Site icon Vistara News

Satish Jarakiholi | ಮಹರ್ಷಿ ವಾಲ್ಮೀಕಿಗೆ ಸತೀಶ್‌ ಜಾರಕಿಹೊಳಿ ಅವಮಾನ ಮಾಡಿದ್ದಾರೆ: ಪ್ರಮೋದ್‌ ಮುತಾಲಿಕ್‌

Belagavi Shootout

ಶಿವಮೊಗ್ಗ: ಹಿಂದು ಪದಕ್ಕೆ ಪರ್ಷಿಯನ್‌ ಭಾಷೆಯಲ್ಲಿ ಕೀಳು ಅರ್ಥವಿದೆ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌, ಈ ಮೂಲಕ ಮಹರ್ಷಿ ವಾಲ್ಮೀಕಿಯವರನ್ನು ಅವಮಾನಿಸಲಾಗಿದೆ ಎಂದಿದ್ದಾರೆ.

ಜಾರಕಿಹೊಳಿ ಹೇಳಿಕೆ ಅತ್ಯಂತ ಖಂಡನೀಯವಾದದ್ದು. ಜಾರಕಿಹೊಳಿ ಅಜ್ಞಾನ ಪ್ರದರ್ಶನ ಮಾಡುತ್ತಿರುವುದಕ್ಕೆ ನಿದರ್ಶನ. ಹಿಂದು ಪದ ಜಗತ್ತಿನ ತುಂಬಾ ಹರಡಿದೆ. ಭಾರತದ ಮುಸ್ಲಿಮರು ಯಾವುದೇ ದೇಶಕ್ಕೆ ಹೋದರೆ ಹಿಂದು ಮುಸ್ಲಿಂ ಎಂದು ಕರೆಯುತ್ತಾರೆ.

ಹಿಂದು ಶಬ್ದ ಕೀಳು ಎಂದು ಯಾವ ಅರ್ಥದಲ್ಲಿ ಹೇಳಿದರು ಎಂದು ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಜಾರಕಿಹೊಳಿ ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಇಡೀ ದೇಶದಲ್ಲಿ ಹಿಂದುಗಳು ಇವರನ್ನು ತುಳಿದಿದ್ದಾರೆ. ಈಗ ಇನ್ನೂ ಪಕ್ಕಕ್ಕೆ ಹೋಗುತ್ತಾರೆ.

ಮುಸ್ಲಿಂ ಓಟಿಗೋಸ್ಕರ ಹಿಂದುಗಳಿಗೆ ಅವಹೇಳನ ಮಾಡುತ್ತಿರುವುದು ಅತ್ಯಂತ ನೀಚ ಕೆಲಸ. ಹಿಂದು ಎಂದರೆ ಒಂದು ಜೀವನ ಕಲೆ ಎಂದು ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದೆ. ಹಾಗಿದ್ದರೆ ಸುಪ್ರೀಂ ಕೋರ್ಟ್ ಮೂರ್ಖರ? 400 ವರ್ಷಗಳ ಹಿಂದೆಯೇ ಹಿಂದು ಶಬ್ದದ ಉಲ್ಲೇಖ ಇದೆ.

ಹಿಂದು ಧರ್ಮವನ್ನು ಒಡೆಯುವ, ಹಿಂದು ಧರ್ಮವನ್ನು ಕೆಟ್ಟದಾಗಿ ಬಿಂಬಿಸುವ ಜಾರಕಿಹೊಳಿ ಒಬ್ಬ ನಾಸ್ತಿಕ. ದೇವರು, ಧರ್ಮ ಇವರಿಗೆ ಬೇಕಿಲ್ಲ, ಕೇವಲ ಮತಗಳು ಬೇಕಿದೆ. ಹಿಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸತೀಶ್ ಜಾರಕಿಹೋಳಿ ಕ್ಷಮೆ ಕೇಳಬೇಕು. ಮುಂದಿನ ಚುನಾವಣೆಯಲ್ಲಿ ಇದೇ ಹಿಂದು ಶಬ್ದ ಸತೀಶ್ ಜಾರಕಿಹೊಳಿಗೆ ಮಣ್ಣು ಮುಕ್ಕಿಸುತ್ತದೆ.

ಸತೀಶ್ ಜಾರಕಿಹೊಳಿ ಪ್ರತಿವರ್ಷ ಅಂಬೇಡ್ಕರ್ ನಿರ್ವಾಣ ದಿನವನ್ನು ಸ್ಮಶಾನದಲ್ಲಿ ಮಾಡುತ್ತಾರೆ. ಸ್ಮಶಾನದಲ್ಲಿ ಶುಭಕಾರ್ಯ ಮಾಡಿ ಹಿಂದು ವಿರೋಧಿ ನೀತಿ ಮಾಡಿ ತಮ್ಮ ಮಾನಸಿಕತೆಯನ್ನು ತೋರುತ್ತಿದ್ದಾರೆ. ಅವರು ಪಕ್ಕಾ ಹಿಂದೂ ವಿರೋಧಿಯಾಗಿ ಈ ರೀತಿ ಮಾಡಿದ್ದಾರೆ. ರಾಮಾಯಣವನ್ನು ಬರೆದವರು ವಾಲ್ಮೀಕಿ ಜನಾಂಗದವರು. ಅಂತಹ ಜಾತಿಯಲ್ಲಿ ಹುಟ್ಟಿದ ಜಾರಕಿಹೊಳಿ ವಾಲ್ಮೀಕಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ | Satish Jarakiholi | ಹಿಂದು ಬಗ್ಗೆ ನಾನು ಹೇಳಿದ್ದೇ ಸರಿ, ಕ್ಷಮೆ ಕೇಳೋದಿಲ್ಲ ಎಂದ ಸತೀಶ್ ಜಾರಕಿಹೊಳಿ

Exit mobile version