ಕೊಪ್ಪಳ: ಬಿಜೆಪಿ ಪಕ್ಷದ ಸಂಸದರಾದ ಸಂಗಣ್ಣ ಮೋದಿ ನಾಯಕ್ವತದ ಬಗ್ಗೆ ಮಾತನಾಡಿದ್ದಾರೆ. ʼಕೇವಲ ಮೋದಿ ನಾಯಕ್ವದಲ್ಲಿ ನಾವು ಚುನಾವಣೆಯಲ್ಲಿ ಗೆಲ್ತೀವಿ ಅನ್ನೋದು ಮೂರ್ಖತನʼ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿಕೆ ನೀಡಿದ್ದಾರೆ. ಜಿಲ್ಲಾ ಕಾರ್ಯಕಾರಿಣಿ ಸಂಭೆಯಲ್ಲಿ ಸಂಸದ ಸಂಗಣ್ಣ ಈ ಮಾತನ್ನು ಹೇಳಿರುವುದು ಇತರೆ ನಾಯಕರು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ.
ಕಳೆದ ಎರಡು ದಿನಗಳ ಹಿಂದೆ ನಡೆದ ಜಿಲ್ಲಾ ಕಾರ್ಯಕಾರಣಿಯಲ್ಲಿ ಮಾತನಾಡಿರುವ ಸಂಸದ ಸಂಗಣ್ಣ ಕರಡಿ, ʼಚುನಾವಣೆಯನ್ನು ರಾಷ್ಟ್ರೀಯ ನಾಯಕರ ಫೋಟೋ ಹಾಕಿ, ಬ್ಯಾನರ್ ಮಾಡುವ ಮೂಲಕ ಗೆಲ್ಲಲು ಸಾಧ್ಯವಿಲ್ಲ. ಚುನಾವಣೆ ಗೆಲ್ಲೋದು ಅಷ್ಟು ಸರಳ ಇಲ್ಲ. ಅದಕ್ಕೆ ಅದರದೆ ಆದ ತಂತ್ರಗಾರಿಕೆ ಇದೆ. ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ರಾಷ್ಟ್ರೀಯ ನಾಯಕರ ಫೋಟೋ ಹಾಕಲಾಗುತ್ತದೆ. ಇದು ಹುಚ್ಚುತನ. ನನ್ನ ಪ್ರಕಾರ ಬಿಜೆಪಿಯಲ್ಲಿ ಮೋದಿಯವರ ನಾಯಕತ್ವದಲ್ಲಿ ಚುನಾವಣೆ ಗೆಲ್ಲಬಹುದು ಎಂದುಕೊಳ್ಳುವುದು ಮೂರ್ಖತನʼ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೊಪ್ಪಳದ ಚುನಾವಣೆ ಗೆಲ್ಲವ ಸಾಧ್ಯತೆ ಬಗ್ಗೆಯೂ ಸಂಗಣ್ಣ ಮಾತನಾಡಿದ್ದಾರೆ. ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ 45 ಸಾವಿರ ಮುಸ್ಲಿಂ ಮತ, 40 ಸಾವಿರ ಕುರುಬರ ವೋಟ್ ಇರುವುದರಿಂದ ಇಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಜಾಸ್ತಿ ಇದೆ ಎಂದು ಸಂಗಣ್ಣ ಕರಡಿ ತಿಳಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ನಾಯಕರ ಬ್ಯಾನರ್ ಹಾಕುವುದಕ್ಕೂ ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 402 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ