Site icon Vistara News

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗೆ ಗುಂಡು

aslam shimogga

ಶಿವಮೊಗ್ಗ: ಶಿವಮೊಗ್ಗದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಮತ್ತೊಬ್ಬ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿ ಸೆರೆಹಿಡಿದಿದ್ದಾರೆ.

ಬಂಧನಕ್ಕೆ ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ಯತ್ನ ನಡೆಸಿದ ಅಸ್ಲಾಮ್ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ. ಪುರಲೆ ರಸ್ತೆಯ ರಾಶಿ ಡವಲಪರ್ಸ್ ಲೇಔಟ್‌ನಲ್ಲಿ ಅಡಗಿದ್ದ ಅಸ್ಲಾಮ್ ಎಂಬಾತನನ್ನು ಹಿಡಿಯಲು ದೊಡ್ಡಪೇಟೆ ಠಾಣೆಯ ಪಿಎಸ್ಐ ವಸಂತ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಸಿಬ್ಬಂದಿ ರಮೇಶ್ ಮೇಲೆ ಆತ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಅಸ್ಲಾಮ್‌ನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ರಮೇಶ್ ಮತ್ತು ಆರೋಪಿ ಅಸ್ಲಾಮ್‌ನನ್ನು ಮೆಗ್ಗಾನ್‌ಗೆ ದಾಖಲಿಸಲಾಗಿದೆ.

ಆರೋಪಿ ಅಸ್ಲಾಮ್ ಮೇಲೆ ಈಗಾಗಲೇ 9 ಕೇಸ್‌ಗಳಿವೆ. ಅಶೋಕ್ ಪ್ರಭು ಎಂಬವವರ ಮೇಲೆ ಹಲ್ಲೆ ನಡೆಸಿದ ಪ್ರಕರಣದದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. ಶಿವಮೊಗ್ಗದ ಹೋಟೆಲ್ ರಾಯಲ್ ಆರ್ಕಿಡ್ ಬಳಿ ಅ.30ರಂದು ನಾಲ್ವರಿಂದ ಹಲ್ಲೆ ನಡೆದಿತ್ತು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ನಿನ್ನೆ ಹೊಸನಗರ ನಿವಾಸಿ ಆಸಿಫ್ ಅಲಿಯಾಸ್ ಚಿಲ್ಲಿ (26) ಎಂಬಾತನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ; ಮುಖದ ಭಾಗಕ್ಕೆ ಗಂಭೀರ ಗಾಯ

Exit mobile version