Site icon Vistara News

Karnataka Election 2023: ಇನ್ನೊಂದು ಪೀಳಿಗೆಗೆ ಅವಕಾಶ ಕೊಡುವುದಕ್ಕಾಗಿ ಶೆಟ್ಟರ್‌ಗೆ ಟಿಕೆಟ್‌ ತಪ್ಪಿದೆ: ಸಿಎಂ ಬೊಮ್ಮಾಯಿ

Shettar has been denied ticket to accommodate another generation says CM Bommai Karnataka Election 2023 updates

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ರಾಜೀನಾಮೆ ನಮಗೆ ನೋವು ತಂದಿರುವುದಲ್ಲದೆ, ಕಸಿವಿಸಿಯನ್ನೂ ಉಂಟು ಮಾಡಿದೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು. ಅದೇ ಕಾರಣಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಅವರಿಗೆ ಟಿಕೆಟ್ ತಪ್ಪಿದೆ. ಅವರ ಎಲ್ಲ ಪ್ರಶ್ನೆಗೆ ನಾನು ಉತ್ತರ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸ ಬೆಳವಣಿಗಾಗಿ ಈ ಪ್ರಯತ್ನವನ್ನು ವರಿಷ್ಠರು ಮಾಡಿದ್ದಾರೆ. ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ಸ್ವಲ್ಪ ಹಾನಿಯಾಗಲಿದೆ. ಆದರೆ, ಡ್ಯಾಮೇಜ್ ಕಂಟ್ರೋಲ್‌ಗೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ಹುಬ್ಬಳ್ಳಿ-ಧಾರವಾಡ ಕೇಂದ್ರಕ್ಕೆ ಬಿಜೆಪಿಯಿಂದ ಮಹೇಶ್‌ ಟೆಂಗಿನಕಾಯಿ ಕಣಕ್ಕೆ?; ಶೆಟ್ಟರ್‌ಗೆ ಪ್ರತಿತಂತ್ರ

ಮೋದಿ ನೇತೃತ್ವದಲ್ಲಿ ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ

ಜಗದೀಶ್ ಶೆಟ್ಟರ್ ಈ ಭಾಗದ ಹಿರಿಯ ಹಾಗೂ ಪ್ರಮುಖ ನಾಯಕರು. ಪಕ್ಷವು ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯ ಮಾಡಿದೆ. ನಾನು ಅವರ ವಿರುದ್ಧ ಸ್ಪರ್ಧೆ ಮಾಡಿದ್ದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕೆ.ಎಸ್. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶೆಟ್ಟರ್ ಅವರಿಗೆ ದೆಹಲಿ ಮಟ್ಟದಲ್ಲಿ ಇದಕ್ಕಿಂತ ದೊಡ್ಡ ಹುದ್ದೆಯನ್ನು ಕೊಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು ಎಂದು ಸಿಎಂ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದರು.

ಪಕ್ಷದಲ್ಲಿ ಶೆಟ್ಟರ್‌ ಇರಬೇಕಿತ್ತು

ಶನಿವಾರವೂ (ಏ. 15) ಚರ್ಚೆ ಮಾಡಿದ್ದೆವು. ಅವರು ಸೂಚಿಸಿದವರಿಗೆ ಟಿಕೆಟ್ ಕೊಡಲಾಗುವುದು ಎಂದೂ ತಿಳಿಸಲಾಗಿತ್ತು. ಅವರು ಪಕ್ಷದಲ್ಲಿ ಇರಬೇಕಿತ್ತು. ಯಡಿಯೂರಪ್ಪ ನಮಗೆ ಆದರ್ಶರು. ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ನಮಗೆಲ್ಲ ಪಕ್ಷದ ಆದರ್ಶ ಹೇಳಿಕೊಟ್ಟವರು ಅವರು. ಭಾರತೀಯ ಜನತಾ ಪಕ್ಷ ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ನಡೆಸಿದೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಅಭಿವೃದ್ಧಿಯು ಬಿಜೆಪಿಯಿಂದ ಮಾತ್ರ ಸಾಧ್ಯ. ಯಡಿಯೂರಪ್ಪ ನೇತೃತ್ವದಲ್ಲಿ ಮೊದಲನೇ ಪೀಳಿಗೆ ಬೆಳದು ನಿಂತಿದೆ. ಎರಡನೇ ಪೀಳಿಗೆಯಲ್ಲಿ ಲಿಂಗಾಯತ ಸಮುದಾಯದ ಸಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ, ವಿ. ಸೋಮಣ್ಣ ಬೆಳೆದು ನಿಂತಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಅತಿ ಹೆಚ್ಚು ಸ್ಥಾನ, ಅತಿ ಹೆಚ್ಚು ಮಂತ್ರಿ ಸ್ಥಾನ ನೀಡಿರುವುದು ಬಿಜೆಪಿ ಎಂದು ಹೇಳಿದರು.

ಚುನಾವಣೆ ತಂತ್ರ

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ಇಬ್ಬರಿದ್ದಾರೆ. ಜೆಡಿಎಸ್‌ನಲ್ಲಿ ಎಚ್‌,ಡಿ. ಕುಮಾರಸ್ವಾಮಿ ಹೆಸರು ಇದೆ. ನಮ್ಮ ಚುನಾವಣೆ ತಂತ್ರವನ್ನು ನಾವು ರೂಪಿಸುತ್ತೇವೆ. ಪಕ್ಷ ಗೆಲ್ಲಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Jagadish Shettar: 40 ವರ್ಷದ ಬಿಜೆಪಿ ಸಖ್ಯಕ್ಕೆ ಬ್ಯಾಡ್‌ಬೈ ಹೇಳಿದ ಜಗದೀಶ್‌ ಶೆಟ್ಟರ್‌: ಶಾಸಕ ಸ್ಥಾನದಿಂದ ನಿರ್ಗಮನ

ವರಿಷ್ಠರ ತೀರ್ಮಾನ

ಎಲ್ಲರಿಗೂ ಅವಕಾಶ ಕೊಡಲಾಗಿದೆ. ಶನಿವಾರ ಸ್ವತಃ ಅಮಿತ್ ಶಾ ಅವರೇ ಶೆಟ್ಟರ್ ಜತೆ ಮಾತನಾಡಿದ್ದಾರೆ. ರಾಜ್ಯ, ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಅವರ ಹೆಸರು ಇತ್ತು. ಇದು ಮೇಲಿನವರ ತೀರ್ಮಾನ. ಬದಲಾವಣೆ ತರುವಂತಹ ಕಾಲ ಇದು ಎಂದು ಸಿಎಂ ಹೇಳಿದರು.

Exit mobile version