Site icon Vistara News

Santosh Suicide Case: ರಾಜೀನಾಮೆ ಘೋಷಿಸಿದ ಈಶ್ವರಪ್ಪ

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರರಕಣದಲ್ಲಿ( Santosh Suicide Case) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಸಚವ ಸ್ಥಾನಕ್ಕೆ ಕೆ.ಎಸ್‌. ಈಶ್ವರಪ್ಪ (Eshwarappa) ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಮೊದಲೇ ಈಶ್ವರಪ್ಪ ಹೆಸರೇಳಿ ಆರೋಫ ಮಾಡಿದ್ದ ಸಂತೋಷ್‌, ಎರಡು ದಿನದ ಹಿಂದಷ್ಟೆ ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರದಲ್ಲಿ ಈಶ್ವರಪ್ಪ ರಾಜೀನಾಮೆಗೆ ಪಕ್ಷದ ಒಳಗೆ ಹಾಗೂ ಪ್ರತಿಪಕ್ಷಗಳಿಂದಲೂ ಒತ್ತಾಯ ಹೆಚ್ಚಾಗಿತ್ತು. ಆದರೆ ಗುರುವಾರ ಮದ್ಯಾಹ್ನದವರೆಗೂ, ತಾವು ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಈಶ್ವರಪ್ಪ ಹೇಳುತ್ತಲೇ ಬಂದಿದ್ದರು. ಹಿರಿಯ ಸಚಿವರಾದ್ಧರಿಂದ ಅವರಾಗಿಯೇ ರಾಜೀನಾಮೆ ನೀಡದಿದ್ದರೆ, ಸಂಪುಟ ವಿಸ್ತರಣೆ ವೇಳೆ ಮನವೊಲಿಸಿ ಕೈಬಿಡಬಹುದು ಎಂದು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದರು. ಇದರ ಸುಳಿವನ್ನರಿತ ಈಶ್ವರಪ್ಪ ರಾಜೀನಾಮೆ ನೀಡುವುದಾಗಿ ಘೊಷಣೆ ಮಾಡಿದ್ದಾರೆ.

ಶಿವಮೊಗ್ಗದಲ್ಲೆ ಸುದ್ದಿಗೋಷ್ಠಿ ನಡೆಸದ ಈಶ್ವರಪ್ಪ, ದೇವರನ್ನು ನಂಬಿದ್ದೇನೆ. 40% ಕಮಿಷನ್ ಆರೋಪದಿಂದ ಮುಕ್ತನಾಗಿ ಶೀಘ್ರವಾಗಿ ಹೊರಬರುತ್ತೇನೆ. ತನಿಖೆಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ. ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಕೇಂದ್ರ ಹಾಗೂ ರಾಜ್ಯದ ಎಲ್ಲ ನಾಯಕರಿಗೂ ಧನ್ಯವಾದ ಸಲ್ಲಿಸುವೆ. ಶುಕ್ರವಾರ ರಾಜೀನಾಮೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಹೆಚ್ಚಿನ ಓದಿಗಾಗಿ: Santosh Suicide: ಅಂತ್ಯಕ್ರಿಯೆ ಬೇಡವೆಂದ ಕಾಂಗ್ರೆಸಿಗರನ್ನು ತಡೆದ ಗ್ರಾಮಸ್ಥರು

Exit mobile version