Site icon Vistara News

Karnataka Election 2023: ಅಷ್ಟಲಕ್ಷ್ಮಿ ಪೂಜೆಗಾಗಿ ಮಹಿಳೆಯರಿಗೆ ಶಾಸಕ ಪ್ರೀತಂ (Pritam Gowda)ಗೌಡ ಕೊಟ್ಟ ಬೆಳ್ಳಿ ಲಕ್ಷ್ಮಿ ಅಸಲಿಯಲ್ಲ; ವಿಡಿಯೊ ವೈರಲ್

silver Lakshmi photo given by MLA Preetham Gowda at the Ashtalakshmi Pooja

ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಕೆಲವರು ಬಾಡೂಟ ಹಾಕಿಸುವುದು, ಯಾವುದಾದರೂ ಕಾರ್ಯಕ್ರಮಗಳನ್ನು ಏರ್ಪಡಿಸಿ ಉಡುಗೊರೆ ಕೊಡುವುದು, ಅರಿಶಿಣ-ಕುಂಕುಮ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಇಲ್ಲವೇ ಹಾಗೇ ಮನೆ ಮನೆಗೆ ಕುಕ್ಕರ್‌, ಗಡಿಯಾರಗಳಂತಹ ಗಿಫ್ಟ್‌ಗಳನ್ನು ಕೊಡುವ ಕೆಲಸವನ್ನು ಮಾಡುತ್ತಾರೆ. ಈಗ ಹಾಸನ ಶಾಸಕ ಪ್ರೀತಂಗೌಡ(Pritam Gowda) ಬೆಂಬಲಿಗರು ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಕೊಟ್ಟಿದ್ದ ಬೆಳ್ಳಿ ಫೋಟೊ ಬಗ್ಗೆ ಅಪಸ್ವರ ಕೇಳಿಬಂದಿದೆ. ಅದು ಬೆಳ್ಳಿಯೇ ಅಲ್ಲ ಎಂದು ಮಹಿಳೆಯರು ಅಸಮಾಧಾನವನ್ನು ಹೊರಹಾಕಿದ್ದಾರೆ.

ಮಹಿಳೆಯರಿಗೆ ಬೆಳ್ಳಿ ಫೋಟೊ ಎಂದು ನೀಡಿದ್ದ ಉಡುಗೊರೆಯ ಅಸಲಿಯತ್ತಿನ ಬಗ್ಗೆ ಈಗ ಪ್ರಶನೆಗಳು ಎದ್ದಿವೆ. ಇದು ಬೆಳ್ಳಿಯಲ್ಲ ಕಳಪೆ ಗುಣಮಟ್ಟದ ಪೋಟೊ ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿರುವ ವಿಡಿಯೊವನ್ನು ಮಾಡಿ ಹರಿಬಿಡಲಾಗಿದೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಇದನ್ನೂ ಓದಿ: Bangalore- Mysore Expressway : ಜನಾಕ್ರೋಶಕ್ಕೆ ಮಣಿದು ದಶಪಥ ಹೆದ್ದಾರಿ ಟೋಲ್‌ ದರ ಹೆಚ್ಚಳ ಕೈಬಿಟ್ಟ ಪ್ರಾಧಿಕಾರ

ಕಳೆದ ಹದಿನೈದು ದಿನದಿಂದ ಹಾಸನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಮತದಾರರ ಸೆಳೆಯಲು ಪ್ರೀತಂಗೌಡ ಬೆಂಬಲಿಗರು ಈ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಶಾಸಕ ಪ್ರೀತಂಗೌಡ ಬೆಂಬಲಿಗರಿಂದ ವಾರ್ಡ್‌ವಾರು ಹಾಗೂ ಗ್ರಾಪಂವಾರು ಈ ಕಾರ್ಯಕ್ರಮವನ್ನು ನಡೆಸಲಾಗಿದೆ.

ಈ ಕಾರ್ಯಕ್ರಮದ ಮೂಲಕ ಮತದಾರರಿಗೆ ಆಮಿಷವೊಡ್ಡಲಾಗಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದರು. ಅಲ್ಲದೆ, ಈ ಬಗ್ಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಸಹ ಪ್ರತಿಕ್ರಿಯೆ ನೀಡಿ, ಪೊಲೀಸರ ಸಮ್ಮುಖದಲ್ಲೇ ನಿಯಮ ಉಲ್ಲಂಘನೆ ಮಾಡಿ ಆಮಿಷ ವೊಡ್ಡಲಾಗಿದೆ ಎಂದು ಆರೋಪಿಸಿದ್ದರು.

ಇದೀಗ ಮಹಿಳೆಯರಿಗೆ ಕೊಟ್ಡ ಉಡುಗೊರೆಯ ಫೋಟೊ ಫ್ರೇಮ್‌ ಅನ್ನು ಬಿಚ್ಚಿ ನೋಡಿದ್ದು, ಅದು ಬೆಳ್ಳಿಯಂತೆ ಕಾಣುವ ಪೇಪರ್‌ನಿಂದ ರೂಪಿಸಲಾಗಿದ್ದು ಎಂಬ ರೀತಿ ಕಾಣಿಸುತ್ತದೆ. ಇದೀಗ ಈ ಫೋಟೊ ಕೊಟ್ಟಿದ್ದರ ಬಗ್ಗೆ ಮಹಿಳೆಯರು ಆಕ್ರೋಶವನ್ನು ಹೊರಹಾಕಿದ್ದಾರೆ.

ಲಕ್ಷ್ಮಿ ಫೋಟೊ ಬೆಳ್ಳಿಯದ್ದು ಎಂದು ಹೇಳಿದ್ದರಿಂದ ಪೂಜೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮುಗಿಬಿದ್ದು ಅದನ್ನು ಪಡೆದುಕೊಂಡಿದ್ದರು. ಇದೀಗ ಅದು ಅಸಲಿಯಲ್ಲ ಎಂಬ ಸಂಗತಿ ತಿಳಿಯುತ್ತಿದ್ದಂತೆ ಬೇಸರ ಹೊರಹಾಕಿರುವ ಮಹಿಳೆಯರು, ಇಂತಹ ಗಿಫ್ಟ್‌ ಅನ್ನು ಕೊಡಬೇಕಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ. ಈಗ ಶಾಸಕ ಪ್ರೀತಂಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಇದನ್ನೂ ಓದಿ: Modi in Karnataka : ಹುಲಿ ಪ್ರಾಜೆಕ್ಟ್‌ ಕಾರ್ಯಕ್ರಮಕ್ಕೆ ಬರುವ ಪ್ರಧಾನಿ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡ್ತಾರಾ?

ವಿಜಯಪುರದಲ್ಲಿ 40 ಲಕ್ಷ ರೂ. ಮೌಲ್ಯದ ಗಿಫ್ಟ್‌ ಜಪ್ತಿ

ವಿಜಯಪುರ: ಗುಮ್ಮಟನಗರಿ ವಿಜಯಪುರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಹೆಚ್ಚಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿರುವ ಬಾಲಾಜಿ ಶುಗರ್ಸ್ ಮೇಲೆ ಶುಕ್ರವಾರ (ಮಾ. 31) ಚುನಾವಣಾಧಿಕಾರಿಗಳು ದಾಳಿ ನಡೆಸಿ 40 ಲಕ್ಷ ರೂಪಾಯಿ ಮೌಲ್ಯದ ಉಡುಗೊರೆಗಳುಳ್ಳ ಬಾಕ್ಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಹಿಂದಿನ ದಾಳಿ ವೇಳೆ ಅಂದರೆ ಮಾ. 27ರಂದು 2 ಕೋಟಿ 10 ಲಕ್ಷ ಮೌಲ್ಯದ ಗಿಫ್ಟ್‌ಗಳು ಪತ್ತೆಯಾಗಿದ್ದವು. ಆಗ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಭಾವಚಿತ್ರ ಇರುವ ಗೋಡೆ ಗಡಿಯಾರ, ಟೀ ಶರ್ಟ್‌ಗಳು ಪತ್ತೆಯಾಗಿದ್ದವು. ಈಗ ಮತ್ತೆ ಅಂದಾಜು 40 ಲಕ್ಷ ರೂ. ಮೌಲ್ಯದ ಗಿಫ್ಟ್‌ಗಳು ಪತ್ತೆಯಾಗಿವೆ.

Exit mobile version