Site icon Vistara News

Social Media Post : ಹಿಂದು ಯುವತಿಯರ ಫೋಟೊ ಅಶ್ಲೀಲವಾಗಿ ಎಡಿಟ್‌ ಮಾಡಿ ಪೋಸ್ಟ್‌ ಹಾಕಿದ ಮುಸ್ಲಿಂ ವಿದ್ಯಾರ್ಥಿ!

Edited photos of girls

ಹುಬ್ಬಳ್ಳಿ: ಇತ್ತ ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನಲ್ಲಿ (Udupi Nethrajyothi Paramedical College) ಹಿಂದು ವಿದ್ಯಾರ್ಥಿನಿಯೊಬ್ಬಳ ಟಾಯ್ಲೆಟ್‌ ಬಳಕೆಯ ದೃಶ್ಯಗಳನ್ನು (Udupi Toilet Case) ಮೂವರು ಮುಸ್ಲಿಂ ಯುವತಿಯರು ಮೊಬೈಲ್‌ ಮೂಲಕ ಚಿತ್ರೀಕರಿಸಿಕೊಂಡಿದ್ದಾರೆ ಎಂಬ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವ ನಡುವೆಯೇ ಹುಬ್ಬಳ್ಳಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬ (Hubballi student) ಇನ್ನೊಂದು ದುಷ್ಕೃತ್ಯ (Social Media post) ಮೆರೆದಿದ್ದಾನೆ.

ಇನ್‌ಸ್ಟಾ ಗ್ರಾಂನಲ್ಲಿ ಮುಸ್ಲಿಂ ಯುವಕನ ಹೆಸರಿನಲ್ಲಿ ಈ ಪೋಸ್ಟ್‌ ಹಾಕಲಾಗಿದೆ. ಆದರೆ, ಆ ಹೆಸರಿನ ವ್ಯಕ್ತಿ ಯಾರೂ ಇಲ್ಲದೆ ಇರುವುದರಿಂದ ಕೆಲವೊಂದು ತಾಂತ್ರಿಕ ಮಾಹಿತಿಗಳ ಆಧಾರದಲ್ಲಿ ಮೂವರು ವಿದ್ಯಾರ್ಥಿಗಳ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ. ಇವರು ಹುಬ್ಬಳ್ಳಿಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ವಿಚಾರಣೆ ನಡೆಯುತ್ತಿದೆ. ಅವರಲ್ಲಿ ಈ ಕಿಡಿಗೇಡಿ ಕೃತ್ಯ ಮಾಡಿದ್ದು ಯಾರು ಎನ್ನುವುದು ಬಯಲಾಗಬೇಕಾಗಿದೆ.

ಮೂವರು ವಿದ್ಯಾರ್ಥಿನಿಯರ ಫೋಟೊಗಳನ್ನು ಅಶ್ಲೀಲವಾಗಿ (Naked Edited photos of girls) ಎಡಿಟ್‌ ಮಾಡಿ, ಅದಕ್ಕೆ ತುಂಬ ಕೊಳಕಾದ ಬರಹಗಳನ್ನು ಬರೆದು ಈ ಕಿಡಿಗೇಡಿ ಪೋಸ್ಟ್‌ (Instagram Post) ಮಾಡಿದ್ದಾನೆ. ಅದು ಈಗ ಎಲ್ಲ ಕಡೆ ವೈರಲ್‌ ಆಗಿದೆ. ಇದನ್ನು ಗಮನಿಸಿದ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

ಹುಬ್ಬಳ್ಳಿಯ ಸಮರ್ಥ್‌ ಕಾಲೇಜಿನಲ್ಲಿ ಪೊಲೀಸರ ವಿಚಾರಣೆ

ಪೊಲೀಸರಿಗೇ ಚಾಲೆಂಜ್‌ ಹಾಕಿದ ಅಹಂಕಾರಿ

ಈ ಕಿಡಿಗೇಡಿ ಹಿಂದು ಯುವತಿಯರ ಫೋಟೊಗಳನ್ನು ನಗ್ನಗೊಳಿಸಿ ಅವರ ದೇಹದ ಭಾಗಗಳ ಬಗ್ಗೆ ಅಶ್ಲೀಲವಾಗಿ ಬರೆದಿದ್ದಾರೆ. ಪುರುಷ ಮತ್ತು ಮಹಿಳೆಯರ ನಗ್ನ ಚಿತ್ರಗಳನ್ನು ಕೂಡಾ ಬಳಸಿ ಕೆಟ್ಟದಾಗಿ ಬರೆಯಲಾಗಿದೆ.

ಅಷ್ಟೇ ಅಲ್ಲ, ಆತ ಹುಬ್ಬಳ್ಳಿಯ ಪೊಲೀಸರಿಗೂ ಚಾಲೆಂಜ್‌ ಹಾಕಿದ್ದಾನೆ. ಧಮ್‌ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಆತ ಪೋಸ್ಟ್‌ ಮಾಡಿದ್ದಾನೆ.

ಹುಬ್ಬಳ್ಳಿಯ ಸಮರ್ಥ್‌ ಕಾಲೇಜಿಗೆ ಪೊಲೀಸರ ಲಗ್ಗೆ

ಈ ರೀತಿಯಾಗಿ ಬರೆದಿರುವ, ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡಿದ್ದು ಯಾರು ಎನ್ನುವ ಬಗ್ಗೆ ಪ್ರಾಥಮಿಕ ತನಿಖೆಯನ್ನು ನಡೆಸಿರುವ ಪೊಲೀಸರು ಹುಬ್ಬಳ್ಳಿಯ ಸಮರ್ಥ ಕಾಲೇಜಿಗೆ ಲಗ್ಗೆ ಇಟ್ಟಿದ್ದಾರೆ.

ಡಿಸಿಪಿ ಗೋಪಾಲ ಬ್ಯಾಕೋಡ್ ಅವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸರು ಕಾಲೇಜಿಗೆ ಭೇಟಿ ನೀಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಿಂದ ಮಾಹಿತಿ ಪಡೆದಿದ್ದಾರೆ. ಮುಸ್ಲಿಂ ಯುವಕನ ಹೆಸರಲ್ಲಿರುವ ಇನ್ಸ್ಟಾಗ್ರಾಂ ಅಕೌಂಟ್ ಮಾಡಿರುವ ಹುಡುಗ ಕಾಲೇಜು ವಿದ್ಯಾರ್ಥಿ ಎನ್ನುವ ವಿಚಾರದಲ್ಲಿ ಹಲವು ಸುಳಿವುಗಳನ್ನು ಪಡೆದೇ ಪೊಲೀಸರಿಗೆ ಅಲ್ಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಪೊಲೀಸರು ಶಂಕಿತ ವಿದ್ಯಾರ್ಥಿನಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಬುದ್ಧಿ ಕಲಿಯದ ಕಿಡಿಗೇಡಿಗಳು

ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ನಡೆದ ಘಟನಾವಳಿಗಳು ಇಡೀ ರಾಜ್ಯದಲ್ಲಿ ಆತಂಕವನ್ನು ಸೃಷ್ಟಿಸಿವೆ. ಎಲ್ಲರೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ. ಒಂದು ಕಡೆ ತಮ್ಮ ಮಕ್ಕಳು ಇಂಥ ದುಷ್ಟ ಚಟುವಟಿಕೆಯಲ್ಲಿ ತೊಡಗಿದರೆ ಮುಂದೇನು ಎನ್ನುವ ಆತಂಕ ಒಂದು ವರ್ಗದ ಪೋಷಕರದ್ದಾದರೆ ಇನ್ನೊಂದು ವರ್ಗದಲ್ಲಿ ತಮ್ಮ ಮಕ್ಕಳು ಇಂಥ ಕುಕೃತ್ಯಕ್ಕೆ ಒಳಗಾದರೆ ಎಂಬ ಆತಂಕ.

ಆದರೆ, ಕೆಲವು ದುಷ್ಟ ಮನಸ್ಸಿನ ವಿದ್ಯಾರ್ಥಿಗಳು ಇಂಥ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ಹುಬ್ಬಳ್ಳಿಯ ಈ ಪ್ರಕರಣದಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Udupi Toilet Case : ಹಿಂದು ಮಹಿಳೆಯರು ತಲವಾರು ಹಿಡಿಯಬೇಕು ಎಂದ ಶರಣ್‌ ಪಂಪ್‌ವೆಲ್‌ ಸಹಿತ ಮೂವರ ಮೇಲೆ FIR

Exit mobile version