ಕರ್ನಾಟಕ ಎಲೆಕ್ಷನ್
Shivamogga Airport: ಮಲೆನಾಡು ಯುವಕರ ಉದ್ಯೋಗದ ಮಹಾದ್ವಾರ ತೆರೆದಿದೆ: ಸಿಎಂ ಬಸವರಾಜ ಬೊಮ್ಮಾಯಿ
ಸ್ವಾಥಂತ್ರ್ಯದ ನಂತರದಲ್ಲಿ ದೇಶದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳ ದುಪ್ಪಟ್ಟು ಕಾರ್ಯವು 2014ರಿಂದೀಚೆಗೆ ನೆರವೇರಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಉದ್ಘಾಟನೆಯಾದ ವಿಮಾನ ನಿಲ್ದಾಣವು ಈ ಭಾಗದ ಯುವಕರ ಉದ್ಯೋಗದ ಮಹಾದ್ವಾರವನ್ನು ತೆರೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದ ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಅಡಕೆ ಹಾರ, ಕೆಂಪು ಶಾಲು, ಕೆಂಪು ಪೇಟ ಹಾಗೂ ವಿಮಾನ ನಿಲ್ದಾಣದ ಮಾದರಿಯನ್ನು ಉಡುಗೊರೆಯಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿ ಗೌರವಿಸಲಾಯಿತು. ನಂತರ ಬಿ.ಎಸ್. ಯಡಿಯೂರಪ್ಪ ಅವರನ್ನು ಗೌರವಿಸಲಾಯಿತು. ಅಡಕೆ ಹಾರ, ಪೇಟದ ಜತೆಗೆ ನೇಗಿಲ ಮಾದರಿಯನ್ನು ನೀಡಲಾಯಿತು.
ಮಾತು ಮುಂದುವರಿಸಿದ ಸಿಎಂ ಬೊಮ್ಮಾಯಿ, ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಯುವಕರಿಗೆ ಅವಕಾಶಗಳನ್ನು ಒದಗಿಸುವ ಹೆಬ್ಬಾಗಿಲು ಆಗಲಿದೆ. ಇದು ಇನ್ನೊಂದೆರಡು ವರ್ಷದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾನವಾಗಲಿದೆ. ಇದೆಲ್ಲದಕ್ಕೆ ಕಾರಣ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು.
2014ರ ನಂತರ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ. ಸ್ವಾತಂತ್ರ್ಯದ ನಂತರ ಆದದ್ದಕ್ಕಿಂತಲೂ ಹೆಚ್ಚು ವಿಮಾನ ನಿಲ್ದಾನ 2014ರಿಂದ ಈಚೆಗೆ ಆಗಿದೆ. ಹೆಚ್ಚಿನ ಮೆಡಿಕಲ್ ಕಾಲೇಜುಗಳು, ಮನೆಮನೆಗೆ ನೀರು ಲಭಿಸುತ್ತಿರುವುದು ಇದೇ ಅವಧಿಯಲ್ಲಿ 2014ರ ನಂತದ ದುಪ್ಪಟ್ಟು ಮನೆಗಳು, ಮೂರು ಪಟ್ಟು ಹೆಚ್ಚು ಶೌಚಾಲಯ ನಿರ್ಮಿಸಿದ್ದಾರೆ.
ಮಹತ್ವದ G20 ಅಧ್ಯಕ್ಷ ಸ್ಥಾನ ಭಾರತದ ಪ್ರಧಾನಿಗಳಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಚಾರ. ಆರ್ಥಿಕವಾಗಿ ಹೆಚ್ಚು ವಿದೇಶಿ ಬಂಢೌಆಳ ಲಭಿಸುತ್ತಿದೆ. ತಂತ್ರಜ್ಞಾನ ಹಾಗೂ ನಾವೀನ್ಯತೆ ಜತೆಗೆ ಸಾಮಾಜಿಕವಾಗಿಯೂ ಸಾಧನೆಯನ್ನು ಮಾಡುತ್ತಿದ್ದೇವೆ. ವಿಜಾಪುರ, ಹಾಸನ, ಕಾರವಾ, ಕೊಪ್ಪಳ, ರಾಯಚೂರು ಹಾಗೂ ದಾವಣಗೆರೆಯಲ್ಲೂ ವಿಮಾನ ನಿಲ್ದಾಣಗಳು ನಿರ್ಮಾಣ ಆಗಲಿವೆ. ಮತ್ತಷ್ಟು ಬಂದಗಳು ನಿರ್ಮಾಣ ಹಾಗೂ ವಿಸ್ತರಣೆ ಆಗಲಿವೆ.
ಇದನ್ನೂ ಓದಿ: Shivamogga Airport: ಪ್ರಧಾನಿ ಮೋದಿಗೆ ನೀಡಲು ಸಿದ್ಧವಾಗಿದೆ ಶ್ರೀಗಂಧದ ವಿಮಾನ ನಿಲ್ದಾಣ
ಯಡಿಯೂರಪ್ಪ ಅವರು ದೈಹಿಕ ಹಲ್ಲೆಯನ್ನೂ ಲೆಕ್ಕಿಸದೆ ಹೋರಾಟ ಮಾಡಿಕೊಂಡೇ ಬಂದವರು. ತಮ್ಮ ಹೋರಾಟಗಳನ್ನು ತಾರ್ಕಿಕ ಅಂತ್ಯ ಕಾಣಿಸುವ ಕಾರ್ಯವನ್ನು ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಮಾಡಿದ್ದಾರೆ. ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿಯಂತಹ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಸೂರ್ಯ ಚಂದ್ರರು ಇರುವವರೆಗೂ ಯಡಿಯೂರಪ್ಪ ಅವರ ಹೆಸರು ಇರಲಿದೆ.
ಕರ್ನಾಟಕ
Shadow CM: ಕಾಂಗ್ರೆಸ್‌ನ ಪೇಸಿಎಂ ಅಭಿಯಾನಕ್ಕೆ ಬಿಜೆಪಿಯಿಂದ ಶ್ಯಾಡೊ ಸಿಎಂ ಪೋಸ್ಟರ್ ವಾರ್
ಅಧಿಕಾರಿಗಳ ವರ್ಗಾವಣೆಯಿಂದ ಮೊದಲುಗೊಂಡು ಅನೇಕ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೆ (Shadow CM) ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು: ವಿಧಾನಸಭೆ ಎಲೆಕ್ಷನ್‌ಗೂ ಮುನ್ನ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್ ರೂಪಿಸಿತ್ತು. ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಮಾಡಿದ್ದ 40% ಕಮಿಷನ್ ಆರೋಪವನ್ನೇ ಆಧಾರವಾಗಿಸಿಕೊಂಡು ಪೆಸಿಎಂ ಪೋಸ್ಟರ್‌ಗಳನ್ನು ಬಹಿರಂಗವಾಗಿ ಅಂಟಿಸಿತ್ತು. (Shadow CM)
ಈ ಪೋಸ್ಟರ್‌ಗಳು ಸರ್ಕಾರಕ್ಕೆ ಸಾಕಷ್ಟ ಮುಜುಗರ ಉಂಟುಮಾಡಿದ್ದವು. ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಜನರಿಗೆ ಮನವರಿಕೆ ಮಾಡುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದವು. ಇದೀಗ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಶ್ಯಾಡೊ ಸಿಎಂ ಅಭಿಯಾನವನ್ನು ಬಿಜೆಪಿ ಕೈಗೆತ್ತಿಕೊಂಡಿದೆ.
ಅಧಿಕಾರಿಗಳ ವರ್ಗಾವಣೆಯಿಂದ ಮೊದಲುಗೊಂಡು ಅನೇಕ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದೇ ಆರೋಪಕ್ಕೆ ಅನಗುಣವಾಗಿ ಶ್ಯಾಡೊ ಸಿಎಂ ಪೋಸ್ಟರ್‌ಗಳನ್ನು ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದೆ.
1. ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಕೈಗೊಂಬೆಯಾಗಿರುವ ಸಿದ್ದರಾಮಯ್ಯ, ಪುತ್ರನನ್ನು ಶ್ಯಾಡೋ ಸಿಎಂ ಮಾಡಿ ತಾಳಕ್ಕೆ ಕುಣಿಯುತ್ತಿದ್ದಾರೆ. ಸೋನಿಯಾ ಗಾಂಧಿಯವರ ತಾಳಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕುಣಿಯುತ್ತಿದ್ದಾರೆ. 2024ರ ಕಾಂಗ್ರೆಸ್ ಚುನಾವಣಾ ಖರ್ಚಿಗೆ ರಾಜ್ಯ ಬಲಿಯಾಗುತ್ತಿದೆ.
ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಕೈಗೊಂಬೆಯಾಗಿರುವ @siddaramaiah, ಪುತ್ರನನ್ನು ಶ್ಯಾಡೋ ಸಿಎಂ ಮಾಡಿ ತಾಳಕ್ಕೆ ಕುಣಿಯುತ್ತಿದ್ದಾರೆ.
— BJP Karnataka (@BJP4Karnataka) July 15, 2023
ಸೋನಿಯಾ ಗಾಂಧಿಯವರ ತಾಳಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕುಣಿಯುತ್ತಿದ್ದಾರೆ.
2024ರ ಕಾಂಗ್ರೆಸ್ ಚುನಾವಣಾ ಖರ್ಚಿಗೆ ರಾಜ್ಯ ಬಲಿಯಾಗುತ್ತಿದೆ. pic.twitter.com/Wvf09am1e6
2. ಸರಕಾರದ ಎಲ್ಲಾ ಬಗೆಯ ಡೀಲ್‌ಗಳಿಗೆ ನೇರವಾಗಿ ಸಂಪರ್ಕಿಸಿ…
ಸರಕಾರದ ಎಲ್ಲಾ ಬಗೆಯ ಡೀಲ್‌ಗಳಿಗೆ ನೇರವಾಗಿ ಸಂಪರ್ಕಿಸಿ…#ShadowCM pic.twitter.com/FXM2DcQ4LB
— BJP Karnataka (@BJP4Karnataka) July 14, 2023
3. ಹುದ್ದೆಗಳು ಮಾರಾಟಕ್ಕಿವೆ… #ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು.
ಹುದ್ದೆಗಳು ಮಾರಾಟಕ್ಕಿವೆ…#ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು. pic.twitter.com/tWIHlbcNAH
— BJP Karnataka (@BJP4Karnataka) July 12, 2023
4. ಹುದ್ದೆಗಳು ಮಾರಾಟಕ್ಕಿವೆ.. #ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು.
ಹುದ್ದೆಗಳು ಮಾರಾಟಕ್ಕಿವೆ..#ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು. pic.twitter.com/XLnSkAoW7q
— BJP Karnataka (@BJP4Karnataka) July 7, 2023
5. CM ನೆರಳಿನಲ್ಲಿ #ShadowCM ಅವ್ಯವಹಾರ. ಅಂಕೆ ಮೀರಿದೆ ಇವರಿಬ್ಬರ ಭ್ರಷ್ಟಾಚಾರ.
CM ನೆರಳಿನಲ್ಲಿ #ShadowCM ಅವ್ಯವಹಾರ.
— BJP Karnataka (@BJP4Karnataka) July 6, 2023
ಅಂಕೆ ಮೀರಿದೆ ಇವರಿಬ್ಬರ ಭ್ರಷ್ಟಾಚಾರ. #ShadowCM #ATMSarkara pic.twitter.com/E3ft1fYGFP
6. Commission Master in the shadows of Chief Minister!
ಕರ್ನಾಟಕ
Evm Machine : ಡೆಮಾಲಿಷನ್ ವೇಳೆ ಎಂಜಿನಿಯರ್ ಮನೆಯಲ್ಲಿ ಇವಿಎಂ ಯೂನಿಟ್‌ಗಳು ಪತ್ತೆ!
Evm Control Units : ಮನೆ ಡೆಮಾಲಿಷನ್ ಸಮಯದಲ್ಲಿ ಎಂಜಿನಿಯರ್‌ವೊಬ್ಬರ ಮನೆಯಲ್ಲಿ ಇವಿಎಂ ಕಂಟ್ರೋಲ್ ಯೂನಿಟ್‌ಗಳು ಪತ್ತೆಯಾಗಿವೆ. ಇವಿಎಂ ಕಂಟ್ರೋಲ್ ಯೂನಿಟ್‌ಗಳನ್ನು ತಹಸೀಲ್ದಾರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ: ಇಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಗ್ರಾಮದಲ್ಲಿ ಮನೆ ಡೆಮಾಲಿಷನ್ ವೇಳೆ ಇವಿಎಂ ಕಂಟ್ರೋಲ್ ಯೂನಿಟ್‌ಗಳು (Evm Control Units ) ಪತ್ತೆ ಆಗಿವೆ. ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಎಂಜಿನಿಯರ್ ಶಿವಕುಮಾರ್ ಎಂಬುವವರ ಮನೆಯಲ್ಲಿ (Evm Machine) ಪತ್ತೆ ಆಗಿದೆ.
2018ರ ಚುನಾವಣೆಯಲ್ಲಿ ಬಳಸಿ ರಿಜೆಕ್ಟ್ ಆಗಿದ್ದ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್‌ಗಳು ಎನ್ನಲಾಗಿದೆ. ಅಂದಹಾಗೇ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮನೆಯನ್ನು ಡೆಮಾಲಿಷನ್ ಮಾಡಲಾಗುತ್ತಿತ್ತು. ಈ ವೇಳೆ ಮನೆಯ ಅವಶೇಷಗಳಲ್ಲಿ ಇವಿಎಂ ಕಂಟ್ರೋಲ್ ಯೂನಿಟ್ ಪತ್ತೆ ಆಗಿವೆ. ಯೂನಿಟ್‌ಗಳು ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ತಹಸೀಲ್ದಾರ್ ಮೋಹನ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆಯ ಅವಶೇಷದಡಿ 7 ಯೂನಿಟ್‌ಗಳು ಪತ್ತೆ ಆಗಿದ್ದು, ತಹಸೀಲ್ದಾರ್ ಎಲ್ಲವನ್ನೂ ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ತಹಸೀಲ್ದಾರ್ ಮೋಹನ ಕುಮಾರಿ ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ವರದಿಯನ್ನು ನೀಡಿದ್ದಾರೆ. ಸದ್ಯ, ರಿಜೆಕ್ಟ್ ಆಗಿರುವ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್‌ಗಳನ್ನು ಯಾಕಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು ಎಂಬ ಪ್ರಶ್ನೆ ಕಾಡುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
MLC Election: ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನ ಮೂವರು ಅವಿರೋಧ ಆಯ್ಕೆ; ಶೆಟ್ಟರ್ ಕಮ್ ಬ್ಯಾಕ್
MLC Election: ಕಾಂಗ್ರೆಸ್‌ನ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವರು ಎಂಎಲ್‌ಸಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ (MLC Election) ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಅಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರ ಅವಿರೋಧ ಆಯ್ಕೆ ಘೋಷಿಸಲಾಗಿದೆ.
ನಾಮಪತ್ರ ವಾಪಸ್ ಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು. ಪಕ್ಷೇತರ ಅಭ್ಯರ್ಥಿ ಡಾ.ಕೆ ಪದ್ಮರಾಜನ್ ಅವರ ನಾಮಪತ್ರ ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದೆ. ಹೀಗಾಗಿ ಉಳಿದ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಧಾನಸಭಾ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಮಾಹಿತಿ ನೀಡಿದ್ದಾರೆ.
ಶೆಟ್ಟರ್ 5 ವರ್ಷ, ಬೋಸರಾಜು 1 ವರ್ಷ, ಕಮಕನೂರು 3 ವರ್ಷ ಎಂಎಲ್‌ಸಿ
ರಾಜ್ಯದಲ್ಲಿ ಖಾಲಿಯಾಗಿರುವ ವಿಧಾನ ಪರಿಷತ್‌ನ (MLC Election) ಮೂರು ಸ್ಥಾನಗಳಿಗೆ ಜೂನ್ 30ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್ ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನು ಇವರ ಅಧಿಕಾರಾವಧಿ ನೋಡುವುದಾದರೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ 5 ವರ್ಷ, ಹಾಲಿ ಸಚಿವ ಎನ್.ಎನ್. ಬೋಸ್ ರಾಜು 1 ವರ್ಷ ಮತ್ತು ತಿಪ್ಪಣ್ಣ ಕಮಕನೂರು 3 ವರ್ಷ ಎಂಎಲ್‌ಸಿಯಾಗಿ ಇರಲಿದ್ದಾರೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ನಡೆಯುವ ಚುನಾವಣೆ ಇದಾಗಿದೆ. 135 ಶಾಸಕರನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಲ್ಲ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ | ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ? ಸುಳಿವು ಬಿಚ್ಚಿಟ್ಟ ಸಿ.ಪಿ.ಯೋಗೇಶ್ವರ್
ಶೆಟ್ಟರ್‌ಗೆ ದೊಡ್ಡ ಗೌರವ
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಅವರು ಚುನಾವಣೆಯಲ್ಲಿ ಸೋಲು ಕಂಡರೂ ಅವರಿಗೆ ಪಕ್ಷ ದೊಡ್ಡ ಗೌರವವನ್ನೇ ನೀಡಿದೆ. ಬಾಬುರಾವ್ ಚಿಂಚನಸೂರು ಅವರಿಂದ ತೆರವಾಗಿರುವ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರು ಆಯ್ಕೆಯಾಗಿದ್ದು, ಐದು ವರ್ಷ ಸದಸ್ಯರಾಗಿರಲಿದ್ದಾರೆ.
ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಈ ಬಾರಿ ಕಾಂಗ್ರೆಸ್ ಗೆ ಲಾಭವಾಗಿತ್ತು. 39 ಲಿಂಗಾಯತ ಸಮುದಾಯದ ಶಾಸಕರು ಗೆಲ್ಲುವುದರಲ್ಲಿ ಶೆಟ್ಟರ್ ಅವರ ವರ್ಚಸ್ಸಿನ ಪ್ರಭಾವವೂ ಇದೆ ಎಂದು ಕಾಂಗ್ರೆಸ್ ಕಂಡುಕೊಂಡಿದೆ. ಇದರ ಲಾಭವನ್ನು ಲೋಕಸಭಾ ಚುನಾವಣೆಯಲ್ಲಿಯೂ ಪಡೆಯಲು ಶೆಟ್ಟರ್‌ಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗಿದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಶೆಟ್ಟರ್ ಗೆ ಐದು ವರ್ಷಗಳ ಅವಧಿ ಇರೋ ಎಂಎಲ್ಸಿ ಸ್ಥಾನವನ್ನು ಕಾಂಗ್ರೆಸ್ ಕೊಟ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ | Congress Guarantee: ರಾಜ್ಯ ಬಿಜೆಪಿ ಅಧ್ಯಕ್ಷ ಮನೆಗೆ ಮಾರಿ ಪರರಿಗೆ ಉಪಕಾರಿ: ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ
ಎನ್.ಎಸ್. ಬೋಸರಾಜು ಅವರಿಗೆ 1 ವರ್ಷ ಅವಕಾಶವಿರುವ ಪರಿಷತ್ ಸದಸ್ಯತ್ವವನ್ನು ನೀಡಲಾಗಿದೆ. ಬೋಸರಾಜು ಅವರನ್ನು ಈಗಾಗಲೇ ಸಣ್ಣ ನೀರಾವರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಇವರು ಆರ್.ಶಂಕರ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಇತ್ತ ತಿಪ್ಪಣ್ಣ ಕಮಕನೂರು ಅವರಿಗೆ ಲಕ್ಷ್ಮಣ ಸವದಿ ಅವರಿಂದ ತೆರವಾದ ಮೂರು ವರ್ಷಗಳ ಅವಧಿಯ ಮೇಲ್ಮನೆ ಸ್ಥಾನವನ್ನು ನೀಡಲಾಗಿದೆ.
ಕರ್ನಾಟಕ
Brand Bengaluru: ವಿದ್ಯುತ್ ಜತೆಗೆ ಕಸದ ಶುಲ್ಕವೂ ಸೇರ್ಪಡೆಗೆ ಸಲಹೆ: ಖಚಿತಪಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರನ್ನು ಉತ್ತಮಪಡಿಸಲು ಪೋರ್ಟಲ್ ಲಾಂಚ್ ಮಾಡ್ತಿದ್ದೇನೆ. ಪ್ರಮುಖ ನಗರಗಳಲ್ಲಿ ಪುಟ್ ಪಾತ್ ಸಮಸ್ಯೆ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು: ಅನೇಕ ನಗರಗಳಲ್ಲಿ ಕಸ ಸಂಗ್ರಹಣೆಗೆ ಶುಲ್ಕ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಶುಲ್ಕ ವಿಧಿಸಿ ವಿದ್ಯುತ್ ಬಿಲ್ ಜತೆಗೆ ಸೇರಿಸಬೇಕು ಎಂಬ ಸಲಹೆ ಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರು ಹಾಗೂ ತಜ್ಞರಿಂದ ಸಲಹೆ ಕೇಳುವ BrandBengaluru.karnataka.gov.in ಪೋರ್ಟಲ್‌ಗೆ ಚಾಲನೆ ನೀಡಿದ ನಂತರ ಮಾತನಾಡಿದರು.
1 ಕೋಟಿ 60 ಲಕ್ಷ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. 1 ಕೋಟಿ 30 ಲಕ್ಷ ಅಧಿಕೃತ ಜನಸಂಖ್ಯೆ. ಆದರೆ ಪ್ರತಿದಿನ ಬಂದು ಹೋಗವರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಪ್ರಕೃತಿ ಗಮನದಲ್ಲಿಟ್ಟುಕೊಂಡು ಇಲ್ಲಿ ಬಂದು ನೆಲೆಸಲು ಇಚ್ಚೆ ಪಡುತ್ತಾರೆ. ಬೆಂಗಳೂರಿಗೆ ಬಂದವರು ಯಾರು ವಾಪಸು ಹೋಗಲ್ಲ.
ನಾನು ಸಹ ಬೆಂಗಳೂರಿನ ನಿವಾಸಿ. ಜನ ಸಮಾನ್ಯರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇನೆ. ಬಿಲ್ಡರ್ಸ್, ಉದ್ಯಮಿಗಳು ಸಹ ಕರೆಸಿದ್ದೆ ಅವರ ಅಭಿಪ್ರಾಯ ಪಡೆದಿದ್ದೇನೆ. ಹಿರಿಯ ನಾಯಕರ ಅಭಿಪ್ರಾಯ ಸಹ ಸಂಗ್ರಹ ಮಾಡಿದ್ದೇನೆ. ಮಾಜಿ ಸಿಎಂಗಳನ್ನ ಭೇಟಿ ಮಾಡ್ತೀನಿ. ಬೊಮ್ಮಾಯಿ ಸಮಯ ಕೇಳಿದ್ದೆ. ಕಸಕ್ಕೆ ಕೆಲ ನಗರಗಳಲ್ಲಿ ತೆರಿಗೆ ಹಾಕುತ್ತಿದ್ದಾರೆ. ಇಲ್ಲೂ ಹಾಕಿ ಅಂತ ಸಲಹೆ ನೀಡಿದ್ದಾರೆ. ವಿದ್ಯುತ್ ಬಿಲ್ ಜತೆಗಿನ ಇದನ್ನ ಹಾಕಲು ಸಲಹೆ ಬಂದಿದೆ. ಆದರೆ ಈಗ ವಿದ್ಯುತ್ ಬಿಲ್ ಜತೆ ಹಾಕಲು ಸಾಧ್ಯವಿಲ್ಲ ಎಂದರು.
ಬೆಂಗಳೂರನ್ನು ಉತ್ತಮಪಡಿಸಲು ಪೋರ್ಟಲ್ ಲಾಂಚ್ ಮಾಡ್ತಿದ್ದೇನೆ. ಪ್ರಮುಖ ನಗರಗಳಲ್ಲಿ ಪುಟ್ ಪಾತ್ ಸಮಸ್ಯೆ ಇದೆ. ಮಲ್ಲೇಶ್ವರ, ಬಸವನಗುಡಿಯಲ್ಲಿ ಪುಟ್ ಪಾತ್ ಸಮಸ್ಯೆ ಇದೆ. ಬೆಂಗಳೂರು ಟ್ರಾಫಿಕ್‌ನಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡ್ತೀನಿ. ಟ್ರೈನ್ ಮತ್ತು ಬಸ್ಸು ಹೋಗುವ ರೀತಿ ಟನಲ್ ಮಾಡಬೇಕು ಅನ್ನೋ ಅಭಿಪ್ರಾಯ ಇದೆ. ಜಯದೇವ ಬಳಿ ಪೈಲಟ್ ಯೋಜನೆ ಅಂತ ಪರಿಗಣಿಸುತ್ತಿದ್ದೇವೆ. ಬೆಂಗಳೂರು ಪ್ಲಾನ್ಡ್ ಸಿಟಿ ಅಲ್ಲ. ಮುಂಬಯಿ, ದೆಹಲಿ ರೀತಿಯಲ್ಲಿ ಪ್ಲಾನ್ ಸಿಟಿ ಅಲ್ಲ. ಆದರೆ ಮುಂಬಯಿ ಮತ್ತು ದೆಹಲಿಯಲ್ಲಿ ಟ್ರಾಫಿಕ್ ಜಾಸ್ತಿ ಇದೆ. ನಮಗಿಂತಲೂ ಹೆಚ್ಚಿಜ ಟ್ರಾಫಿಕ್ ಇದೆ. ಇಲ್ಲಿ ನೀರು ನುಗ್ಗಿದರೂ ಸಮಸ್ಯೆ ಆಗುತ್ತೆ, ಅದನ್ನೇ ದೊಡ್ಡದಾಗಿ ಬರೆಯುತ್ತೀರಿ ಎಂದರು.
ಹಿಂದಿನ ಕಾಮಗಾರಿಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂಭ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಇನ್ನಷ್ಟು ದೊಡ್ಡಮಟ್ಟದಲ್ಲಿ ಮಾತನಾಡಲಿ. ಎಲ್ಲ ಬಿಚ್ಚಿಸ್ತೀನಿ. ಟೆಂಡರ್ ಡಬಲ್ ಆಗ್ತಿದೆ, ನಾವು ಅಧಿಕಾರಕ್ಕೆ ಬಂದ್ರೆ ಇದಕ್ಕೆ ಅವಕಾಶ ಕೊಡಲ್ಲ ಎಂದು ನಾವು ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆವು. ನಾವು ಅದಕ್ಕೆ ಬದ್ಧರಾಗಿದ್ದೇವೆ. ಯಾವ ಗುತ್ತಿಗೆದಾರ ಏನು ಬೇಕಾದರೂ ಮಾಡಿಕೊಳ್ಳಲಿ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡುವವರೆಗೂ ನಾವು ವರ್ಕ್ ಆರ್ಡರ್ ಕೊಡಲ್ಲ. ತನಿಖೆ ಬಳಿಕವೇ ಕಾಮಗಾರಿ ಬಿಲ್ ಬಿಡುಗಡೆ ಮಾಡ್ತೀವಿ ಎಂದರು.
ನಗರದಲ್ಲಿ ಇರೋ ಸ್ಲಮ್ ಶಿಫ್ಟ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತಹ ಸಲಹೆಗಳು ಬಂದಿವೆ. ಕೆಲವರು ಸರ್ಕಾರಿ ಜಾಗದಲ್ಲಿ ಇದ್ದಾರೆ. ಕೆಲ ಸ್ಲಮ್ ನಗರದ ಒಳಗೆ ಇವೆ. ಅದನ್ನ ಶಿಫ್ಟ್ ಮಾಡಲು ಸಮಯ ಬೇಕಾಗುತ್ತದೆ ಎಂದರು.
ಇದನ್ನೂ ಓದಿ: Rice Politics: ನಾಳೆ ಅಮಿತ್ ಶಾ ಭೇಟಿಗೆ ಸಿದ್ದರಾಮಯ್ಯ ದೆಹಲಿ ಪ್ರವಾಸ; ನಾನೂ ಹೋಗುವೆ ಎಂದ ಡಿಕೆಶಿ
-
ಪ್ರಮುಖ ಸುದ್ದಿ22 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ13 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ19 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ3 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್16 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಕ್ರೈಂ14 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ14 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಉತ್ತರ ಕನ್ನಡ15 hours ago
ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ