Site icon Vistara News

Shimogga tense | ಚೂರಿ ಇರಿತ ಆರೋಪಿಗೆ ಗುಂಡೇಟು, ಬಂಧನ

jabiulla

ಶಿವಮೊಗ್ಗ : ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್‌ ಎಂಬವರಿಗೆ ಚೂರಿಯಿಂದ ಇರಿದ ಪ್ರಮುಖ ಆರೋಪಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಶಿವಮೊಗ್ಗದ ಎನ್‌ಟಿ ರಸ್ತೆಯ ಫಲಕ್ ಪ್ಯಾಲಸ್ ಬಳಿ ಘಟನೆ ನಡೆದಿದೆ. ಚರ್ಬಿ ಯಾನೆ ಮೊಹ್ಮದ್ ಜಬಿಯನ್ನು ಬಂಧಿಸಲಾಗಿದೆ. ಈತ ಪ್ರೇಮ್ ಸಿಂಗ್ ಗೆ ಚಾಕು ಇರಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಮಾರ್ನಮಿಬೈಲು ನಿವಾಸಿಯಾದ ಚರ್ಬಿ(30)ಯನ್ನು ಬಂಧಿಸಲು ಪೊಲೀಸರು ಹೋದಾಗ ಆತ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಅವನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಬೆಳಗ್ಗಿನ ಜಾವ 2.30 ರ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿನೋಬನಗರ ಠಾಣೆ ಪಿಎಸ್‌ಐ ಮಂಜುನಾಥ್ ಕುರಿ ಅವರು ಫೈರಿಂಗ್‌ ಮಾಡಿದ್ದು, ದಾಳಿ ನಡೆಸಿ ತಪ್ಪಿಸಿಕೊಂಡು ಹೋಗುತ್ತಿದ್ದ ವೇಳೆ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಜೈಲ್ ವಾರ್ಡ್‌ನಲ್ಲಿ ಗೂಳಿ ಜಬಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version