ಬೆಂಗಳೂರು, ಕರ್ನಾಟಕ: ವಿಜಯಪು ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಸಿಂದಗಿ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಕಳೆದ ಉಪಚುನಾವಣೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್‌ನ ಅಸೋಕ್ ಮನಗೂಳಿ ಅವರು ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಅಭ್ಯರ್ಥಿ ವಿರುದ್ಧ 8080 ಮತಗಳ ಅಂತರದಲ್ಲಿ ವಿಜಯಮಾಲೆ ಧರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 86771 ಮತಗಳನ್ನು ಪಡೆದುಕೊಂಡರೆ, ಬಿಜೆಪಿಯ ಭೂಸನೂರು ರಮೇಶ್ ಅವರು 78691 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ದಾರೆ. 2018ರಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿತ್ತು(Sindagi Election Results).
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಿಕೆಶಿ ಕೈಯಿಗೆ ಗಾಯ
2018ರ ಚುನಾವಣೆ ಫಲಿತಾಂಶ ಏನಾಗಿತ್ತು?
ಸಿಂದಗಿ ವಿಜಯಪುರ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದೆ. 1951ರಿಂದ 1999ರವೆಗೆ ಕಾಂಗ್ರೆಸ್ ಪಾರ್ಟಿ ಪ್ರಾಬಲ್ಯ ಮೆರೆದಿದೆ. ಈ ಮಧ್ಯೆ ಕೆಲವು ಬಾರಿ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಿದೆ. ಆದರೆ, 1999ರಿಂದ ಬಿಜೆಪಿ ಗೆಲ್ಲುತ್ತಾ ಬಂದಿದ್ದು, 2018ರಲ್ಲಿ ಜೆಡಿಎಸ್‌ನ ಸಿ ಎಂ ಮನಗೂಳಿ ಅವರು ಗೆದ್ದಿದ್ದರು. ಆದರೆ, ಅವರ ನಿಧನದಿಂದಾಗಿ 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಬಿಜೆಪಿಯು ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯ ರಮೇಶ್ ಭೂಸನೂರ್ ಅವರು 93865 ಮತಗಳನ್ನು ಪಡೆದುಕೊಂಡು 31,185 ಮತಗಳ ಅಂತರದಲ್ಲಿ ಕಾಂಗ್ರೆಸ್‌ನ ಅಶೋಕ್ ಮನಗೂಳಿ ಅವರನ್ನು ಸೋಲಿಸಿದರು. ಮನಗೂಳಿ ಅವರು 62,680 ಮತಗಳನ್ನು ಪಡೆದುಕೊಂಡಿದ್ದರು.