Site icon Vistara News

Social Media Post : ಹುಬ್ಬಳ್ಳಿಯ ಹಿಂದು ವಿದ್ಯಾರ್ಥಿನಿಯರ ಅಶ್ಲೀಲ ಫೋಟೊ ಪ್ರಕರಣ; ಪೋಸ್ಟ್‌ ಡಿಲೀಟ್‌ ಮಾಡಿದ ಕಿಡಿಗೇಡಿ

hubli obscene phostos case

ಹುಬ್ಬಳ್ಳಿ: ಹುಬ್ಬಳ್ಳಿಯ ಸಮರ್ಥ್‌ ಕಾಲೇಜಿನ (Hubballi Samarth College) ಮೂವರು ಹಿಂದು ವಿದ್ಯಾರ್ಥಿನಿಯರ (Three Hindu girl Students) ಫೋಟೊಗಳನ್ನು ಬಳಸಿಕೊಂಡು ಅವುಗಳಿಗೆ ಬೆತ್ತಲೆ ದೇಹಗಳನ್ನು ಸೇರಿಸಿ ಎಡಿಟ್‌ (Edited obscene Photos) ಮಾಡಿದ್ದಲ್ಲದೆ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ (Instagram account) ಪೋಸ್ಟ್‌ ಮಾಡಿದ ಕಿಡಿಗೇಡಿಗಳಿಗಾಗಿ ಪೊಲೀಸರ ಹುಡುಕಾಟ ಜೋರಾಗಿರುವಂತೆಯೇ ಇತ್ತ ಆ ಕಿಡಿಗೇಡಿ ಇನ್‌ಸ್ಟಾ ಪೋಸ್ಟ್‌ ಡಿಲೀಟ್‌ ಮಾಡಿದ್ದಾನೆ.

ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಫೋಟೊಗಳನ್ನು ಈ ರೀತಿಯಾಗಿ ದುರ್ಬಳಕೆ ಮಾಡಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಗೆ ಕಳೆದ ಜೂನ್‌ 20ರಂದೇ ದೂರು ನೀಡಿದ್ದರು. ಆದರೆ, ಆಡಳಿತ ಮಂಡಳಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಶುಕ್ರವಾರ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಿಗೇ ಪೊಲೀಸರು ಸಮರ್ಥ್‌ ಕಾಲೇಜಿಗೆ ಬಂದು ವಿಚಾರಣೆ ನಡೆಸಿದ್ದರು.

ಇತ್ತ ದೂರು ದಾಖಲಾಗುತಿದ್ದಂತೆಯೇ ಸೈಬರ್ ವಂಚಕ ಅಲರ್ಟ್ ಆಗಿದ್ದಾನೆ. ಇನ್‌ಸ್ಟಾ‌ದಲ್ಲಿ ಹಾಕಿರೋ ಪೋಸ್ಟ್ ಡಿಲೀಟ್ ಮಾಡಿದ್ದಾನೆ. kashmira1990_0 ಇನ್ ಸ್ಟಾ ಅಕೌಂಟ್ ನಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಕಿಡಿಗೇಡಿ ಈ ಪೋಸ್ಟನ್ನು ಡಿಲೀಟ್‌ ಮಾಡಿದ್ದಾನೆ.

ಸಮರ್ಥ ಕಾಲೇಜಿನ ವಿದ್ಯಾರ್ಥಿಗಳ ಮೇಲೆಯೇ ಗುಮಾನಿ

ಪೊಲೀಸರು ಸಮರ್ಥ್‌ ಕಾಲೇಜಿಗೆ ಹೋಗಿ ವಿಚಾರಣೆ ನಡೆಸಿದರೂ ಅಲ್ಲಿ ಅವರಿಗೆ ಹೆಚ್ಚಿನ ಮಾಹಿತಿಯೇನೂ ಸಿಕ್ಕಿಲ್ಲ. ಕಳೆದ ಮೂರು ತಿಂಗಳಿನಿಂದ ಫೋಟೊಗಳನ್ನು ಎಡಿಟ್‌ ಮಾಡಿ ಹಾಕಲಾಗುತ್ತಿದೆ. ಇಷ್ಟಾದರು ಕಾಲೇಜಿನ ಆಡಳಿತ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆಡಳಿತ ಮಂಡಳಿ ಹೆಚ್ಚಿನ ಮಾಹಿತಿಯನ್ನೂ ನೀಡಿಲ್ಲ, ಸಹಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

hubballi college photos

ಈಗಾಗಲೇ ಹಲವರ ವಿಚಾರಣೆ, ಶೀಘ್ರವೇ ಕಿಡಿಗೇಡಿ ಬಲೆಗೆ

ವಿದ್ಯಾರ್ಥಿನಿಯರ ಅಶ್ಲೀಲ ಪೋಟೊ ಎಡಿಟ್ ಮಾಡಿ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಸದ್ಯವೇ ಆರೋಪಿಯನ್ನು ಹಿಡಿಯುತ್ತೇವೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಸಂತೋಷ ಬಾಬು ಹೇಳಿದ್ದಾರೆ.

ಯವತಿಯರು ದೂರು ನೀಡಿದ್ದಾರೆ. ಅವರಿಗೆ ಯಾರ ಮೇಲೆ ಅನುಮಾನವಿದೆ ಎಂದು ಕೂಡಾ ಕೇಳಿ ತಿಳಿದುಕೊಂಡಿದ್ದೇವೆ. ಹಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದೇವೆ. ಇನ್‌ಸ್ಟಾ ಗ್ರಾಂನಲ್ಲಿ ಇಂಥ ಹಲವು ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಈ ಪ್ರಕರಣ ಕಾಲೇಜಿನಲ್ಲೇ ನಡೆದಿದೆ. ಕಾಲೇಜಿನ ವಿದ್ಯಾರ್ಥಿಗಳೇ ಇದನ್ನು ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಂತೋಷ್‌ ಬಾಬು ಹೇಳಿದ್ದಾರೆ. ಅದ್ಯಾರು ಎನ್ನುವುದನ್ನು ಸದ್ಯವೇ ಪತ್ತೆ ಹಚ್ಚುತ್ತೇವೆ ಎನ್ನುವುದು ಸಂತೋಷ್‌ ಬಾಬು ಅವರ ಮಾತು.

ಇದನ್ನೂ ಓದಿ: Social Media Post : ಹಿಂದು ಯುವತಿಯರ ಫೋಟೊ ಅಶ್ಲೀಲವಾಗಿ ಎಡಿಟ್‌ ಮಾಡಿ ಪೋಸ್ಟ್‌ ಹಾಕಿದ ಮುಸ್ಲಿಂ ವಿದ್ಯಾರ್ಥಿ!

Exit mobile version