Site icon Vistara News

Shimogga Clash | ಶಿವಮೊಗ್ಗದ ಆ 15 ದುಷ್ಕರ್ಮಿಗಳನ್ನು ಗಡಿಪಾರು ಮಾಡಿ ಎಂದ ನಾರಾಯಣ ಸ್ವಾಮಿ

Narayana swamy

ಶಿವಮೊಗ್ಗ: ಶಿವಮೊಗ್ಗದಲ್ಲಿ ಕೆಲವರು ಪದೇಪದೆ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಅಂಥ ೧೫ ಮಂದಿಯ ಪಟ್ಟಿ ಮಾಡಲಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಈ ಹದಿನೈದು ಮಂದಿಯನ್ನು ಗಡಿಪಾರು ಮಾಡಬೇಕು ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಇಲ್ಲಿನ ಅಲ್ಪಸಂಖ್ಯಾತರ ಮುಖಂಡರನ್ನು ಕರೆದು ಮಾತನಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದ್ದೇನೆ ಡಿಸಿ ಅವರಿಗೆ ಹೇಳಿದ್ದೇನೆ. ಗಡಿಪಾರು ಮಾಡುವ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಯಾವುದೇ ಮುಲಾಜಿಲ್ಲದೆ ಜಿಲ್ಲೆಯಿಂದ ಹೊರಹಾರಬೇಕು ಎಂದು ಅವರು ಆಗ್ರಹಿಸಿದರು.

ಎಸ್‌ಡಿಪಿಐ ಪಿಎಫ್‌ಐ ಮೊದಲಾದ ಸಂಘಟನೆಗಳನ್ನು ನಿಷೇಧ ಮಾಡಲು ಸರಕಾರ ಕಾನೂನಿನ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಧ ಮಾಡಲು ಸರ್ಕಾರ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ನಾರಾಯಣ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಸಾವರ್ಕರ್‌ ವಿರೋಧಕ್ಕೆ ಕಾಂಗ್ರೆಸ್‌ ಕಾರಣ
ವೀರ್‌ ಸಾವರ್ಕರ್ ‌ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಪಸ್ವರ ಎತ್ತಿದ್ದು ಕಾಂಗ್ರೆಸ್‌. ಹೀಗಾಗಿ ಈಗ ನಡೆಯುತ್ತಿರುವ ಸಾವರ್ಕರ್‌ ವಿರೋಧಕ್ಕೆ ಮೂಲ ಕಾರಣ ಕಾಂಗ್ರೆಸ್ಸೇ ಎಂದು ನೇರವಾಗಿ ಆರೋಪಿಸಿದ ಅವರು, ಕಾಂಗ್ರೆಸ್‌ ಈಗಲೂ ಇಂಥ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಶಿವಮೊಗ್ಗದ ಸಾವರ್ಕರ್‌ ವಿರೋಧದ ಎರಡು ಘಟನೆಗಳು ನಡೆದಿವೆ. ಶಿಕಾರಿಪುರದಲ್ಲಿ ಶಿವಪ್ಪ ನಾಯಕ ಮಾಲ್‌ನಲ್ಲಿ ಸಾವರ್ಕರ್‌ ಅವರ ಭಾವಚಿತ್ರವನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಇಟ್ಟಿದ್ದನ್ನು ಎಸ್‌ಡಿಪಿಐ ಆಕ್ಷೇಪಿಸಿತ್ತು. ಸೋಮವಾರ ಶಿವಮೊಗ್ಗ ಅಮೀರ್‌ ಅಹಮದ್‌ ವೃತ್ತದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹಾಕಿದ್ದನ್ನು ಅಲ್ಲಿನ ಯುವಕರು ಆಕ್ಷೇಪಿಸಿದ್ದರು. ಇದರಿಂದ ಭಾರಿ ಗದ್ದಲ ಉಂಟಾಗಿದೆ. ಪ್ರೇಮ್‌ ಕುಮಾರ್‌ ಎಂಬ ಯುವಕನ ಮೇಲೆ ಚೂರಿ ಇರಿತವೂ ಆಗಿದೆ.
ಇದನ್ನೂ ಓದಿ| Shimogga tense | ಚೂರಿ ಇರಿತ ಪ್ರಕರಣದಲ್ಲಿ ನಾಲ್ವರ ಬಂಧನ

Exit mobile version