ಶಿವಮೊಗ್ಗ: ಕೋವಿಡ್ ಸಮಯದಲ್ಲಿ ಮನೆಗೆ ಹೋಗಿ ಬೆದರಿಕೆ ಹಾಕಿದ ಆರೋಪದಲ್ಲಿ ಒಂದು ವರ್ಷದ ಬಳಿಕ ಪಿಎಸ್ಐ, ಸಿಪಿಐ, ಪಿಡಿಓ, ವೈದ್ಯರು ಸೇರಿದಂತೆ 10 ಜನರ ವಿರುದ್ಧ ದೂರು ದಾಖಲಾಗಿದೆ.
2020ರ ಮಾರ್ಚ್‌ನಲ್ಲಿ ಮನೆಗೆ ನುಗ್ಗಿ, ಹಲ್ಲೆ ಮಾಡಿದ್ದಾರೆಂದು ಸೊರಬ ತಾಲೂಕಿನ ದೇವಾತಿಕೊಪ್ಪ ಗ್ರಾಮದ ಪ್ರಕಾಶ್ ನಾಯಕ್ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 2020ರ ಮಾರ್ಚ್‌ನಲ್ಲಿ ಕೋವಿಡ್ ಸಮಯದಲ್ಲಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಕೊರೋನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಕ್ರಮವಾಗಿ ಬಂಧಿಯಾಗುವಂತೆ ಮಾಡಿದ್ದರು. ಹಣೆಗೆ ಪಿಸ್ತೂಲ್ ಇಟ್ಟು ಕೊಲೆ ಮಾಡಲು ಪ್ರಯತ್ನಿಸಿದ್ದರು ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ | PM Cares : ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗೆ, ಪಿಎಂ ಕೇರ್ಸ್ ಯೋಜನೆಯ ಸೌಲಭ್ಯ ವಿತರಣೆ
ಆರಂಭದಲ್ಲಿ ಪ್ರಕಾಶ್ ದೂರನ್ನು ಪೊಲೀಸರು ಸ್ವೀಕರಿಸದ ಹಿನ್ನಲೆಯಲ್ಲಿ ಕೋರ್ಟ್‌ನಲ್ಲಿ ಖಾಸಗಿಯಾಗಿ ಪ್ರಕಾಶ್ ನಾಯ್ಕ್ ದೂರು ದಾಖಲಿಸಿದ್ದರು. ಇದೀಗ ಕೋರ್ಟ್ ಸೂಚನೆಯ ಮೇರೆಗೆ ಸೊರಬ ವೃತ್ತದ ಸಿಪಿಐ, ಸೊರಬ ಪೊಲೀಸ್ ಠಾಣೆ ಪಿಎಸ್ಐ ಹಾಗೂ ಮೂವರು ಸಿಬ್ಬಂದಿಯ ವಿರುದ್ಧ ದೂರು ದಾಖಲಾಗಿದೆ. ಅಂಡಿಗೆ ಗ್ರಾಮ ಪಂಚಾಯತ್ ಪಿಡಿಓ ಮತ್ತು ಓರ್ವ ಸಿಬ್ಬಂದಿ ಹಾಗೂ ಓಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಓರ್ವ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ |ಮಕ್ಕಳಿಗೆ ಕೋವಿಡ್ ಲಸಿಕೆ ಹಿನ್ನಡೆ, ಬಿಬಿಎಂಪಿಯಿಂದ ಶಾಲೆಗಳಲ್ಲಿ ವಿಶೇಷ ಅಭಿಯಾನ