Accident Case : ಈಜಲು ಚಂಪಕ ಸರಸು ಕಲ್ಯಾಣಿಗೆ ಜಿಗಿದ ಎಂಜಿನಿಯರ್‌ ಶವವಾಗಿ ಹೊರ ಬಂದ - Vistara News

ಶಿವಮೊಗ್ಗ

Accident Case : ಈಜಲು ಚಂಪಕ ಸರಸು ಕಲ್ಯಾಣಿಗೆ ಜಿಗಿದ ಎಂಜಿನಿಯರ್‌ ಶವವಾಗಿ ಹೊರ ಬಂದ

Accident Case : ಬೆಂಗಳೂರಿನಿಂದ ಸ್ನೇಹಿತರೊಟ್ಟಿಗೆ ಪ್ರವಾಸಕ್ಕೆ ಹೋದ ಯುವಕರ್ನೊವ ಹೆಣವಾಗಿ ಪತ್ತೆಯಾಗಿದ್ದಾನೆ. ಕಲ್ಯಾಣಿಯಲ್ಲಿ ಈಜಲು ಹೀಗಿ ನೀರುಪಾಲಾಗಿದ್ದಾನೆ.

VISTARANEWS.COM


on

Accident case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ : ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದ (Drowned in water) ಎಂಜಿನಿಯರ್‌ ಮೃತಪಟ್ಟಿದ್ದಾನೆ. ಶಿವಮೊಗ್ಗದ ಸಾಗರದ ಆನಂದಪುರ ಬಳಿ ಇರುವ ಚಂಪಕ ಸರಸು ಕಲ್ಯಾಣಿಯಲ್ಲಿ ಘಟನೆ (Accident Case) ನಡೆದಿದೆ. ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ.

ಬೆಂಗಳೂರಿನ ಕುಶಾಲ್‌ ತನ್ನಿಬ್ಬರು ಸ್ನೇಹಿತರೊಡನೆ ಪ್ರವಾಸಕ್ಕೆಂದು ಕಾರಿನಲ್ಲಿ ಆಗಮಿಸಿದ್ದ. ಕುಶಾಲ್, ಸಾಯಿರಾಂ ಹಾಗೂ ಯಶವಂತ ಈ ಮೂವರು ಇತಿಹಾಸ ಹೊಂದಿರುವ ಮಹಂತಿನ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಶಾಲ್‌ ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದಾನೆ. ಆದರೆ ಉಸಿರುಗಟ್ಟಿ ನೀರಿಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಹಲವಾರು ವರ್ಷಗಳ ಕಾಲ ಪಾಳು ಬಿದ್ದಿದ್ದ ಚಂಪಕ ಸರಸು ಕಲ್ಯಾಣಿಯನ್ನು ಚಲನಚಿತ್ರ ನಟ ಯಶ್ ಅವರ ಯಶೋಮಾರ್ಗ ಸಂಸ್ಥೆ ಕಳೆದೆರೆಡು ವರ್ಷಗಳ ಹಿಂದೆಯಷ್ಟೇ ಸ್ವಚ್ಚಗೊಳಿಸಿದ್ದರು. ಸ್ನೇಹಿತರೊಂದಿಗೆ ಈಜಾಡಲು ಬಂದ ಕುಶಾಲ್‌ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಲ್ಯಾಣಿಯಿಂದ ಶವ ಮೇಲಕ್ಕೇತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Assault Case : ಬೀದಿಯಲ್ಲೇ ಲೇಟ್‌ ನೈಟ್‌ ಪಾರ್ಟಿ; ಪ್ರಶ್ನಿಸಿದ್ದಕ್ಕೆ ಯುವಕನಿಂದ ಪೊಲೀಸರಿಗೆ ಅವಾಜ್

ಗದಗದಲ್ಲಿ ಬಸ್‌ ಹರಿದು 30 ಕುರಿಗಳು ಸಾವು

ಗದಗದ ಗಜೇಂದ್ರಗಡ-ರೋಣ ರಸ್ತೆ ಮಾರ್ಗದ ದಿಂಡೂರ ಗ್ರಾಮದ ಕ್ರಾಸ್‌ನಲ್ಲಿ ಬಸ್‌ ಹರಿದು 30 ಕುರಿಗಳು ಮೃತಪಟ್ಟಿವೆ. ಓವರ್ ಟೆಕ್ ಮಾಡಲು ಹೋಗಿ ಮೂವತ್ತು ಕುರಿಗಳ ಮೇಲೆ ಬಸ್‌ ಹರಿದಿದೆ. ಬದಾಮಿ ಘಟಕದ ಸರ್ಕಾರಿ ಬಸ್ ಚಾಲಕ ನಿರ್ಲಕ್ಷ್ಯದಿಂದ ಸುಮಾರು 4.5 ಲಕ್ಷ‌ ಮೌಲ್ಯದ ಕುರಿಗಳು ಮೃತಪಟ್ಟಿವೆ. ಕುರಿಗಳನ್ನು ಕಳೆದುಕೊಂಡು ಕುರಿಗಾಯಿಗಳು ಗೋಳಾಡಿದ್ದರು.

ಚಿಕ್ಕಬಳ್ಳಾಪುರದಲ್ಲಿ ಚಲಿಸುವ ರೈಲಿಗೆ ಸಿಲುಕಿ ವಯೋವೃದ್ಧ ಸಾವು

ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ರೈಲ್ವೇ‌ ನಿಲ್ದಾಣದ ಬಳಿ ಚಲಿಸುವ ರೈಲಿಗೆ ಸಿಲುಕಿ ಅಪರಿಚಿತ ವಯೋವೃದ್ಧ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದಿಂದ ಬಂಗಾರಪೇಟೆಗೆ ಹೋಗುತಿದ್ದ ರೈಲಿಗೆ ಸಿಲುಕಿದ್ದಾರೆ. ವೈಯುಕ್ತಿಕ‌ ಕಾರಣ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಸದ್ಯ ವೃದ್ಧನ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕೋಲಾರದಲ್ಲಿ ರಸ್ತೆ ಬದಿ ಅಂಗಡಿಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ಅಂಗಡಿಗೆ ನುಗ್ಗಿದೆ. ಅಪಘಾತದಲ್ಲಿ ಅಂಗಡಿಯಲ್ಲಿದ್ದ ಮಹಿಳೆಗೆ ಗಂಭೀರ ಗಾಯವಾಗಿದೆ. ಕೋಲಾರ ಜಿ. ಶ್ರೀನಿವಾಸಪುರ ತಾ.ಕಶೆಟ್ಟಿಪಲ್ಲಿ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಮರಿಪಲ್ಲಿ ಗ್ರಾಮದ ನಾಗರತ್ನಮ್ಮ ಎಂಬವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಡಪಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಾಗರತ್ಮಮ್ಮ ಟೀ- ಕಾಫಿ, ಟಿಫನ್ ತಿಂಡಿ ತಿನಿಸುಗಳನ್ನು ಇಟ್ಟಿಕೊಂಡಿದ್ದರು. ಅಪಘಾತದಲ್ಲಿ ಒಂದು ದ್ವಿಚಕ್ರ ವಾಹನ ಹಾಗೂ ಅಂಗಡಿ ಜಖಂಗೊಂಡಿದೆ. ಸ್ಥಳೀಯರ ಸಹಾಯದೊಂದಿಗೆ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Valmiki Corporation Scam: ವಾಲ್ಮೀಕಿ ನಿಗಮ ಹಗರಣದ ಚಾರ್ಜ್‌ಶೀಟ್‌ ಸಲ್ಲಿಕೆ, ನಾಗೇಂದ್ರಗೆ ಕ್ಲೀನ್‌ ಚಿಟ್!‌

Valmiki Corporation Scam: ಲೆಕ್ಕಪರಿಶೋಧಕ ಚಂದ್ರಶೇಖರ್ (Chandrashekhar) ಆತ್ಮಹತ್ಯೆ (Sucied) ಪ್ರಕರಣ ಸಂಬಂಧ ಸಿಐಡಿ (CID) ಅಧಿಕಾರಿಗಳು ಸಲ್ಲಿಸರುವ ಚಾರ್ಜ್‌ಶೀಟ್‌ನಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

VISTARANEWS.COM


on

Valmiki Corporation Scam
Koo

ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Corporation Scam) ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ತನಿಖೆಗಾಗಿ ರಚಿಸಲಾಗಿರುವ ಎಸ್‌ಐಟಿ ಚಾರ್ಜ್‌ಶೀಟ್‌ (SIT Charge Sheet) ಸಲ್ಲಿಸಿದೆ. ಇದರಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರನ್ನು ಹೊಣೆಯಾಗಿಸಲಾಗಿದೆ. ಆದರೆ ಮಾಜಿ ಸಚಿವ ನಾಗೇಂದ್ರ (EX Minister Nagendra) ಹೆಸರೇ ಇಲ್ಲ!

ಲೆಕ್ಕಪರಿಶೋಧಕ ಚಂದ್ರಶೇಖರ್ (Chandrashekhar) ಆತ್ಮಹತ್ಯೆ (Sucied) ಪ್ರಕರಣ ಸಂಬಂಧ ಸಿಐಡಿ (CID) ಅಧಿಕಾರಿಗಳು ಸಲ್ಲಿಸರುವ ಚಾರ್ಜ್‌ಶೀಟ್‌ನಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಎಸ್‌ಐಟಿ (SIT) ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್‌ಶೀಟ್ ಅನ್ನು ಶಿವಮೊಗ್ಗ ಕೋರ್ಟ್‌ಗೆ ಸಲ್ಲಿಸಿದೆ. ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ನಾಗೇಂದ್ರ ಹೆಸರನ್ನು ಕೈ ಬಿಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರಶೇಖರ್ ಅವರ ಡೆತ್ ನೋಟ್ ಹಾಗೂ ನಾಗೇಂದ್ರ ಪತ್ನಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿರುವ ಎಸ್‌ಐಟಿ ತಂಡ 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಗರಣದಲ್ಲಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ (52) ಅವರು ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್.ಪಿ ಬರೆದಿರುವ ಡೆತ್‌ ನೋಟ್‌ನಲ್ಲಿ ಹೆಸರು ಹೇಳದೆ ಸಚಿವ ಬಿ.ನಾಗೇಂದ್ರ ಅವರ ಬಗ್ಗೆ ಉಲ್ಲೇಖ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಕ್ರೋಶ ಎದ್ದ ಪರಿಣಾಮ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆತ್ಮಹತ್ಯೆಗೆ ಪ್ರಚೋದನೆಗೆ ನಿಗಮದ ಎಂಡಿ ಪದ್ಮನಾಭ್ ಮತ್ತು ಪರುಶರಾಮ್ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿ ಒತ್ತಡ ನೀಡಿದ್ದಾರೆ ಎಂದು ಇಬ್ಬರ ಹೆಸರು ಉಲ್ಲೇಖಿಸಿದ್ದಾರೆ. ನಿಗಮದ ಹಗರಣದಲ್ಲಿ ಒಂದಿಷ್ಟು ಹಣವನ್ನು ಚಂದ್ರಶೇಖರ್ ಪಡೆದಿರುವುದಾಗಿ, ಪ್ರಕರಣ ಬೆಳಕಿಗೆ ಬಂದರೆ ಸಿಕ್ಕಿಬೀಳುವ ಭಯದಿಂದಾಗಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪದ್ಮನಾಭ್ ಅವರು ಗೋವಾ ಮತ್ತು ಹೈದ್ರಾಬಾದ್‌ಗೆ ಕರೆದುಕೊಂಡು ಹೋಗಿ ಒತ್ತಡ ಹಾಕಿದ್ದರು. ನೀನು ಹಣ ಪಡೆದಿದ್ದೀಯ, ಪ್ರಕರಣ ಬೆಳಕಿಗೆ ಬಂದ್ರೆ ನೀನೊಬ್ಬನೇ ಜೈಲಿಗೆ ಹೋಗ್ತಿಯಾ ಎಂದು ಬೆದರಿಕೆ ಹಾಕಿದ್ದರು. ನಿನ್ನ ವಿರುದ್ಧ ನಾನೇ ದೂರು ಕೊಡ್ತೀನಿ ಎಂದು ಚಂದ್ರಶೇಖರ್‌ಗೆ ಬೆದರಿಸಿದ್ದರು. ಹೀಗಾಗಿ ಪದ್ಮನಾಭ್ ಮತ್ತು ಪರುಶರಾಮ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ವಿರೋಧಪಕ್ಷಗಳು ರಾಜ್ಯಾಧ್ಯಂತ ಪ್ರತಿಭಟನೆ ನಡೆಸಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದ್ದರು. ಬಳಿಕ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದರು. ಆದ್ರೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಎಸ್‌ಐಟಿ ತಂಡ ಈ ಪ್ರಕರಣದಲ್ಲಿ ನಾಗೇಂದ್ರ ಹೆಸರನ್ನು ಕೈಬಿಟ್ಟಿದೆ. ಎಸ್‌ಐಟಿ ಹಗರಣಕ್ಕೆ ಸಂಬಂಧಿಸಿದಂತೆ 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಚಂದ್ರಶೇಖರ ಹೆಂಡತಿ ಮತ್ತು ನಿಗಮದ ಅಧಿಕಾರಿಗಳನ್ನು ಸಾಕ್ಷ್ಯ ಮಾಡಿದ್ದಾರೆ.

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಖ್ಯ ಖಾತೆಯಲ್ಲಿ ಹಿಂದಿನ ಸಾಲಿನ ಹಾಗೂ 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಹಣದಲ್ಲಿ 88 ಕೋಟಿ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಫೆ.26ರಂದು ಬ್ಯಾಂಕ್‌ನವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ 187.33 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಿದ್ದರು. ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮಾ.22ರಂದು 43.33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: R Ashok: ವಾಲ್ಮೀಕಿ ಹಗರಣ; ಮುಖ್ಯಮಂತ್ರಿ ಏನು ಕತ್ತೆ ಕಾಯುತ್ತಿದ್ದರೇ ಎಂದ ಆರ್‌. ಅಶೋಕ್‌

Continue Reading

ಮಳೆ

Karnataka Weather : ಕರಾವಳಿಯಲ್ಲಿ ರಭಸವಾಗಿ ಬೀಸಲಿದೆ ಗಾಳಿ; ಸಾಧಾರಣ ಮಳೆ ಸಾಧ್ಯತೆ

Karnataka Weather Forecast : ಕರಾವಳಿಯ ಸಮುದ್ರ ತೀರದಲ್ಲಿ ಗಾಳಿ ವೇಗ ಹೆಚ್ಚಾಗಿರಲಿದ್ದು, ಮಲೆನಾಡು ಹಾಗೂ ಒಳನಾಡಿನಲ್ಲಿ ಹಗುರದಿಂದ ಸಾಧಾರಣ (Rain News) ಮಳೆಯಾಗಲಿದೆ.

VISTARANEWS.COM


on

By

karnataka weather forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಮನಗರ, ಕೋಲಾರ, ದಾವಣಗೆರೆ, ಮೈಸೂರು ಮತ್ತು ಮಂಡ್ಯ ,ಚಾಮರಾಜನಗರದಲ್ಲಿ ಹಗುರದಿಂದ ಮಳೆಯಾಗಲಿದೆ.

ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ವಿಜಯನಗರ, ರಾಯಚೂರು ಮತ್ತು ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗದಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಶುಷ್ಕ ಹವಾಮಾನವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 31 , ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ.

ಇದನ್ನೂ ಓದಿ: Karnataka Weather: ಅಲೆಗಳ ಅಬ್ಬರಕ್ಕೆ ಅಂಕೋಲಾದಲ್ಲಿ ಕೊಚ್ಚಿ ಹೋದ ಮನೆ; ಭಾರಿ ಮಳೆಗೆ ಚಾರ್ಮಾಡಿಯಲ್ಲಿ ಧರೆಗುರುಳಿದ ಬಂಡೆಗಳು

ಯೆಲ್ಲೋ ಅಲರ್ಟ್‌

ಗುಡಗು ಸಹಿತ ಭಾರಿ ಮಳೆಯಾಗಲಿದ್ದು, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೀದರ್, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಆಗಸ್ಟ್‌ 24ರಂದು ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather: ಅಲೆಗಳ ಅಬ್ಬರಕ್ಕೆ ಅಂಕೋಲಾದಲ್ಲಿ ಕೊಚ್ಚಿ ಹೋದ ಮನೆ; ಭಾರಿ ಮಳೆಗೆ ಚಾರ್ಮಾಡಿಯಲ್ಲಿ ಧರೆಗುರುಳಿದ ಬಂಡೆಗಳು

Karnataka Weather Forecast: ಕರಾವಳಿಯಲ್ಲಿ ಅಲೆಗಳ ಅಬ್ಬರ ಜೋರಾಗಿದ್ದರೆ, ಇತ್ತ ಮಲೆನಾಡಿನಲ್ಲಿ ಭಾರಿ ಮಳೆಗೆ (Rain News) ಚಾರ್ಮಾಡಿ ಘಾಟ್‌ನಲ್ಲಿ ಬಂಡೆ ಕಲ್ಲುಗಳು ಧರೆಗುರುಳಿವೆ. ವಿಜಯಪುರ, ವಿಜಯನಗರದಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ.

VISTARANEWS.COM


on

By

Karnataka weather Forecast
Koo

ಕಾರವಾರ: ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಅಲೆಗಳ ಅಬ್ಬರ (Karnataka Weather Forecast) ಜೋರಾಗಿದೆ. ಭಾರೀ ಅಲೆಗಳ ಅಬ್ಬರಕ್ಕೆ (Rain News) ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಹಾರವಾಡದ ತರಂಗಮೇಟ ಪ್ರದೇಶದಲ್ಲಿ ಮನೆಯೊಂದು ಕೊಚ್ಚಿಹೋಗಿದೆ. ಮೀನುಗಾರ ಅಶೋಕ್ ಹರಿಕಂತ್ರ ಎಂಬುವವರ ಮನೆ ಸಮುದ್ರಪಾಲಾಗಿದೆ.

ತರಂಗಮೇಟ ತೀರದ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಅಲೆಗಳ ಅಬ್ಬರಕ್ಕೆ ಕಳೆದ ಮೂರು ತಿಂಗಳಿಂದ ಕಡಲಕೊರೆತ ಉಂಟಾಗಿತ್ತು. ಕುಟುಂಬಸ್ಥರು ಎರಡು ತಿಂಗಳ ಹಿಂದೆಯೇ ಮನೆ ಬಿಟ್ಟು ಬೇರೆಡೆ ಉಳಿದುಕೊಂಡಿದ್ದರು. ಇಂದು ಗುರುವಾರ ಅಲೆಗಳ ಅಬ್ಬರಕ್ಕೆ ಮನೆ, ತೆಂಗಿನಮರ ನೀರುಪಾಲಾಗಿದೆ. ಮನೆ, ತೆಂಗಿನಮರ ಕೊಚ್ಚಿಹೋಗುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ತರಂಗಮೇಟ ಕಡಲತೀರಕ್ಕೆ ಹೊಂದಿಕೊಂಡು 30ಕ್ಕೂ ಅಧಿಕ ಮೀನುಗಾರರ ಮನೆಗಳು ಇವೆ. ಕಡಲತೀರಕ್ಕೆ ಅಲೆತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ನ ತಪ್ಪಲಿನಲ್ಲಿ ಭಾರಿ ಮಳೆಯಾಗಿದೆ. ಧಾರಾಕಾರ ಮಳೆಗೆ ಚಾರ್ಮಾಡಿಯಲ್ಲಿ ಬಂಡೆಗಳು ಧರೆಗುರುಳಿವೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್‌ನ 8 ಮತ್ತು 9ನೇ ತಿರುವಿನಲ್ಲಿ ಘಟನೆ ನಡೆದಿದೆ.

ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆಯಲ್ಲೇ ನೀರು ತುಂಬಿ ಹರಿಯುತ್ತಿದೆ. ಮಳೆ ನೀರಿನ ಜತೆ ರಸ್ತೆಗೆ ಕಲ್ಲುಗಳು ತೇಲಿ ಬಂದಿದೆ. ಗುಡ್ಡ ಕುಸಿದು ರಸ್ತೆ ಮೇಲೆ ಬಂಡೆ ಕಲ್ಲುಗಳು ಉರುಳಿವೆ. ಸ್ಥಳಕ್ಕೆ ಚಾರ್ಮಾಡಿ ಘಾಟಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನ‌ ಸಂಚಾರ ಎಂದಿನಂತೆ ಇದ್ದು, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ.

ಇನ್ನೂ ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಗ್ರಾಮಸ್ಥರ ಕಣ್ಣೆದುರೆ ಮನೆಗೆ ಸಿಡಿಲು ಬಡಿದು, ಮನೆ ಚಾವಣಿ ಸಂಪೂರ್ಣ ಹಾನಿಯಾಗಿ, ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಮಾಳಿಗನಾಡು ಗ್ರಾಮದಲ್ಲಿ ಘಟನೆ ನಡೆದಿದೆ.

ಗ್ರಾಮದ ಸೀತು ಎಂಬುವವರ ಮನೆಗೆ ಸಂಪೂರ್ಣ ಹಾನಿಯಾಗಿದೆ. ಮನೆಯ ಸದಸ್ಯರು ತೋಟದ ಕೆಲಸಕ್ಕೆ ಹೋಗಿದ್ದರಿಂದ ಅವಘಡ ಸಂಭವಿಸಿದಾಗ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯ ಹೆಂಚುಗಳು, ಬಾಗಿಲು ಕಿಟಕಿ ಸುಟ್ಟ ಸ್ಥಿತಿ ತಲುಪಿದೆ.

ಇದನ್ನೂ ಓದಿ: Belgavi News : ಪರಿಹಾರ ನೀಡಲು ವಿಳಂಬ; ಬೆಳಗಾವಿ ಎಸಿ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಹೊತ್ತೊಯ್ದ ರೈತರು!

ವಿಜಯಪುರದಲ್ಲಿ ಉಕ್ಕಿ ಹರಿಯುತ್ತಿರುವ ಹಳ್ಳ

ಇತ್ತ ರೋಣಿಹಾಳ ಹಳ್ಳ ಉಕ್ಕಿ ಹರಿಯುತ್ತಿದ್ದು, ಜನರು ಹಳ್ಳದಲ್ಲೆ ಓಡಾಡುತ್ತಿದ್ದಾರೆ. ನಿನ್ನೆ ಬುಧವಾರ ತಡರಾತ್ರಿ ಸುರಿದ ಮಳೆಗೆ ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ರೋಣಿಹಾಳ. ಗರಸಂಗಿ, ಆಸಂಗಿ ಹಳ್ಳಗಳು ಉಕ್ಕಿ ಹರಿದಿದೆ. ಅಪಾಯದ ನಡುವೆಯೂ ಗ್ರಾಮಸ್ಥರು ಜೀವದ ಹಂಗು ತೊರೆದು ಹಳ್ಳ ದಾಟಲು ಯತ್ನಿಸುತ್ತಿದ್ದಾರೆ. ವಿಜಯಪುರ ತಾಲೂಕಿನ ಲೋಗಾಂವಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ರಾಜು ಹುನ್ನೂರ್ ಎಂಬುವವರಿಗೆ ಸೇರಿದ ದ್ರಾಕ್ಷಿ ಬೆಳೆ ಭಾರಿ ಮಳೆಗೆ ಬೆಳೆಯ ಕಂಬಗಳು ಹಾಗೂ ದ್ರಾಕ್ಷಿ ಬೆಳೆ ನೆಲಕ್ಕುರುಳಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ದ್ರಾಕ್ಷಿ ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರ ಮನವಿ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ತಡ ರಾತ್ರಿ ಭರ್ಜರಿ ಮಳೆಗೆ ಬಹುತೇಕ ಕಡೆ ರಸ್ತೆಗಳು ಜಲಾವೃತಗೊಂಡಿದ್ದವು. ದಾವಣಗೆರೆ ನಗರ ಹಾಗೂ ಹೊನ್ನಾಳಿ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸುರಿದ ಮಳೆಯಿಂದಾಗಿ ಜಮೀನಿಗೆ ನೀರು ನುಗ್ಗಿದೆ. ವಿಜಯನಗರ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ರೈತರ ಜಮೀನಿ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಭಾರಿ ಮಳೆಗೆ ಬೈಲುವದ್ದಿಗೆರೆ ಗ್ರಾಮದ ಕೆರೆ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದು ಗುಲಾಬಿ ತೋಟ, ಮೆಣಸಿನಕಾಯಿ ತೋಟ, ಹತ್ತಿ, ಹಾಗೂ ಮೆಕ್ಕೆಜೋಳ ಬೆಳೆದಿದ್ದ ಜಮೀನಿಗೆ ನೀರು ನುಗ್ಗಿದೆ. ಹತ್ತಾರು ಸಾವಿರ ಖರ್ಚು ಮಾಡಿದ್ದ ಬೆಳೆ ಮಳೆಗೆ ಮುಕ್ಕಾಲು ಭಾಗ ಹಾನಿಯಾಗಿದೆ. ಬೆಳೆ ಹಾನಿಯಾಗಿದ್ದಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಗುಲಾಬಿ ಬೆಳೆಗಾರ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ ಬೆಳೆದ ರೈತರಿಂದ ಆಗ್ರಹಿಸಿದ್ದಾರೆ.

ಬಿರುಗಾಳಿಗೆ ವಾಲಿದ ಸಿಗ್ನಲ್ ಕಂಬ!

ಬಿರುಗಾಳಿಗೆ ಸಿಗ್ನಲ್‌ ಕಂಬ ವಾಲಿದ ಘಟನೆ ಗದಗ ನಗರದ ಮುಳಗುಂದ ನಾಕಾದ ಸಿಗ್ನಲ್‌ನಲ್ಲಿ ಘಟನೆ ನಡೆದಿದೆ. ವಾಹನಗಳ ಓಡಾಡುವ ಸಂದರ್ಭದಲ್ಲಿ ಕಂಬ ವಾಲಿದ್ದು, ಸವಾರರು ಕಕ್ಕಾಬಿಕ್ಕಿಯಾದರು. ತಕ್ಷಣ ಅಲರ್ಟ್ ಟ್ರಾಫಿಕ್ ಪೊಲೀಸರು ಬ್ಯಾರಿಕೆಡ್ ಹಾಕಿ ಪರ್ಯಾಯ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಸ್ಥಳಕ್ಕೆ ಟ್ರಾಫಿಕ್ ಪಿಎಸ್ಐ ಶಕುಂತಲಾ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಳೆಗೂ ಇರಲಿದೆ ಮಳೆ ಅಬ್ಬರ

ನಾಳೆ ಶುಕ್ರವಾರ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಗುಡುಗು ಸಹಿತ ಮಳೆಯಾಗಲಿದೆ. ಕೆಲವೊಮ್ಮೆ ನಿರಂತರ ಗಾಳಿಯ ವೇಗ 40-50 ಕಿ.ಮೀ ಬೀಸುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹಾಸನ

Physical Abuse : 5 ವರ್ಷದ ಬಾಲಕಿ ಮೇಲೆ ಎರಗಿ ಅತ್ಯಾಚಾರವೆಸಗಿದ ಅಪ್ರಾಪ್ತ

Physical Abuse : ಬಾಲಕನೊರ್ವ ಐದು ವರ್ಷದ ಬಾಲಕಿ ಮೇಲೆ ಎರಗಿ ಅತ್ಯಾಚಾರವೆಸಗಿರುವ ಘಟನೆ ಹಾಸನದಲ್ಲಿ ನಡೆದಿದೆ.

VISTARANEWS.COM


on

By

Physical Abuse 5 year old girl raped by minor
ಸಾಂದರ್ಭಿಕ ಚಿತ್ರ
Koo

ಹಾಸನ: ಹಾಸನದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ನಡೆದಿದೆ. ಅಪ್ರಾಪ್ತನೊಬ್ಬ ಬಾಲಕಿ ಮೇಲೆ ಎರಗಿ ಅತ್ಯಾಚಾರ ನಡೆಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಕೃತ್ಯ ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ತಡೆಗೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಆರೋಪಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಹಾಸನದ ಡಿಸಿ ಕಛೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದ್ದರು.

ಸದ್ಯ ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ವಿದ್ಯಾರ್ಥಿನಿಯರ ಜತೆಗೆ ಶಿಕ್ಷಕನ ಅಸಭ್ಯ ವರ್ತನೆ

ಶಿವಮೊಗ್ಗ : ಸರ್ಕಾರಿ ವಸತಿ ಶಾಲೆ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ಶಿಕ್ಷಕನ ಬಂಧನವಾಗಿದೆ. ಕಾಮುಕ ಶಿಕ್ಷಕ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ಶಿಕ್ಷಕನ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದ್ದು, ಸಂಗೀತ ಶಿಕ್ಷಕ ಇಮ್ತಿಯಾಜ್ ಎಂಬಾತನ ಬಂಧನವಾಗಿದೆ.

ವಿದ್ಯಾರ್ಥಿಗಳ ಜತೆ ಅಸಭ್ಯವಾಗಿ ಹಾಗೂ ಅನುಚಿತ ರೀತಿಯಲ್ಲಿ ವರ್ತನೆ ತೋರಿಸುತ್ತಿದ್ದ. ಶಾಲೆಯಲ್ಲಿ ಹಾಗೂ ಪ್ರವಾಸಕ್ಕೆ ತೆರಳಿದ್ದ ವೇಳೆ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತಿಸಿದ್ದ. ಹೀಗಾಗಿ ವಸತಿ ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ವಸತಿಶಾಲೆಯ ಪ್ರಾಂಶುಪಾಲರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಪೋಕ್ಸೋ ಕೇಸ್ ಆರೋಪಿ ಇಮ್ತಿಯಾಜ್‌ ಬಂಧಿಸಿದ್ದಾರೆ.

ಇದನ್ನೂ ಓದಿ: Gas Cylinder Blast: ಸಿಲಿಂಡರ್‌ ಸ್ಫೋಟಕ್ಕೆ ಸುಟ್ಟುಕರಕಲಾದ ವ್ಯಕ್ತಿ; ಮನೆ ಗೋಡೆ ಬಿದ್ದು ಮಕ್ಕಳು ಗಾಯ

10 ರೂಪಾಯಿಯ ಆಸೆ ತೋರಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ!

ಚಿಕ್ಕೋಡಿ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ್ದ ವೃದ್ಧನನ್ನು ಬಂಧಿಸಲಾಗಿದೆ. ಈ ಕಾಮುಕ, ಬಾಲಕಿಗೆ 10 ರೂಪಾಯಿಯ ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದ ಎಂಬುದು ಬಯಲಿಗೆ ಬಂದಿದೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಸೀಫ್ ಭಾಗವಾನ್(70) ಬಾಲಕಿಗೆ ಬಾಲಕಿಗೆ 10 ರೂಪಾಯಿಯ ಆಸೆ ತೋರಿಸಿ ಬಾಲಕಿಯ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದ. ಬಳಿಕ ಈ ವಿಷಯವನ್ನು ಬಾಲಕಿ ಪೋಷಕರ ಬಳಿ ತಿಳಿಸಿದ್ದಳು. ವಿಷಯ ತಿಳಿದು ಸ್ಥಳೀಯರು ಅಸೀಫ್‌ಗೆ ಧರ್ಮದೇಟು ನೀಡಿದ್ದರು. ಇದೀಗ ಕಾಮುಕ‌ ಅಸೀಫ್ ಭಾಗವಾನ್‌ನನ್ನು ನಿಪ್ಪಾಣಿ ಶಹರ ಪೊಲೀಸರು ಬಂಧಿಸಿದ್ದಾರೆ.

ಚಿಕಿತ್ಸೆಗೆ ಬಂದ ವೃದ್ಧೆಯನ್ನೂ ಬಿಡದೆ ಅತ್ಯಾಚಾರ ಎಸಗಿದ ಕಾಮುಕ

ಚಿಕ್ಕಬಳ್ಳಾಪುರ: ಆಸ್ಪತ್ರೆ ಆವರಣದಲ್ಲೇ 65 ವರ್ಷದ ವೃದ್ಧೆಯೊಬ್ಬರ ಮೇಲೆ ಕಾಮಪಿಶಾಚಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಕೃತ್ಯ ನಡೆದಿದ್ದು, ಇರ್ಫಾನ್ (24) ಎಂಬಾತ ವೃದ್ಧೆಯನ್ನೂ ಬಿಡದ ಕಾಮುಕ.

ಇರ್ಫಾನ್ ಚಿಂತಾಮಣಿ ನಗರದ ಹೈದರಾಲಿ ನಗರದ ನಿವಾಸಿಯಾಗಿದ್ದು, ಚಿಕಿತ್ಸೆಗೆಂದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ವೃದ್ಧೆಯ ಮೇಲೆ ಕೃತ್ಯ ಎಸಗಿದ್ದಾನೆ. ಆಕ್ಸಿಜನ್ ಪ್ಲಾಂಟ್ ಪಕ್ಕದ ಶೆಡ್‌ನಲ್ಲಿ ಮಲಗಿದ್ದ ಮಹಿಳೆಯ ಮೇಲೆ ಈತ ಅತ್ಯಾಚಾರ ಎಸಗಿದ್ದು, ಈತನನ್ನು ಬಂಧಿಸಲಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ಮುರುಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಲ್ಕತಾ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ಜೂನಿಯರ್‌ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಸರಕಾರಿ ಆಸ್ಪತ್ರೆಗಳಲ್ಲಿನ ಸುರಕ್ಷಿತತೆಯ ಬಗೆಗೆ ಕಳವಳ ಮೂಡಿದ್ದು, ಇದಕ್ಕೆ ಈ ಘಟನೆ ಇನ್ನೊಂದು ಸೇರ್ಪಡೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
PM Modi Ukraine Visit
ವಿದೇಶ6 mins ago

PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

Consolidated Fund Misuse
ಪ್ರಮುಖ ಸುದ್ದಿ8 mins ago

Consolidated Fund Misuse: 1,494 ಕೋಟಿ ಸಂಚಿತ ನಿಧಿ ದುರ್ಬಳಕೆ; ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು!

Physical abuse
ಕ್ರೈಂ19 mins ago

Physical Abuse : 10 ವರ್ಷದ ಅಪ್ರಾಪ್ತೆ ಮೇಲೆ ಎರಗಿದ ಕಾಮುಕ; ಅತ್ಯಾಚಾರದ ವೇಳೆ ಕಿರುಚಾಡಿದ್ದಕ್ಕೆ ಕೊಲೆಗೈದ ಹಂತಕ

governor thawar chand gehlot dinesh kallahalli mb patil
ಪ್ರಮುಖ ಸುದ್ದಿ23 mins ago

MB Patil: ಸಿಎಂ ಆಯ್ತು, ಈಗ ಸಚಿವ ಎಂಬಿ ಪಾಟೀಲ್‌ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು

Anil Ambani
ವಾಣಿಜ್ಯ28 mins ago

Anil Ambani: ಅನಿಲ್‌ ಅಂಬಾನಿಗೆ ಸೆಬಿ ಶಾಕ್‌; 5 ವರ್ಷ ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ ನಿಷೇಧ, 25 ಕೋಟಿ ರೂ. ದಂಡ

Dinesh Karthik Apologises
ಕ್ರೀಡೆ58 mins ago

Dinesh Karthik Apologises: ಧೋನಿ ಅಭಿಮಾನಿಗಳಿಗೆ ಕೈ ಮುಗಿದು ಕ್ಷಮೆಯಾಚಿಸಿದ ದಿನೇಶ್​ ಕಾರ್ತಿಕ್​; ಕಾರಣವೇನು?

jindal land deal
ಪ್ರಮುಖ ಸುದ್ದಿ1 hour ago

Jindal Land Deal: ಅಂದು ಜಿಂದಾಲ್‌ಗೆ ಜಮೀನು ಕೊಡುವುದನ್ನು ವಿರೋಧಿಸಿದ್ದ ಕಾಂಗ್ರೆಸ್‌ ಈಗ 3677 ಎಕರೆ ಬರೆದು ಕೊಟ್ಟದ್ದೇಕೆ?

PM Modi Ukraine Visit
ವಿದೇಶ1 hour ago

PM Modi Ukraine Visit: ಜಗತ್ತಿಗೆ ಶಾಂತಿ ಸಂದೇಶ ಸಾರಲು ಭಾರತ ಬದ್ಧ; ಉಕ್ರೇನ್‌ ಭೇಟಿ ಮೂಲಕ ನಿಲುವು ಸ್ಪಷ್ಟಪಡಿಸಿದ ಮೋದಿ

Ganesh Chaturthi 2024
ಪ್ರಮುಖ ಸುದ್ದಿ1 hour ago

Ganesh Chaturthi 2024: ಪಿಒಪಿ ಗಣೇಶ ಮೂರ್ತಿಗೆ ನಿಷೇಧ; ಹಬ್ಬ ಆಚರಣೆಗೆ ಏನೆಲ್ಲಾ ನಿಯಮಗಳು? ಇಲ್ಲಿದೆ ವಿವರ

Murder case
ಕೋಲಾರ2 hours ago

Murder Case : ಟಿಡಿಪಿ ಶಾಸಕ ಬೆಂಬಲಿಗನ ಕೊಲೆಗೆ ಸ್ಕೆಚ್; ಆಂಧ್ರ ಪೊಲೀಸರಿಂದ ಕರ್ನಾಟಕ ಪೊಲೀಸ್‌ ಅರೆಸ್ಟ್‌!

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌