Site icon Vistara News

Sindhuri Vs Roopa : ಸಿಂಧೂರಿ ಅವರಿಂದಾಗಿ ಜಿಲ್ಲಾಧಿಕಾರಿಯೊಬ್ಬರ ಕುಟುಂಬವೇ ಬೇರ್ಪಟ್ಟಿದೆ ಎಂದರು ರೂಪಾ, ಯಾರವರು?

D Rupa must apologise; Rohini Sindhuri tells to Supreme Court

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ವಿರುದ್ಧ ದಾಖಲಿಸಿದ ೧೯ ಆರೋಪಗಳ ಪೈಕಿ ಪ್ರಮುಖವಾಗಿರುವುದು ಸಾ.ರಾ. ಮಹೇಶ್‌ ಪ್ರಕರಣದಲ್ಲಿ ಸಂಧಾನ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ. ಅದರ ಜತೆಗೆ ಅಧಿಕಾರಿಗಳ ಜತೆಗೆ ಅವರ ಜಗಳಗಂಟತನ, ಚಾಮರಾಜನಗರ ಆಕ್ಸಿಜನ್‌ ಗಲಾಟೆ ಮತ್ತು ಇನ್ನೂ ಹಲವು ವಿಚಾರಗಳು

೧೯ ಆರೋಪಗಳಲ್ಲಿ ನಾಲ್ಕು ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ವಿಚಾರಗಳನ್ನೇ ಆಧರಿಸಿದ್ದು. ಅವರು ಪುರುಷ ಐಎಎಸ್‌ ಅಧಿಕಾರಿಗಳಿಗೆ ಅಸಭ್ಯ ಎನಿಸುವ ಚಿತ್ರಗಳನ್ನು ಕಳುಹಿಸಿದ್ದಾರೆ ಎಂಬುದರಿಂದ ಹಿಡಿದು ಡಿ.ಕೆ. ರವಿ ಪ್ರಕರಣದಲ್ಲಿ ಪ್ರೇಮ ಸಲ್ಲಾಪ ನಡೆಸುತ್ತಿದ್ದರು ಎಂಬಲ್ಲಿಯವರೆಗೆ ನೇರವಾದ ಆರೋಪಗಳೇ ಇವೆ.

ಈ ನಡುವೆ, ರೋಹಿಣಿಯವರ ಕಾರಣದಿಂದಾಗಿ ಒಂದು ಜಿಲ್ಲಾಧಿಕಾರಿ ಕುಟುಂಬವೇ ಬೇರ್ಪಟ್ಟಿದೆ ಎಂಬ ವಿಚಾರವನ್ನೂ ಡಿ. ರೂಪಾ ಹೇಳಿಕೊಂಡಿದ್ದಾರೆ.

ಅವರು ಬರೆದಿರುವುದು ಹೀಗಿದೆ:ಈಕೆ ಪ್ರೊಬೇಷನರಿ ಅಂತ ಇದ್ದಾಗ, ಅಲ್ಲಿಯ ಡಿಸಿ ಹಾಗೂ ಅವರ ಪತ್ನಿ ನೆರೆಯ ಜಿಲ್ಲೆಯ ಜಿಲ್ಲಾಧಿಕಾರಿ ಇವರಿಬ್ಬರ ಸಂಸಾರದಲ್ಲಿ ಹುಳಿ ಬಿದ್ದು ಅವರು ಬೇರ್ಪಟ್ಟಿದ್ದಾರೆ ಹಾಗೂ ಇದು ಈಕೆಯ ದೆಸೆಯಿಂದ ಎಂಬ ಮಾತು ಅನೇಕರ ಬಾಯಲ್ಲಿ ಕೇಳಿದ್ದೇನೆ.

ಇಷ್ಟು ವಿಚಾರವನ್ನು ಹರಿಯಬಿಟ್ಟಿರುವ ಡಿ. ರೂಪಾ ಹೆಚ್ಚಿನ ವಿವರ ನೀಡಿಲ್ಲ. ಇದೇ ವಿಚಾರವಾಗಿ ಹೆಚ್ಚಿನ ವಿವರ ಕೇಳಿದಾಗ, ʻʻಯಾರೂ ಈ ವಿಚಾರವನ್ನು ಬಾಯಿ ಬಿಡುತ್ತಿಲ್ಲ. ಸಂತ್ರಸ್ತರೇ ಹೇಳಿಕೊಳ್ಳದಿರುವಾಗ ನಾನು ಹೇಳುವುದು ಸರಿಯಾಗುವುದಿಲ್ಲ. ಇವರಿಂದಾಗಿ ಸಮಸ್ಯೆ ಆಗಿರುವುದು ನಿಜ. ಇವರ ಪ್ರೊಬೆಷನರಿ ಅವಧಿಯಲ್ಲಿ ಎಲ್ಲಿ ಏನಾಗಿದೆ ಎನ್ನುವುದನ್ನು ನೀವೇ ಪತ್ತೆ ಹಚ್ಚಿʼʼ ಎಂದು ಹೇಳಿದರು ಡಿ. ರೂಪಾ.

ಡಿ.ಕೆ. ರವಿ ಮಾತ್ರವಲ್ಲ ಹರೀಶ್‌ ಆತ್ಮಹತ್ಯೆಗೂ ಲಿಂಕ್‌!

ಡಿ.ಕೆ ರವಿ ತೀರಿಕೊಂಡ ಕೆಲವು ತಿಂಗಳು ಮುಂಚೆ ಕನ್ನಡದ ಹುಡುಗ, ಐಎಎಸ್‌ ಅಧಿಕಾರಿ ಎನ್‌. ಹರೀಶ್ ಇವರ ಬ್ಯಾಚ್‌ಮೇಟ್‌. ಮದುವೆ ಆಗಿರಲಿಲ್ಲ ಆತ. ಈಕೆಗಾಗಿ ಕಾದು ಕಾದು ಆತ ಆತ್ಮಹತ್ಯೆ ಮಾಡಿಕೊಂಡದ್ದು ಎಂದು ಹಲವರು ಹೇಳಿದರೂ ನಾನು ಅದನ್ನು ನಂಬಲಿಲ್ಲ, ಈಗಲೂ ನಂಬಿಲ್ಲ ಎನ್ನುವುದು ಅವರ ಮತ್ತೊಂದು ಆರೋಪ. ಈ ಹರೀಶ್‌ ಯಾರು ಎನ್ನುವ ಪ್ರಶ್ನೆಗೆ, ಅವರು ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದರು, ಇವರ ಬ್ಯಾಚ್‌ಮೇಟ್‌. ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಕಾರಣ ಇರಬಹುದು. ಆದರೆ, ಇವರೇ ಕಾರಣ ಎಂದು ಹಲವರು ಹೇಳುತ್ತಿದ್ದಾರೆ, ನಾನೂ ಇನ್ನೂ ಪೂರ್ತಿಯಾಗಿ ನಂಬಿಲ್ಲ ಎಂದಿದ್ದಾರೆ ರೋಹಿಣಿ.

ಇದನ್ನೂ ಓದಿ : Sindhuri Vs Roopa : ಪಿಕ್ಚರ್ಸ್‌ ಅಭೀ ಬಾಕಿ ಹೈ; ಈ ಚಿತ್ರಗಳು ಕೇವಲ ಸ್ಯಾಂಪಲ್ಸ್‌ ಅಷ್ಟೇ ಎಂದ ಡಿ. ರೂಪಾ

Exit mobile version