Site icon Vistara News

SHE Q Award | ಗಲ್ಫ್ ಮಾಧ್ಯಮಂ ಶಿ-ಕ್ಯೂ ಎಕ್ಸಲೆನ್ಸ್ ಪ್ರಶಸ್ತಿಗೆ ಕನ್ನಡತಿ ಸುಮಾ ಮಹೇಶ್ ಗೌಡ ಭಾಜನ

ಕತಾರ್: ದೋಹಾದಲ್ಲಿ 2022ರ ಜೂನ್ 30ರಂದು ನಡೆದ ಗಲ್ಫ್ ಮಾಧ್ಯಮಂ ಶಿ-ಕ್ಯೂ (SHE Q Award) ಎಕ್ಸಲೆನ್ಸ್ ಪ್ರಶಸ್ತಿ 2022 ಸಮಾರಂಭದಲ್ಲಿ ಸುಮಾ ಮಹೇಶ್ ಗೌಡ ಅವರಿಗೆ “ಜ್ಯೂರಿ ವಿಶೇಷ ಪ್ರಶಸ್ತಿ – ಸಮಾಜ ಸೇವೆ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸುಮಾ ಅವರು ಬೆಂಗಳೂರು ಮೂಲದವರು. ಇವರು ಖ್ಯಾತ ಒಲಿಂಪಿಕ್ ಫುಟ್ಬಾಲರ್ ಕೆಂಪಯ್ಯ ಅವರ ದ್ವಿತೀಯ ಪುತ್ರಿ. ಇವರು ಭಾರತೀಯ ಬೇನೇವೊಳೆಂಟ್ ಫೋರಂ ಕೌನ್ಸೆಲಿಂಗ್ ಹೌಸ್‌ನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಅವರು ಅನೇಕ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ, ನಿರೂಪಣೆ ಮಾಡಿದ್ದಾರೆ. ಸಮಾಜ ಸೇವೆಯ ಮೂಲಕ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹಿನ್ನೆಲೆಯಲ್ಲಿ ಇವರಿಗೆ ಈ ಪ್ರಶಸ್ತಿ ಲಭಿಸಿದೆ.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಾಧ್ಯಕ್ಷರಾಗಿ ಪ್ರಸಿದ್ಧ ಗಾಯಕಿ ಮತ್ತು ನಟಿ ಮಮತಾ ಮೋಹನ್ ದಾಸ್ ಹಾಗೂ ಇತರ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಏನಿದು ಶಿ-ಕ್ಯೂ ಪ್ರಶಸ್ತಿ?

ಕತಾರ್‌ ದೇಶ ನೀಡುವ ವಿಶೇಷ ಪ್ರಶಸ್ತಿಯೊಂದರಲ್ಲಿ ಶಿ-ಕ್ಯೂ ಪ್ರಶಸ್ತಿ ಸಹ ಒಂದು. ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಸಮಾಜ ಸೇವೆ, ಕೃಷಿ, ಆರೋಗ್ಯ, ಉದ್ಯಮಶೀಲತೆ, ಕಲೆ ಮತ್ತು ಸಾಹಿತ್ಯ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗರುತಿಸಲಾಗುತ್ತದೆ. ನಾಮನಿರ್ದೇನಗೊಂಡ ಮಹಿಳಯರಲ್ಲಿ ಯಾರಿಗೆ ಪ್ರಶಸ್ತಿ ನೀಡಬೇಕು ಎಂಬುದನ್ನು ಸಾರ್ವಜನಿಕರು ವೋಟ್‌ ಮೂಲಕ ತಿಳಿಸುತ್ತಾರೆ. ಅತಿ ಹೆಚ್ಚು ವೋಟ್‌ ಪಡೆದ ಮಹಿಳೆಗೆ ಈ ಪ್ರಶಸ್ತಿ ಸಲ್ಲುತ್ತದೆ. ಕತಾರ್‌ ದೇಶದ ಪೌರತ್ವವನ್ನು ಹೊಂದಿರುವ ಮಹಿಳೆಗೆ ಮಾತ್ರ ಈ ಪ್ರಶಸ್ತಿ ನೀಡಲಾಗುತ್ತದೆ.

ಇದನ್ನೂ ಓದಿ: Asian wrestling championships: ಚಿನ್ನದ ಪದಕ ಗೆದ್ದ ಕನ್ನಡದ ಕುವರ

Exit mobile version