Site icon Vistara News

Shivamogga Airport: ಮಲೆನಾಡು ಯುವಕರ ಉದ್ಯೋಗದ ಮಹಾದ್ವಾರ ತೆರೆದಿದೆ: ಸಿಎಂ ಬಸವರಾಜ ಬೊಮ್ಮಾಯಿ

modi-at-belagavi-CM Basavaraja bommai speech

#image_title

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಉದ್ಘಾಟನೆಯಾದ ವಿಮಾನ ನಿಲ್ದಾಣವು ಈ ಭಾಗದ ಯುವಕರ ಉದ್ಯೋಗದ ಮಹಾದ್ವಾರವನ್ನು ತೆರೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದ ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಅಡಕೆ ಹಾರ, ಕೆಂಪು ಶಾಲು, ಕೆಂಪು ಪೇಟ ಹಾಗೂ ವಿಮಾನ ನಿಲ್ದಾಣದ ಮಾದರಿಯನ್ನು ಉಡುಗೊರೆಯಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿ ಗೌರವಿಸಲಾಯಿತು. ನಂತರ ಬಿ.ಎಸ್‌. ಯಡಿಯೂರಪ್ಪ ಅವರನ್ನು ಗೌರವಿಸಲಾಯಿತು. ಅಡಕೆ ಹಾರ, ಪೇಟದ ಜತೆಗೆ ನೇಗಿಲ ಮಾದರಿಯನ್ನು ನೀಡಲಾಯಿತು.

ಮಾತು ಮುಂದುವರಿಸಿದ ಸಿಎಂ ಬೊಮ್ಮಾಯಿ, ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಯುವಕರಿಗೆ ಅವಕಾಶಗಳನ್ನು ಒದಗಿಸುವ ಹೆಬ್ಬಾಗಿಲು ಆಗಲಿದೆ. ಇದು ಇನ್ನೊಂದೆರಡು ವರ್ಷದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾನವಾಗಲಿದೆ. ಇದೆಲ್ಲದಕ್ಕೆ ಕಾರಣ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು.

2014ರ ನಂತರ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ. ಸ್ವಾತಂತ್ರ್ಯದ ನಂತರ ಆದದ್ದಕ್ಕಿಂತಲೂ ಹೆಚ್ಚು ವಿಮಾನ ನಿಲ್ದಾನ 2014ರಿಂದ ಈಚೆಗೆ ಆಗಿದೆ. ಹೆಚ್ಚಿನ ಮೆಡಿಕಲ್‌ ಕಾಲೇಜುಗಳು, ಮನೆಮನೆಗೆ ನೀರು ಲಭಿಸುತ್ತಿರುವುದು ಇದೇ ಅವಧಿಯಲ್ಲಿ 2014ರ ನಂತದ ದುಪ್ಪಟ್ಟು ಮನೆಗಳು, ಮೂರು ಪಟ್ಟು ಹೆಚ್ಚು ಶೌಚಾಲಯ ನಿರ್ಮಿಸಿದ್ದಾರೆ.

ಮಹತ್ವದ G20 ಅಧ್ಯಕ್ಷ ಸ್ಥಾನ ಭಾರತದ ಪ್ರಧಾನಿಗಳಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಚಾರ. ಆರ್ಥಿಕವಾಗಿ ಹೆಚ್ಚು ವಿದೇಶಿ ಬಂಢೌಆಳ ಲಭಿಸುತ್ತಿದೆ. ತಂತ್ರಜ್ಞಾನ ಹಾಗೂ ನಾವೀನ್ಯತೆ ಜತೆಗೆ ಸಾಮಾಜಿಕವಾಗಿಯೂ ಸಾಧನೆಯನ್ನು ಮಾಡುತ್ತಿದ್ದೇವೆ. ವಿಜಾಪುರ, ಹಾಸನ, ಕಾರವಾ, ಕೊಪ್ಪಳ, ರಾಯಚೂರು ಹಾಗೂ ದಾವಣಗೆರೆಯಲ್ಲೂ ವಿಮಾನ ನಿಲ್ದಾಣಗಳು ನಿರ್ಮಾಣ ಆಗಲಿವೆ. ಮತ್ತಷ್ಟು ಬಂದಗಳು ನಿರ್ಮಾಣ ಹಾಗೂ ವಿಸ್ತರಣೆ ಆಗಲಿವೆ.

ಇದನ್ನೂ ಓದಿ: Shivamogga Airport: ಪ್ರಧಾನಿ ಮೋದಿಗೆ ನೀಡಲು ಸಿದ್ಧವಾಗಿದೆ ಶ್ರೀಗಂಧದ ವಿಮಾನ ನಿಲ್ದಾಣ

ಯಡಿಯೂರಪ್ಪ ಅವರು ದೈಹಿಕ ಹಲ್ಲೆಯನ್ನೂ ಲೆಕ್ಕಿಸದೆ ಹೋರಾಟ ಮಾಡಿಕೊಂಡೇ ಬಂದವರು. ತಮ್ಮ ಹೋರಾಟಗಳನ್ನು ತಾರ್ಕಿಕ ಅಂತ್ಯ ಕಾಣಿಸುವ ಕಾರ್ಯವನ್ನು ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಮಾಡಿದ್ದಾರೆ. ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿಯಂತಹ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಸೂರ್ಯ ಚಂದ್ರರು ಇರುವವರೆಗೂ ಯಡಿಯೂರಪ್ಪ ಅವರ ಹೆಸರು ಇರಲಿದೆ.

Exit mobile version