Site icon Vistara News

Karnataka CM: ಸಿದ್ದರಾಮಯ್ಯ ಪದಗ್ರಹಣಕ್ಕೆ ಶ್ರೀರಾಮ ಪಟ್ಟಾಭಿಷೇಕದ ಟಚ್;‌ ಕಂಠೀರವದಲ್ಲಿ ರಾಮನ ಮೂರ್ತಿ

Siddaramaiah fans given Sri Rama pattabhisheka touch to swearing in ceremony

Siddaramaiah fans given Sri Rama pattabhisheka touch to swearing in ceremony

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿಯಾಗಿ (Deputy Chief minister) ಡಿ.ಕೆ. ಶಿವಕುಮಾರ್‌ ಅವರ ಪದಗ್ರಹಣ ಸಮಾರಂಭಕ್ಕೆ ಇದೀಗ ಶ್ರೀರಾಮ ಪಟ್ಟಾಭಿಷೇಕ (Sri Rama Pattabhisheka) ಟಚ್‌ ದೊರೆತಿದೆ!

ಸಿದ್ದರಾಮಯ್ಯ ಅಭಿಮಾನಿಗಳು (Siddaramaiah fans) ಕಂಠೀರವ ಸ್ಟೇಡಿಯಂ ಬಳಿ ಬೃಹತ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ! ಸುಮಾರು 20 ಎತ್ತರದ ಶ್ರೀರಾಮಚಂದ್ರ ಮೂರ್ತಿಯನ್ನು ತಂದು ಕಂಠೀರವ ಸ್ಟೇಡಿಯಂ ಹೊರಗಡೆ ಇಡಲಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ನಗರದ ಮಾವಳ್ಳಿ ನಿವಾಸಿ ಶ್ರೀನಿವಾಸ್ ಅವರು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಸಿದ್ದು ಅಭಿಮಾನಿಯಾಗಿದ್ದಾರೆ.

ಕಂಠೀರವ ಸ್ಟೇಡಿಯಂ ಮುಖ್ಯ ದ್ವಾರದ ಮುಂಭಾಗವೇ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಅವರು ಸಿದ್ದರಾಮಯ್ಯ ಅವರು ಕೂಡಾ ಶ್ರೀರಾಮನಂತೆ ಒಳ್ಳೆಯ ಆಡಳಿತ ಕೊಡಬೇಕು, ಬಡವರ ಏಳಿಗೆಗಾಗಿ ಒಳ್ಳೆಯ ಕಾರ್ಯಕ್ರಮ ತರಬೇಕು ಎಂಬ ಆಶಯವನ್ನು ಪ್ರಕಟಿಸಿದ್ದಾರೆ.

ಶ್ರೀರಾಮ ಪಟ್ಟಾಭಿಷೇಕದ ಟಚ್‌ ಕೊಟ್ಟಿರುವ ಅಭಿಮಾನಿ

ʻʻಶ್ರೀರಾಮ ಕೂಡ ಒಂದು ರಾಜ್ಯದ ರಾಜನಾಗಿದ್ದ. ಅವನ ಆಳ್ವಿಕೆಯನ್ನೇ ನಾನು ನಾವು ರಾಮ ರಾಜ್ಯ ಅನ್ನುತ್ತಿರುವುದು. ಸಿದ್ದರಾಮಯ್ಯ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಆಗುತ್ತಿದೆ. ಶ್ರೀರಾಮನ ಆಶೀರ್ವಾದ ಸಿದ್ದರಾಮಯ್ಯ ಮೇಲೆ ಇರಲಿʼʼ ಎಂದಿರುವ ಅವರು, ʻʻರಾಜ್ಯದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಬೇಕು. ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ಕೊಡಬೇಕು ಎನ್ನುವ ಇಚ್ಛೆಯೊಂದಿಗೆ ಶ್ರೀರಾಮ ಮೂರ್ತಿ ಪ್ರತಿಷ್ಠಾಪಿಸಿದ್ದಾಗಿ ಹೇಳಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಶ್ರೀರಾಮನ ಮೂರ್ತಿ ತರಿಸಿರುವ ಶ್ರೀನಿವಾಸ್ ಅವರು ಅದಕ್ಕೆ ಅಲಂಕಾರ ಮಾಡಿ ಪೂಜೆಯನ್ನೂ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ತಾನೊಬ್ಬ ಹಿಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ಬಿಜೆಪಿ ಪ್ರಣೀತ ಹಿಂದುತ್ವದ ವಿರೋಧಿ ಎನ್ನುತ್ತಾರೆ. ಸಿದ್ದರಾಮನ ಹುಂಡಿಯಲ್ಲಿ ಅವರದೇ ಸಾರಥ್ಯದಲ್ಲಿ ರಾಮನ ಮಂದಿರವೊಂದನ್ನು ಕಟ್ಟಿದ್ದಾರೆ. ಅವರ ಪಟ್ಟಾಭಿಷೇಕಕ್ಕೆ ಈಗ ಶ್ರೀರಾಮನ ಮೂರ್ತಿಯನ್ನೇ ತಂದು ಪ್ರತಿಷ್ಠಾಪನೆ ಮಾಡಿರುವುದು ಕಾಂಗ್ರೆಸ್‌ನ ಸಾಫ್ಟ್‌ ಹಿಂದುತ್ವ ಪ್ರತಿಪಾದನೆಗೂ, ಸಿದ್ದರಾಮಯ್ಯ ಅವರಿಗೆ ರಾಮನ ಮೇಲೆ ಇರುವ ಪ್ರೀತಿಗೂ ಕನೆಕ್ಟ್‌ ಆಗಿದೆ.

ಇದನ್ನೂ ಓದಿ Karnataka CM : ಕಂಠೀರವ ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್ ಜಾಮ್, ಮುಂಜಾನೆಯೇ ಜನಜಂಗುಳಿ, ಮೂವರಿಗೆ ಗಾಯ

Exit mobile version