Site icon Vistara News

Accident Case : ಈಜಲು ಚಂಪಕ ಸರಸು ಕಲ್ಯಾಣಿಗೆ ಜಿಗಿದ ಎಂಜಿನಿಯರ್‌ ಶವವಾಗಿ ಹೊರ ಬಂದ

Accident case

ಶಿವಮೊಗ್ಗ : ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದ (Drowned in water) ಎಂಜಿನಿಯರ್‌ ಮೃತಪಟ್ಟಿದ್ದಾನೆ. ಶಿವಮೊಗ್ಗದ ಸಾಗರದ ಆನಂದಪುರ ಬಳಿ ಇರುವ ಚಂಪಕ ಸರಸು ಕಲ್ಯಾಣಿಯಲ್ಲಿ ಘಟನೆ (Accident Case) ನಡೆದಿದೆ. ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ.

ಬೆಂಗಳೂರಿನ ಕುಶಾಲ್‌ ತನ್ನಿಬ್ಬರು ಸ್ನೇಹಿತರೊಡನೆ ಪ್ರವಾಸಕ್ಕೆಂದು ಕಾರಿನಲ್ಲಿ ಆಗಮಿಸಿದ್ದ. ಕುಶಾಲ್, ಸಾಯಿರಾಂ ಹಾಗೂ ಯಶವಂತ ಈ ಮೂವರು ಇತಿಹಾಸ ಹೊಂದಿರುವ ಮಹಂತಿನ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಶಾಲ್‌ ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದಾನೆ. ಆದರೆ ಉಸಿರುಗಟ್ಟಿ ನೀರಿಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಹಲವಾರು ವರ್ಷಗಳ ಕಾಲ ಪಾಳು ಬಿದ್ದಿದ್ದ ಚಂಪಕ ಸರಸು ಕಲ್ಯಾಣಿಯನ್ನು ಚಲನಚಿತ್ರ ನಟ ಯಶ್ ಅವರ ಯಶೋಮಾರ್ಗ ಸಂಸ್ಥೆ ಕಳೆದೆರೆಡು ವರ್ಷಗಳ ಹಿಂದೆಯಷ್ಟೇ ಸ್ವಚ್ಚಗೊಳಿಸಿದ್ದರು. ಸ್ನೇಹಿತರೊಂದಿಗೆ ಈಜಾಡಲು ಬಂದ ಕುಶಾಲ್‌ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಲ್ಯಾಣಿಯಿಂದ ಶವ ಮೇಲಕ್ಕೇತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Assault Case : ಬೀದಿಯಲ್ಲೇ ಲೇಟ್‌ ನೈಟ್‌ ಪಾರ್ಟಿ; ಪ್ರಶ್ನಿಸಿದ್ದಕ್ಕೆ ಯುವಕನಿಂದ ಪೊಲೀಸರಿಗೆ ಅವಾಜ್

ಗದಗದಲ್ಲಿ ಬಸ್‌ ಹರಿದು 30 ಕುರಿಗಳು ಸಾವು

ಗದಗದ ಗಜೇಂದ್ರಗಡ-ರೋಣ ರಸ್ತೆ ಮಾರ್ಗದ ದಿಂಡೂರ ಗ್ರಾಮದ ಕ್ರಾಸ್‌ನಲ್ಲಿ ಬಸ್‌ ಹರಿದು 30 ಕುರಿಗಳು ಮೃತಪಟ್ಟಿವೆ. ಓವರ್ ಟೆಕ್ ಮಾಡಲು ಹೋಗಿ ಮೂವತ್ತು ಕುರಿಗಳ ಮೇಲೆ ಬಸ್‌ ಹರಿದಿದೆ. ಬದಾಮಿ ಘಟಕದ ಸರ್ಕಾರಿ ಬಸ್ ಚಾಲಕ ನಿರ್ಲಕ್ಷ್ಯದಿಂದ ಸುಮಾರು 4.5 ಲಕ್ಷ‌ ಮೌಲ್ಯದ ಕುರಿಗಳು ಮೃತಪಟ್ಟಿವೆ. ಕುರಿಗಳನ್ನು ಕಳೆದುಕೊಂಡು ಕುರಿಗಾಯಿಗಳು ಗೋಳಾಡಿದ್ದರು.

ಚಿಕ್ಕಬಳ್ಳಾಪುರದಲ್ಲಿ ಚಲಿಸುವ ರೈಲಿಗೆ ಸಿಲುಕಿ ವಯೋವೃದ್ಧ ಸಾವು

ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ರೈಲ್ವೇ‌ ನಿಲ್ದಾಣದ ಬಳಿ ಚಲಿಸುವ ರೈಲಿಗೆ ಸಿಲುಕಿ ಅಪರಿಚಿತ ವಯೋವೃದ್ಧ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದಿಂದ ಬಂಗಾರಪೇಟೆಗೆ ಹೋಗುತಿದ್ದ ರೈಲಿಗೆ ಸಿಲುಕಿದ್ದಾರೆ. ವೈಯುಕ್ತಿಕ‌ ಕಾರಣ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಸದ್ಯ ವೃದ್ಧನ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕೋಲಾರದಲ್ಲಿ ರಸ್ತೆ ಬದಿ ಅಂಗಡಿಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ಅಂಗಡಿಗೆ ನುಗ್ಗಿದೆ. ಅಪಘಾತದಲ್ಲಿ ಅಂಗಡಿಯಲ್ಲಿದ್ದ ಮಹಿಳೆಗೆ ಗಂಭೀರ ಗಾಯವಾಗಿದೆ. ಕೋಲಾರ ಜಿ. ಶ್ರೀನಿವಾಸಪುರ ತಾ.ಕಶೆಟ್ಟಿಪಲ್ಲಿ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಮರಿಪಲ್ಲಿ ಗ್ರಾಮದ ನಾಗರತ್ನಮ್ಮ ಎಂಬವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಡಪಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಾಗರತ್ಮಮ್ಮ ಟೀ- ಕಾಫಿ, ಟಿಫನ್ ತಿಂಡಿ ತಿನಿಸುಗಳನ್ನು ಇಟ್ಟಿಕೊಂಡಿದ್ದರು. ಅಪಘಾತದಲ್ಲಿ ಒಂದು ದ್ವಿಚಕ್ರ ವಾಹನ ಹಾಗೂ ಅಂಗಡಿ ಜಖಂಗೊಂಡಿದೆ. ಸ್ಥಳೀಯರ ಸಹಾಯದೊಂದಿಗೆ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version