Site icon Vistara News

Karnataka CM: ಸಿದ್ದರಾಮಯ್ಯ 24ನೇ ಮುಖ್ಯಮಂತ್ರಿ; ಇಲ್ಲಿದೆ ಇದುವರೆಗೆ ರಾಜ್ಯವನ್ನಾಳಿದ ಸಿಎಂಗಳ ಪಟ್ಟಿ

Siddaramaiah

ಬೆಂಗಳೂರು: ಹಿರಿಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ (Siddaramaiah) ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ (Chief minister of Karnataka) ನೇಮಕಗೊಂಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 135 ಸ್ಥಾನಗಳೊಂದಿಗೆ ಭರ್ಜರಿ ಬಹುಮತವನ್ನು ಪಡೆದ ಕಾಂಗ್ರೆಸ್‌ ಮುಂದಿನ ಸಿಎಂ (Karnataka CM) ಆಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ. ಸಿದ್ದರಾಮಯ್ಯ ಅವರು ವ್ಯಕ್ತಿಯಾಗಿ ರಾಜ್ಯದ 24ನೇ ಸಿಎಂ ಆಗಲಿದ್ದಾರೆ. ಅವಧಿಯನ್ನು ಪರಿಗಣಿಸಿದರೆ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಅವರು ರಾಜ್ಯದ 32ನೇ ಮುಖ್ಯಮಂತ್ರಿಯಾಗುತ್ತಾರೆ.

ಇದುವರೆಗೆ ರಾಜ್ಯವನ್ನು ಆಳಿದ ಮುಖ್ಯಮಂತ್ರಿಗಳು ಮತ್ತು ಅಧಿಕಾರಾವಧಿಯ ಪೂರ್ಣ ಮಾಹಿತಿ ಇಲ್ಲಿದೆ..

  1. ಬಸವರಾಜ ಬೊಮ್ಮಾಯಿ: ಜುಲೈ 28, 2021ರಿಂದ ಈಗಿನವರೆಗೆ-ಬಿಜೆಪಿ
  2. ಬಿ.ಎಸ್. ಯಡಿಯೂರಪ್ಪ: ಜುಲೈ 26, 2019ರಿಂದ ಜುಲೈ 28, 2021-ಬಿಜೆಪಿ
  3. ಎಚ್.ಡಿ. ಕುಮಾರಸ್ವಾಮಿ: ಮೇ 23, 2018ರಿಂದ ಜುಲೈ 23, 2019-ಜೆಡಿಎಸ್‌
  4. ಬಿ.ಎಸ್. ಯಡಿಯೂರಪ್ಪ : ಮೇ 17, 2018ರಿಂದ ಮೇ 23, 2018 – ಬಿಜೆಪಿ
  5. ಸಿದ್ದರಾಮಯ್ಯ: ಮೇ 13, 2013ರಿಂದ ಮೇ 15, 2018 – ಕಾಂಗ್ರೆಸ್‌
  6. ಜಗದೀಶ್ ಶೆಟ್ಟರ್: ಜುಲೈ 12, 2012ರಿಂದ ಮೇ 12, 2013- ಬಿಜೆಪಿ
  7. ಡಿ.ವಿ. ಸದಾನಂದ ಗೌಡ: ಆಗಸ್ಟ್‌ 04, 2011ರಿಂದ ಜುಲೈ 12, 2012- ಬಿಜೆಪಿ
  8. ಬಿ.ಎಸ್. ಯಡಿಯೂರಪ್ಪ: ಮೇ 30, 2008ರಿಂದ ಜುಲೈ 31, 2011- ಬಿಜೆಪಿ
  9. ರಾಷ್ಟ್ರಪತಿ ಆಳ್ವಿಕೆ: ನವೆಂಬರ್‌ 20, 2007ರಿಂದ ಮೇ 27, 2008-
  10. ಬಿ.ಎಸ್. ಯಡಿಯೂರಪ್ಪ: ನವೆಂಬರ್‌ 12, 2007ರಿಂದ ನವೆಂಬರ್‌ 19, 2007- ಬಿಜೆಪಿ
  11. ರಾಷ್ಟ್ರಪತಿ ಆಳ್ವಿಕೆ: ಅಕ್ಟೋಬರ್‌ 09, 2007ರಿಂದ ನವೆಂಬರ್‌ 11, 2007 –
  12. ಎಚ್.ಡಿ. ಕುಮಾರಸ್ವಾಮಿ: ಫೆಬ್ರವರಿ 03, 2006ರಿಂದ ಅಕ್ಟೋಬರ್‌ 08, 2007- ಜೆಡಿಎಸ್‌
  13. ಧರಂ ಸಿಂಗ್‌: ಮೇ 28, 2004ರಿಂದ ಜನವರಿ 28, 2006- ಕಾಂಗ್ರೆಸ್
  14. ಎಸ್.ಎಂ. ಕೃಷ್ಣ: ಅಕ್ಟೋಬರ್ 11.‌, 1999ರಿಂದ ಮೇ 28, 2004: ಕಾಂಗ್ರೆಸ್‌
  15. ಜೆ.ಎಚ್. ಪಟೇಲ್: ಮೇ 31, 1996ರಿಂದ ಅಕ್ಟೋಬರ್‌ 07, 1999- ಜನತಾದಳ
  16. ಎಚ್.ಡಿ. ದೇವೇಗೌಡ: ಡಿಸೆಂಬರ್‌ 11, 1994ರಿಂದ ಮೇ 31, 1996- ಜನತಾದಳ
  17. ಎಂ. ವೀರಪ್ಪ ಮೊಯ್ಲಿ: ನವೆಂಬರ್‌ 19, 1992ರಿಂದ ಡಿಸೆಂಬರ್ 11‌, 1994- ಕಾಂಗ್ರೆಸ್‌
  18. ಎಸ್. ಬಂಗಾರಪ್ಪ: ಅಕ್ಟೋಬರ್‌ 17, 1990ರಿಂದ ನವೆಂಬರ್‌ 19, 1992- ಕಾಂಗ್ರೆಸ್‌
  19. ರಾಷ್ಟ್ರಪತಿ ಆಳ್ವಿಕೆ: ಅಕ್ಟೋಬರ್‌ 10, 1990ರಿಂದ ಅಕ್ಟೋಬರ್‌ 17, 1990 –
  20. ವೀರೇಂದ್ರ ಪಾಟೀಲ್‌: ನವೆಂಬರ್‌ 30, 1989ರಿಂದ ಅಕ್ಟೋಬರ್‌ 10, 1990- ಕಾಂಗ್ರೆಸ್‌
  21. ರಾಷ್ಟ್ರಪತಿ ಆಳ್ವಿಕೆ: ಏಪ್ರಿಲ್‌ 21, 1989ರಿಂದ ನವೆಂಬರ್‌ 30, 1989 –
  22. ಎಸ್.ಆರ್. ಬೊಮ್ಮಾಯಿ: ಆಗಸ್ಟ್‌ 13, 1988ರಿಂದ ಆಗಸ್ಟ್‌ 13, 1989- ಜನತಾ ಪಕ್ಷ
  23. ರಾಮಕೃಷ್ಣ ಹೆಗಡೆ: ಫೆಬ್ರವರಿ 16, 1986ರಿಂದ ಆಗಸ್ಟ್‌ 10, 1988- ಜನತಾ ಪಕ್ಷ
  24. ರಾಮಕೃಷ್ಣ ಹೆಗಡೆ: ಮಾರ್ಚ್‌ 08, 1985ರಿಂದ ಫೆಬ್ರವರಿ 13, 1986- ಜನತಾ ಪಕ್ಷ
  25. ರಾಮಕೃಷ್ಣ ಹೆಗಡೆ: ಜನವರಿ 10, 1983ರಿಂದ ಡಿಸೆಂಬರ್‌ 29, 1984- ಜನತಾ ಪಕ್ಷ
  26. ಆರ್. ಗುಂಡೂರಾವ್: ಜನವರಿ 12, 1980ರಿಂದ ಜನವರಿ 06, 1983- ಕಾಂಗ್ರೆಸ್‌
  27. ಡಿ. ದೇವರಾಜ ಅರಸ್: ಫೆಬ್ರವರಿ 28, 1978ರಿಂದ ಜನವರಿ 07, 1980- ಕಾಂಗ್ರೆಸ್‌
  28. ರಾಷ್ಟ್ರಪತಿ ಆಳ್ವಿಕೆ: ಡಿಸೆಂಬರ್‌ 31, 1977ರಿಂದ ಫೆಬ್ರವರಿ 28, 1978-
  29. . ದೇವರಾಜ ಅರಸ್: ಮಾರ್ಚ್‌ 20, 1972ರಿಂದ ಡಿಸೆಂಬರ್‌ 31, 1977- ಕಾಂಗ್ರೆಸ್‌
  30. ರಾಷ್ಟ್ರಪತಿ ಆಳ್ವಿಕೆ: ಮಾರ್ಚ್‌ 19, 1971ರಿಂದ ಮಾರ್ಚ್‌ 20, 1972 –
  31. ವೀರೇಂದ್ರ ಪಾಟೀಲ್‌: ಮೇ 29, 1968ರಿಂದ ಮಾರ್ಚ್ 18‌, 1971- ಕಾಂಗ್ರೆಸ್‌
  32. ಎಸ್. ನಿಜಲಿಂಗಪ್ಪ: ಜೂನ್‌ 21, 1962ರಿಂದ ಮೇ 28, 1968- ಕಾಂಗ್ರೆಸ್‌
  33. ಎಸ್.ಆರ್. ಕಂಠಿ: ಮಾರ್ಚ್‌ 14, 1962ರಿಂದ ಜೂನ್‌ 20, 1962- ಕಾಂಗ್ರೆಸ್‌
  34. ಬಿ.ಡಿ. ಜತ್ತಿ: ಮೇ 16, 1958ರಿಂದ ಮಾರ್ಚ್‌ 09, 1962- ಕಾಂಗ್ರೆಸ್‌
  35. ಎಸ್. ನಿಜಲಿಂಗಪ್ಪ: ನವೆಂಬರ್‌ 01, 1956ರಿಂದ ಮೇ 16, 1958- ಕಾಂಗ್ರೆಸ್‌
  36. ಕಡಿದಾಳ್‌ ಮಂಜಪ್ಪ: ಆಗಸ್ಟ್‌ 19, 1956ರಿಂದ ಅಕ್ಟೋಬರ್‌ 31, 1956- ಕಾಂಗ್ರೆಸ್‌
  37. ಕೆ. ಹನುಮಂತಯ್ಯ: ಮಾರ್ಚ್‌ 30, 1952ರಿಂದ ಆಗಸ್ಟ್‌ 19, 1956 ಕಾಂಗ್ರೆಸ್‌
  38. ಕೆ. ಚೆಂಗಲರಾಯ ರೆಡ್ಡಿ: ಅಕ್ಟೋಬರ್‌ 25, 1947ರಿಂದ ಮಾರ್ಚ್‌ 30, 1952: ಕಾಂಗ್ರೆಸ್‌

ಇದನ್ನೂ ಓದಿ : Siddaramaiah Profile : ಹಲವು ಏಳು-ಬೀಳು ಕಂಡ ಜನಪರ ನಾಯಕ ಸಿದ್ದರಾಮಯ್ಯ; ಇಲ್ಲಿದೆ ಅವರ ಜೀವನಚಿತ್ರ
DK Shivakumar Profile : ರಾಜ್ಯ ಕಾಂಗ್ರೆಸ್‌ಗೆ ಬಲ ತುಂಬಿದ ಬಲಿಷ್ಠ ನಾಯಕ ಡಿ ಕೆ ಶಿವಕುಮಾರ್; ಇಲ್ಲಿದೆ ಅವರ ಜೀವನಚಿತ್ರ

Exit mobile version