Site icon Vistara News

Self Harming: ಪ್ರಿಯಕರ ದೂರವಾಗಿದ್ದಕ್ಕೆ ಪ್ರಾಣ ಬಿಟ್ಟ ಯುವತಿ

Nisarga

ಮೈಸೂರು: ಪ್ರಿಯಕರ ದೂರವಾಗಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕು ಗೌಡೇನಹಳ್ಳಿಯಲ್ಲಿ ನಡೆದಿದೆ. ಯುವಕನೊಬ್ಬ 4 ವರ್ಷದಿಂದ ಪ್ರೀತಿಸಿ, ಈಗ ಕೈಕೊಟ್ಟು ಮತ್ತೊಬ್ಬ ಯುವತಿ ಜತೆ ಓಡಾಡುತ್ತಿರುವುದನ್ನು ಕಂಡ ಯುವತಿ, ವಿಷ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ.

ನಿಸರ್ಗ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕೆ.ಆರ್.ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿ, ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ನಿಸರ್ಗಗೆ ಕೈಕೊಟ್ಟ ಯುವಕ, ಮತ್ತೊಬ್ಬ ಯುವತಿಯ ಹಿಂದೆ ಬಿದ್ದಿದ್ದ. ಇದನ್ನೂ ನೋಡಿ ಸಹಿಸಲಾಗದೆ ಮನನೊಂದು ನಿಸರ್ಗ ವಿಷ ಸೇವಿಸಿದ್ದಾಳೆ. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಇದನ್ನೂ ಓದಿ | Belagam : ಬೆಳಗಾವಿಯಲ್ಲಿ ಕೆರೆಗೆ ಹಾರಿದ್ದ ಮಹಿಳೆಯ ರಕ್ಷಣೆ

ಸಾವಿಗೆ ಮುನ್ನ ಕೈ ಕೊಯ್ದುಕೊಂಡು ನೊಂದ ನಿಸರ್ಗ ರೀಲ್ಸ್ ಮಾಡಿದ್ದಾಳೆ. ನನ್ನ ಸಾವಿಗೆ ಸುಹಾಸ್, ಅನನ್ಯಾ ಹಾಗೂ ಆಕೆ ತಂದೆ ಗೋಪಾಲ ಕೃಷ್ಣ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾಳೆ. ಇದರ ಪ್ರಕಾರ ಐದು ಮಂದಿ ವಿರುದ್ಧ ಕೆ.ಆರ್. ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಡೆತ್‌ ನೋಟ್‌ನಲ್ಲಿ ಏನಿದೆ?

ಕ್ಷಮಿಸಿ ಅಪ್ಪ, ನಿಮಗೆ ನನ್ನಿಂದ ಬಹಳ ನೋವಾಗಿದೆ. ಸುಹಾಸ್‌ ಎಂಬ ಯುವಕನನ್ನು ನಾನು ಲವ್‌ ಮಾಡಿದ್ದು ನಿಜ. ಆದರೆ, ಆತ 4 ವರ್ಷ ಪ್ರೀತಿ ಮಾಡಿ, ನನ್ನನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡಿದ್ದಾನೆ. ಅನನ್ಯಾ ಎಂಬ ಹುಡುಗಿ ಬಂದ ತಕ್ಷಣ ನನಗೆ ಕೈಕೊಟ್ಟು ಹೋಗಿದ್ದಾನೆ. ಅವನು ಮಾಡಿರುವ ಮೋಸವನ್ನು ನೋಡಿ ನನಗೆ ಸಹಿಸಲು ಆಗುತ್ತಿಲ್ಲ. ಆ ಅನನ್ಯಾ ಹಾಗೂ ಸುಹಾಸ್ ಪದೇಪದೇ ನನ್ನನ್ನು ಅವಮಾನಿಸಿ, ಹೀಯಾಳಿಸಿ ಸಾಕಷ್ಟು ನೋವು ಕೊಟ್ಟಿದ್ದಾರೆ. ಅವರಿಬ್ಬರನ್ನು ನೀವು ಸುಮ್ಮನೆ ಬಿಡಬೇಡಿ ಅಪ್ಪ ಎಂದು ನಿಸರ್ಗ ಡೆತ್‌ ನೋಟ್‌ನಲ್ಲಿ ಬರೆದಿದ್ದಾಳೆ.

ಇದನ್ನೂ ಓದಿ | Physical Abuse : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸವಾರ ಅರೆಸ್ಟ್

ಅನನ್ಯಾಳ ತಂದೆ, ತಾಯಿಗೂ ನನ್ನ ಪ್ರೀತಿಯ ವಿಷಯ ಹೇಳಿದ್ದೆ. ಆದರೆ, ಅವರು ನನ್ನನ್ನು ಕೆಟ್ಟದಾಗಿ ಬೈದು ಕಳುಹಿಸಿದ್ದಾರೆ. ಇನ್ನು ಸುಹಾಸ್‌ ಮನೆಯವರಿಗೆ ಈ ವಿಷಯ ಗೊತ್ತಿದ್ದರೂ, ಯಾರೂ ನನ್ನ ಪರವಾಗಿ ಮಾತನಾಡಲಿಲ್ಲ. ನಾನು ಏನಾದರೂ ಸತ್ತರೆ ಸುಹಾಸ್‌, ಅನನ್ಯಾ ಹಾಗೂ ಆಕೆಯ ಕುಟುಂಬವೇ ನೇರ ಕಾರಣ. ನನಗಾದ ಅವಮಾನ, ಸಾವಿಗೆ ಅವರು ಸರಿಯಾದ ಶಿಕ್ಷೆ ಅನುಭವಿಸಬೇಕು. ನನಗಾದ ಮೋಸ, ಬೇರೆ ಯಾವ ಹೆಣ್ಣು ಮಕ್ಕಳಿಗೆ ಆಗಬಾರದು ಅಪ್ಪ. ದಯಮಾಡಿ ನನ್ನನ್ನು ಕ್ಷಮಿಸಿ ಎಂದು ನಿಸರ್ಗ ತಿಳಿಸಿದ್ದಾಳೆ.

Exit mobile version