ಬೆಂಗಳೂರು: ಕಳೆದ ಎರಡು ವರ್ಷಗಳ ಕೊರೋನಾ ನೆರಳಿನಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಅವರಿಸಿದ್ದ ಅಂಧಕಾರ ಕಳೆದು ಈ ವರ್ಷ ಸಾಮಾನ್ಯ ರೀತಿಯಲ್ಲಿ ಶಾಲೆಗಳು ಆರಂಭವಾಗಿವೆ. 2022-23ನೇ ಶೈಕ್ಷಣಿಕ ವರ್ಷದ ಶಾಲೆಗಳನ್ನು ರಾಜ್ಯಾದ್ಯಂತ ಸೋಮವಾರದಿಂದ ಆರಂಭಿಸಲಾಗಿದೆ. ಎಲ್ಲ ಜಿಲೆಲಗಳಲ್ಲೂ ಮಕ್ಕಳು ಸಂತೋಷವಾಗಿ ಶಾಲೆಗಳಿಗೆ ಆಗಮಿಸಿದ್ದಾರೆ.
ಕೊರೋನಾ ಸಮಯದಲ್ಲಿ ಮಕ್ಕಳಮುಖವನ್ನೇ ನೋಡದೆ ಆನ್‌ಲೈನ್, ವಿಡಿಯೋ ಪಾಠಗಳಲ್ಲಿ ಮಗ್ನರಾಗಿದ್ದ ಶಿಕ್ಷಕರಿಗೇ ಹೆಚ್ಚು ಆನಂದವಾಗಿದೆ. ಶಾಲೆಗಳ ಮುಂದೆ ರಂಗೋಲಿ ಬಿಡಿ, ಹೂ ಮಳೆಯೊಂದಿಗೆ ಮಕ್ಕಳನ್ನು ಅನೇಕ ಶಾಲೆಗಳಲ್ಲಿ ಸ್ವಾಗತಿಸಲಾಗಿದೆ. ಮೊದಲ ದಿನವಾದ್ದರಿಂದ ಹಾಜರಾತಿ ಕಡಿಮೆ ಇತ್ತು.
ಶಾಲಾ ಬೆಲ್ ಹೊಡೆಯುತ್ತಿದ್ದಂತೆ ಸಾಲಾಗಿ ಮಕ್ಕಳು ಬಂದು ರಾಷ್ಟ್ರಗೀತೆ ಹಾಡಿದರು. ಮಕ್ಕಳಿಗೆ ಶಿಕ್ಷಕರು ಚಾಕ್ಲೆಟ್ ಹೂವು ನೀಡಿ ಸ್ವಾಗತ ಕೋರಿದರು. ಮಕ್ಕಳನ್ನು ಅಕ್ಕರೆಯಿಂದ ಮಾತಾನಾಡಿಸಿ ಅವರಿಗೆ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ಹೇಳಿ ಕೈಗೆ ಸ್ಯಾನಿಟೈಸರ್ ಮತ್ತು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು.
ಇದನ್ನೂ ಓದಿ| ಮೇ 19ಕ್ಕೆ SSLC ಫಲಿತಾಂಶ ಪ್ರಕಟ, ಮೇ 16ರಿಂದಲೇ ಶಾಲೆಗಳ ಆರಂಭ ಎಂದ ಶಿಕ್ಷಣ ಸಚಿವ ನಾಗೇಶ್
ವಿವಿಧ ಹಲವು ಊರಿನಲ್ಲಿ ಶಾಲೆಯ ಸಂಭ್ರಮ ಓ ಸಂಭ್ರಮ
ಕೊಡಗು: ಜಿಲ್ಲೆಯಲ್ಲಿ ಇಂದಿನಿಂದ ಶಾಲೆ ಆರಂಭದ ಹಿನ್ನಲೆಯಲ್ಲಿ ಶಾಲೆಗಳತ್ತ ಚಿಣ್ಣರು ಹೆಚ್ಚೆ ಹಾಕಿದರು. ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗಾರಮಾಡಲಾಗಿತ್ತು. 381 ಪ್ರಾಥಮಿಕ ಮತ್ತು 47 ಫ್ರೌಢಶಾಲೆಗಳು ಆರಂಭವಾಗಿದ್ದು, ಖುಷಿ ಖುಷಿಯಿಂದಲೇ ಶಾಲೆಗಳತ್ತ ಮುಖಮಾಡಿ ವಿದ್ಯಾರ್ಥಿಗಳು ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮೊದಲನೇ ದಿನ ಶಾಲೆಯ ಗೇಟ್‌ವರೆಗೆ ಮಕ್ಕಳನ್ನ ಬಿಟ್ಟು ಹೋಗುತ್ತಿದ್ದ ಪೋಷಕರ ಮುಖದಲ್ಲಿ ಸಂತಸ ಮೂಡಿತ್ತು.
ಕೊಪ್ಪಳ: ಶಾಲಾರಂಭದ ಮೊದಲ ದಿನವಾಗಿದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಶಾಲೆಗೆ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಆಗಮಿಸಿದರು. ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶಾಲೆಗೆ ಬಂದ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಸಿಪಿಎಸ್ ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಮೇಲೆ ಹೂ ಹಾಕಿ, ಡೊಳ್ಳು ಬಾರಿಸುತ್ತಾ ಶಾಲೆಗೆ ಸ್ವಾಗತಿಸಿದರು. ರಂಗೋಲಿ ಹಾಕಿ ತಳಿರು ತೋರಣದಿಂದ ಶಾಲೆಯ ಮುಂಭಾಗ, ಕೊಠಡಿಗಳನ್ನು ಅಲಂಕರಿಸಿದರು. ಜಿಲ್ಲೆಯಲ್ಲಿ 161 ಪ್ರೌಢಶಾಲೆಗಳು, 361 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 541 ಹಿರಿಯ ಪ್ರಾಥಮಿಕ ಶಾಲೆಗಳು ಇದ್ದು. ಈ ಶಯಕ್ಷಣಿಕ ವರ್ಷದಲ್ಲಿ ಒಟ್ಟು 3,0,8000 ವಿದ್ಯಾರ್ಥಿಗಳಿದ್ದಾರೆ.
ವಿಜಯಪುರ: ಶಾಲೆಯ ಇಡೀ ಆವರಣವನ್ನು ಹೆಡ್ ಮಾಸ್ಟರ್ ಜಗದೀಶ ಅಕ್ಕಿ ಅವರು ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದರು. ನಗರದ ಶಿಖಾರಖಾನೆಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದ ದೃಶ್ಯ ಇದು. ಮಕ್ಕಳನ್ನು ಸ್ವಾಗತಕ್ಕೆ ಶಾಲೆಯನ್ನ ಹೂವು ಮತ್ತು ರಂಗೋಲಿ ಹಾಕಿ ಶಿಕ್ಷಕರು ಸಿಂಗರಿಸಿದ್ದರು. ʼಮುದ್ದು ಮಕ್ಕಳೆ ಶಾಲೆಗೆ ಸ್ವಾಗತʼ ಶಿಕ್ಷಕಿಯರು ಎಂದು ರಂಗೋಲಿ ಬಿಡಿಸಿದ್ದು ಮತ್ತೂ ವಿಶೇಷವಾಗಿತ್ತು.
ಉಡುಪಿ: ಜಿಲ್ಲೆಯಲ್ಲಿ ಶಾಲೆಗಳಿಗೆ ಮಕ್ಕಳನ್ನು ಶಿಕ್ಷಕರು ಸಂಬ್ರಮದಿಂದ ಬರಮಾಡಿಕೊಂಡರು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅರೆಶಿರೂರು ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಮಾವಿನ ತೋರಣ ಮಾಡಿ, ವಿಧ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಿ ಮತ್ತು ರಂಗೋಲಿಯನ್ನು ಸ್ಥಳೀಯರು ಹಾಕಿದ್ದರು. ಸ್ವಾಗತ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗಿಯಾದರು.
ಇದನ್ನೂ ಓದಿ| ಸೈನಿಕ ಶಾಲೆ ಪ್ರಾಚಾರ್ಯರಾಗಿ ಕ್ಯಾಪ್ಟನ್ ಪ್ರತಿಭಾ ಬಿಷ್ಟ ನೇಮಕ