ಮೈಸೂರು: ಲೋಕಸಭೆಯಲ್ಲಿ ಭದ್ರತೆ ಉಲ್ಲಂಘಿಸಿ (Security Breach in Lok Sabha) ಸ್ಮೋಕ್ ಬಾಂಬ್ (Smoke Bomb) ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಮೈಸೂರಿನ ಮನೋರಂಜನ್ (Manoranjan) ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದು, ಆತನ ಪೋಷಕರಿಗೂ ಪೊಲೀಸರ ಪ್ರಶ್ನೆಗಳ ಸುರಿಮಳೆ ಮುಂದುವರಿದಿದೆ.
ದೆಹಲಿ ಪೊಲೀಸರು ಮನೋರಂಜನ್ ಪೋಷಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪೋಷಕರನ್ನು ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆಗೆ ಪೋಷಕರಿಗೆ ಸಾಲು- ಸಾಲು ಪ್ರಶ್ನೆಗಳನ್ನು ಹಾಕಲಾಗಿದೆ. ತಂದೆ- ತಾಯಿಯನ್ನು ಪ್ರತ್ಯೇಕವಾಗಿ ಕರೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸ್ಥಳೀಯ ಭಾಷಾಂತರಕಾರರಿಂದ ತಂದೆ- ತಾಯಿಗೆ ಪ್ರಶ್ನೆ ಹಾಕಿಸಲಾಗಿದ್ದು, ತಾವು ನೀಡಿದ ಹೇಳಿಕೆಗಳನ್ನು ವಿಡಿಯೋ ಮೂಲಕ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮನೋರಂಜನ್ ಮನೆಯಿಂದ ಆತ ಓದುತ್ತಿದ್ದ ಪುಸ್ತಕಗಳು, ಶಾಲಾ- ಕಾಲೇಜು ದಾಖಲೆಗಳು ಇತ್ಯಾದಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಎರಡು ದಿನಗಳ ಕಾಲ ಮನೋರಂಜನ್ ತಂದೆ ದೇವರಾಜೇ ಗೌಡರಿಗೆ ಪೊಲೀಸರು ಕೇಳಿದ ಪ್ರಶ್ನೆಗಳ ಕೆಲವು ಸ್ಯಾಂಪಲ್‌ಗಳು ಇಲ್ಲಿವೆ:
1) ನಿಮ್ಮ ಸ್ವಂತ ಊರು ಯಾವುದು? ಮೈಸೂರಿಗೆ ಬಂದು ಎಷ್ಟು ವರ್ಷಗಳಾಯಿತು?
2) ನಿಮ್ಮ ಉದ್ಯೋಗ ಏನು?
3) ಜೀವನಕ್ಕಾಗಿ ಏನು ಮಾಡುತ್ತಿದ್ದೀರಿ?
4) ನಿಮ್ಮ ಹಣಕಾಸಿನ ಮೂಲ ಯಾವುದು?
5) ನಿಮ್ಮ ಮಗ ಮನೋರಂಜನ್ ಎಲ್ಲೆಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ?
6) ನಿಮ್ಮ ಮಗ ಎಂಜಿನಿಯರಿಂಗ್ ಯಾಕೆ ಅರ್ಧಕ್ಕೆ ನಿಲ್ಲಿಸಿದ್ದರು?
7) ನಿಮ್ಮ ಮಗ ಎಂಟು ವರ್ಷದಿಂದ ಮನೆಯಲ್ಲಿಯೇ ಇದ್ದರಾ?
8) ಏಕೆ ಅವರು ಎಲ್ಲಿಯೂ ಕೆಲಸಕ್ಕೆ ಸೇರಿಸಲಿಲ್ಲ.
9) ನಿಮ್ಮ ಮಗಳಿಗಿಂತ ಮಗ ದೊಡ್ಡವನಾದರೂ, ಯಾಕೆ ಅವರಿಗೆ ಮದುವೆ ಮಾಡಿಲ್ಲ.
10) ನಿಮ್ಮ ಮಗ ವಿದೇಶಕ್ಕೆ ಯಾಕೆ ಹೋಗಿದ್ದರು?
11) ನಿಮ್ಮ ಮಗನಿಗೆ ಹಣ ಎಲ್ಲಿಂದ ಬರ್ತಿತ್ತು?
12) ನೀವು ಆತನಿಗೆ ಹಣ ಕೊಡುತ್ತಿದ್ದರೆ ?
13) ತಿಂಗಳಿಗೆ ಅವರಿಗೆ ಎಷ್ಟು ಹಣ ಕೊಡುತ್ತಿದ್ದಿರಿ?
14) ಅವರ ಪಾಸ್ ಬುಕ್, ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ?
15) ಅವರ ಸ್ನೇಹಿತರ ಬಗ್ಗೆ ವಿವರ ಕೊಡಿ?
16) ಸಾಗರ್ ಶರ್ಮಾ ಯಾವಾಗ ಬಂದಿದ್ದ ?
17) ಸಾಗರ್ ಶರ್ಮಾ ಹೇಗೆ ಪರಿಚಯಿಸಿಕೊಂಡಿದ್ದ ?
18) ಸಾಗರ್ ಶರ್ಮಾನಿಗೂ ನಿಮ್ಮ ಮಗನಿಗೂ ಹೇಗೆ ಸಂಬಂಧ?
19) ಸಾಗರ್ ಶರ್ಮಾ ನಿಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿದ್ದನೇ ?
20) ಸಾಗರ್ ಶರ್ಮಾ ನಿಮ್ಮ ತೋಟದ ಮನೆಯಲ್ಲಿ ಉಳಿದುಕೊಂಡಿದ್ದರೆ?
21) ಸಂಸದ ಪ್ರತಾಪಸಿಂಹ ಹೇಗೆ ಪರಿಚಯ? ಅವರ ಬಳಿ ಪಾಸ್ ಹೇಗೆ ಪಡೆದುಕೊಂಡ್ರಿ?
22) ಮನೋರಂಜನ್ ಬಗ್ಗೆ ಈಗ ನಿಮ್ಮ ಅಭಿಪ್ರಾಯ ಏನು?
ಮನೋರಂಜನ್ ತಾಯಿಗೆ ಕೇಳಿದ ಪ್ರಶ್ನೆಗಳು:
1) ನಿಮ್ಮ ಹಾಗೂ ಮಗನ ನಡುವೆ ಹೊಂದಾಣಿಕೆ ಹೇಗಿತ್ತು?
2) ನಿಮ್ಮ ಮಗ ಮನೆಗೆ ಎಷ್ಟೊತ್ತಿಗೆ ಬರ್ತಿದ್ದರು?
3) ಬೆಂಗಳೂರಿಗೆ ಆಗ್ಗಾಗ್ಗೆ ಏಕೆ ಹೋಗುತ್ತಿದ್ದರು?
4) ಮಗನಿಗೆ ನೀವು ಹಣ ನೀಡುತ್ತಿದ್ರಾ?
5) ಸಾಗರ್ ಶರ್ಮಾ ಬಂದಿದ್ರಾ? ಆ ಸಂದರ್ಭದಲ್ಲಿ ನಿಮ್ಮ ಬಳಿ ಮಾತನಾಡಿದ್ರಾ? ಏನೇನು ಹೇಳಿದ್ದರು?
6) ಸಾಗರ್ ಶರ್ಮಾ ಯಾವಾಗ ದೆಹಲಿಗೆ ತೆರಳಿದ್ದರು? ಎಷ್ಟು ಬಾರಿ ತೆರಳಿದ್ದರು?
7) ನಿಮ್ಮ ಮಗ ವ್ಯಾಸಂಗ ಮುಗಿಸಿದ ಮೇಲೆ ಮನೆಯಲ್ಲಿಯೇ ಏಕೆ ಇದ್ರು?
8) ನಿಮ್ಮ ಮಗ ಬಳಸುತ್ತಿದ್ದ ಫೋನ್ ಯಾವುದು? ಅವರು ಯಾರ ಜೊತೆ ಹೆಚ್ಚು ಇದ್ರು?
9) ದೆಹಲಿಗೆ ಹೋಗುವ ಮುನ್ನ ಏನಾದರೂ ಮಾತನಾಡಿದ್ರಾ?
10) ಮನೆಯಲ್ಲಿ ಮನೋರಂಜನ್ ಹೇಗೆ ಇರ್ತಿದ್ರು?
11) ನಿಮ್ಮ ಮಗನ ಬಗ್ಗೆ ಈಗ ನಿಮ್ಮ ಅಭಿಪ್ರಾಯ ಏನು?
12) ನಿಮ್ಮ ಮಗನ ಹವ್ಯಾಸಗಳೇನು?
13) ಬಾಕ್ಸಿಂಗ್ ಬಗ್ಗೆ ಬಿಟ್ರೆ ಬೇರೆ ಆಸಕ್ತಿ ಏನಿತ್ತು?
14) ಅವರು ಓದುತ್ತಿದ್ದ ಪುಸ್ತಕ ಇನ್ನೂ ಇವೆಯಾ?
15) ನಿಮ್ಮ ಮಗನ ಹಣದ ವ್ಯವಹಾರ ಏನು?
ಇದನ್ನೂ ಓದಿ: Security Breach in Lok Sabha: ಮನೋರಂಜನ್ ಕುಟುಂಬಸ್ಥರ ತೀವ್ರ ವಿಚಾರಣೆ; ಮಹತ್ವದ ದಾಖಲೆ ವಶಕ್ಕೆ