Site icon Vistara News

Santro Ravi case | ಗುಜರಾತ್‌ನಲ್ಲಿ ಸ್ಯಾಂಟ್ರೋ ರವಿ ಪತ್ತೆಗೆ ನೆರವಾಗಿದ್ದು ಯುವ ಪೊಲೀಸ್‌ ಆಫೀಸರ್‌ಗಳ ಕನೆಕ್ಷನ್

ಅಹಮದಾಬಾದ್‌ ಕ್ರೈಂ ಡಿಸಿಪಿ ಚೈತನ್ಯ ಮಾಂಡಲಿಕ್

ಬೆಂಗಳೂರು: ಕುಖ್ಯಾತ ಕ್ರಿಮಿನಲ್‌ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಯನ್ನು (Santro Ravi case) ಗುಜರಾತ್‌ನಲ್ಲಿ ಪತ್ತೆ ಹಚ್ಚಿ ಬಂಧಿಸಿದ ಪೊಲೀಸರು ಈ ನಿಟ್ಟಿನಲ್ಲಿ ಸಾಕಷ್ಟು ಸಾಹಸಗಳನ್ನು ಮಾಡಿದ್ದಾರೆ. ತಮ್ಮ ಎಲ್ಲ ಸಂಪರ್ಕಗಳನ್ನು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಇದ್ದಾನೆ ಎಂಬ ಸಣ್ಣ ಸುಳಿವು ಸಿಕ್ಕಿದ ಕೂಡಲೇ ಕರ್ನಾಟಕ ಪೊಲೀಸರು ಸಂಪರ್ಕಿಸಿದ್ದು ಅಲ್ಲಿ ಐಪಿಎಸ್‌ ಅಧಿಕಾರಿಯಾಗಿರುವ ಕ್ರೈಂ ಬ್ರ್ಯಾಂಚ್‌ ಡಿಸಿಪಿ ಚೈತನ್ಯ ಮಾಂಡಲಿಕ್‌ ಅವರನ್ನು. ಹಾಗಿದ್ದರೆ ಅವರ್ಯಾರು? ಅವರನ್ನೇ ಸಂಪರ್ಕಿಸಿದ್ದು ಯಾಕೆ? ಅವರೇನು ಮಾಡಿದರು ಎಂಬುದರ ವಿವರ ಇಲ್ಲಿದೆ.

೧೨ ದಿನದ ಹಿಂದೆ ಸ್ಯಾಂಟ್ರೋ ರವಿ ವಿರುದ್ಧ ಕೇಸು ದಾಖಲಾಗಿ ಕೆಲವೇ ದಿನಗಳಲ್ಲಿ ಅದು ತೀವ್ರ ಸ್ವರೂಪವನ್ನು ಪಡೆದಿತ್ತು. ಆಗ ಎಂಟ್ರಿ ಕೊಟ್ಟ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಎಸ್‌ಪಿಗಳನ್ನು ಸೇರಿಸಿಕೊಂಡು ಸ್ಯಾಂಟ್ರೋ ರವಿಗಾಗಿ ಹುಡುಕಾಟ ಶುರು ಮಾಡಿದ್ದರು.

ಈ ನಡುವೆ ಆತ ಕೇರಳ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳನ್ನು ದಾಟಿ ಗುಜರಾತ್‌ನ ಅಹಮದಾಬಾದ್‌ ತಲುಪಿದ್ದಾನೆ ಎಂಬ ಮಾಹಿತಿ ಲಭಿಸಿತು. ಆಗ ರಾಮನಗರ ಎಸ್‌ಪಿ ಕಣಕ್ಕಿಳಿದರು. ರಾಮನಗರ ಎಸ್‌ಪಿ ಆಗಿರುವ ಸಂತೋಷ್‌ ಬಾಬು ಅವರು ಮೊದಲು ಕರೆ ಮಾಡಿದ್ದು ಅಹಮದಾಬಾದ್‌ನ ಕ್ರೈಂ ಬ್ರಾಂಚ್‌ನಲ್ಲಿ ಡಿಸಿಪಿ ಆಗಿರುವ ಚೈತನ್ಯ ಮಾಂಡಲಿಕ್ ಅವರಿಗೆ.

ಈ ಸಂತೋಷ್‌ ಬಾಬು ಮತ್ತು ಚೈತನ್ಯ ಮಾಂಡಲಿಕ್ ಅವರು ಇಬ್ಬರೂ ೨೦೧೨ ರ ಬ್ಯಾಚ್ ನ ಐಪಿ ಎಸ್ ಅಧಿಕಾರಿಗಳು. ಆಗ ಆತ್ಮೀಯರಾಗಿದ್ದ ಇವರು ಆಮೇಲೂ ಸಂಪರ್ಕದಲ್ಲಿದ್ದರು. ಹೀಗಾಗಿ ಸಂತೋಷ್‌ ಬಾಬು ಆವರನ್ನು ಸಂಪರ್ಕಿಸಿದ್ದರು.

ಸ್ಯಾಂಟ್ರೋ ರವಿ ಅಹಮದಾಬಾದ್‌ನಲ್ಲಿ ಇರುವ ಮಾಹಿತಿಯನ್ನು ಸಂತೋಷ್ ಬಾಬು ಅವರು ನೀಡುತ್ತಿದ್ದಂತೆಯೇ ಡಿಸಿಪಿ ಚೈತನ್ಯ ಮಾಂಡಲಿಕ್ ಕೂಡಲೇ ಅಹಮದಾಬಾದ್‌ನ ಕ್ರೈಂ ಬ್ರ್ಯಾಂಚ್ ಸಿಬ್ಬಂದಿಗಳನ್ನು ಅಲರ್ಟ್‌ ಮಾಡಿದರು.

ಸ್ಯಾಂಟ್ರೋ ರವಿಯ ಇತ್ತೀಚಿನ ಫೋಟೊ, ಹಳೆ ಫೋಟೊ, ತಲೆ ಮರೆಸಿಕೊಳ್ಳಲು ಬಳಸಿರಬಹುದಾದ ಬೇರೆ ಬೇರೆ ತಂತ್ರಗಳನ್ನಾಧರಿಸಿದ ಫೋಟೊ ತೆಗೆದು ಚೈತನ್ಯ ಅವರಿಗೆ ಕಳುಹಿಸಿಕೊಡಲಾಗಿತ್ತು.

ಅತ್ತ ಅಹಮದಾಬಾದ್‌ ಪೊಲೀಸರು ಕೆಲವೊಂದು ನೆಟ್ವರ್ಕ್‌ ಆಧರಿಸಿ ಸ್ಯಾಂಟ್ರೋ ರವಿ ಎಂಬ ನೆಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಲಾಕ ಮಾಡಿದರು. ಅಲ್ಲಿಂದ ಫೋಟೊ ತೆಗೆದು ಕಳುಹಿಸಲಾಯಿತು. ಆಗ ಸಂತೋಷ್‌ ಬಾಬು ಅವರು ಸ್ಯಾಂಟ್ರೊ ರವಿಯ ಕಣ್ಣನ್ನು ನೋಡಿ ಆತನೇ ತಾವು ಹುಡುಕುತ್ತಿರುವ ಕ್ರಿಮಿನಲ್‌ ಎಂದು ಪತ್ತೆ ಹಚ್ಚಿದರು. ಅಷ್ಟರಲ್ಲಿ ಪುಣೆಯಿಂದ ಹೊರಟಿದ್ದ ಕರ್ನಾಟಕ ಪೊಲೀಸರ ಟೀಂ ಅಹಮದಾಬಾದ್ ತಲುಪಿ ಸ್ಯಾಂಟ್ರೋ ರವಿಯನು ಅರೆಸ್ಟ್ ಮಾಡಿತ್ತು.

ತಣ್ಣಗೆ ಒಪ್ಪಿಕೊಂಡಿದ್ದ ಕ್ರಿಮಿನಲ್‌
ಕರ್ನಾಟಕ ಪೊಲೀಸರು ನೀಡಿದ ಮಾಹಿತಿಯನ್ನು ಆಧರಿಸಿ ಅಹಮದಾಬಾದ್ ಕ್ರೈಂ ಬ್ರ್ಯಾಂಚ್ ಪೊಲೀಸರು ನಿಗದಿತ ಜಾಗವನ್ನು ತಲುಪಿದ್ದರು. ಅರ ಕೈಗೆ ತಗಲಾಕಿಕೊಂಡ ಕ್ರಿಮಿನಲ್‌ ಯಾವುದೇ ಪ್ರತಿರೋಧವಿಲ್ಲದೆ ಶರಣಾಗಿದ್ದ. ಅವರು ʻಬಾರಪ್ಪ; ಅಂತಾ ಸೀದಾ ಕರೆದುಕೊಂಡು ಹೋಗಿ ಡಿಸಿಪಿ ಮುಂದೆ ನಿಲ್ಲಿಸಿದ್ದರು.
ನಾನೆ ಸ್ಯಾಂಟ್ರೋ ರವಿ ಎಂದು ಅಹಮದಾಬಾದ್ ಕ್ರೈಂ ಬ್ರ್ಯಾಂಚ್ ಪೊಲೀಸರ ಒಪ್ಪಿಕೊಂಡಿದ್ದ ಆತ.

ಹಾಗೆ ಅರೆಸ್ಟ್‌ ಮಾಡಲಾದ ಸ್ಯಾಂಟ್ರೋ ರವಿಯನ್ನು ಕೋರ್ಟ್‌ಗೆ ಕರೆದೊಯ್ದು ಹಾಜರುಪಡಿಸಿದ ಪೊಲೀಸರು ಮಧ್ಯರಾತ್ರಿ ವೇಳೆಗೆ ಅಹಮದಾಬಾದ್‌ನಿಂದ ವಿಮಾನ ಮೂಲಕ ಬೆಂಗಳೂರಿಗೆ ಅಲ್ಲಿಂದ ರಸ್ತೆ ಮಾರ್ಗವಾಗಿ ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ | Santro Ravi case | ತಲೆತಪ್ಪಿಸಿ ಓಡಾಡುತ್ತಿದ್ದ ಸ್ಯಾಂಟ್ರೋ ರವಿ ಬಂಧನ ಆಗಿದ್ದು ಹೀಗೆ!

Exit mobile version