ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ (Shrirangapattana Election Results) ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಮೇಶ್ ಬಂಡಿಸಿದ್ದೇಗೌಡ (72234) ಅವರು 10961 ಮತಗಳ ಅಂತರದಿಂದ ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ (61273) ವಿರುದ್ಧ ಜಯಭೇರಿ ಬಾರಿಸಿದ್ದಾರೆ.
ಕಳೆದ ಬಾರಿ ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ 1,01,307 ಹಾಗೂ ಕಾಂಗ್ರೆಸ್‌ನ ರಮೇಶ್ ಬಾಬು ಬಂಡಿಸಿದ್ದೇಗೌಡ 57,619 ಮತ ಪಡೆದಿದ್ದರು. 43,688 ಮತಗಳ ಅಂತರದಿಂದ ರವೀಂದ್ರ ಶ್ರೀಕಂಠಯ್ಯ ಗೆಲುವು ಸಾಧಿಸಿದ್ದರು. ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರವು ಈ ಬಾರಿ ತುಸು ಭಿನ್ನವಾಗಿತ್ತು ಈ ಕ್ಷೇತ್ರದಲ್ಲಿ ಪಕ್ಷಗಳ ಕಾದಾಟದ ಬದಲಿಗೆ ಇಬ್ಬರ ವ್ಯಕ್ತಿಗಳ ನಡುವಿನ ಹೋರಾಟ ಎನಿಸಿತ್ತು.
ಇದನ್ನೂ ಓದಿ: Karnataka Election 2023: ಮತದಾನ ಮುಗಿದ ಬಳಿಕ ಇವಿಎಂಗಳನ್ನೇ ಬಿಟ್ಟು ಹೋದ ಅಧಿಕಾರಿಗಳು!
ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 2,13,187 ಮತದಾರರಿದ್ದು, 1,04,656 ಪುರುಷರಿದ್ದರೆ, 1,08,492 ಮಹಿಳಾ ಮತದಾರರಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಶ್ರೀರಂಗಪಟ್ಟಣದಲ್ಲಿ ಇದುವರೆಗೆ ಒಟ್ಟು 16 ಚುನಾವಣೆ ನಡೆದಿವೆ. ಕಾಂಗ್ರೆಸ್ 5 ಬಾರಿ, ಜನತಾಪಕ್ಷ 4 ಬಾರಿ, ಜೆಡಿಎಸ್ 4 ಬಾರಿ, ಜನತಾದಳ ಒಂದು ಒಮ್ಮೆ ಹಾಗೂ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.