Site icon Vistara News

Shivamogga Rural Election Results: ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದೆಗೆ ಕೃಪೆ; ಮತ್ತೆ ಜೆಡಿಎಸ್‌ ತೆಕ್ಕೆಗೆ ಕ್ಷೇತ್ರ

Shivamogga Rural Election results winner Sharada Purya Naik

ಶಿವಮೊಗ್ಗ: 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದಾಗ ಸೃಷ್ಟಿಯಾಗಿದ್ದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ (Shivamogga Rural Election Results) ಈ ಬಾರಿ ಜೆಡಿಎಸ್‌ನ ಶಾರಾದಾ ಪೂರ್ಯ ನಾಯ್ಕ (Sharada purya Naik) ಜಯ ಸಾಧಿಸಿದ್ದಾರೆ.

ಗೆಲುವು ಕಂಡ ಶಾರಾದಾ ಪೂರ್ಯ ನಾಯ್ಕ

ಜೆಡಿಎಸ್‌ನಿಂದ ಮಾಜಿ ಶಾಸಕಿ ಶಾರಾದಾ ಪೂರ್ಯ ನಾಯ್ಕ ಅವರು ಶತಾಯಗತಾಯ ಈ ಬಾರಿ ಕ್ಷೇತ್ರವನ್ನು ವಶಕ್ಕೆ ಪಡೆಯಬೇಕೆಂದು ಪೈಪೋಟಿ ನಡೆಸಿದ್ದರು. ಒಂದು ಬಾರಿ ಶಾಸಕರಾಗಿದ್ದ ಹಿನ್ನೆಲೆಯಲ್ಲಿ ಜನ ಸಂಪರ್ಕ ಒಂದು ಮಟ್ಟದಲ್ಲಿ ಇವರಿಗೆ ಇತ್ತು. ಅಲ್ಲದೆ, ಜೆಡಿಎಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ಉಳಿದ ಮತಗಳೂ ಇವರಿಗೆ ಲಭ್ಯವಾಗಿರುವುದು ಈ ಬಾರಿಯ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಹೇಳಲಾಗುತ್ತಿದೆ.

ಕೆ.ಬಿ. ಅಶೋಕ್‌ ನಾಯ್ಕ್‌ಗೆ ಸೋಲು

ಕಳೆದ ಬಾರಿ ಗೆಲುವು ಸಾಧಿಸಿದ್ದ ಕೆ.ಬಿ.ಅಶೋಕ್ ನಾಯ್ಕ್ ಅವರು ಈ ಬಾರಿ ತಮ್ಮ ಅಭಿವೃದ್ಧಿ ಕೆಲಸಗಳ ಮೂಲಕವೇ ಮತ ಕೇಳಿದ್ದರು. ಡಬಲ್‌ ಎಂಜಿನ್‌ ಸರ್ಕಾರದ ಮಹತ್ವವನ್ನು ಪ್ರಚಾರ ವೇಳೆ ಒತ್ತಿ ಹೇಳಿದ್ದರು. ಆದರೆ, ಕೊನೇ ಹಂತದಲ್ಲಿ ಅವರಿಗೆ ಹಿನ್ನಡೆಯಾಗಿದೆ.

ಕಾಂಗ್ರೆಸ್‌ಗೂ ಒಲಿಯಲಿಲ್ಲ ವಿಜಯ

ಮೀಸಲು ಕ್ಷೇತ್ರವಾದ ನಂತರ ಗೆಲುವನ್ನೇ ಕಾಣದ ಕಾಂಗ್ರೆಸ್‌ ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ ಡಾ. ಶ್ರೀನಿವಾಸ್ ಕರಿಯಣ್ಣ ಅವರನ್ನು ಎರಡನೇ ಬಾರಿ ಕಣಕ್ಕಿಳಿಸಲಾಗಿತ್ತು. ಅವರು ಪ್ರಚಾರದ ವೇಳೆ ಬದಲಾವಣೆಯ ಮಂತ್ರವನ್ನು ಜಪಿಸಿದ್ದಾರದರೂ ಫಲಿಸಲಿಲ್ಲ.

ಕಳೆದ ಬಾರಿಯ ಫಲಿತಾಂಶ ಏನು?
ಕೆ.ಬಿ.ಅಶೋಕ ನಾಯ್ಕ (ಬಿಜೆಪಿ): 69,326 | ಶಾರದಾ ಪೂರ್ಯಾ ನಾಯ್ಕ (ಜೆಡಿಎಸ್): 65,549 | ಗೆಲುವಿನ ಅಂತರ: 3,777

ಈ ಬಾರಿ ಚುನಾವಣಾ ಫಲಿತಾಂಶ ಇಂತಿದೆ
ಶಾರದಾ ಪೂರ್ಯಾ ನಾಯ್ಕ (ಜೆಡಿಎಸ್) 86340
| ಕೆ.ಬಿ.ಅಶೋಕ್ ನಾಯ್ಕ್ (ಬಿಜೆಪಿ) 71198 | ಗೆಲುವಿನ ಅಂತರ: 15142 | ನೋಟಾ: 561

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕ್ಷೇತ್ರದ ಚಿತ್ರಣ

1978ರಿಂದ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯನ್ನು ಕೇಂದ್ರವಾಗಿರಿಸಿಕೊಂಡು ಅಸ್ತಿತ್ವದಲ್ಲಿದ್ದ ಹೊಳೆಹೊನ್ನೂರು ಮೀಸಲು ಕ್ಷೇತ್ರ, 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದಾಗ ಶಿವಮೊಗ್ಗ ಗ್ರಾಮಾಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿದೆ. ದಲಿತ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳು ಕೂಡ ಪ್ರಭಾವ ಹೊಂದಿವೆ.

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version