Site icon Vistara News

Seer suicide note | ಬಂಡೆ ಮಠದ ಶ್ರೀಗಳು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿರುವ ಆ ಮಹಿಳೆ ಯಾರು?

swameeji suicide

ನೆಲಮಂಗಲ: ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ಹಿನ್ನೆಲೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸ್ವಾಮೀಜಿ ಐದು ಪುಟದ ಡೆತ್ ನೋಟ್ ಬರದಿಟ್ಟಿದ್ದು, ಅದರಲ್ಲಿ ಮೂರು ಪುಟ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.

ಸ್ವಾಮೀಜಿ ಬರೆದಿರುವ ಡೆತ್ ನೋಟ್‌ನ ಮೊದಲ ಪುಟ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದ್ದು ಬಹಳಷ್ಟು ವಿಷಯಗಳ ಪ್ರಸ್ತಾಪ ಮಾಡಿದ್ದಾರೆ. ಮಹಿಳೆ ಪೋನ್ ಮಾಡುತ್ತಿದ್ದರು. ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂಬುದಾಗಿ ಉಲ್ಲೇಖವಾಗಿದೆ. ಮುಂದಿನ ಪುಟಗಳಲ್ಲಿ ಬಹಳಷ್ಟು ಸಾವಿನ ಸತ್ಯ ಗೋಚರವಾಗಲಿದೆ ಎನ್ನಲಾಗಿದೆ.

ಮೊದಲ ಪುಟದಲ್ಲಿ ಏನೇನಿದೆ?
ಸಿದ್ದಗಂಗೆಯ ಪೂಜ್ಯರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು ಹಾಗೂ ಶ್ರೀ ಮಠದ ಎಲ್ಲಾ ಭಕ್ತರಿಗೆ ನನ್ನ ಕೊನೆಯ ಶರಣು ಶರಣಾರ್ಥಿಗಳು.
ಪೂಜ್ಯರಲ್ಲಿ ಹಾಗೂ ಮಠದ ಭಕ್ತರಲ್ಲಿ ನನ್ನ ಕೊನೆಯ ನಿವೇದನೆ ಏನೆದಂರೆ, ನಾನು ಈ ಮಠದ ಉತ್ತಾರಾಧಿಕಾರಿಯಾಗಿ 25 ವರ್ಷಗಳು ಹೇಗೆ ಇದ್ದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಇಷ್ಟು ದಿನ ನಾನು ಈ ಮಠದ ಒಬ್ಬ ನಿಷ್ಠಾವಂತ ಸೇವಕನಾಗಿ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಮಠದ ಕೆಲಸ ಮಾಡಿದ್ದೇನೆ. ಸಿದ್ದಗಂಗಾ ಶ್ರೀಗಳ ಪ್ರೀತಿ ಪಾತ್ರನಾಗಿ ಸೇವೆ ಮಾಡುತ್ತ ಬಂದಿದ್ದೇನೆ.

ಯಾವತ್ತೂ ಈ ಮಠದ ಅಧರ್ಮವನ್ನು (ಹಣ) ನನ್ನ ನನ್ನ ವಯಕ್ತಿಕ ಜೀವನಕ್ಕೆ ನನ್ನ ಬಂಧುಗಳಿಗೆ ಆಗಲಿ, ಮಠಗಳಿಗಾಗಲೀ ಕೊಟ್ಟಿಲ್ಲ, ಖರ್ಚು ಮಾಡಿಲ್ಲ. ಎಲ್ಲವನ್ನು ಮಠದ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಅಷ್ಟೇ ಪ್ರಾಮಾಣಿಕವಾಗಿ ಬದುಕಿದ್ದೇನೆ.

ಆದರೆ ಈಗ ತುಂಬ ಮನಸ್ಸಿಗೆ ನೋವಾಗಲು ಸಂಗತಿ ಎಂದರೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕೆಟ್ಟ ವಿಚಾರಗಳನ್ನು ನನ್ನ ಮೇಲೆ ಹೊರಿಸಿ ನನ್ನ ಮನಸ್ಸಿಗೆ ನೋವು ಉಂಟು ಮಾಡಲಾಗಿದೆ. ನನ್ನ ಇಪ್ಪತ್ತೈದು ವರ್ಷದ ಪೂರ್ತಿ ಇಂತಹ ಕಷ್ಟಗಳ ಮಧ್ಯೆ ನಾನು ಬಂದಿದ್ದೇನೆ. ಆದರೆ ಎಲ್ಲಾ ನೋವುಗಳನ್ನು ಸಹಿಸಿ ಸಿದ್ದಗಂಗಾ ಪೂಜ್ಯರ ದರ್ಶನದಿಂದ ಮುಕ್ತಿಯಾಗುತ್ತಿತ್ತು. ಪೂಜ್ಯರು ಎಷ್ಟು ಸಾರಿ ಧರ್ಮ ತುಂಬಿ ಸಿದ್ಧಿಸಿದ್ದಾರೆ. ಎಲ್ಲವನ್ನೂ ಮರೆತು ನನ್ನ ಕೆಲಸಗಳ ಕಡೆ ಗಮನ ಕೊಡುತ್ತಿದ್ದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕಷ್ಟಗಳು ಬೇರೆ ರೂಪಗಳು ಪಡೆದಿರುತ್ತದೆ. ನನಗೆ ಗೊತ್ತಿಲ್ಲದ ವ್ಯಕ್ತಿಗಳು ಫೋನ್ ಮಾಡುವುದು, ಪರಿಚಯ ಮಾಡಿಕೊಳ್ಳಲು ಯತ್ನಿಸುವುದು ಇದು ನಿರಂತರವಾಗಿ ಆಗಿದೆ. ಆದರೂ ನಾನು ಈ ಎಲ್ಲಾ ಸಂಕೋಲೆಗಳಿಗೆ ಸಿಗದೇ ಇಷ್ಟು ದಿನ ಎಚ್ಚರವಾಗಿ ಇದ್ದೆ. ಆದರೆ ಶತ್ರುಗಳ ನಿರಂತರ ಪ್ರಯತ್ನದಿಂದ ನನಗೆ ಕೊನೆಗೂ ತೊಂದರೆಯಾಗಿದೆ. ಆರೇಳು ತಿಂಗಳ ಹಿಂದೆ ಗೊತ್ತಿಲ್ಲದ ಮಹಿಳೆ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿಸುವುದು ಯಾರು ಅಂತ ಕೇಳದೆ….ʼʼ

…ಇಲ್ಲಿಗೆ ಮೊದಲ ಪುಟ ಮುಕ್ತಾಯವಾಗಿದ್ದು ಮುಂದಿನ ಪುಟದಲ್ಲಿ ಬಹಳಷ್ಟು ವಿಷಯ ಹಾಗೂ ಕೆಲ ವ್ಯಕ್ತಿಗಳ ಹೆಸರು ಉಲ್ಲೇಖವಾಗಿರುವ ಮಾತುಗಳು ಕೇಳಿ ಬಂದಿದ್ದು ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ತಿಳಿಯಬೇಕಾಗಿದೆ.

3 ತಿಂಗಳ ಹಿಂದೆ ಕಡಲೆ ಮಠದ ಸ್ವಾಮೀಜಿ ಕೂಡ ಇದೇ ರೀತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಸೋಮವಾರ ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ (ಸೋಮವಾರ) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸ್ವಾಮೀಜಿಗಳನ್ನು ಈ ರೀತಿ ಬಲೆಗೆ ಕೆಡಹುವ ಪ್ರಯತ್ನಗಳನ್ನು ಯಾರು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ತನಿಖೆಯಿಂದ ತಿಳಿಯಬೇಕಾಗಿದೆ.

ಇದನ್ನೂ ಓದಿ | Seer suicide| ಬಂಡೇಮಠ ಶ್ರೀ ಆತ್ಮಹತ್ಯೆಗೆ ಖಾಸಗಿ ವಿಡಿಯೊ ಕಾರಣ? ಮಹಿಳೆ, ಗ್ಯಾಂಗ್‌ನಿಂದ ಬ್ಲ್ಯಾಕ್‌ಮೇಲ್‌

Exit mobile version