Site icon Vistara News

School Reopen: ಇಂದಿನಿಂದ ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢಶಾಲೆ ಆರಂಭ

school reopen

ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢ ಶಾಲೆಗಳು (government schools) ಪುನಾರಂಭಗೊಳ್ಳಲಿವೆ. ಶೈಕ್ಷಣಿಕ ಮಾರ್ಗಸೂಚಿಯಂತೆ ಇಂದು ಮತ್ತೆ ನಾಳೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಮಾಡಲು ಸಕಲ ತಯಾರಿ (school reopen) ಮಾಡಿಕೊಳ್ಳಲಾಗಿದೆ.

ಏಪ್ರಿಲ್ 11ರಿಂದ ಮೇ 28ರವರೆಗೆ ಮಕ್ಕಳಿಗೆ ಬೇಸಿಗೆ ರಜೆ ನೀಡಲಾಗಿದ್ದು, ಇಂದಿನಿಂದ ಶಾಲೆಗಳು ಮರಳಿ ಆರಂಭವಾಗುತ್ತಿವೆ. ಶಾಲೆಯನ್ನು ಸ್ವಚ್ಛಗೊಳಿಸಿ ಶೃಂಗಾರ ಮಾಡಲು ಸಿಬ್ಬಂದಿಗೆ 2 ದಿನ ಟೈಮ್ ನೀಡಲಾಗಿದೆ.

ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ ಹಲವು ಸೂಚನೆ ನೀಡಲಾಗಿದೆ. ಆಟದ ಮೈದಾನ, ತರಗತಿ, ಲೈಬ್ರೆರಿ ಪ್ರತಿಯೊಂದನ್ನೂ ಸ್ವಚ್ಛಗೊಳಿಸಿ ಸಜ್ಜು ಮಾಡಬೇಕು. ಮಕ್ಕಳು ಪಾಠ ಕೇಳಲು ಸೂಕ್ತ ಆರೋಗ್ಯಕರ ವಾತಾವರಣ ನಿರ್ಮಾಣ, ಶಾಲಾ ಕೊಠಡಿ, ಕಾಂಪೌಂಡ್ ಸೇರಿ ಮಳೆಯಿಂದ ಹಾನಿಯಾದ ಜಾಗ ದುರಸ್ತಿ ಮಾಡಬೇಕು. ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಸುರಕ್ಷಾ ಕ್ರಮ ಕೈಗೊಳ್ಳಬೇಕು ಸೂಚನೆ ನೀಡಲಾಗಿದೆ.

ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್, ಸಿಹಿ ನೀಡಿ ವೆಲ್‌ಕಮ್‌ ಮಾಡಬೇಕು. ಮೊದಲ ದಿನ ಬಿಸಿಯೂಟದಲ್ಲಿ ಕಡ್ಡಾಯವಾಗಿ ಸಿಹಿ ಇರಲೇಬೇಕು. ಶಾಲೆಗೆ ಬಾರದ ಮಕ್ಕಳು, ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳನ್ನು ಕರೆ ತರುವ ಪ್ರಯತ್ನ ಮಾಡಬೇಕು. ಈ ಬಗ್ಗೆ ಗ್ರಾಮಗಳಲ್ಲಿ ಜಾಥಾ ಮಾಡಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಪ್ರತೀ ಶಾಲೆಯಲ್ಲಿ ಕೂಡ ಕಡ್ಡಾಯವಾಗಿ SDMC ಸಭೆ ನಡೆಸಿ ಮಕ್ಕಳನ್ನು ಸ್ವಾಗತಿಸಲು ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ.

ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿಗೆ ಈಗಾಗಲೇ ವಿಶೇಷ ಆಂದೋಲನ ಮಾಡಲಾಗಿದೆ. ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ನಿಗದಿತ ವಯೋಮಾನದ ಮಕ್ಕಳು ಹಾಗೂ ಪಾಲಕರನ್ನು ಮನವೊಲಿಸಿ ಶಾಲೆಗೆ ದಾಖಲಿಸಬೇಕು. ಶಾಲೆ ಬಿಟ್ಟ ಮಕ್ಕಳು ಇದ್ದರೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದು ಮರಳಿ ಶಾಲೆಗೆ ದಾಖಲಿಸಿ ಮುಖ್ಯವಾಹಿನಿಗೆ ತರಬೇಕು ಎಂದು ಶಾಲೆಗಳಿಗೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ.

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಕರಪತ್ರ, ಬ್ಯಾನರ್, ಫ್ಲೆಕ್ಸ್‌ಗಳನ್ನು ನೀಡುವ ಮೂಲಕ ಮನವೊಲಿಕೆ ಮಾಡಲು, ದಿನಪತ್ರಿಕೆ, ರೇಡಿಯೋ, ಸಮೂಹ ಮಾಧ್ಯಮದ ಮೂಲಕ ಶಾಲಾ ಆರಂಭದ ಕುರಿತು ಮಾಹಿತಿ ನೀಡಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ: Unauthorized schools: ಅನಧಿಕೃತ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಸಮರ; 45 ದಿನದೊಳಗೆ ಶಾಲೆ ಮುಚ್ಚಿಸಿ ವರದಿ ನೀಡಲು ಸೂಚನೆ

Exit mobile version