ಮೈಸೂರು: ಇಬ್ಬರು ಪ್ರತಿಷ್ಠಿತರ ನಡುವಿನ ಕದನದಿಂದಾಗಿ ಬರೋಬ್ಬರಿ 6.18 ಕೋಟಿ ರೂ.ಗಳಷ್ಟು ಸಾರ್ವಜನಿಕ ಹಣ ಪೋಲಾಗಿದೆ. ರೋಹಿಣಿ ಸಿಂಧೂರಿ- ರೂಪಾ ಕದನದಲ್ಲಿ ಇದು ಕೂಡ ಪ್ರಸ್ತಾಪವಾಗಿತ್ತು.
ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.
ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗಿದ್ದಾಗ 14.71 ಲಕ್ಷ ಬಟ್ಟೆ ಬ್ಯಾಗ್ಗಳನ್ನು ಖರೀದಿಸಿದ್ದರು. ಇದಕ್ಕಾಗಿ 6.18 ಕೋಟಿ ರೂ. ಪಾವತಿಸಿದ್ದರು. ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದರು. ಒಂದು ಬ್ಯಾಗ್ಗೆ 8-10 ರೂ. ಆಗುತ್ತದೆ. ಆದರೆ ರೋಹಿಣಿ ಸಿಂಧೂರಿ 52 ರೂ. ನೀಡಿದ್ದಾರೆ. ಇದಕ್ಕೆ 5 ಕೋಟಿ ರೂ. ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದರು.
ಇದರಿಂದಾಗಿ ಒಂದೂವರೆ ವರ್ಷದಿಂದಲೂ ಬಟ್ಟೆ ಬ್ಯಾಗ್ಗಳು ಇಟ್ಟಲ್ಲೇ ಕೊಳೆಯುತ್ತಿವೆ. ಚಿನ್ನಗಿರಿ ಕೊಪ್ಪಲು ಸಮುದಾಯ ಭವನದಲ್ಲಿ ಬ್ಯಾಗ್ಗಳ ರಾಶಿ ಬಿದ್ದಿದ್ದು, ಬಂಡಲ್ ಕೂಡ ಓಪನ್ ಮಾಡದೆ ಜಿಲ್ಲಾಡಳಿತ ಅದನ್ನು ಹಾಗೇ ಬಿಟ್ಟಿದೆ. ಅಮೂಲ್ಯವಾದ ಸಾರ್ವಜನಿಕರ ಹಣ ಕಣ್ಣೆದುರೇ ಕಸವಾಗುತ್ತಿದೆ. ಈ ಪ್ರಕರಣದ ತನಿಖೆಗೆ ಸರ್ಕಾರ ಅನುಮತಿ ತಿರಸ್ಕರಿಸಿದೆ ಎಂದು ಈಗ ಐಪಿಎಸ್ ಅಧಿಕಾರಿ ಡಿ. ರೂಪ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: Sindhuri Vs Roopa : ರೂಪಾ ಹೇಳಿದ, ರೋಹಿಣಿ ಸಿಂಧೂರಿ ಕಟ್ಟಿಸುತ್ತಿರುವ ಮನೆ ಹೇಗಿದೆ? ನೀವೇ ನೋಡಿ