Site icon Vistara News

Kodachadri Trip: ಮಲೆನಾಡು ಪ್ರವಾಸಿಗರಿಗೆ ಸಿಹಿ ಸುದ್ದಿ; ಕೊಡಚಾದ್ರಿ ಪ್ರವೇಶ ನಿರ್ಬಂಧ ತೆರವು, ನಿಮಗಿದು ತಿಳಿದಿರಲಿ

Kodachadri Hill

Karnataka Government Lifts Tour Restrictions To Kodachadri Hill, But No Trekking

ಶಿವಮೊಗ್ಗ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಭಕ್ತರ ಶ್ರದ್ಧಾಕೇಂದ್ರವಾದ ಕೊಡಚಾದ್ರಿ (Kodachadri) ಗಿರಿಗೆ ಪ್ರವಾಸಿಗರು (Kodachadri Trip) ಹಾಗೂ ಭಕ್ತರನ್ನು (Devotees) ನಿರ್ಬಂಧಿಸಿ ವನ್ಯಜೀವಿ ವಿಭಾಗ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಇದರಿಂದಾಗಿ ಮಲೆನಾಡು ಪ್ರವಾಸ ಕೈಗೊಳ್ಳುವವರಿಗೆ ಮತ್ತೊಂದು ಐತಿಹಾಸಿಕ ತಾಣವನ್ನು ನೋಡಲು ಅನುಕೂಲವಾಗಲಿದೆ.

ರಾಜ್ಯದಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗವು ಜುಲೈ 30ರಿಂದ ಕೊಡಚಾದ್ರಿ ಗಿರಿಗೆ ಪ್ರವೇಶವನ್ನು ನಿಷೇಧಿಸಿತ್ತು. ಈಗ ಕಳೆದ 15 ದಿನಗಳಿಂದ ವಿಧಿಸಿದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಆದರೆ, ಪ್ರವಾಸಿಗರು ಹಾಗೂ ಭಕ್ತರು ಕೇವಲ ವಾಹನಗಳಲ್ಲಿ ತೆರಳಬಹುದು. ಚಾರಣ ಮಾಡಲು ಸರ್ಕಾರ ಅವಕಾಶ ನೀಡಿಲ್ಲ. ಭೂಕುಸಿತ, ಜಾರಿ ಬೀಳುವುದು ಸೇರಿ ಹಲವು ಅಪಾಯ ಇರುವುದರಿಂದ ಚಾರಣಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.

ಕೊಡಚಾದ್ರಿ ಗಿರಿಯ ಮನಮೋಹಕ ನೋಟ.

ಕೆಲ ದಿನಗಳ ಹಿಂದೆ ಮುಂಗಾರು ಮಳೆ ತೀವ್ರವಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ, ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ವಾಹನಗಳು ಹಾಗೂ ಚಾರಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಇದನ್ನೂ ಓದಿ: Karnataka Falls : ಕರ್ನಾಟಕದಲ್ಲಿ ನೀವು ನೋಡಲೇಬೇಕಾದ ಜಲಪಾತಗಳಿವು

ವನ್ಯಜೀವಿ ಜೀವಿ ವಿಭಾಗದ ಈ ಕ್ರಮದಿಂದ, ಪ್ರತಿನಿತ್ಯ ಕೊಡಚಾದ್ರಿ ಗಿರಿಗೆ ಪ್ರವಾಸಿಗರನ್ನು ಹೊತ್ತೊಯುವ ನಿಟ್ಟೂರು, ಕೊಲ್ಲೂರು, ಕಟ್ಟಿನಹೊಳೆ, ಸಂಪೆಕಟ್ಟೆ ಗಳ ಸುಮಾರು 150ಕ್ಕೂ ಹೆಚ್ಚು ಜೀಪ್ ಮಾಲೀಕರು ಮತ್ತು ಚಾಲಕರ ಬದುಕು ದುಸ್ತರವಾಗಿತ್ತು. ಆದರೀಗ ನಿರ್ಬಂಧ ಸಡಿಲಗೊಳಿಸಿದ ಕಾರಣ ಮತ್ತೆ ಪ್ರವಾಸಿಗರ ಆಗಮನವಾಗಿ ಜೀಪ್‌ಗಳ ಮಾಲೀಕರು ಹಾಗೂ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ.

Exit mobile version