ಶಿವಮೊಗ್ಗ: ಪ್ರೀತಿಯಿಂದ ಸಾಕಿದ ಬೆಕ್ಕು ಕಚ್ಚಿ (Cat bite) ರೇಬೀಸ್ (Rabies) ಕಾಯಿಲೆ ಹರಡಿ ಮಹಿಳೆಯೊಬ್ಬರು ಸಾವಿಗೀಡಾದ (woman death) ದುರಂತ ಘಟನೆ ಶಿವಮೊಗ್ಗದಲ್ಲಿ (Shivamogga news) ನಡೆದಿದೆ. ಬೆಕ್ಕು ಕಚ್ಚಿದರೆ, ಪರಚಿದರೆ ನಿರ್ಲಕ್ಷ್ಯ ಮಾಡಬಾರದು ಎಂಬುದಕ್ಕೆ ಇದು ದೃಷ್ಟಾಂತದಂತಿದೆ.
ಹೌದು, ಸಾಕಿದ ಬೆಕ್ಕು ಮನೆಯೊಡತಿಯನ್ನೇ ಬಲಿ ಪಡೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ. 50 ವರ್ಷ ವಯಸ್ಸಿನ ಗಂಗೀಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ತಾನೇ ಸಾಕಿದ ಬೆಕ್ಕು ಮಹಿಳೆ ಕಾಲಿಗೆ ಕಚ್ಚಿತ್ತು. ಈಕೆ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು ಸುಮ್ಮನಾಗಿದ್ದರು. ನಂತರದ ಇಂಜೆಕ್ಷನ್‌ಗಳನ್ನು ಪಡೆಯಲು ವೈದ್ಯರಲ್ಲಿಗೆ ತೆರಳಿರಲಿಲ್ಲ.
ಹಲವು ದಿನಗಳ ಹಿಂದೆ ಬೆಕ್ಕು ಕಚ್ಚಿದ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಶುರುವಾಗಿತ್ತು. ರೇಬೀಸ್ ಹಬ್ಬಿದ್ದು, ದೇಹದಲ್ಲಿ ನಂಜು ಏರುತ್ತಲೇ ಹೋಗಿತ್ತು. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆಯಲ್ಲಿ ಮಹಿಳೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ನಿನ್ನೆ ಮೃತಪಟ್ಟಿದ್ದಾರೆ.
ಇದೇ ಬೆಕ್ಕು ಮೊದಲು ತರಲಘಟ್ಟದ ಕ್ಯಾಂಪ್ನಲ್ಲಿರುವ ಯುವಕನೋರ್ವನ ಮೇಲೆ ದಾಳಿ ಮಾಡಿತ್ತು. ಎರಡು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಕಚ್ಚಿತ್ತು. ಯಜಮಾನಿಯನ್ನು ಕಚ್ಚುವ ಮುನ್ನ ನಾಯಿಯ ಮರಿಯನ್ನೂ ಕಚ್ಚಿತ್ತು. ಯುವಕನ ಕಾಲಿಗೆ ಔಷಧ ಮಾಡಿ ನಂಜು ತೆಗೆಸಲಾಗಿತ್ತು. ಪರಿಣಾಮ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆಯ ಬಗ್ಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಟಿ.ಡಿ ತಿಮ್ಮಪ್ಪ ಪ್ರತಿಕ್ರಿಯಿಸಿದ್ದು, ನಾಯಿಯು ಬೆಕ್ಕಿಗೆ ಕಚ್ಚಿರಬೇಕು. ನಾಯಿಯ ರೇಬಿಸ್ ಮಹಿಳೆಗೆ ಕಚ್ಚಿದ ಬೆಕ್ಕಿಗೆ ಬಂದಿದೆ. ಅದೇ ಬೆಕ್ಕು ಮಹಿಳೆಗೆ ಕಚ್ಚಿದೆ. ಇದರಿಂದ ಮಹಿಳೆಯು ಮೃತಪಟ್ಟಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ನಾಯಿಯು ಈ ಬೆಕ್ಕಿಗೆ ಕಚ್ಚಿದ್ದರಿಂದ ರೇಬಿಸ್ ಹರಡಿದ್ದು, ಬಳಿಕ ಬೆಕ್ಕು ಮನೆ ಒಡತಿಗೆ ಕಚ್ಚಿದೆ. ಹೀಗಾಗಿ ಮಹಿಳೆ ರೇಬಿಸ್ನಿಂದ ಮೃತಪಟ್ಟಿದ್ದಾಳೆಂದು ಶಂಕಿಸಲಾಗಿದೆ.
ಇಲ್ಲಿ ಮಹಿಳೆಯು ಒಂದೇ ಇಂಜೆಕ್ಷನ್ ಪಡೆದು ಬಳಿಕ ನಿರ್ಲಕ್ಷ್ಯ ಮಾಡಿದ್ದಾಳೆ. ಗುಣಮುಖ ಆಗಿದೆ ಎಂದು ಭಾವಿಸಿ ನಾಟಿ ಮಾಡಲು ಹೋಗಿದ್ದಾರೆ. ನೀರಿಗೆ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ರೇಬಿಸ್ನಿಂದಾಗಿ ಅನಾರೋಗ್ಯ ಕಾಡಿದ ಪರಿಣಾಮ ಮತ್ತೆ ಗಂಗೀಬಾಯಿ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವಿಗೀಡಾಗಿದ್ದಾರೆ.
ಬೆಕ್ಕು, ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದರೆ ರೇಬೀಸ್ ಇಂಜೆಕ್ಷನ್ ಪಡೆದುಕೊಳ್ಳಬೇಕು. ಬಾವಲಿ ಮುಂತಾದ ಪಕ್ಷಿಗಳ ಪರಚಿದರೆ, ಕಚ್ಚಿದರೆ ಕೂಡ ಎಚ್ಚರಿಕೆ ವಗಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ.
ಉತ್ತರಪ್ರದೇಶದಲ್ಲೂ ಬೆಕ್ಕು ಕಚ್ಚಿ ತಂದೆ ಮಗ ಸಾವು
ಕಾನ್ಪುರ್: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur City) ಸಾಕು ಬೆಕ್ಕು (Pet Cat) ಕಚ್ಚಿದ ಕಾರಣಕ್ಕೆ (Cat Bite) ತಂದೆ ಮತ್ತು ಮಗ ಇಬ್ಬರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ(Father and Son). ಮೃತರಿಗೆ ಕಚ್ಚಿದ ಬೆಕ್ಕಿಗೆ, ಬೀದಿ ನಾಯಿಯೊಂದು ಕಚ್ಚಿತ್ತು. ಅದೇ ಬೆಕ್ಕು ತಂದೆ ಮತ್ತು ಮಗ ಇಬ್ಬರಿಗೂ ಕಚ್ಚಿದ್ದರಿಂದ ಅವರಿಗೆ ಮಾರಣಾಂತಿಕ ರೇಬೀಸ್ ಸೋಂಕು (rabies virus) ತಗುಲಿ, ಅಂತಿಮವಾಗಿ ಮೃತಪಟ್ಟರು. ಇವರಿಬ್ಬರೂ ಒಂದು ವಾರದ ಅಂತರದಲ್ಲಿ ಸಾವನ್ನಪ್ಪಿದ್ದಾರೆ.
ಕಾನ್ಪುರ ದೇಹತ್‌ನ ಅಕ್ಬರ್‌ಪುರ ನಗರದಲ್ಲಿ ಈ ಘಟನೆ ನಡೆದಿದ್ದು, ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಬೆಕ್ಕನ್ನು ಸಾಕಿದ್ದರು. ಕುಟುಂಬದ ಸದಸ್ಯರೆಲ್ಲರೂ ಬೆಕ್ಕಿನೊಂದಿಗೆ ಆಟ ಆಡುತ್ತಿದ್ದರು. ಈ ಬೆಕ್ಕಿಗೆ ಬೀದಿನಾಯಿ ಕಚ್ಚಿತು ಮತ್ತು ಕೆಲವೇ ದಿನಗಳಲ್ಲಿ ರೇಬೀಸ್‌ನ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಬಳಿಕ ಆಟವಾಡುತ್ತಿದ್ದ ವೇಳೆ ಕುಟುಂಬದ ಮಗನಿಗೆ ಬೆಕ್ಕು ಗೀಚಿದೆ. ಕ್ರಮೇಣ ಅವನ ಸ್ಥಿತಿ ಹದಗೆಡಲಾರಂಭಿಸಿತು. ಬಳಿಕ ಆತನಲ್ಲಿ ಬೆಕ್ಕಿನ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಕೆಲವು ದಿನಗಳ ನಂತರ, ಆತ ಮೃತಪಟ್ಟ. ಬಳಿಕ, ಮೃತ ಯುವಕನ ತಂದೆಯಲ್ಲೂ ಅದೇ ಲಕ್ಷಣಗಳು ಕಾಣಿಸಕೊಳ್ಳಲಾರಂಭಿಸಿದವು. ಮಗ ಸತ್ತ ಒಂದು ವಾರದಲ್ಲೇ ರೇಬೀಸ್ ಕಾಯಿಲೆಗೆ ತಂದೆ ಕೂಡ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Snake Bite: ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಸಾವು