Site icon Vistara News

shimogga clash | ಇರಿತ ಆರೋಪಿಗಳಿಗೆ ಎಸ್‌ಡಿಪಿಐ ನಂಟು ಸಾಬೀತು, ಕೋಮು ಸಾಮರಸ್ಯ ಹಾಳು ಮಾಡಲು ಸಂಚು?

Shivamogga Clash

ಶಿವಮೊಗ್ಗ: ಪ್ರೇಮ್‌ ಸಿಂಗ್‌ಗೆ ಚೂರಿ ಇರಿತದಿಂದ ಶಿವಮೊಗ್ಗ ಉದ್ವಿಗ್ನಗೊಳ್ಳಲು ಕಾರಣರಾಗಿದ್ದ ನಾಲ್ವರು ಆರೋಪಿಗಳಿಗೂ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆ ನಂಟು ಇರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ದೊಡ್ಡ ಸಂಚೇ ನಡೆದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

ಗಾಂಧಿ ಬಜಾರ್‌ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದ ಪ್ರಕರಣದ ಮಾರ್ನಾಮಿಬೈಲಿನ ಮೊಹಮ್ಮದ್ ಜಬೀ (30), ಜೆಸಿ ನಗರದ ನದೀಮ್ (25), ಆರ್‌ಎಂಎಲ್ ನಗರದ ತನ್ವೀರ್ (22) ಹಾಗೂ ಬುದ್ಧನಗರದ ಅಬ್ದುಲ್ ರೆಹಮಾನ್ (25)ಗೆ ಎಸ್‌ಡಿಪಿಐ ನಂಟು ಇರುವುದು ಸಾಬೀತಾಗಿದೆ. ಇವರು ಎಸ್‌ಡಿಪಿಐ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಎಂದೂ ತಿಳಿದುಬಂದಿದೆ. ಸಂಘಟನೆಯ ಕಾರ್ಯಕ್ರಮಗಳಲ್ಲಿ ಇವರು ಸಕ್ರಿಯವಾಗಿರುವ ಫೋಟೋ- ವಿಡಿಯೋಗಳು ಲಭ್ಯವಾಗಿವೆ.

ಇದನ್ನೂ ಓದಿ: shimogga clash | ಚೂರಿ ಇರಿತ ಆರೋಪಿ ಜಬಿ ಪಿಎಫ್‌ಐ ಕಾರ್ಯಕ್ರಮದಲ್ಲಿ? ಫೋಟೊ ವೈರಲ್

ಸಂಘಟನೆ ಕರೆ ನೀಡುವ ಪ್ರತಿ ಚಟುವಟಿಕೆಯಲ್ಲೂ ಜಬೀ, ನದೀಮ್, ತನ್ವೀರ್ ಹಾಗೂ ರೆಹಮಾನ್ ಭಾಗಿಯಾಗುತ್ತಿದ್ದರು. ಸರ್ಕಾರದ ವಿರುದ್ಧ ಪ್ರತಿಭಟನೆಗಳ ಜೊತೆಗೆ ಸಂಘಟನೆ ಕೆಲಸದಲ್ಲಿ ಸಹ ಭಾಗಿಯಾಗುತ್ತಿದ್ದರು. ನೆರೆ ಸಂದರ್ಭದ ಕಾರ್ಯದಲ್ಲೂ ಎಸ್‌ಡಿಪಿಐ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಮತೀಯ ವಿಚಾರಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ಇದರೊಂದಿಗೆ, ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಮೊದಲೇ ಪ್ಲಾನ್ ನಡೆದಿತ್ತಾ ಎಂಬ ಸಂಶಯ ವ್ಯಕ್ತವಾಗಿದೆ. ಆಗಸ್ಟ್ 14ರಂದು ಸಿಟಿ ಸೆಂಟರ್ ಮಾಲ್‌ನಲ್ಲಿ ನಡೆದ ಘಟನೆಗೆ ಪ್ರತಿಯಾಗಿ ಆಗಸ್ಟ್ 15ರಂದು ಗಲಾಟೆ ರೂಪಿಸಿರುವ ಸಾಧ್ಯತೆ ಇದೆ. ಕಾಟು ಆಸೀಫ್ ಬಂಧನಕ್ಕೆ ಪ್ರತಿಯಾಗಿ 15ರಂದು ಗಲಾಟೆ ಮಾಡಿರುವ, ಸಾವರ್ಕರ್ ಫೋಟೋ ವಿಚಾರದಲ್ಲಿ ಗಲಭೆ ಎಬ್ಬಿಸಲು ಸಿದ್ಧವಾಗಿಯೇ ಬಂದಿರುವಂತಿದೆ. ಗಲಾಟೆ ನಡೆದಿದ್ದ ಎಎ ಸರ್ಕಲ್‌ನಲ್ಲಿ ಮಾರಕಾಸ್ತ್ರ ಇಟ್ಟುಕೊಂಡು ಬಂದಿದ್ದ ಈ ಆರೋಪಿಗಳು ಗಲಾಟೆ ಸ್ಥಳದಲ್ಲಿ ಲಾಠಿ ಚಾರ್ಜ್ ಆಗುತ್ತಿದ್ದಂತೆ ಕಾಲ್ಕಿತ್ತಿದ್ದಾರೆ. ನಂತರ ಗಾಂಧಿ ಬಜಾರ್‌ನಲ್ಲಿ ಪ್ರೇಮ್ ಸಿಂಗ್‌ಗೆ ಚಾಕು ಇರಿದು ಎಸ್ಕೇಪ್ ಆಗಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ 4 ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: Shivamogga clash | ಶಾಂತ ಸ್ಥಿತಿಯಲ್ಲಿ ಶಿವಮೊಗ್ಗ, ಸೆಕ್ಷನ್ 144 ಮುಂದುವರಿಕೆ

Exit mobile version