Site icon Vistara News

ಸಿದ್ದರಾಮಯ್ಯ ಅವರನ್ನು ಬೆಂಬಿಡದೆ ಕಾಡುವ ನಾಲ್ವಡಿ ಕುರಿತ ಬೈಗುಳ, ಟಿಪ್ಪು ಪ್ರೇಮ !

siddaramaiah against nalvadi wodiar post

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ ಖಾತೆಗಳಲ್ಲಿ ಎಂದಿನಂತೆ ಒಬ್ಬ ಮಹಾಪುರುಷರ ಜಯಂತಿಗೆ ಶುಭ ಕೋರುವ ಪೋಸ್ಟ್‌ ಮಾಡಲಾಗಿತ್ತು. ಆದರೆ ಇತರೆ ದಿನಗಳಂತೆ ಅಲ್ಲದೆ ಈ ಬಾರಿ ಸಿದ್ದರಾಮಯ್ಯ ಅವರ ಶನಿವಾರದ ಪೋಸ್ಟ್‌ ಸಾಕಷ್ಟು ಪ್ರತಿಕ್ರಿಯೆಗೆ ಕಾರಣವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನ ಕೋರಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೆಟ್ಟಿಗರು ಟೀಕಿಸುತ್ತ, ತೆಗಳುತ್ತಲೇ ಇದ್ದಾರೆ.

ಮೈಸೂರು ಪ್ರಾಂತ್ಯದಲ್ಲಿ ಶಿಕ್ಷಣ, ಕೈಗಾರಿಕೆ, ಕೃಷಿ, ನೀರಾವರಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿ ಮಾಡಿದವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌. ದಲಿತರಿಗೆ ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಅವರ ಕಾಳಜಿ ಹಾಗೂ ದೂರದೃಷ್ಟಿಯಿಂದಾಗಿ ರಾಜರ್ಶಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಎಂದೇ ಪ್ರಖ್ಯಾತರು. ಶನಿವಾರ ಅವರ ಜನ್ಮದಿನ.

ಇದನ್ನೂ ಓದಿ | ಅಧಿಕಾರ ಬಲಾಢ್ಯರ ಕೈಯಲ್ಲಿದ್ದರೆ ಶೋಷಿತರಿಗೆ ನ್ಯಾಯ ಸಿಗುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತು ಒಂದು ಪೋಸ್ಟ್‌ ಮಾಡಲಾಯಿತು. ಆಧುನಿಕ ಮೈಸೂರು ಸಂಸ್ಥಾನದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳು ಎಂದು ಬರೆಯಲಾಗಿತ್ತು.

2017ರಲ್ಲಿ ಮೈಸೂರಿನ ದೇವರಾಜ ಮAರುಕಟ್ಟೆಯಿಂದ ವ್ಯಾಪಾರಿಗಳನ್ನು ಖಾಲಿ ಮಾಡಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಅಂದಿನ ಮೈಸೂರು ಮೇಯರ್‌ ಎಂ.ಜೆ. ರವಿಕುಮಾರ್‌ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾರ್ಪೊರೇಟರ್‌ಗಳ ನಿಯೋಗ ಭೇಟಿ ಮಾಡಿತು. ದೇವರಾಜ ಮಾರುಕಟ್ಟೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ ನೀಡಿದ್ದು, ಈಗ ವ್ಯಾಪಾರಿಗಳನ್ನು ಖಾಲಿ ಮಾಡಿಸಿದರೆ ಸಮಸ್ಯೆಯಾಗುತ್ತದೆ ಎಂದಿದ್ದರು. ಇದಕ್ಕೆ ಕೋಪಗೊಂಡಿದ್ದ ಸಿದ್ದರಾಮಯ್ಯ,, “ಅವನು ಮಹಾರಾಜನೇ ಹೊರತು ದೇವರಲ್ಲ. ತನ್ನ ದುಡ್ಡಿಂದ ಏನೂ ಮಾರ್ಕೆಟ್‌ ಕಟ್ಟಿಸಿರಲಿಲ್ಲ. ಜನರ ಹಣದಿಂದಲೇ ಮಾರ್ಕೆಟ್‌ ಕಟ್ಟಿಸಿದ” ಎಂದು ಏಕವಚನದಲ್ಲೆ ನಾಲ್ವಡಿ ಒಡೆಯರ್‌ ಅವರ ಬಗ್ಗೆ ಮಾತನಾಡಿದ್ದರು. ಇದು ಆ ಸಮಯದಲ್ಲೂ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಶನಿವಾರ ಸಿದ್ದರಾಮಯ್ಯ ಅವರ ಪೋಸ್ಟ್‌ ನೋಡುತ್ತಿದ್ದಂತೆ ನೆಟ್ಟಿಗರು ಹಳೆಯದನ್ನು ನೆನಪಿಸುತ್ತಿದ್ದಾರೆ. ಫೆಸ್‌ಬುಕ್‌ನಲ್ಲಿ Prakash Shivarudfriah ಎಂಬರು ಪ್ರತಿಕ್ರಿಯಿಸಿ When sidda in Power he remembers only tippu and not others? ಎಂದಿದ್ದಾರೆ.

Sukeerthi Gowdru Huduga ಎನ್ನುವವರು ಪ್ರತಿಕ್ರಿಯಿಸಿ, ಸಿದ್ದಣ್ಣ ಇಂತಹ ಡಬಲ್ ಸ್ಟ್ಯಾಂಡರ್ಡ್ ಯಾಕೆ? ನೀವೇ ಅಲ್ವಾ ಒಡೆಯರ್ ಬಗ್ಗೆ ಕೇವಲವಾಗಿ ಮಾತನಾಡಿದ್ದು. ಕಾಲಕ್ಕೆ ತಕ್ಕಂತೆ ವರಸೆ ಬದಲಾಯಿಸೋದು ನಿಮ್ಮ ಗುಣ ಅಲ್ವೇ? ಎಂದಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಗ್ಗೆ ಮಾತ್ರವಲ್ಲದೆ, ಒಟ್ಟಾರೆ ಮೈಸೂರು ಸಂಸ್ಥಾನದ ಕುರಿತು ಸಿದ್ದರಾಮಯ್ಯ ಅವರ ಧೋರಣೆಯನ್ನೂ ಟೀಕಿಸಲಾಗಿದೆ. Balakrishna Tukkar ಎಂಬವರು ಪ್ರತಿಕ್ರಿಯಿಸಿ, “ಮೈಸೂರು ಸಂಸ್ಥಾನಕ್ಕೆ ನಿಮ್ಮ ಗೌರವ ಎಂತದ್ದು ಎಂದು ಇಡೀ ರಾಜ್ಯಕ್ಕೆ ಗೊತ್ತು ಬಿಡಿ ಸರ್. ಅವರ ಸಂಸ್ಥಾನದ ಮೇಲೆ ಇಲ್ಲ ಸಲ್ಲದ ಕೇಸುಗಳನ್ನು ಜಡಿದು ಅವರು ಕಣ್ಣೀರು ಹಾಕುತ್ತಾ ಕೋರ್ಟ್‌ ಕಛೇರಿ ಅಲೆಯುವಂತೆ ಮಾಡಿದ ಕೀರ್ತಿ ನಿಮಗೆ ಸಲ್ಲುತ್ತದೆ ಅಲ್ವಾ ಸಾರ್” ಎಂದಿದ್ದಾರೆ.

ಇದನ್ನೂ ಓದಿ | ನಾಲ್ವಡಿ ಕೃಷ್ಣರಾಜ ಒಡೆಯರ್‌: ಮರೆಯಲಾಗದ ಮೈಸೂರಿನ ಮಹಾರಾಜ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಮೈಸೂರು ರಾಜಮನೆತನಕ್ಕೆ ಈ ಕಮೆಂಟ್‌ಗಳು ಸೀಮಿತವಾಗಿಲ್ಲ. ಟಿಪ್ಪು ಸುಲ್ತಾನನ ಕುರಿತೂ ಮುಂದುವರಿದಿದೆ. P B Achar ಎಂಬವರು ಟ್ವಟಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ, “ಈ ಮನೆತನದವರನ್ನು ಹಿಂಸಿಸಿ, ವಿಷವಿಕ್ಕಿದ ಮಥಾಂಧ ಟಿಪ್ಪು ನನ್ನು ವೈಭವೀಕರಿಸಿದ ನಿಮಗೆ, ಒಡೆಯರ್ ರನ್ನು ನೆನೆಯುವ ನೈತಿಕತೆ ಇಲ್ಲ… ಎಲೆಕ್ಷನ್ ಗಿಮ್ಮಿಕ್ ಬಿಡಿ… ಸ್ವಲ್ಪನಾದರು ನಾಚಿಕೆ ಇರಲಿ… #shameless_siddu” ಎಂದು ಟೀಕಿಸಿದ್ದಾರೆ.

ಇಲ್ಲಿ ಗೌರವಯುತವಾಗಿ ಕಮೆಂಟ್‌ ಮಾಡಿದ್ದನ್ನು ಮಾತ್ರ ಹೆಸರಿಸಲು ಸಾಧ್ಯವಾಗಿದೆ. ಇನ್ನು ಕೆಲವರು ಏಕವಚನದಲ್ಲೆ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದು, ಅವುಗಳನ್ನು ಇಲ್ಲಿ ಪ್ರಕಟಿಸಲಾಗಿಲ್ಲ. ಒಟ್ಟಿನಲ್ಲಿ, ಮೈಸೂರು ರಾಜಮನೆತನದ ವಿರೋಧಿ ನಿಲುವು. ನಾಲ್ವಡಿ ಅವರ ಬಗ್ಗೆ ಆಡಿತ ಮಾತು ಹಾಗೂ ಟಿಪ್ಪು ಪ್ರೇಮಗಳು ಮಾಜಿ ಸಿದ್ದರಾಮಯ್ಯ ಅವರನ್ನು ಸದ್ಯಕ್ಕಂತೂ ಬಿಟ್ಟುಬಿಡುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಬಂದಿರುವ ಒಂದು ಪ್ರತಿಕ್ರಿಯೆ

ಸಿದ್ದರಾಮಯ್ಯ ಅವರು ನಾಲ್ವಡಿ ಜಯಂತಿಯ ದಿನದಂದು ನೆಟ್ಟಿಗರಿಂದ ಬೈಸಿಕೊಳ್ಳುವ ಸಂಪ್ರದಾಐ ಪಾಲಿಸುತ್ತಿರಬೇಕು. ಏಕೆಂದರೆ 2021ರಲ್ಲೂ ಸಿದ್ದರಾಮಯ್ಯ ಇದೇ ರೀತಿ ಪೋಸ್ಟ್‌ ಹಾಕಿದ್ದರು. ಆಗಲೂ ನೆಟ್ಟಿಗರು ಸಿದ್ದರಾಮಯ್ಯ ಅವರ ಧೋರಣೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಹುಶಃ ಸಿದ್ದರಾಮಯ್ಯ ಅವರೂ ತಮ್ಮ ಬಗ್ಗೆ ಇಂತಹ ಮಾತುಗಳನ್ನು ಎಂಜಾಯ್‌ ಮಾಡುತ್ತಿದ್ದಾರೇನೊ…

2021ರಲ್ಲಿ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್‌
Exit mobile version