Site icon Vistara News

Santro Ravi case | ರಾಜಕಾರಣಿಗಳ ಜತೆ ಸ್ಯಾಂಟ್ರೋ ರವಿ ನಂಟು: 20 ವರ್ಷಗಳ ಇತಿಹಾಸದ ಬಗ್ಗೆ ತನಿಖೆ ಎಂದ ಬೊಮ್ಮಾಯಿ

CM Basavaraja bommai

ಮೈಸೂರು: ಈಗ ಭಾರಿ ಸುದ್ದಿಯಲ್ಲಿರುವ ಮೈಸೂರಿನ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿಗೆ ರಾಜಕಾರಣಿಗಳ ಜತೆಗೆ ಇರುವ ನಂಟಿನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಳೆದ 20 ವರ್ಷಗಳಿಂದ ಎಲ್ಲ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ (Santro Ravi case) ನಂಟಿದೆ. ಸದ್ಯ ದೂರು ಆಧರಿಸಿ ನಿಷಕ್ಷಪಾತ ತನಿಖೆ ನಡೆಸುತ್ತೇವೆ. ವಿಪಕ್ಷ ನಾಯಕರ ಲಿಂಕ್ ಕುರಿತು ತನಿಖೆ ನಡೆಯಲಿದೆ ಎಂದು ಹೇಳಿದರು ಬೊಮ್ಮಾಯಿ.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ʻʻಆಡಿಯೊ, ವಿಡಿಯೊ ಬಿಡುಗಡೆ ವಿಚಾರ ಇಟ್ಡುಕೊಂಡೆ ತನಿಖೆ ಮಾಡುತ್ತೇವೆ. ನಾವು ಆತನನ್ನು ಬಂಧಿಸಿ ಆತನ ಹೇಳಿಕೆ ಮೇಲೆ ಎಲ್ಲವನ್ನೂ ತನಿಖೆ ಮಾಡುತ್ತೇವೆ. 20 ವರ್ಷಗಳ ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಲು ತಿಳಿಸಿದ್ದೇನೆ. ಮೈಸೂರು ಪೊಲೀಸ್ ಆಯುಕ್ತ ರಮೇಶ್ ಅವರಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಅವನಿಗೆ ತಕ್ಕ ಶಿಕ್ಷೆ ಕೊಡುವ ಕೆಲಸ ಮಾಡುತ್ತೇವೆʼʼ ಎಂದು ಹೇಳಿದರು.

ಸಂಬಂಧ ಅಲ್ಲಗಳೆದ ಬೊಮ್ಮಾಯಿ
ಸರ್ಕಾರದ ಪ್ರಭಾವಿಗಳೊಂದಿಗೆ ಸ್ಯಾಂಟ್ರೊ ರವಿ ನಂಟು ಹೊಂದಿದ್ದಾನೆ ಎಂಬುದನ್ನು ಸಿಎಂ ಅಲ್ಲಗಳೆದರು. ʻʻಸಿಎಂ ಆಗಿ ನಾನು ಹಲವರ ಬಳಿ ಮಾತನಾಡಿರುತ್ತೇನೆ. ಅವರ ಹಿನ್ನೆಲೆಯನ್ನೆಲ್ಲ ತಿಳಿದುಕೊಂಡು ಇರಲು ಸಾಧ್ಯವಿಲ್ಲ.
ಸದ್ಯ ಡಿಜಿಟಲ್ ತಂತ್ರಜ್ಞಾನದಲ್ಲಿ ಯಾವ ರೀತಿ ಬೇಕಾದರೂ ಫೋಟೊ ಬಳಕೆ ಮಾಡಬಹುದು. ಆದರೂ ತನಿಖೆ ಬಳಿಕ ನಿಜವಾದ ಬಣ್ಣ ಬಯಲಾಗಲಿದೆʼʼ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ʻʻಮೊಬೈಲ್, ತಂತ್ರಜ್ಞಾನ ಬಳಸಿಕೊಂಡು ಏನು ಬೇಕಾದರೂ ಕ್ರಿಯೇಟ್ ಮಾಡಬಹುದು. ವಾಟ್ಸ್‌ ಆಪ್‌ನಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು. ನಾನು ನಿತ್ಯವೂ ಯಾರ‍್ಯಾರೊಂದಿಗೋ ಮಾತನಾಡುತ್ತೇನೆ. ಅವರ ಎಲ್ಲರ ಹಿನ್ನೆಲೆ ಚೆಕ್ ಮಾಡಿಕೊಂಡು ಇರೋದಿಕ್ಕೆ ಆಗಲ್ಲʼʼ ಎಂದರು ಬೊಮ್ಮಾಯಿ.

ಕಾಂಗ್ರೆಸ್‌-ಜೆಡಿಎಸ್‌ ಲೇವಡಿ
ಸ್ಯಾಂಟ್ರೋ ರವಿ ಯಾರೆಂದೇ ಗೊತ್ತಿಲ್ಲ ಎಂದು ಈ ಹಿಂದೆಯೂ ಸಿಎಂ ಹೇಳಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಅವರನ್ನು ಲೇವಡಿ ಮಾಡಿದ್ದವು. ʻʻನಿಮ್ಮ ಮಗನನ್ನು ಅವನು ಸ್ವೀಟ್‌ ಬ್ರದರ್‌ ಅಂತಾನೆ. ಸಚಿವ ಸಂಪುಟದ ಪ್ರಭಾವಿ ಮಂತ್ರಿಗಳ ಜತೆ ಅವನಿಗೆ ಸಂಪರ್ಕವಿದೆ. ನೀವು ಸಂಬಂಧವಿಲ್ಲ ಅಂತೀರಿ, ಅದು ಹೇಗೆʼʼ ಎಂದು ಕೇಳಿದ್ದವು.

ಇದನ್ನೂ ಓದಿ | Santro Ravi case | ನಿವೃತ್ತ ಐಎಎಸ್‌ ಅಧಿಕಾರಿಗಳ ಬಳಿಗೂ ಕಳಿಸ್ತಿದ್ದ: ಸಂತ್ರಸ್ತ ಮಹಿಳೆಯಿಂದ ಗಂಭೀರ ಆರೋಪ

Exit mobile version