Site icon Vistara News

Karnataka Election 2023: ಕೊಪ್ಪಳದಲ್ಲಿ ಕರಡಿ ಸೊಸೆಗೆ ಬಿಜೆಪಿ ಟಿಕೆಟ್‌; ಬಂಡಾಯವೆದ್ದ ಸಿ.ವಿ. ಚಂದ್ರಶೇಖರ್‌

sanganna Karadi daughter in law gets ticket in Koppal CV Chandrasekhar rebelled Karnataka Election 2023 updates

ಕೊಪ್ಪಳ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿಯಿಂದ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದೆ. ಈ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸಂಸದ ಸಂಗಣ್ಣ ಕರಡಿ (sanganna Karadi) ಸೊಸೆ ಮಂಜುಳಾ ಅಮರೇಶ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ ಹಿನ್ನೆಲೆಯಲ್ಲಿ ಮತ್ತೊಬ್ಬ ಆಕಾಂಕ್ಷಿ, ಪಕ್ಷದ ಹಿರಿಯ ಮುಖಂಡ ಸಿ.ವಿ. ಚಂದ್ರಶೇಖರ್‌ (CV Chandrasekhar) ಬಂಡಾಯದ ಬಾವುಟ ಹಾರಿಸಿದ್ದಾರೆ. ಜೆಡಿಎಸ್‌ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಸಿದ್ಧತೆಯಲ್ಲಿದ್ದಾರೆ.

ವಿಧಾನಸಭೆ ಚುನಾವಣೆಯ ದಿನಾಂಕ ಸಮೀಪಿಸುತ್ತಿದೆ. ಇನ್ನು ಮತದಾನಕ್ಕೆ 23 ದಿನವಷ್ಟೇ ಬಾಕಿ ಇದೆ. ನಾಮಪತ್ರ ಸಲ್ಲಿಸಲು ಇದೇ ಏಪ್ರಿಲ್‌ 20 ಕೊನೆಯ ದಿನವಾಗಿದೆ. ಈ ನಡುವೆ ಕೊನೇ ಘಳಿಗೆಯಲ್ಲಿ ಬಿಜೆಪಿ ಪ್ರಕಟಿಸಿದ ಟಿಕೆಟ್‌ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇರುವುದರಿಂದ ಸಿ.ವಿ. ಚಂದ್ರಶೇಖರ್‌ ವ್ಯಗ್ರರಾಗಿದ್ದಾರೆ. ಹೀಗಾಗಿ ಬಂಡಾಯದ ಕಹಳೆಯನ್ನು ಊದಿದ್ದಾರೆ.

ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಿ.ವಿ. ಚಂದ್ರಶೇಖರ ಅವರು, ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಸಿ.ವಿ. ಚಂದ್ರಶೇಖರ್‌ ಹಾಗೂ ಸಂಗಣ್ಣ ಕರಡಿ ಮಧ್ಯೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಇತ್ತ ತಮಗೆ ಟಿಕೆಟ್‌ ಸಿಗುತ್ತಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಚಂದ್ರಶೇಖರ್‌ ಬೆಂಗಳೂರಿಗೆ ತೆರಳಿದ್ದಾರೆ.

ಇದನ್ನೂ ಓದಿ: Karnataka Election 2023: ಸಿದ್ದರಾಮಯ್ಯ ಪರ ವರುಣದಲ್ಲಿ ಕುಕ್ಕರ್‌ ಹಂಚಿದ್ದೆ, ಟಿಕೆಟ್‌ ಕೊಡೋದಾಗಿ ನಂಬಿಸಿ ಮೋಸ ಮಾಡಿದರು: ಗೋಪಿಕೃಷ್ಣ

ಜೆಡಿಎಸ್ ಅಥವಾ ಪಕ್ಷೇತರ?

ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯಬಾರದು ಎಂಬ ನಿಟ್ಟಿನಲ್ಲಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಜೆಡಿಎಸ್‌ ಇಲ್ಲವೇ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ವಿಪರ್ಯಾಸವೆಂದರೆ ಚಂದ್ರಶೇಖರ್‌ ಅವರಿಗೆ ಕಳೆದ ಬಾರಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿತ್ತು. ಆದರೆ, ಬಿ ಫಾರ್ಮ್‌ ನೀಡಿರಲಿಲ್ಲ.

Exit mobile version