Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು? - Vistara News

ಕರ್ನಾಟಕ

Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು?

Samsung AC: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಚಿಲ್ಡ್ ವಾಟರ್ ಇಂಡೋರ್ ವಿಭಾಗದಲ್ಲಿ ತನ್ನ ಹೊಸ ಉತ್ಪನ್ನವಾದ ವಿಂಡ್‌ಫ್ರೀ ಏರ್ ಕಂಡಿಷನರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಏಸಿ ಶ್ರೇಣಿಯು ಚಿಲ್ಡ್ ವಾಟರ್ ಬೇಸ್ಡ್ ಕ್ಯಾಸೆಟ್ ಯುನಿಟ್‌ಗಳಲ್ಲಿ ವಿಂಡ್-ಫ್ರೀ ಮತ್ತು 360° ಬ್ಲೇಡ್‌ಲೆಸ್ ತಂತ್ರಜ್ಞಾನವನ್ನು ಹೊಂದಿದ್ದು, ಈ ಶ್ರೇಣಿಯು ಬಳಕೆದಾರರು ಯಾವುದೇ ಕಿರಿಕಿರಿ ಇಲ್ಲದೆ ಉತ್ತಮ ಕೂಲಿಂಗ್ ಅನುಭವ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ.

VISTARANEWS.COM


on

Samsung has launched a new range of ACs in chilled water based cassette units
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಚಿಲ್ಡ್ ವಾಟರ್ ಇಂಡೋರ್ ವಿಭಾಗದಲ್ಲಿ ತನ್ನ ಹೊಸ ಉತ್ಪನ್ನವಾದ ವಿಂಡ್‌ಫ್ರೀ ಏರ್ ಕಂಡಿಷನರ್ ಅನ್ನು ಬಿಡುಗಡೆ (Samsung AC) ಮಾಡಿದೆ. ಈ ಹೊಸ ಏಸಿ ಶ್ರೇಣಿಯು ಚಿಲ್ಡ್ ವಾಟರ್ ಬೇಸ್ಡ್ ಕ್ಯಾಸೆಟ್ ಯುನಿಟ್‌ಗಳಲ್ಲಿ ವಿಂಡ್-ಫ್ರೀ ಮತ್ತು 360° ಬ್ಲೇಡ್‌ಲೆಸ್ ತಂತ್ರಜ್ಞಾನವನ್ನು ಹೊಂದಿದ್ದು, ಈ ಶ್ರೇಣಿಯು ಬಳಕೆದಾರರು ಯಾವುದೇ ಕಿರಿಕಿರಿ ಇಲ್ಲದೆ ಉತ್ತಮ ಕೂಲಿಂಗ್ ಅನುಭವ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ.

ಚಿಲ್ಡ್ ವಾಟರ್ ಬೇಸ್ಡ್ ಕ್ಯಾಸೆಟ್ ಯುನಿಟ್‌ಗಳು ಬಳಕೆದಾರರಿಗೆ ಬೇಕಾದ ತಾಪಮಾನವನ್ನು ಸೆಟ್ ಮಾಡಲು ಅನುವು ಮಾಡಿಕೊಡುತ್ತದೆ. ಜತೆಗೆ ವಿಂಡ್‌ಫ್ರೀ™ ಕೂಲಿಂಗ್ ತಂತ್ರಜ್ಞಾನವು 0.15 ಎಂ/ಸೆಕೆಂಡ್ ನಷ್ಟು ಗಾಳಿಯ ವೇಗದಲ್ಲಿ 15,000 ಮೈಕ್ರೋ-ಏರ್ ರಂಧ್ರಗಳಲ್ಲಿ ನಿಧಾನವಾಗಿ ತಂಪಾದ ಗಾಳಿಯನ್ನು ಬಿಡುಗಡೆ ಮಾಡುವಂತೆ ನೋಡಿಕೊಳ್ಳುತ್ತದೆ.

ಇದರ ಜತೆಗೆ ಸುಧಾರಿತ ಏರ್ ಫ್ಲೋ ವ್ಯವಸ್ಥೆಯು ಕೋಣೆಗಳನ್ನು ಶಾಂತವಾಗಿ, ವೇಗವಾಗಿ ತಂಪಾಗಿಸುತ್ತದೆ. ಕಡಿಮೆ ಮಟ್ಟದ ಅಂದರೆ ಕೇವಲ 24 dB(A) ಸೌಂಡ್ ಅನ್ನು ಮಾತ್ರ ಈ ಉತ್ಪನ್ನವು ಹೊರಹಾಕುತ್ತದೆ. ಈ ಸದ್ದನ್ನು ಒಂಥರಾ ಪಿಸುಮಾತುಗಳಿಗೆ ಹೋಲಿಸಬಹುದಾಗಿದೆ. ಹಾಗಾಗಿ ಈ ಉತ್ಪನ್ನವು ಮಲಗುವ ಕೋಣೆಗಳು, ಅಧ್ಯಯನ ಕೊಠಡಿಗಳು ಮತ್ತು ಮಗುವಿನ ಕೋಣೆಗಳಿಗೆ ಬಳಸಲು ಸೂಕ್ತವಾಗಿದೆ.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಹೊಸ ಫ್ಯಾನ್ ಕಾಯಿಲ್ ಯೂನಿಟ್ ವಿಂಡ್‌ಫ್ರೀ ಎಸಿಗಳು ನೀರಿನ ಪೈಪ್‌ಗಳು ಮತ್ತು ಸಂಬಂಧಿತ ವಾಲ್ವ್‌ಗಳನ್ನು ಬಳಸಿಕೊಂಡು ಸೆಂಟ್ರಲ್ ಚಿಲ್ಡ್ ವಾಟರ್ ಸಿಸ್ಟಮ್‌ಗೆ ಕನೆಕ್ಟ್ ಆಗಿವೆ. ಈ ಹೈಡ್ರಾನಿಕ್ ಫ್ಯಾನ್ ಕಾಯಿಲ್ ಯುನಿಟ್‌ಗಳು ಬಿಸಿಮಾಡಲು ಅಥವಾ ದೊಡ್ಡ ಜಾಗಗಳನ್ನು ತಂಪಾಗಿಸಲು ಬಿಸಿ ಅಥವಾ ತಣ್ಣನೆಯ ನೀರನ್ನು ಕಾಯಿಲ್‌ಗಳ ಮೂಲಕ ಪ್ರಸರಣ ಮಾಡುತ್ತವೆ. ಈ ಯುನಿಟ್‌ಗಳನ್ನು ಸ್ಯಾಮ್‌ಸಂಗ್ ಏರ್-ಕೂಲ್ಡ್ ಚಿಲ್ಲರ್‌ಗಳು ಅಥವಾ ಯಾವುದೇ ಥರ್ಡ್ ಪಾರ್ಟಿ ಏರ್-ಕೂಲ್ಡ್ ಮತ್ತು ವಾಟರ್-ಕೂಲ್ಡ್ ಚಿಲ್ಲರ್‌ಗಳೊಂದಿಗೂ ಬಳಸಬಹುದು.

ಈ ಕುರಿತು ಸ್ಯಾಮ್‌ಸಂಗ್ ಇಂಡಿಯಾದ ಎಸ್ಎಸಿ ಬಿಸಿನೆಸ್‌ನ ಹಿರಿಯ ನಿರ್ದೇಶಕ ವಿಪಿನ್ ಅಗರವಾಲ್ ಮಾತನಾಡಿ, “ನಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಅನುಕೂಲತೆ ಮತ್ತು ಬಾಳಿಕೆ ಬರುವ ಉತ್ಪನ್ನ ಒದಗಿಸುವುದು ಸ್ಯಾಮ್‌ಸಂಗ್‌ನ ಉದ್ದೇಶವಾಗಿದೆ. ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯುನಿಟ್‌ಗಳು ಶಾಂತವಾಗಿ ಕಾರ್ಯನಿರ್ವಹಿಸುತ್ತಲೇ ವೇಗವಾಗಿ ಉನ್ನತ ಮಟ್ಟದ ಕೂಲಿಂಗ್ ಸೌಲಭ್ಯವನ್ನು ಒದಗಿಸುತ್ತವೆ. ಕೂಲಿಂಗ್ ಯೂನಿಟ್‌ಗಳು ವಿಶಾಲವಾದ ಸ್ಥಳಗಳಿಗೆ ಹೆಚ್ಚು ಸೂಕ್ತವಾಗಿವೆ. ಏರ್ ಫ್ಲೋ ವ್ಯವಸ್ಥೆ ಅಂದರೆ ಗಾಳಿಯ ಹರಿವಿನ ವ್ಯವಸ್ಥೆಯನ್ನು ಹೆಚ್ಚು ಸುಧಾರಿತಗೊಳಿಸುವ, ಹಿತವಾಗಿಸುವ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ” ಎಂದು ತಿಳಿಸಿದ್ದಾರೆ.

ಸ್ಯಾಮ್‌ಸಂಗ್ ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯುನಿಟ್‌ಗಳು 3 ವೇರಿಯಂಟ್‌ಗಳಲ್ಲಿ ಲಭ್ಯ

1ವೇ ಕ್ಯಾಸೆಟ್ (2.6KW~ 4.2KW)

ಅಟೋ ಸ್ವಿಂಗ್ ಫೀಚರ್ ಹೊಂದಿರುವ ಈ ಯುನಿಟ್ ಅನ್ನು ವಿಶಾಲವಾದ ಪ್ರದೇಶಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಂಪಾಗಿಸಲು ವಿನ್ಯಾಸಗೊಳಿಸಲಾಗಿದೆ. ಅದರ ದೊಡ್ಡ ಬ್ಲೇಡ್ ಹೆಚ್ಚು ದೊಡ್ಡದಾದ ಮತ್ತು ವಿಶಾಲವಾದ ಪ್ರದೇಶದಲ್ಲಿ ಗಾಳಿಯನ್ನು ಹರಡುತ್ತದೆ. ಅಟೋ ಸ್ವಿಂಗ್ ಫೀಚರ್ ಪ್ರತೀ ದಿಕ್ಕಿಗೂ ಗಾಳಿಯನ್ನು ವಿತರಿಸುತ್ತದೆ. 1ವೇ ಕ್ಯಾಸೆಟ್‌ಗಳು ಅತ್ಯಂತ ತೆಳ್ಳಗಿನ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕ ಸೌಂದರ್ಯವನ್ನು ಹೊಂದಿದೆ. ಇದು ಕೇವಲ 135 ಮಿಮೀ ಎತ್ತರವನ್ನು ಹೊಂದಿದೆ ಮತ್ತು ಕೇವಲ 155 ಮಿ.ಮೀನಷ್ಟು ಸಣ್ಣದಾದ ಸೀಲಿಂಗ್ ಜಾಗದಲ್ಲಿಯೂ ಹೊಂದಿಕೊಳ್ಳುತ್ತದೆ. ಆದ್ದರಿಂದ, ಸೀಮಿತ ಸ್ಥಳಾವಕಾಶ ಇರುವ, ಆದರೆ ವಿಶಾಲವಾದ ಸ್ಥಳವನ್ನು ತಂಪಾಗಿಸುವ ಮತ್ತು ಬಿಸಿಮಾಡುವ ಅಗತ್ಯ ಇರುವವರಿಗೆ, ಇದು ಸೂಕ್ತವಾದ ಮತ್ತು ಪರಿಣಾಮಕಾರಿ ಉತ್ಪನ್ನವಾಗಿದೆ. ಇದರ ಜತೆಗೆ, ಅದರ ಸೊಗಸಾದ ಮತ್ತು ಕಾಂಪ್ಯಾಕ್ಟ್ ವಿನ್ಯಾಸವು ಎಲ್ಲಾ ರೀತಿಯ ಮತ್ತು ಶೈಲಿಗಳ ಇಂಟೀರಿಯರ್ ಜತೆಗೆ ಸೂಕ್ತ ರೀತಿಯಲ್ಲಿ ಹೊಂದಿಕೊಳ್ಳುತ್ತದೆ.

4ವೇ ಕ್ಯಾಸೆಟ್ (6.0KW~10.0KW)

ದೊಡ್ಡ ಬ್ಲೇಡ್ ವಿನ್ಯಾಸ ಹೊಂದಿರುವ ಈ ಯುನಿಟ್ ಉತ್ತಮ ಕೂಲಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ. ಇದು ನೀವು ಸೂಚಿಸಿದ ಸ್ಥಳಗಳಿಗೆ ಮಾತ್ರ ಗಾಳಿಯನ್ನು ಪ್ರಸಾರ ಮಾಡುತ್ತದೆ. ಅನಗತ್ಯವಾಗಿ ಗಾಳಿಯನ್ನು ಎಲ್ಲಾ ಕಡೆಗೆ ಹರಡುವ ಕೆಲಸ ಮಾಡುವುದಿಲ್ಲ.

360° ಚಿಲ್ಡ್ ಕ್ಯಾಸೆಟ್ (6.0KW~10.0KW)

ವೃತ್ತಾಕಾರದ ಸಂರಚನೆ ಹೊಂದಿದೆ. ಆಧುನಿಕ ಶೈಲಿಯ ಆರ್ಕಿಟೆಕ್ಚರಲ್ ಇಂಟೀರಿಯರ್‌ಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಕೋಲ್ಡ್ ಡ್ರಾಫ್ಟ್‌ಗಳಿಲ್ಲದೆ ಎಲ್ಲಾ ದಿಕ್ಕುಗಳಿಗೂ ಏಕರೂಪವಾಗಿ ಗಾಳಿಯನ್ನು ಪ್ರಸಾರ ಮಾಡುತ್ತದೆ. ಗಾಳಿಯ ಹರಿವನ್ನು ನಿರ್ಬಂಧಿಸಲು ಯಾವುದೇ ಬ್ಲೇಡ್‌ಗಳಿಲ್ಲದಿರುವುದರಿಂದ ಇದು 25 ಪ್ರತಿಶತದಷ್ಟು ಹೆಚ್ಚಿನ ಗಾಳಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಅದನ್ನು ಮತ್ತಷ್ಟು ವೇಗವಾಗಿ ಪ್ರಸರಣ ಮಾಡುತ್ತದೆ.

ಇದನ್ನೂ ಓದಿ: Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

ಇದರ ದರ ಎಷ್ಟು?

ಸ್ಯಾಮ್‌ಸಂಗ್ ಚಿಲ್ಡ್ ವಾಟರ್ ಫ್ಯಾನ್ ಕಾಯಿಲ್ ಯೂನಿಟ್‌ಗಳ 3 ವೇರಿಯಂಟ್‌ಗಳು ಭಾರತದಾದ್ಯಂತ ಇರುವ ಸ್ಯಾಮ್‌ಸಂಗ್‌ನ ನೋಂದಾಯಿತ ಆಫ್‌ಲೈನ್ ಪಾಲುದಾರರ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ. ಕಡಿಮೆ ಸಾಮರ್ಥ್ಯ ಹೊಂದಿರುವ ಯುನಿಟ್ ಬೆಲೆ ರೂ. 35000ರಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Dengue Fever: ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ: ದಿನೇಶ್ ಗುಂಡೂರಾವ್

Dengue Fever: ಕೇರಳದಲ್ಲಿ ನಿಫಾ ವೈರಸ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇರಳ ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ನಿಫಾ ವೈರಸ್‌ನ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಿಳಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಿಂದ ಕೇರಳಕ್ಕೆ ಪ್ರವಾಸ ಕೈಗೊಳ್ಳುವವರು ಎಚ್ಚರಿಕೆ ವಹಿಸಿ ಎಂದು ಮಾರ್ಗಸೂಚಿ ಹೊರಡಿಸಿದ್ದೇವೆ. ತೀರಾ ಅಗತ್ಯವಾಗಿದ್ದರೆ ಮಾತ್ರ ಕೇರಳ ಪ್ರವಾಸ ಕೈಗೊಳ್ಳಿ. ಅನಗತ್ಯವಾಗಿ ಕೇರಳಕ್ಕೆ ತೆರಳುವುದು ಬೇಡ ಎಂದು ಅವರು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.

VISTARANEWS.COM


on

No cases of Nipah virus have been detected in the state says Minister Dinesh Gundurao
Koo

ಬೆಂಗಳೂರು: ಡೆಂಗ್ಯೂಗೆ (Dengue Fever) ತುತ್ತಾದ ಪ್ರತಿಯೊಬ್ಬರ ಮೇಲೆ 14 ದಿನಗಳವರೆಗೆ ನಿಗಾ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ಯಲಹಂಕದಲ್ಲಿ ಇಂದು ಡೆಂಗ್ಯೂ ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು.

ಯಲಹಂಕದ ಶಿಂಗೇನಹಳ್ಳಿಯಲ್ಲಿ ಇಂದು ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಸ್ಥಳೀಯ ಶಾಲೆಗಳಿಗೆ ತೆರಳಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರು. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ಸತತ ಪ್ರಯತ್ನಗಳನ್ನ ಮುಂದುವರಿಸಿದೆ. ಮುಂದಿನ ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳಲ್ಲಿ ಇಳಿಮುಖ ಕಾಣುವ ನಿರೀಕ್ಷೆ ಹೊಂದಿದ್ದೇವೆ ಎಂದರು.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ಕೆಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಇಳಿಮುಖವಾಗಿವೆ. ರಾಜ್ಯದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿಯೇ ಶೇ. 50 ರಷ್ಟು ಡೆಂಗ್ಯೂ ಪ್ರಕರಣಗಳಿವೆ. ಹೀಗಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ವಿನ ಗಮನ ಹರಿಸಿ ಡೆಂಗ್ಯೂ ಹತೋಟಿಗೆ ತರುವಂತೆ ಸೂಚಿಸಿದ್ದೇನೆ ಎಂದರು.

10 ಜಿಲ್ಲೆಗಳ ಡೆಂಗ್ಯೂ ಹಾಟ್‌ಸ್ಪಾಟ್‌ಗಳಿಗೆ ಉಪನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ಸೋಮವಾರ ಹಾಗೂ ಮಂಗಳವಾರ ಅಧಿಕಾರಿಗಳು ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಡಿ ಡೆಂಗ್ಯೂ ನಿಯಂತ್ರಣ ಕ್ರಮಗಳ ಅನುಷ್ಠಾನ ಆಗಿರುವ ಬಗ್ಗೆ ವಿಶೇಷ ಗಮನ ಹರಿಸಲಿದ್ದಾರೆ.

ಎರಡಕ್ಕಿಂತ ಹೆಚ್ಚು ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಗೋಚರಿಸಿದರೆ ಡೆಂಗ್ಯೂ ಹಾಟ್‌ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಕಂಡುಬಂದರೆ ಅಲ್ಲಿ ಫೀವರ್ ಕ್ಲಿನಿಕ್‌ಗಳನ್ನು ತೆರೆದು, ಜ್ವರ ಕಾಣಿಸಿಕೊಳ್ಳುವ ಎಲ್ಲರನ್ನು ಡೆಂಗ್ಯೂ ಟೆಸ್ಟಿಂಗ್‌ಗೆ ಒಳಪಡಿಸಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ

ಕೇರಳದಲ್ಲಿ ನಿಫಾ ವೈರಸ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇರಳ ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರಾಜ್ಯದಲ್ಲಿ ನಿಪಾ ವೈರಸ್‌ನ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ರಾಜ್ಯದಿಂದ ಕೇರಳಕ್ಕೆ ಪ್ರವಾಸ ಕೈಗೊಳ್ಳುವವರು ಎಚ್ಚರಿಕೆ ವಹಿಸಿ ಎಂದು ಮಾರ್ಗಸೂಚಿ ಹೊರಡಿಸಿದ್ದೇವೆ. ತೀರಾ ಅಗತ್ಯವಾಗಿದ್ದರೆ ಮಾತ್ರ ಕೇರಳ ಪ್ರವಾಸ ಕೈಗೊಳ್ಳಿ. ಅನಗತ್ಯವಾಗಿ ಕೇರಳಕ್ಕೆ ತೆರಳುವುದು ಬೇಡ ಎಂದು ರಾಜ್ಯದ ಜನರಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.

ಇದನ್ನೂ ಓದಿ: Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್‌

ರಾಜ್ಯದಲ್ಲಿ ಇತ್ತೀಚೆಗೆ ಝೀಕಾ ವೈರಸ್ ಪತ್ತೆಯಾಗಿತ್ತು. ಝೀಕಾ ವೈರಸ್ ಅಷ್ಟೊಂದು ಅಪಾಯಕಾರಿಯಲ್ಲ. ಆದರೆ ನಿಪಾ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೂಡ ಮುಂಜಾಗೃತೆ ಕ್ರಮಗಳನ್ನು ಅನುಸರಿಸಲಿದೆ ಎಂದರು.

Continue Reading

ಬಳ್ಳಾರಿ

Ballari News: ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಭೀತಿ; ಸಂಚಾರಕ್ಕೆ ನಿರ್ಬಂಧ

Ballari News: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ ಮುಳುಗಡೆ ಭೀತಿ ಹೆಚ್ಚಾಗಿದೆ. ಅಲ್ಲದೆ ಸೇತುವೆ ಮೇಲಿನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದರಿಂದ ನದಿಗೆ ಶುಕ್ರವಾರ 90 ಸಾವಿರಕ್ಕೂ ಅಧಿಕ ಕ್ಯೂಸೆಕ್‌ನಷ್ಟು ನೀರು ಹರಿದು ಬಂದಿದೆ. ಇನ್ನು ಸೇತುವೆ ಮಟ್ಟಕ್ಕೆ ಒಂದು ಅಡಿಯಷ್ಟು ಮಾತ್ರ ನೀರು ಕಡಿಮೆಯಿದ್ದು, ಯಾವ ಕ್ಷಣದಲ್ಲಾದರೂ ನದಿಗೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುವ ಸಾಧ್ಯತೆ ಇದೆ.

VISTARANEWS.COM


on

Kampli Gangavathi link bridge inundation fear
Koo

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ (Ballari News) ಮುಳುಗಡೆ ಭೀತಿ ಹೆಚ್ಚಾಗಿದೆ. ಅಲ್ಲದೆ ಸೇತುವೆ ಮೇಲಿನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದರಿಂದ ನದಿಗೆ ಶುಕ್ರವಾರ 90 ಸಾವಿರಕ್ಕೂ ಅಧಿಕ ಕ್ಯೂಸೆಕ್‌ನಷ್ಟು ನೀರು ಹರಿದು ಬಂದಿದೆ. ಇನ್ನು ಸೇತುವೆ ಮಟ್ಟಕ್ಕೆ ಒಂದು ಅಡಿಯಷ್ಟು ಮಾತ್ರ ನೀರು ಕಡಿಮೆಯಿದ್ದು, ಯಾವ ಕ್ಷಣದಲ್ಲಾದರೂ ನದಿಗೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುವ ಸಾಧ್ಯತೆ ಇದೆ. ಅಲ್ಲದೇ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಭೀತಿ ಹೆಚ್ಚಾಗಿದೆ.

ಇದನ್ನೂ ಓದಿ: Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು?

ಸೇತುವೆಗೆ ಗಿಡಗಂಟಿಗಳು ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆರವುಗೊಳಿಸುವ ಕಾರ್ಯದಲ್ಲಿ ಪುರಸಭೆ ಅಧಿಕಾರಿಗಳು ನಿರತರಾಗಿದ್ದಾರೆ. ಇನ್ನು ನದಿ ಪಾತ್ರ ಜನತೆಗೆ ತಮ್ಮ ಮನೆಗಳು ಮುಳುಗುವ ಆತಂಕ ಒಂದೆಡೆ ಆದರೆ ಇನ್ನೊಂದೆಡೆ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗುವ ಭಯದಲ್ಲಿ ರೈತರಿದ್ದಾರೆ. ಯಾವುದೇ ರೀತಿಯ ಅಪಾಯಗಳು ಜರುಗದಂತೆ ಕ್ರಮ ವಹಿಸಲು ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಅಲ್ಲದೇ ಸೇತುವೆಯ ಬಳಿ ಪೊಲೀಸ್ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.

ಪ್ರಕೃತಿ ವಿಕೋಪ ಮುಂಜಾಗ್ರತಾ ಪೂರ್ವಭಾವಿ ಸಭೆ

ಕಂಪ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರವಾಹ, ಪ್ರಕೃತಿ ವಿಕೋಪ ಮುಂಜಾಗ್ರತೆ ಪೂರ್ವಭಾವಿ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ತುಂಗಭದ್ರಾ ಜಲಾಶಯಕ್ಕೆ ದಿನದಿಂದ ದಿನಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿಗೆ ಯಾವುದೇ ಕ್ಷಣದಲ್ಲಾದರೂ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುಬಹುದು. ಅಲ್ಲದೇ ಪ್ರವಾಹ ಪ್ರಕೃತಿ ವಿಕೋಪಗಳು ಜರುಗುವ ಸಂಭವಗಳಿವೆ. ಇದರಿಂದಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಸಮರ್ಥವಾಗಿ ಎದುರಿಸೋಣ ಎಂದರು.

ಇದನ್ನೂ ಓದಿ: Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್‌

ಇನ್ನು ನದಿಪಾತ್ರದ ಜನತೆ ನದಿಗೆ ಬಟ್ಟೆ ಒಗೆಯಲು ತೆರಳುವುದು, ಮೀನುಗಾರರು ಮೀನು ಹಿಡಿಯಲು ನದಿಗ ಇಳಿಯಬಾರದು. ಸ್ಥಳೀಯರು ಈ ಕೂಡಲೇ ಜನಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸ್ಥಳೀಯ ಆಡಳಿತ ಡಂಗುರ ಹೊಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು.

ಶಿಕ್ಷಣ ಇಲಾಖೆ ಮತ್ತು ಸಿಡಿಪಿಒ ಇಲಾಖೆ ಪ್ರವಾಹ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲು ಸೂಚಿಸಿದರು. ಪ್ರವಾಹ ಸಂದರ್ಭದಲ್ಲಿ ಸೇತುವೆ, ನದಿಪಾತ್ರದಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಒದಗಿಸಲು ಬ್ಯಾರಿಕೇಡ್ ಅಳವಡಿಸಬೇಕು. ಅಲ್ಲದೇ ಸಿಬ್ಬಂದಿ ನಿಯೋಜನೆ ಮಾಡಿ ಯಾವುದೇ ರೀತಿಯ ಸಮಸ್ಯೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು.

ಪ್ರವಾಹ ಮತ್ತು ನಂತರದಲ್ಲಿ ಸಾಂಕ್ರಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ನಿಗಾವಹಿಸಬೇಕು. ಈ ಕುರಿತು ಗ್ರಾಮೀಣ ಪ್ರದೇಶಗಳಲ್ಲಿನ ವಿಪತ್ತು ನಿರ್ವಹಣಾ ಸಮಿತಿ ಕ್ರಿಯಾಶೀಲವಾಗಿರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ಈ ಸಂದರ್ಭದಲ್ಲಿ ತಾಪಂ ಇಒ ಆರ್.ಕೆ. ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಉಪ ತಹಸೀಲ್ದಾರ್ ಬಿ. ರವೀಂದ್ರ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಬಿ.ವಾಸುಕುಮಾರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Continue Reading

ನೌಕರರ ಕಾರ್ನರ್

KAS Recruitment 2024: ಕೆಎಎಸ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ; ಸಚಿವ ಸಂಪುಟ ಅನುಮೋದನೆ

KAS Recruitment 2024: 2017-18ನೇ ಸಾಲಿನಲ್ಲಿ ಪರೀಕ್ಷೆ ಬರೆದವರಿಗೆ ಗರಿಷ್ಠ ವಯೋಮಿತಿ ಪರಿಗಣಿಸದೆ ಈ ಬಾರಿಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದರು. ಇದಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

VISTARANEWS.COM


on

KAS Recruitment 2024
Koo

ಬೆಂಗಳೂರು: ಕೆಎಎಸ್‌ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ (Job News) ನೀಡಿದೆ. 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ (KAS Recruitment 2024) ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಬಾರಿ ವಿಶೇಷ ಅವಕಾಶ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಅರ್ಜಿ ಸಲ್ಲಿಕೆಗೆ ವಿಶೇಷ ಅವಕಾಶ ನೀಡಲಾಗಿತ್ತು. ಇದೀಗ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ವಯೋಮಿತಿ ಸಡಿಲಿಸಿ ಅರ್ಜಿ ಹಾಕಲು ವಿಶೇಷ ಅವಕಾಶಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದರಿಂದ ಗರಿಷ್ಠ ವಯೋಮಿತಿ ಮೀರಿದವರಿಗೆ ಅನುಕೂಲವಾಗಲಿದೆ.

‘ಕೆಎಎಸ್ ಹುದ್ದೆಗಳ ನೇಮಕಾತಿಗೆ ಪ್ರತಿವರ್ಷ ಅಧಿಸೂಚನೆ ಹೊರಡಿಸಬೇಕು ಎಂದು ಪಿ.ಸಿ. ಹೋಟಾ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯದಲ್ಲಿ 3-4 ವರ್ಷಗಳಿಗೊಮ್ಮೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ಒಡಿಶಾ ಸರ್ಕಾರವು 2017ರಲ್ಲಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಪರಿಗಣಿಸದೆ 2024ರ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಅದೇ ರೀತಿ ಗರಿಷ್ಠ ವಯೋಮಿತಿ ಮೀರಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಈ ಹಿಂದೆ ಕೆಪಿಎಸ್‌ಸಿಗೆ ಅಭ್ಯರ್ಥಿಗಳು ಮನವಿ ಮಾಡಿದ್ದರು. ಹೀಗಾಗಿ 2017-18ನೇ ಸಾಲಿನ ಕೆಎಎಸ್‌ ಪರೀಕ್ಷೆ ಬರೆದವರಿಗೆ ಒಂದು ಬಾರಿ ವಿಶೇಷ ಅವಕಾಶ ನೀಡಿ ಕೆಪಿಎಸ್‌ಸಿ ಆದೇಶ ಹೊರಡಿಸಿತ್ತು. ಇದಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

2017-18ನೇ ಸಾಲಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನುಕೂಲವಾಗಲು ಅರ್ಜಿ ಸಲ್ಲಿಕೆ ಅವಧಿ ಮುಗಿದರೂ ಕೂಡ ಜುಲೈ 6ರಿಂದ ಜುಲೈ 21ರವರೆಗೆ ಕೆಎಎಸ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗವು ವಿಶೇಷ ಅವಕಾಶ ನೀಡಿತ್ತು.

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ

ತೀವ್ರ ವಿರೋಧದ ನಡುವೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ (Ramanagara as Bengaluru South District) ಎಂದು ಬದಲಾವಣೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ (cabinet meeting) ಒಪ್ಪಿಗೆ ನೀಡಿದೆ. ರಾಮನಗರ ಜಿಲ್ಲೆಯ ಹೆಸರು (Bengaluru South District) ಮಾತ್ರ ಬದಲಾವಣೆಯಾಗಲಿದೆ, ಜಿಲ್ಲಾ ಕೇಂದ್ರ (ರಾಮನಗರ) ಸೇರಿ ಉಳಿದ ಎಲ್ಲವೂ ಹಾಗೆ ಉಳಿಯಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬ್ರ್ಯಾಂಡ್ ಬೆಂಗಳೂರು ನಿರ್ಮಾಣದ ದೃಷ್ಟಿಯಿಂದ ಈ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಉಳಿದ ಎಲ್ಲವೂ ಹಾಗೇ ಉಳಿಯಲಿದೆ. ಚುನಾವಣಾ ದೃಷ್ಟಿಯಿಂದ ಹೀಗೆ ಮಾಡಿಲ್ಲ. ಜನರ ಹಿತಾಸಕ್ತಿ ಕಾಪಾಡಲು ಜೊತೆಗೆ ಬ್ರ್ಯಾಂಡ್ ಬೆಂಗಳೂರು ದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎಂದು ತಿಳಿಸಿದರು.

ರಾಮನಗರದವರೂ ಬ್ರ್ಯಾಂಡ್ ಬೆಂಗಳೂರಿಗೆ ಬರಬೇಕು ಎನ್ನುತ್ತಾರೆ. ಜನರ ಅಭಿಪ್ರಾಯ, ಶಾಸಕರ ಅಭಿಪ್ರಾಯ , ಕೆಲ ನಾಯಕರ ಅಭಿಪ್ರಾಯ ತೆಗೆದುಕೊಂಡು ತೀರ್ಮಾನ ಮಾಡಿದ್ದೇವೆ. ನೋಟಿಫೈ ಮಾಡಬೇಕು, ಆಮೇಲೆ ಹೆಸರು ಬದಲಾವಣೆ ಪ್ರಕ್ರಿಯೆ ಶುರುವಾಗುತ್ತೆ. ಇದಕ್ಕೆ ಒಂದು ಸಮಿತಿಯನ್ನು ಮಾಡಲಾಗುತ್ತದೆ ಎಂದು ರಾಮನಗರ ಹೆಸರು ಬದಲಾವಣೆಗೆ ಸಚಿವ ಎಚ್.ಕೆ ಪಾಟೀಲ್ ಸಮರ್ಥನೆ ಮಾಡಿಕೊಂಡರು.

ಇದನ್ನೂ ಓದಿ| Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

  • 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ (ಕೆಎಎಸ್‌) ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಬಾರಿ ವಿಶೇಷ ಅವಕಾಶ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ವಯೋಮಿತಿ ಸಡಿಲಿಸಿ ಅರ್ಜಿ ಹಾಕಲು ವಿಶೇಷ ಅವಕಾಶಕ್ಕೆ ಕ್ಯಾಬಿನೆಟ್ ಅನುಮೋದನೆ.
  • KIADBಯ ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2.64 ಎಕರೆ ಸಿಎ ನಿವೇಶನವನ್ನು ಲೋಕ ಶಿಕ್ಷಣ ಟ್ರಸ್ಟ್ ಗೆ ಹಂಚಿಕೆ ಮಾಡಲು ಕ್ಯಾಬಿನೆಟ್ ತೀರ್ಮಾನ. ಈ ಹಂಚಿಕೆ ಜೊತೆಗೆ ಶೇ.75 ರಿಯಾಯಿತಿ ನೀಡಲು ತೀರ್ಮಾನ.
  • ಅನಿಮೇಶನ್ ವಿಶ್ಯುವಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್‌ (AVGC) 2.0.- “ಉತ್ಕೃಷ್ಟತಾ ಕೇಂದ್ರವನ್ನು ” 16 ಕೋಟಿಗಳ ಅಂದಾಜು ಮೊತ್ತದಲ್ಲಿ (CAPEX-ರೂ. 7.00 ಕೋಟಿಗಳು ಮತ್ತು” OPEX-ರೂ. 9.00 ಕೋಟಿಗಳು) ಸ್ಥಾಪನೆಗೆ ಅನುಮೋದನೆ.
  • ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳ ನೇಮಕಾತಿಗೆ ‌ ಸಂಬಂಧಿಸಿದಂತೆ “ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024”ಕ್ಕೆ ಅನುಮೋದನೆ.
  • ಪ್ರೌಢಶಾಲಾ ಶಿಕ್ಷಕರಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆಯಲು 55% ನಿಂದ 50% ಅಂಕಕ್ಕೆ ಇಳಿಸಿ ಪರಿಷ್ಕರಣೆ.
  • ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವನ್ನು ಕಂಪನಿ ಕಾಯ್ದೆ ಅಡಿ ಸ್ಥಾಪನೆಗೆ ಅನುಮೋದನೆ
  • ಕೆ ಆರ್ ಎಸ್ ಬೃಂದಾವನ ಉದ್ಯಾನವನವನ್ನು ಮೇಲ್ದರ್ಜೆಗೆ ಏರಿಸಲು ಕ್ಯಾಬಿನೆಟ್ ಅನುಮೋದನೆ. 2633 ಕೋಟಿ ರೂ. ದಲ್ಲಿ ಪಿಪಿಪಿ ಮಾಡೆಲ್‌ನಲ್ಲಿ ಮೇಲ್ದರ್ಜೆಗೆ ಏರಿಸಲು ಅನುಮೋದನೆ. ಟೆಂಡರ್ ಮೂಲಕ ಅನುಷ್ಠಾನ
Continue Reading

ಮಳೆ

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka Rain: ಭಾರಿ ಗಾಳಿ, ಮಳೆಗೆ ವಿದ್ಯುತ್‌ ಕಂಬಗಳ ಮೇಲೆ ಮರಗಳು ಬಿದ್ದು ಅವಾಂತರವೇ ಸೃಷ್ಟಿಯಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ವಿದ್ಯುತ್‌ ದುರಸ್ತಿ ಹಿನ್ನೆಲೆ ಲೈನ್‌ಮ್ಯಾನ್‌ ಉಕ್ಕಿ ಹರಿಯುವ ನೀರಿಗೆ ಧುಮುಕಿ ಸರಿಪಡಿಸಿದ್ದಾರೆ.

VISTARANEWS.COM


on

By

Karnataka Rain
Koo

ಚಿಕ್ಕಮಗಳೂರು: ಮಳೆಗಾಲದಲ್ಲಿ (Karnataka Rain) ಕರೆಂಟ್ ಹೋದರೆ ಥೋ…. ಅಂತ ಲೈನ್‌ಮ್ಯಾನ್‌ಗಳನ್ನು ಬೈದುಕೊಳ್ಳತ್ತಿವಿ. ಆದರೆ ಈ ವಿಡಿಯೋ ನೋಡಿದರೆ ಕರೆಂಟ್ ಹೋದರೂ ಚಿಂತೆ ಮಾಡದೆ, ವಿದ್ಯುತ್ ಇಲಾಖೆಯ ಸಿಬ್ಬಂದಿಗೆ ಶಬಾಷ್‌ ಅಂತೀರಾ. ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮದಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಳ್ಳದಲ್ಲಿ ಧುಮುಕಿ ಸಿಬ್ಬಂದಿ ವಿದ್ಯುತ್‌ ಲೈನ್ ಎಳೆದಿದ್ದಾರೆ.

ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮಕ್ಕೆ ಕರೆಂಟ್ ಕೊಡಲು ಲೈನ್ ಮ್ಯಾನ್ ಸೊಂಟಕ್ಕೆ ವೈರ್ ಕಟ್ಟಿಕೊಂಡು ಈ ದಡದಿಂದ ಆ ದಡಕ್ಕೆ ಈಜಿಕೊಂಡು ಹೋಗಿದ್ದಾರೆ. ವಿದ್ಯುತ್‌ ತಂತಿ ಮೇಲೆ ಮರ ಬಿದ್ದು ಕಳೆದ 3 ದಿನದಿಂದ ಹುಯಿಗೆರೆ ಗ್ರಾಮಸ್ಥರು ಕತ್ತಲಿನಲ್ಲಿದ್ದರು. ಲೈನ್ ಮ್ಯಾನ್ ರವಿಕುಮಾರ್ ಹಳ್ಳದಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ದುರಸ್ಥಿಗೆ ಮುಂದಾದರು.

ಲೈನ್ ಮ್ಯಾನ್ ರವಿಯವರ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದುಕೊಂಡು ರವಿಕುಮಾರ್‌ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿನಲ್ಲಿ ಜಿಗಿದು, ವಿದ್ಯುತ್‌ ಸಂಪರ್ಕ ಸರಿಪಡಿಸಿದ್ದಾರೆ.

ಮಳೆ ಅಬ್ಬರಕ್ಕೆ ಅಂತ್ಯಕ್ರಿಯೆಗೂ ಗ್ರಾಮಸ್ಥರ ಪರದಾಟ

ಬೆಳಗಾವಿಯ ಖಾನಾಪುರ ತಾಲೂಕಿನ ಅಮಗಾಂವ್ ಗ್ರಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆಗೆ ಪರದಾಡಿದರು. ಜುಲೈ 18ರಂದು ಗ್ರಾಮದ ಹರ್ಷದಾ ಘಾಡಿ ಎಂಬುವವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಕಟ್ಟಿಗೆ ಸ್ಟ್ರೇಚರ್ ಮೇಲೆ ಹೊತ್ತು ರವಾನಿಸಿದ್ದರು. ಐದು ಕಿಮೀ ಹೊತ್ತು ತಂದು ಬಳಿಕ ಬೆಳಗಾವಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಗುರುವಾರ ಕೆಎಲ್ಇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಗ್ರಾಮಕ್ಕೆ ತರಲು ಪರದಾಡಬೇಕಾಯಿತು. ಮಳೆಯಿಂದಾಗಿ ಆ್ಯಂಬುಲೆನ್ಸ್ ಕೆಸರಿನಲ್ಲಿ ಸಿಲುಕಬೇಕಾಯಿತು. ಹೀಗಾಗಿ ಕಟ್ಟಿಗೆಯ ಸ್ಟ್ರೇಚರ್‌ನಲ್ಲಿ ಐದು ಕಿಮೀ ಶವ ಹೊತ್ತು ಸಾಗಿದರು.

ಕಳೆದ ಎರಡು ವಾರಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಬೆಳಗಾವಿ ನಗರದಲ್ಲಿಯೂ ಭಾರಿ ಅವಾಂತರ ಸೃಷ್ಟಿಸಿದೆ. ನಿರಂತರವಾಗಿ ಸುರಿಯತ್ತಿರುವ ಮಳೆ ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಬೆಂಬಿಡದೆ ಕಾಡುತ್ತಿದೆ. ಜಿಲ್ಲಾಧಿಕಾರಿಗಳ ಬ್ರಿಟಿಷ್ ಕಾಲದ ಬಂಗಲೆಯಲ್ಲಿರುವ ಹಾಗು ಸುತ್ತಮುತ್ತ ಇರುವ ಹಳೆಯ ಮರಗಳು ಧರೆಗುರುಳುತ್ತಿವೆ. ಸರದಿ ಸಾಲಿನಲ್ಲಿ ಎಂಬಂತೆ ಮೂರು ದಿನಗಳಲ್ಲಿ ನಾಲ್ಕು ದೊಡ್ಡ ಮರಗಳು ನೆಲಕಚ್ಚಿವೆ. ಕಳೆದ ರಾತ್ರಿ ಬಿದ್ದ ಮರ ಜಿಲ್ಲಾಧಿಕಾರಿಗಳ ಮನೆಯ ಮುಖ್ಯ ದ್ವಾರದ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಿತ್ತು.

ಇದನ್ನೂ ಓದಿ: Drugs Seized : ಓಲಾ, ಊಬರ್ ಡ್ರೈವಿಂಗ್ ಜತೆಗೆ ಡ್ರಗ್ಸ್‌ ಮಾರಾಟ; 6 ಕೋಟಿ ರೂ.ಮೌಲ್ಯದ ಡ್ರಗ್ಸ್‌ ಸೀಜ್‌

ಬೆಳಗಾವಿಯಲ್ಲಿ ಕುಸಿದು ಬಿದ್ದ ಮನೆಗಳು

ಬೆಳ್ಳಂ ಬೆಳಗ್ಗೆ ಮನೆ ಕುಸಿದು ಭಾರಿ ಅನಾಹುತ ತಪ್ಪಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಕಾಶ ಪಾಟೀಲ್ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಇತ್ತ ಭೂತರಾಮನಹಟ್ಟಿಯಲ್ಲೂ ಮನೆ ಕುಸಿದು ದುರ್ಗಪ್ಪ ಪಾಟೀಲ್ ಎಂಬುವವರ ಕೈಗೆ ಗಾಯವಾಗಿದೆ. ಗಾಯಾಳು ದುರ್ಗಪ್ಪ ಪಾಟೀಲ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಹೆಲ್ಪ್ ಲೈನ್ ತೆರೆದ ಬೆಳಗಾವಿ ಜಿಲ್ಲಾಡಳಿತ

ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡರೆ. ಸಮಸ್ಯೆಯಲ್ಲಿದ್ದವರಿಗೆ ಬೆಳಗಾವಿ ಜಿಲ್ಲಾಡಳಿತ ಹೆಲ್ಪ್ ಲೈನ್ ತೆರೆದಿದೆ. ಪ್ರವಾಹ ಸಹಾಯವಾಣಿ 0831-2407290, ಪೊಲೀಸ್ ಸಹಾಯವಾಣಿ 08321-2474054 ಅಥವಾ 112 ಗೆ ಕರೆ ಮಾಡಲು ಡಿಸಿ ಮತ್ತು ಎಸ್‌ಪಿ ಮನವಿ ಮಾಡಿದ್ದಾರೆ.

ರೈಲು‌ ಹಳಿಗಳ ಮೇಲೆ ಗುಡ್ಡ ಕುಸಿತ

ದೂಧಸಾಗರ್ ಮತ್ತು ಸೋನಾಲಿಯಂ ರೈಲು ನಿಲ್ದಾಣಗಳ ಮಧ್ಯೆ ಗುಡ್ಡ ಕುಸಿದಿದೆ. ಹಳಿಯ ಮೇಲೆ‌ ಅಪಾರ ಪ್ರಮಾಣದ ಕಲ್ಲು ಹಾಗೂ ಮಣ್ಣು ಉರುಳಿ ಬಿದ್ದಿದೆ. ಲೋಂಡಾ ಮಾರ್ಗವಾಗಿ ಬೆಳಗಾವಿಗೆ ಬರುವ ರೈಲುಗಳು ತಡವಾಗಿ ಚಲಿಸಿದ್ದವು. ರೈಲ್ವೆ ಇಲಾಖೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ ವ್ಯವಸ್ಥೆ ಮಾಡಿತು.

ಗಡಿ ಜಿಲ್ಲೆಯ ಜನ ರಾತ್ರಿಯಲ್ಲ‌ ನಿದ್ದೆಯಿಲ್ಲದೆ ಕಂಗೆಟ್ಟಿದ್ದಾರೆ. ದೂಧಗಂಗಾ ನದಿಯ ಅಬ್ಬರಕ್ಕೆ ಊರು ಖಾಲಿ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಿಂದ ಸುರಕ್ಷಿತ ಸ್ಥಳಗಳತ್ತ ಹೋಗಿದ್ದಾರೆ. ಇತ್ತ ಅಪಾಯದ ಮಟ್ಟ ಮೀರಿ ಮಾರ್ಕಂಡೇಯ ನದಿ ಹರಿಯುತ್ತಿದ್ದು, ಗೋಕಾಕ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕೋಳಿ ಸೇತುವೆ ಬಿರುಕು ಬಿಟ್ಟಿದೆ. ಇತ್ತ ಗೋಕಾಕದ ದನದ ಪೇಟೆಗೆ ನದಿ ನೀರು ನುಗ್ಗುತ್ತಿದ್ದು, ಕೆಲ ತಗಡಿನ ಶೆಡ್‌ಗಳು ಮುಳುಗಡೆಯಾಗಿವೆ. ದನದ ಪೇಟೆ ಪಟಗುಂದಿ ಹನುಮನಿಗೂ ಜಲಕಂಟಕವಾಗಿದ್ದು, ಕ್ಷಣ ಕ್ಷಣಕ್ಕೂ ಘಟಪ್ರಭಾ ನದಿ ಒಳಹರಿವು ಹೆಚ್ಚಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ 30 ಸಂಪರ್ಕ ಸೇತುವೆಗಳು ಜಲಾವೃತಗೊಂಡಿದೆ. ಗೋಕಾಕ್ ತಾಲೂಕಿನಲ್ಲಿ ಐದು ಸೇತುವೆಗಳು, ಮೂಡಲಗಿ ತಾಲೂಕಿನಲ್ಲಿ ಐದು ಸೇತುವೆ ಮುಳುಗಡೆಯಾಗಿದೆ. ಹುಕ್ಕೇರಿ ತಾಲೂಕಿನ ಐದು, ಚಿಕ್ಕೋಡಿ ತಾಲೂಕಿನ ನಾಲ್ಕು, ನಿಪ್ಪಾಣಿ ತಾಲೂಕಿನ ನಾಲ್ಕು, ರಾಯಬಾಗ ತಾಲೂಕಿನ ಮೂರು, ಖಾನಾಪುರ ಎರಡು, ಕಾಗವಾಡ ಒಂದು, ಅಥಣಿ ಒಂದು ಸೇತುವೆ ಜಲಾವೃತವಾಗಿದ್ದು, ಅರವತ್ತಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ದಾವಣಗೆರೆಯಲ್ಲಿ ಜಲಾವೃತಗೊಂಡ ಸ್ಮಶಾನ

ದಾವಣಗೆರೆ ಜಿಲ್ಲೆಯ ಹರಿಹರದ ಗುತ್ತೂರು ಗ್ರಾಮದಲ್ಲಿ ತುಂಗಭದ್ರ ನದಿಗೆ ಪ್ರವಾಹ ಬಂದ ಹಿನ್ನೆಲೆ ಸ್ಮಶಾನ ಜಲಾವೃತಗೊಂಡಿತ್ತು. ನದಿಯಲ್ಲೇ ಮೃತದೇಹ ಹೊತ್ತು ಗ್ರಾಮಸ್ಥರು ಶವಸಂಸ್ಕಾರ ಮಾಡಿದರು. ಗ್ರಾಮದಲ್ಲಿ ದಲಿತ ಸಮುದಾಯದವರು ಮೃತರಾದರೆ ಶವಸಂಸ್ಕಾರಕ್ಕೂ ಸ್ಥಳವಿಲ್ಲದಂತಾಗಿದೆ. ಗುತ್ತೂರು ಗ್ರಾಮದ ಎಚ್ ಎಂ ಸಿ ಮಂಜಪ್ಪ (70) ಸಾವನ್ನಪ್ಪಿದ್ದರು. ನದಿ ದಡವೇ ಸ್ಮಶಾನವಾದ ಹಿನ್ನೆಲೆ ಶವಸಂಸ್ಕಾರಕ್ಕೆ‌ ಪರದಾಡಿದರು. ನದಿ ನೀರಿನಲ್ಲಿಯೇ ಶವ ಹೊತ್ತುಕೊಂಡು ಹೋಗಿ ಶವ ಸಂಸ್ಕಾರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Kannada New Movie Parapancha Gama Gama Powder song out
ಸ್ಯಾಂಡಲ್ ವುಡ್7 mins ago

Kannada New Movie: “ಪೌಡರ್” ತಂಡದಿಂದ ಹೊರ ಬಿತ್ತು ಹೊಸ ಹಾಡು; “ಪರಪಂಚವೇ ಘಮ ಘಮ”!

No cases of Nipah virus have been detected in the state says Minister Dinesh Gundurao
ಕರ್ನಾಟಕ10 mins ago

Dengue Fever: ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ: ದಿನೇಶ್ ಗುಂಡೂರಾವ್

Kampli Gangavathi link bridge inundation fear
ಬಳ್ಳಾರಿ14 mins ago

Ballari News: ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಭೀತಿ; ಸಂಚಾರಕ್ಕೆ ನಿರ್ಬಂಧ

KAS Recruitment 2024
ನೌಕರರ ಕಾರ್ನರ್16 mins ago

KAS Recruitment 2024: ಕೆಎಎಸ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ; ಸಚಿವ ಸಂಪುಟ ಅನುಮೋದನೆ

Karnataka Rain
ಮಳೆ20 mins ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Samantha Ruth Prabhu Citadel Honey Bunny Varun Dhawan
ಸಿನಿಮಾ24 mins ago

Samantha Ruth Prabhu: ಆ.1ಕ್ಕೆ ‘ಸಿಟಾಡೆಲ್’ ಬಿಗ್‌ ಅಪ್‌ಡೇಟ್‌ : ಸಮಂತಾ ಫ್ಯಾನ್ಸ್‌ಗೆ ಸಿಗಲಿದೆ ಗುಡ್‌ ನ್ಯೂಸ್‌!

Kanwar Yatra
ದೇಶ27 mins ago

Kanwar Yatra: ಕನ್ವರ್‌ ಯಾತ್ರೆ ವೇಳೆ ನಾಮ ಫಲಕ ಕಡ್ಡಾಯ; ಸುಪ್ರೀಂಕೋರ್ಟ್‌ನಿಂದ ಮತ್ತೊಂದು ಮಹತ್ವದ ಆದೇಶ

Womens Asia Cup T20
ಕ್ರೀಡೆ30 mins ago

Womens Asia Cup T20: ಬಾಂಗ್ಲಾ ಮಣಿಸಿ ಫೈನಲ್​ ಪ್ರವೇಶಿಸಿದ ಭಾರತ

Paris Olympics 2024
ಪ್ರಮುಖ ಸುದ್ದಿ31 mins ago

Paris Olympics 2024 : ಒಲಿಂಪಿಕ್ಸ್​ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ

Kamala Harris
ವಿದೇಶ36 mins ago

Kamala Harris: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಮಲಾ ಹ್ಯಾರಿಸ್‌ ಪರ ನಿಂತ ಬರಾಕ್‌ ಒಬಾಮಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 mins ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 hour ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ24 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

ಟ್ರೆಂಡಿಂಗ್‌