ಶಿವಮೊಗ್ಗ: ಶಾಸಕ ಕೆ.ಎಸ್.ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು, ರಾಷ್ಟ್ರದ್ರೋಹದ ಪ್ರಕರಣದಲ್ಲಿ ಅವರನ್ನು ಬಂಧಿಸಬೇಕು ಎಂದು ಆಮ್ ಆದ್ಮಿ ಪಕ್ಷದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ನಗರದ ಬಸ್ ನಿಲ್ದಾಣದ ಬಳಿ ಅಶೋಕ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಗೋಪಿ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.
ಈಶ್ವರಪ್ಪ ಅವರು ಕೇಸರಿ ಧ್ವಜವು ಭಾರತದ ರಾಷ್ಟ್ರಧ್ವಜ ಆಗಬಹುದು ಎಂದು ಹೇಳಿರುವುದು ಖಂಡನೀಯ. ಅವರ ವಿರುದ್ಧ ಕೂಡಲೆ ಪ್ರಕರಣ ದಾಖಲಿಸಬೇಕು. ಶಾಸಕ ಸ್ಥಾನದಿಂದ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ನಾಯಕರಾದ ದರ್ಶನ್ ಜೈನ್, ವಿಜಯ್ ಶರ್ಮಾ, ಭಾಸ್ಕರರಾವ್, ಗೋಪಾಲ್, ಮನೋಹರ್ ಗೌಡ, ಏಳುಮಲೈ(ಕೇಬಲ್ ಬಾಬು), ಡಾ. ನೇತ್ರಾವತಿ ,ಗಾಯತ್ರಿದೇವಿ, ತಲ್ಕಿನ್ ಆಹಮ್ಮದ್, ಕಿರಣ್, ಹರೀಶ್, ರಮೇಶ್, ಅಮೃತ್ ಮೊದಲಾದವರಿದ್ದರು.
ಇದನ್ನೂ ಓದಿ: ಕೋಮು ಸೌಹಾರ್ದ ಹೆಸರಿನಲ್ಲಿ ಹಿಂದುಗಳಿಗೆ ಮಾತ್ರ ಬುದ್ದಿ ಹೇಳುವ ಪ್ರಯತ್ನ ಬೇಡ: ಕೆ.ಎಸ್.ಈಶ್ವರಪ್ಪ