Site icon Vistara News

Santro Ravi case | ಸ್ಯಾಂಟ್ರೋ ರವಿ ವಿರುದ್ಧ ಬೀದಿಗೆ ಇಳಿದ ಜೆಡಿಎಸ್‌ ಮಹಿಳಾ ಘಟಕ, ಮೈಸೂರಿನಲ್ಲಿ ಪ್ರತಿಭಟನೆ

JDS protest

ಮೈಸೂರು: ಸ್ಯಾಂಟ್ರೋ ರವಿ ಪ್ರಕರಣವನ್ನು ಬಿಜೆಪಿ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಲು ನಿರ್ಧರಿಸಿರುವ ಜೆಡಿಎಸ್‌ ಇದೀಗ ಬೀದಿಗೆ ಇಳಿದಿದೆ. ಸ್ಯಾಂಟ್ರೋ ರವಿ (Santro Ravi case) ವಿರುದ್ಧ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ಮೈಸೂರಿನ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡಸಲಾಗಿದೆ.

ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶಂಕರೇಗೌಡ ಸೇರಿದಂತೆ ಹಲವರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸ್ಯಾಂಟ್ರೋ ರವಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸರ್ಕಾರದಲ್ಲಿ ಶೋಷಿತರಿಗೆ ರಕ್ಷಣೆ ಇಲ್ಲ. ಬಿಜೆಪಿ ಸರ್ಕಾರ ಪಿಂಪ್‌ಗಳು, ರೌಡಿ ಶೀಟರ್‌ಗಳನ್ನು ರಕ್ಷಿಸುತ್ತಿದೆ. ರಾಜ್ಯ ಗೃಹ ಇಲಾಖೆ ಸ್ಯಾಂಟ್ರೋ ರವಿ ರಕ್ಷಣೆಗೆ ನಿಂತಿದೆ ಎಂದು ಆರೋಪಿಸಿದ ಮಹಿಳೆಯರು, ಈ‌ ಕೂಡಲೇ ಸ್ಯಾಂಟ್ರೋ ರವಿ ಬಂಧಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಜೆಡಿಎಸ್‌ ಕೈಗೆ ಅಸ್ತ್ರ
ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ರಾಜಕಾರಣಿಗಳು ಬಾಯಿ ಮಾತು, ಟ್ವೀಟ್‌ ಮೂಲಕ ಸೌಂಡ್‌ ಮಾಡುತ್ತಿದ್ದರೆ, ಜೆಡಿಎಸ್‌ ಅದನ್ನು ಬೀದಿಗೆ ತಂದಿದೆ. ನಿಜವೆಂದರೆ ಈ ಪ್ರಕರಣ ಇಷ್ಟೊಂದು ದೊಡ್ಡ ಸದ್ದು ಮಾಡುವಲ್ಲೂ ಜೆಡಿಎಸ್‌ ನಾಯಕ ಎಚ್.‌ಡಿ. ಕುಮಾರಸ್ವಾಮಿ ಅವರೇ ಮುಂಚೂಣಿಯಲ್ಲಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಹಾದಿಯಲ್ಲಿ ಮುಂಬಯಿಯಲ್ಲಿ ಬೀಡು ಬಿಟ್ಟಿದ್ದ ೧೭ ಶಾಸಕರಿಗೆ ಸ್ಯಾಂಟ್ರೋ ರವಿ ೧೨ ಮಂದಿ ಹುಡುಗಿಯರನ್ನು ಸಪ್ಲೈ ಮಾಡಿದ್ದ ಎಂದು ಕುಮಾರಸ್ವಾಮಿ ಆರೋಪಿಸುವ ಮೂಲಕ ಎಲ್ಲ ನಿದ್ದೆಗೆಡುವಂತೆ ಮಾಡಿದ್ದರು. ಸಚಿವ ಎಸ್‌ಟಿ ಸೋಮಶೇಖರ್‌ ಅವರು ಇದಕ್ಕೆ ತಿರುಗಿ ಮಾತನಾಡಿದಾಗ ಅವರು ಮತ್ತು ಸ್ಯಾಂಟ್ರೋ ರವಿ ಜತೆಗಿರು ಒಂದು ವಿಡಿಯೊವನ್ನು ಬಿಡುಗಡೆ ಮಾಡಿ ಬಾಯಿ ಮುಚ್ಚಿಸಿದರು. ಈ ರೀತಿ ಪ್ರಕರಣವನ್ನು ಚೆನ್ನಾಗಿ ರಾಜಕೀಯಕ್ಕೆ ಬಳಸುತ್ತಿದ್ದಾರೆ ಕುಮಾರಸ್ವಾಮಿ. ಜತೆಗೆ ತನ್ನನ್ನು ಕೆಣಕಿದ್ದಕ್ಕಾಗಿಯೇ ಈ ರೀತಿ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Santro Ravi case | ನ್ಯಾಯಾಧೀಶರ ಮುಂದೆ 164 ಹೇಳಿಕೆ ದಾಖಲಿಸಿದ ಸಂತ್ರಸ್ತೆ: ತಂಗಿಯ ಮೇಲೂ ದೌರ್ಜನ್ಯ

Exit mobile version