್ಬೀಕರ್‌, ಅಗ್ನಿಶಾಮಕ ದಳ ಡಿಜಿಪಿಯಾಗಿ ಪ್ರಶಾಂತ್ ಕುಮಾರ್ ಥಾಕೂರ್‌ ನೇಮಕ

Arecanut Price
ಪರಿಸರ37 mins ago

ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?

BJP
ದೇಶ37 mins ago

BJP: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಗೂ ಮೊದಲು ಕಾರ್ಯಕಾರಿ ಅಧ್ಯಕ್ಷರ ನೇಮಕ; ಶೀಘ್ರದಲ್ಲೇ ಆದೇಶ?

Tax Saving Tips
ಮನಿ-ಗೈಡ್45 mins ago

Tax Saving Tips: 10 ಲಕ್ಷ ರೂ. ಆದಾಯ ಇದ್ದರೂ ತೆರಿಗೆಯಿಂದ ಪಾರಾಗಲು ಸಾಧ್ಯ! ಇಲ್ಲಿದೆ ಸರಳ ಲೆಕ್ಕಾಚಾರ!

Murder Case
Latest1 hour ago

Murder Case: ʼಸಾಫ್ಟ್ ಟಚ್ʼ ಸ್ಪಾಗೆ ಹೋಗಿದ್ದ ಕ್ರಿಮಿನಲ್‌ನನ್ನು ಪ್ರೇಯಸಿ ಎದುರೇ ತುಂಡು ತುಂಡಾಗಿ ಕತ್ತರಿಸಿದರು!

Successful liver transplant surgery at Fortis Hospital
ಕರ್ನಾಟಕ1 hour ago

Fortis Hospital: ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಲಿವರ್‌ ದಾನ!

Home Remedies for Dengue
ಆರೋಗ್ಯ1 hour ago

Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್7 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ7 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ9 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ2 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌