Site icon Vistara News

Accident | ಲಾರಿ-ಕಾರು ಅಪಘಾತ: ಕುಡಚಿ ಎಎಸ್‌ಐ ಪತ್ನಿ, ಪುತ್ರಿ ಸಹಿತ ನಾಲ್ವರ ಸಾವು, ಮೂವರಿಗೆ ಗಂಭೀರ ಗಾಯ

Accident

ಬೆಳಗಾವಿ: ಬಾಚಿ-ರಾಯಚೂರು ರಾಜ್ಯ ಹೆದ್ದಾರಿಯ ಬೂದಿಗೊಪ್ಪ ಕ್ರಾಸ್ ಬಳಿ ಲಾರಿ-ಕಾರು-ಬೈಕ್ ಮಧ್ಯೆ ಸರಣಿ ಅಪಘಾತ(Accident) ನಡೆದು, ನಾಲ್ವರು ಮೃತಪಟ್ಟಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿವೆ.

ಕಾರಿನಲ್ಲಿದ್ದ ಚಾಲಕ ನಿಖಿಲ್ ಕದಂ (24), ರುಕ್ಮಿಣಿ ಹಲಕಿ (48), ಅಕ್ಷತಾ ಹಲಕಿ (22), ಹಣಮವ್ವ ಚಿಪ್ಪಲಕಟ್ಟಿ ಮೃತರು. ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ಯರಗಟ್ಟಿ ಕಡೆಗೆ ಹೊರಟಿದ್ದ ಕಾರು, ಬೆಳಗಾವಿ ಕಡೆಗೆ ಬರುತ್ತಿದ್ದ ಸಿಮೆಂಟ್ ಲಾರಿ ಮಧ್ಯೆ ಅಪಘಾತ ಭೀಕರ ಅಪಘಾತ ನಡೆದಿದೆ.

ರುಕ್ಮಿಣಿ ಹಲಕಿ ಅವರು ಕುಡಚಿ ಎಎಸ್ಐ ಪರಶುರಾಮ ಹಲಕಿ ಅವರ ಪತ್ನಿಯಾಗಿದ್ದು, ಅಕ್ಷತಾ ಹಲಕಿ ಅವರು ಪರಶುರಾಮ್‌ ಅವರ ಪುತ್ರಿ. ಅವರು ಪ್ರಯಾಣಿಸುತ್ತಿದ್ದ ಕಾರನ್ನು ಚಲಾಯಿಸುತ್ತಿದ್ದ ಚಾಲಕ ನಿಖಿಲ್‌ ಕದಂ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.

ಅಪಘಾತದಲ್ಲಿ ಬೈಕಿಗೂ ಲಾರಿ ಗುದ್ದಿದ್ದರಿಂದ ಮೂವರು ಸವಾರರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಡಾ. ಸಂಜೀವ್ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ರಾಜ್ಯ ಹೆದ್ದಾರಿ ಮೇಲೆ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | IND vs AUS | ನೂಕುನುಗ್ಗಲಿನಲ್ಲಿ ಗಾಯಗೊಂಡವರಿಗೆ ಕ್ರಿಕೆಟ್ ಪಂದ್ಯದ ಉಚಿತ ಟಿಕೆಟ್‌ ನೀಡಿದ ಸರಕಾರ

Exit mobile version